ಪಪ್ಪಾಯಿ ಹಣ್ಣು ತಿನ್ನೋದರಿಂದ ಹಲವಾರು ಆರೋಗ್ಯದ ಸಮಸ್ಯೆಗಳು ನಿವಾರಣೆಯಾಗುತ್ತದೆ. ಜೊತೆಗೆ ಜ್ಯೂಸ್ ಕೂಡ ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು ನೀಡುತ್ತದೆ.
ಜ್ಯೂಸ್ ತಯಾರಿಸಲು ಬೇಕಾಗುವ ಸಾಮಾಗ್ರಿಗಳು:
ಪಪ್ಪಾಯಿ ಹಣ್ಣು – 1, ನಿಂಬೆ ಹಣ್ಣು – 1, ಜೇನುತುಪ್ಪ – ರುಚಿಗೆ ಅನುಗುಣವಾಗಿ, ಐಸ್ – ಕೆಲವು ತುಂಡುಗಳು,
ತಯಾರಿಸುವ ವಿಧಾನ: ಮೊದಲು ಪಪ್ಪಾಯಿ ಹಣ್ಣಿನ ಸಿಪ್ಪೆ ತೆಗೆದು, ಹಣ್ಣನ್ನು ತುಂಡುಗಳಾಗಿ ಕತ್ತರಿಸಿ, ಮಿಕ್ಸರ್ ನಲ್ಲಿ ಹಾಕಿ ರುಬ್ಬಿ. ಹಣ್ಣಿನ ರಸವನ್ನು ಒಂದು ಪಾತ್ರೆಯಲ್ಲಿ ಹಾಕಿಕೊಳ್ಳಿ, ಬಳಿಕ ಅದಕ್ಕೆ ಜೇನುತುಪ್ಪ, ನಿಂಬೆ ರಸ ಮತ್ತು ಐಸ್ ಸೇರಿಸಿ.
ಬಳಿಕ ಆ ಮಿಶ್ರಣವನ್ನು ಒಂದು ಸ್ಪೂನ್ ನಿಂದ ಚೆನ್ನಾಗಿ ಕಲಕಿದರೆ ತಂಪಾದ ಪಪ್ಪಾಯಿ ಹಣ್ಣಿನ ಜ್ಯೂಸ್ ಸಿದ್ಧವಾಗುತ್ತದೆ. .