News Kannada
Tuesday, July 05 2022

ಆರೋಗ್ಯ

ಉರಿಯೂತ ನಿವಾರಕಗಳ ಬಳಕೆಯಿಂದ ಗರ್ಭಪಾತ, ಕ್ಯಾನ್ಸರ್ - 1 min read

Photo Credit :

ಉರಿಯೂತ ನಿವಾರಕಗಳ ಬಳಕೆಯಿಂದ ಗರ್ಭಪಾತ, ಕ್ಯಾನ್ಸರ್

ಉರಿಯೂತ ನಿವಾರಕಗಳನ್ನು ಎಗ್ಗಿಲ್ಲದೆ ಬಳಸುತ್ತಿರುವ ಪ್ರವೃತ್ತಿಯು ಹೆಚ್ಚುತ್ತಿರುವಂತೆಯೇ, ಅವುಗಳ ಬಳಕೆಯಿಂದ ಹಲವು ಗಂಭೀರ ಸಮಸ್ಯೆಗಳಾಗುವ ಸಾಧ್ಯತೆಗಳ ಬಗ್ಗೆ ಒಂದರ ಹಿಂದೆ ಒಂದರಂತೆ ವರದಿಗಳಾಗುತ್ತಿವೆ. ಅವುಗಳ ಬಳಕೆಯಿಂದ ಹೃದಯಾಘಾತ, ಪಾರ್ಶ್ವವಾಯು ಇವೇ ಮುಂತಾದ ರಕ್ತನಾಳಗಳ ಸಮಸ್ಯೆಗಳು, ಹೃದಯದ ಗತಿಯಲ್ಲಿ ಏರುಪೇರುಗಳು, ನಿಮಿರುವಿಕೆಯ ಸಮಸ್ಯೆ ಇತ್ಯಾದಿಗಳು ಹೆಚ್ಚುತ್ತವೆ. ಉರಿಯೂತ ನಿವಾರಕಗಳ ಬಳಕೆಯಿಂದ ಗರ್ಭಪಾತವಾಗುವ ಹಾಗೂ ಮೂತ್ರಪಿಂಡಗಳಲ್ಲಿ ಕ್ಯಾನ್ಸರ್ ಬೆಳೆಯುವ ಸಾಧ್ಯತೆಗಳು ಹೆಚ್ಚುತ್ತವೆ.

ಗರ್ಭಿಣಿಯರು ಉರಿಯೂತ ನಿರೋಧಕಗಳನ್ನು ಬಳಸುವುದರಿಂದ ಗರ್ಭಪಾತವಾಗುವ ಸಾಧ್ಯತೆಗಳು ಹೆಚ್ಚುತ್ತವೆ ಎನ್ನುವುದು ಕೆನಡಾದ ಕ್ಯೂಬೆಕ್ ನೋಂದಣಿಯನ್ನಾಧರಿಸಿ ನಡೆಸಲಾದ ಅಧ್ಯಯನದಲ್ಲಿ ವ್ಯಕ್ತವಾಗಿದೆ. ಈ ಅಧ್ಯಯನದಲ್ಲಿ, ಡೈಕ್ಲೋಫೆನಾಕ್, ನಾಪ್ರೊಕ್ಸೆನ್, ಇಬುಪ್ರಾಫೆನ್, ಸೆಲಿಕಾಕ್ಸಿಬ್ ಮುಂತಾದ ಉರಿಯೂತ ನಿವಾರಕಗಳನ್ನು ಬಳಸಿದ ಗರ್ಭಿಣಿಯರಲ್ಲಿ ಅಪ್ರೇರಿತ ಗರ್ಭಪಾತಗಳ ಸಂಖ್ಯೆಯು, ಅಂತಹಾ ಔಷಧಗಳನ್ನು ಬಳಸದೇ ಇದ್ದ ಗರ್ಭಿಣಿಯರಲ್ಲುಂಟಾದ ಅಪ್ರೇರಿತ ಗರ್ಭಪಾತಗಳಿಗಿಂತ ಗಣನೀಯವಾಗಿ ಹೆಚ್ಚಿತ್ತು. ಆದ್ದರಿಂದ, ಗರ್ಭಿಣಿಯರು ಆಸ್ಪಿರಿನ್ ಹೊರತಾಗಿ ಇನ್ಯಾವುದೇ ಉರಿಯೂತ ನಿವಾರಕಗಳನ್ನು ಅತಿ ವಿವೇಚನೆಯಿಂದ ಬಳಸುವುದು ಒಳ್ಳೆಯದು.

ಅಮೆರಿಕಾದ ಹಾವರ್ಡ್ ವೈದ್ಯಕೀಯ ವಿದ್ಯಾಲಯದಲ್ಲಿ ನಡೆಸಲಾದ ಅಧ್ಯಯನದಲ್ಲಿ ಉರಿಯೂತ ನಿವಾರಕಗಳನ್ನು ಹೆಚ್ಚು ಕಾಲ ಬಳಸುವವರಲ್ಲಿ ಮೂತ್ರಪಿಂಡಗಳಲ್ಲಿ ಕ್ಯಾನ್ಸರ್ ಬೆಳೆಯುವ ಸಾಧ್ಯತೆಗಳು ಹೆಚ್ಚುತ್ತವೆ ಎನ್ನುವುದು ಕಂಡುಬಂದಿದೆ. ಈ ಅಧ್ಯಯನದಲ್ಲಿ 77575 ಮಹಿಳೆಯರನ್ನು 16 ವರ್ಷಗಳ ಕಾಲ ಹಾಗೂ 49403 ಪುರುಷರನ್ನು 20 ವರ್ಷಗಳ ಕಾಲ ಅನುಸರಿಸಿ, ಅವರಲ್ಲಿ ಮೂತ್ರಪಿಂಡಗಳ ಕ್ಯಾನ್ಸರ್ ಉಂಟಾಗುವ ಸಾಧ್ಯತೆಯನ್ನು ನಿರೀಕ್ಷೆಗೊಳಪಡಿಸಲಾಗಿತ್ತು. ಆಸ್ಪಿರಿನ್ ಹಾಗೂ ಪಾರಸಿಟಮಾಲ್ ಬಳಸುವವರಲ್ಲಿ ಮೂತ್ರಪಿಂಡಗಳ ಕ್ಯಾನ್ಸರ್ ಸಾಧ್ಯತೆಗಳು ಹೆಚ್ಚಿರಲಿಲ್ಲ, ಆದರೆ ಇನ್ನುಳಿದ ಉರಿಯೂತ ನಿವಾರಕಗಳನ್ನು ನಿರಂತರವಾಗಿ ಬಳಸುತ್ತಿದ್ದವರಲ್ಲಿ ಮೂತ್ರಪಿಂಡಗಳ ಕ್ಯಾನ್ಸರ್ ಸಾಧ್ಯತೆಗಳು ಹೆಚ್ಚಿತ್ತು.

ಉರಿಯೂತ ನಿವಾರಕಗಳ ದುಷ್ಪರಿಣಾಮಗಳ ಬಗ್ಗೆ ಪ್ರಕಟಗೊಂಡಿರುವ ಅಧ್ಯಯನಗಳು:
1.ಉರಿಯೂತ ನಿವಾರಕಗಳ ಬಳಕೆಯಿಂದ ಹೃದಯಾಘಾತ ಹಾಗೂ ಪಾರ್ಶ್ವವಾಯುಗಳ ಅಪಾಯ
2.ಗರ್ಭಿಣಿಯರಲ್ಲಿ ಉರಿಯೂತ ನಿವಾರಕಗಳ ಬಳಕೆಯಿಂದ ಗರ್ಭಪಾತವಾಗುವ ಸಾಧ್ಯತೆಗಳು ಹೆಚ್ಚು
3.ಉರಿಯೂತ ನಿವಾರಕಗಳ ಬಳಕೆಯಿಂದ ಮೂತ್ರಪಿಂಡಗಳ ಕ್ಯಾನ್ಸರ್ ಸಾಧ್ಯತೆಗಳು ಹೆಚ್ಚು
4.ಉರಿಯೂತ ನಿವಾರಕಗಳ ದೀರ್ಘ ಕಾಲದ ಬಳಕೆಯಿಂದ ಹಿರಿವಯಸ್ಕರಲ್ಲಿ ಹೃದಯಾಘಾತ ಹಾಗೂ ಪಾರ್ಶ್ವವಾಯುವಿನ ಸಾಧ್ಯತೆಗಳು ಹೆಚ್ಚು
5.ಉರಿಯೂತ ನಿವಾರಕಗಳಿಂದ ಹೆಚ್ಚುವ ಹೃದಯಾಘಾತ
6.ಉರಿಯೂತ ನಿವಾರಕಗಳನ್ನು ಒಂದು ವಾರ ಬಳಸಿದರೂ ಪುನರ್ ಹೃದಯಾಘಾತವಾಗುವ ಸಾಧ್ಯತೆಗಳು ಹೆಚ್ಚು
7.ಉರಿಯೂತ ನಿವಾರಕಗಳಿಂದ ಹೃದಯದ ಗತಿ ಏರುಪೇರು
8.ಉರಿಯೂತ ನಿವಾರಕಗಳ ನಿರಂತರ ಬಳಕೆಯಿಂದ ನಿಮಿರುವಿಕೆಯ ಸಮಸ್ಯೆಗಳು

See also  ಡೆಂಗ್ಯೂ-ಚಿಕುನ್ ಗುನ್ಯಾ ತಡೆಗೆ ಮುಂಜಾಗ್ರತೆ ಅಗತ್ಯ!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು