News Kannada
Wednesday, September 28 2022

ಆರೋಗ್ಯ

ಕ್ಷಯರೋಗ ಬರಬಹುದು ಎಚ್ಚರವಾಗಿರಿ! - 1 min read

Photo Credit :

ಕ್ಷಯರೋಗ ಬರಬಹುದು ಎಚ್ಚರವಾಗಿರಿ!

ಒಂದು ಕಾಲದಲ್ಲಿ ಕ್ಷಯ ರೋಗವೆಂದರೆ ಜನ ಬೆಚ್ಚಿ ಬೀಳುತ್ತಿದ್ದರು. ಈಗ ಅದನ್ನು ನಿಯಂತ್ರಣಕ್ಕೆ ತರಲಾಗಿದೆಯಾದರೂ ಅದರ ಬಾಧೆ ಮಾತ್ರ ತಪ್ಪಿಲ್ಲ.

ಇದೊಂದು ಸಾಂಕ್ರಾಮಿಕ ರೋಗವಾಗಿರುವುದರಿಂದ ಯಾವಾಗ ಯಾರಿಂದ ಯಾರಿಗೆ ಹರಡುತ್ತದೆ ಎಂಬುವುದನ್ನು ಹೇಳುವುದೇ ಕಷ್ಟವಾಗಿದೆ. ವೈದ್ಯಕೀಯ ಮೂಲಗಳ ಪ್ರಕಾರ ವಿಶ್ವದಲ್ಲಿ ಪ್ರತಿ ಐದು ನಿಮಿಷಕ್ಕೆ ಇಬ್ಬರು ಕ್ಷಯ ರೋಗಿಗಳು ಸಾಯುತ್ತಿದ್ದಾರಂತೆ. ಭಾರತದಲ್ಲಿ ಕ್ಷಯ ರೋಗಿಗಳ ಸಂಖ್ಯೆ ದೊಡ್ಡ ಪ್ರಮಾಣದಲ್ಲಿದೆಯಂತೆ. ಶತಮಾನದಿಂದಲೂ ಕ್ಷಯ ರೋಗವು ಅತಿದೊಡ್ಡ ಸಾಂಕ್ರಾಮಿಕ ರೋಗವಾಗಿ ಭಾರತವನ್ನು ಕಾಡುತ್ತಿದೆ. ಸಕರ್ಾರದ ಹಲವಾರು ಯೋಜನೆಗಳ ನಂತರವೂ ನಿಯಂತ್ರಣ ಸಾಧ್ಯವಾಗಿಲ್ಲ.

ಕ್ಷಯ ರೋಗವು ಸಾಂಕ್ರಾಮಿಕ ರೋಗವಾಗಿದ್ದು, ಮೈಕ್ರೊ ಬ್ಯಾಕ್ಟೀರಿಯಾ ಟ್ಯೂಬರ್ ಕ್ಯುಲೋಸಿಸ್ ಎಂಬ ಬ್ಯಾಕ್ಟೀರಿಯಾದಿಂದ ಬರುತ್ತದೆ. ಈ ರೋಗ ಸಾಂಕ್ರಾಮಿಕ ರೋಗವಾಗಿರುವುದರಿಂದ ಒಬ್ಬರಿಂದ ಮತ್ತೊಬ್ಬರಿಗೆ ಸುಲಭವಾಗಿ ಹರಡುತ್ತದೆ. ಕ್ಷಯ ಸೋಂಕಿತ ವ್ಯಕ್ತಿಯು ಕೆಮ್ಮಿದಾಗ, ಸೀನಿದಾಗ ಬರುವ ತುಂತುರು ಹನಿಯೊಂದಿಗೆ ಬ್ಯಾಕ್ಟೀರಿಯಾ ಗಾಳಿಯಲ್ಲಿ ಸೇರಿಕೊಳ್ಳುತ್ತದೆ. ಆ ಗಾಳಿಯನ್ನು ನಾವು ಸೇವಿಸಿದಾಗ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇದ್ದರೆ ಕ್ಷಯ ಬರುವ ಸಂಭವ ಹೆಚ್ಚಾಗಿರುತ್ತದೆ.

ಎಚ್ಐವಿ ಪೀಡಿತರು, ಮಧುಮೇಹ, ಧೂಮಪಾನ ಮಾಡುವವರು, ಅಪೌಷ್ಠಿಕತೆಯಿಂದ ಬಳಲುತ್ತಿರುವವರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಅವರಿಗೆ ರೋಗ ಬಹುಬೇಗ ಹರಡುವ ಸಾಧ್ಯತೆ ಇರುತ್ತದೆ. ಎರಡು ವಾರ ಕೆಮ್ಮು, ಜ್ವರದಿಂದ ತೂಕ ಕಡಿಮೆ, ಕಫದಲ್ಲಿ ರಕ್ತ ಬೀಳುವುದು. ಈ ಲಕ್ಷಣಗಳು ಕಂಡು ಬಂದರೆ ವೈದ್ಯರನ್ನು ಭೇಟಿಯಾಗಿ ತಪಾಸಣೆ ಮಾಡಿಸಿಕೊಳ್ಳುವುದು ಅಗತ್ಯವಾಗಿದೆ. ಸಕರ್ಾರಿ ಆಸ್ಪತ್ರೆಯಲ್ಲಿ ತಪಾಸಣೆಗೆ ಪ್ರತ್ಯೇಕ ವ್ಯವಸ್ಥೆಗಳಿದ್ದು, ಸದುಪಯೋಗಪಡಿಸಿಕೊಳ್ಳಬಹುದು.

ವಿಶ್ವದಲ್ಲಿ 1.04 ಕೋಟಿ ಜನರು ಕ್ಷಯ ರೋಗದಿಂದ ಬಳಲುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ. ಅದರಲ್ಲಿ ಭಾರತ ದೇಶದಲ್ಲಿ 28.4 ಲಕ್ಷ ಜನರಿದ್ದಾರೆ. ವಿಶ್ವದ ಒಟ್ಟು ರೋಗಿಗಳಲ್ಲಿ ಭಾರತದಲ್ಲಿಯೇ ಶೇ.25 ರಷ್ಟು ಮಂದಿ ಇದ್ದಾರೆ. 5.1 ಲಕ್ಷದಷ್ಟು ಜನರು ಸಾವನ್ನಪ್ಪುತ್ತಿದ್ದಾರೆ. ಕ್ಷಯ ರೋಗದ ತಪಾಸಣೆಗೆ ಈಗ ಅತ್ಯಾಧುನಿಕ ಯಂತ್ರೋಪಕರಣ ಗಳು ಬಂದಿರುವುದರಿಂದ ಸುಲಭವಾಗಿ ಪತ್ತೆ ಹಚ್ಚಬಹುದಾಗಿದೆ. ಜತೆಗೆ ವೈದ್ಯರ ಸಲಹೆಯಂತೆ ಮಾತ್ರೆಗಳನ್ನು ತೆಗೆದು ಕೊಂಡರೆ ಗುಣಮುಖರಾಗಬಹುದು. ಸರ್ಕಾರದ ವತಿಯಿಂದಲೇ ಮಾತ್ರೆಗಳನ್ನು ನೀಡಲಾಗುತ್ತದೆ.

ಹೆಚ್ಚು ಜನ ಕೆಮ್ಮು ಕಾಡಿದರೆ ಮಾತ್ರೆಯೋ ಕಷಾಯವೋ ಕುಡಿದು ತೆಪ್ಪಗಾಗುತ್ತಾರೆ. ಆದರೆ ನೀವು ಯಾವುದೇ ಔಷಧಿ ಮಾಡಿದರೂ ಕಡಿಮೆಯಾಗದೆ ಇರಬಹುದು. ಒಂದು ವೇಳೆ ಕೆಮ್ಮಿದ ಬಳಿಕ ಕಫದೊಂದಿಗೆ ರಕ್ತ ಕಾಣಿಸಿಕೊಂಡರೆ ಉದಾಸೀನ ಮಾಡಬೇಡಿ ಯಾವುದಕ್ಕೂ ವೈದ್ಯರ ಭೇಟಿ ಮಾಡಿ ಪರೀಕ್ಷಿಸಿಕೊಳ್ಳಿ. ಈಗ ಪ್ರತಿಯೊಬ್ಬರೂ ಒಂದಲ್ಲೊಂದು ಕಾರಣಕ್ಕೆ ಮನೆಯಿಂದ ಹೊರಗೆ ಹೋಗಲೇ ಬೇಕಾಗುತ್ತದೆ. ಆಹಾರಗಳನ್ನು ಸೇವಿಸಬೇಕಾಗುತ್ತದೆ. ಈ ವೇಳೆ ಕೆಲವೊಮ್ಮೆ ಯಾವುದಾದರೊಂದು ರೀತಿಯಲ್ಲಿ ಬ್ಯಾಕ್ಟೀರಿಯಾಗಳು ನಮ್ಮ ದೇಹವನ್ನು ಸೇರಿ ಕಾಯಿಲೆಗೆ ಕಾರಣವಾಗಬಹುದು ಆದುದರಿಂದ ಸದಾ ಆರೋಗ್ಯದ ಬಗ್ಗೆ ಎಚ್ಚರವಾಗಿರುವುದು ಒಳ್ಳೆಯದು.

 

See also  ಔಷಧೀಯ ಗುಣದ ದಾಸವಾಳ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು