ತಿಮರೆ ಒಂದು ಔಷಧೀಯ ಸಸ್ಯವಾಗಿದ್ದು ಹಲವಾರು ಆರೋಗ್ಯಕರ ಅಂಶಗಳನ್ನು ಹೊಂದಿದೆ. ತಿಮರೆ/ಬ್ರಾಹ್ಮಿ/ಒಂದೆಲಗ ಸೊಪ್ಪನ್ನು ಉಪಯೋಗಿಸಿ ಮಾಡುವ ಕೆಲವು ಅಡುಗೆಗಳಿದ್ದು, ಅದರಲ್ಲಿ ಈ ಚಟ್ನೀ ಒಂದಾಗಿದೆ. ಈ ಚಟ್ನಿ ಮಾಡಲು ಸುಲಭ ಹಾಗೂ ಬಹಳ ರುಚಿಯಾಗಿರುತ್ತದೆ.
ಬೇಕಾಗುವ ಪದಾರ್ಥಗಳು:
- ಎರಡು ಹಿಡಿ ಬ್ರಾಹ್ಮಿ ಎಲೆ
- 1/2 ಕಪ್ ತೆಂಗಿನ ತುರಿ
- 1/3 ಬೆರಳುದ್ದ ಶುಂಠಿ
- 2 ಒಣ ಮೆಣಸಿನಕಾಯಿ
- 1/2 ನೆಲ್ಲಿಕಾಯಿ ಗಾತ್ರ ಹುಣಿಸೆ ಹಣ್ಣು
- 1/2 ನೆಲ್ಲಿಕಾಯಿ ಗಾತ್ರ ಬೆಲ್ಲ
- ಉಪ್ಪು ರುಚಿಗೆ ತಕ್ಕಷ್ಟು.
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
- 1/2 ಒಣ ಮೆಣಸಿನಕಾಯಿ
- 1/4 ಟೀಸ್ಪೂನ್ ಸಾಸಿವೆ
- 1 ಟೀಸ್ಪೂನ್ ಅಡುಗೆ ಎಣ್ಣೆ
ಸಿದ್ಧ ಮಾಡಿಟ್ಟುಕೊಂಡ ಎಲ್ಲ ಪದಾರ್ಥಗಳನ್ನು ಮಿಕ್ಸಿ ಜಾರಿಗೆ ಹಾಕಿ, ಸ್ವಲ್ಪ ನೀರು ಸೇರಿಸಿ ಅರೆಯಿರಿ. ಸಾಸಿವೆ ಮತ್ತು ಒಣ ಮೆಣಸಿನ ಒಗ್ಗರಣೆ ಕೊಡಿ. ಈ ಚಟ್ನಿ ಅನ್ನದೊಂದಿಗೆ ತಿನ್ನಲು ಬಲು ರುಚಿ.