ಎಲ್ಲಾ ಕಾಲದಲ್ಲೂ ಸಿಗುವ ಹಣ್ಣು ಪಪ್ಪಾಯ. ಇದರಲ್ಲಿ ವಿಟಮಿನ್ ಸಿ, ಎ, ಪೊಟ್ಯಾಶಿಯಂ ಮತ್ತು ಮೆಗ್ನೀಸಿಯಂ ಅಂಶವಿರುವುದರಿಂದ ಸರ್ವಕಾಲದ ಆರೋಗ್ಯಕರ ಹಣ್ಣು ಎನ್ನಲಾಗುತ್ತದೆ. ಇದು ತಿನ್ನಲು ಎಷ್ಟು ರುಚಿಯೋ ಅಷ್ಟೇ ದೇಹದ ಸೌಂದರ್ಯವನ್ನು ಹೆಚ್ಚಿಸುತ್ತದೆ.
pappayaತ್ವಚೆಗೆ ಹೊಂದುವಂತಹ ಪಪ್ಪಾಯ ಫೇಸ್ ಪ್ಯಾಕ್ ಹಾಕಿ ಸತ್ತ ಜೀವಕೋಶಗಳನ್ನು ಹೊಗಲಾಡಿಸಿ ಮುಖದಲ್ಲಿ ಹೊಳಪು ಹೆಚ್ಚಿಸಿಕೊಳ್ಳಬಹುದು. ಹಾಗಾಗಿಯೇ ಬ್ಯೂಟಿಪಾರ್ಲರ್ಗಳಲ್ಲಿ ಹೆಚ್ಚಾಗಿ ಪಪ್ಪಾಯ ಹಣ್ಣಿನ ಫೇಸ್ಪ್ಯಾಕ್ ಮಾಡುತ್ತಾರೆ. ಯಾವುದೇ ಖರ್ಚಿಲ್ಲದೆ ನೀವೂ ಕೂಡಾ ಮನೆಯಲ್ಲಿಯೇ ಪಪ್ಪಾಯ ಫೇಸ್ಪ್ಯಾಕ್ ಮಾಡಬಹುದು.
* ಮಾಗಿದ ಪಪ್ಪಾಯ ಹಣ್ಣಿಗೆ ಒಂದು ಟೀ ಚಮಚ ಹಾಲು, ಜೇನನ್ನು ಚೆನ್ನಾಗಿ ಬೆರಸಿ ಮುಖ ಮತ್ತು ಕುತ್ತಿಗೆಗೆ ಹಚ್ಚಬೇಕು. 20 ನಿಮಿಷದ ನಂತರ ತಣ್ಣನೆಯ ನೀರಿನಲ್ಲಿ ಮುಖ ತೊಳೆಯಿರಿ. ನಿಮ್ಮ ಮುಖ ಕಾಂತಿಯೊಂದಿಗೆ ನಳನಳಿಸುತ್ತಿರುತ್ತದೆ.
* ಎರಡು ಟೀ ಚಮಚ ಮಾಗಿದ ಪಪ್ಪ್ಪಾಯ ಹಣ್ಣಿನ ರಸ ಮತ್ತು ಜೇನಿಗೆ ಅರ್ಧ ಚಮಚ ಗಂಧವನ್ನು ಮಿಕ್ಸ್ ಮಾಡಿ ಮುಖ ಮತ್ತು ಕುತ್ತಿಗೆಗೆ ಹಚ್ಚಿ. 20 ನಿಮಿಷದ ನಂತರ ತಣ್ಣನೆಯ ನೀರಿನಲ್ಲಿ ಮುಖ ತೊಳೆದರೆ ಮುಖ ಅಂದಗೊಳ್ಳುತ್ತದೆ.
* ಎರಡು ಚಮಚ ಪಪ್ಪಾಯ ಹಣ್ಣನ್ನು ಮುಲ್ತಾನಿ ಮಿಟ್ಟಿ ಬೆರಸಿ ಮುಖಕ್ಕೆ ಹಚ್ಚಿ ಒಣಗುವವರೆಗೆ ಬಿಟ್ಟು ನಂತರ ತೊಳೆಯಿರಿ. ಇದೇ ರೀತಿ ಪ್ರತಿದಿನ ಮಾಡುತ್ತಿದ್ದರೆ ಮೊಡವೆಗಳು ಕಡಿಮೆಯಾಗುತ್ತವೆ.
* ಎರಡು ಟೀ ಚಮಚ ಪಪ್ಪಾಯ ಹಣ್ಣಿನ ತಿರುಳಿಗೆ ಎರಡು ಚಮಚ ಆಲೋವಿರಾ ತಿರುಳನ್ನು ಬೆರಸಿ ಮುಖಕ್ಕೆ ಹಚ್ಚುವುದರಿಂದ ಎಣ್ಣೆಯ ಅಂಶ ಮತ್ತು ಒಣ ಚರ್ಮವನ್ನು ತೊಲಗಿಸುತ್ತದೆ.
* ಎರಡು ಟೀ ಚಮಚ ಪಪ್ಪಾಯ ಹಣ್ಣಿನ ರಸಕ್ಕೆ 10-12 ಹನಿ ನಿಂಬೆ ರಸ ಹಾಕಿ ಮುಖಕ್ಕೆ ಹಚ್ಚಿ 20 ನಿಮಿಷದ ನಂತರ ಬೆಚ್ಚನೆಯ ನೀರಿನಲ್ಲಿ ತೊಳೆಯುವುದರಿಂದ ಕಪ್ಪು ಕಲೆಗಳು ಮಾಯವಾಗುತ್ತವೆ.
*ಪಪ್ಪಾಯ ಹಣ್ಣಿನಲ್ಲಿ ನಾರಿನ ಅಂಶ ಹಾಗೂ ವಿಟಮಿನ್ ಸಿ ಅಂಶ ಹೆಚ್ಚಾಗಿರುವುದರಿಂದ ದೇಹದಲ್ಲಿರುವ ಕೊಬ್ಬಿನ ಅಂಶ ಹೊರಹಾಕಲು ಸಹಾಯಕಾರಿಯಾಗಿರುತ್ತದೆ. ಅಲ್ಲದೆ, ಹೃದಯ ಸಂಬಂಧಿ ರೋಗಗಳಿಗೆ ಪರಂಗಿ ಹಣ್ಣು ರಾಮಬಾಣವಾಗಿರುತ್ತದೆ.
*ಸ್ಥೂಲಕಾಯ ಇರುವವರು ತೂಕ ಇಳಿಸಿಕೊಳ್ಳಲು ಸಾಕಷ್ಟು ಇಂಗ್ಲೀಷ್ ಔಷಧಿಗಳ ಮೊರೆ ಹೋಗುತ್ತಿರುತ್ತಾರೆ. ಆದರೆ, ಮನೆಯಲ್ಲೇ ಇರುವ ಮದ್ದು ನೆನಪು ಮಾಡಿಕೊಳ್ಳುವುದೇ ಇಲ್ಲ. ಪಪ್ಪಾಯ ಹಣ್ಣಿನಲ್ಲಿ ಅತೀ ಕಡಿಮೆ ಕ್ಯಾಲೋರಿಗಳಿರುವುದರಿಂದ ಸ್ಥೂಲಕಾಯ ಇರುವವರು ಈ ಹಣ್ಣನ್ನು ಪ್ರತೀನಿತ್ಯ ಸೇವಿಸುವುದರಿಂದ ತೂಕ ಕಡಿಮೆ ಮಾಡಿಕೊಳ್ಳಬಹುದು. ಇದರಿಂದ ದೇಹವು ಹಗುರವಾಗುತ್ತದೆ.
ಪಪ್ಪಾಯ ಹಣ್ಣು ಎಲ್ಲಾ ಹಣ್ಣುಗಿಂತ ವಿಶಿಷ್ಟ ಹಣ್ಣಾಗಿದ್ದು, ಇದನ್ನು ಹಣ್ಣುಗಳ ರಾಣಿಯೆಂದೇ ಕರೆಯಲಾಗುತ್ತದೆ. ವೈಜ್ಞಾನಿಕವಾಗಿ ಈ ಹಣ್ಣನ್ನು ಕರಿಕ ಪರಂಗಿ ಎಂದು ಕರೆಯುವುದೂ ಉಂಟು. ಪ್ರತೀನಿತ್ಯ ಪರಂಗಿ ಹಣ್ಣು ತಿನ್ನುವುದರಿಂದ ಜೀರ್ಣಾಂಗದ ಅನೇಕ ತೊಂದರೆಗಳನ್ನು ದೂರಾಗಿಸಿಕೊಳ್ಳಬಹುದು. ಅಲ್ಲದೆ, ಇದರಲ್ಲಿ ವಿಟಮಿನ್ ಎ ಅಂಶ ಅಧಿಕವಾಗಿರುವುದರಿಂದ ಕಣ್ಣುಗಳು ಆರೋಗ್ಯದಿಂದರಲು ಸಹಾಯಕಾರಿಯಾಗಿರುತ್ತದೆ