ಈಗ ಎಲ್ಲರನ್ನು ಬೆಚ್ಚಿ ಬೀಳಿಸಿರುವ ಕಾಯಿಲೆ ಎಂದರೆ ಅದು ಡೆಂಗ್ಯೂ. ಸಾಮಾನ್ಯವಾಗಿ ಎಲ್ಲ ಆಸ್ಪತ್ರೆಗಳಲ್ಲೂ ಡೆಂಗ್ಯೂನಿಂದ ಬಳಲುತ್ತಿರುವ ರೋಗಿಗಳನ್ನು ಕಾಣಬಹುದು. ಮಳೆಗಾಲ ಆರಂಭವಾಯಿತೆಂದರೆ ಜ್ವರ ಕಾಣಿಸಿಕೊಳ್ಳುವುದು ಹಿಂದಿನಿಂದಲೂ ಇದೆ. ಇದಕ್ಕೆ ಮಾತ್ರೆನೋ, ಕಸಾಯನೋ ಕುಡಿದರೆ ಜ್ವರ ಕಡಿಮೆಯಾಗಿ ಬಿಡುತ್ತಿತ್ತು. ಈಗ ಅದೇ ರೀತಿ ನಂಬಿ ಮಾತ್ರೆ ಸೇವಿಸುವುದು ಮಾಡಿದರೆ ಪ್ರಾಣಕ್ಕೆ ಕುತ್ತು ಬರುವ ಸಾಧ್ಯತೆ ಹೆಚ್ಚು. ಆದ್ದರಿಂದ ಜ್ವರ ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಭೇಟಿಯಾಗಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳುವ ಮೂಲಕ ಯಾವ ಜ್ವರ ಎಂಬುದನ್ನು ಕಂಡು ಹಿಡಿದು ಚಿಕಿತ್ಸೆ ಪಡೆದುಕೊಳ್ಳುವುದು ಉತ್ತಮ.
ಬಹಳಷ್ಟು ಮಂದಿ ಜ್ವರ ತಾನೆ ಮಾತ್ರೆ ತೆಗೆದುಕೊಂಡರೆ ಹೋಗುತ್ತದೆ ಎನ್ನುತ್ತಾ ಸ್ವಯಂ ಚಿಕಿತ್ಸೆ ಮಾಡಿಕೊಳ್ಳುತ್ತಾರೆ. ಕೊನೆಗಳಿಗೆಯಲ್ಲಿ ಜ್ವರ ಉಲ್ಭಣವಾದಾಗ ಆಸ್ಪತ್ರೆಗೆ ದಾಖಲಾಗುತ್ತಾರೆ. ವೈದ್ಯರು ಪರೀಕ್ಷೆ ಮಾಡಿ ಡೆಂಗ್ಯೂ ಎಂದರೆ ಬೆಚ್ಚಿ ಬೀಳುತ್ತಾರೆ. ಕೆಲವೊಮ್ಮೆ ಕೊನೆಯ ಗಳಿಗೆಯಲ್ಲಿ ನೀಡುವ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಹೀಗಾಗಿ ಡೆಂಗ್ಯೂವನ್ನು ನಿರ್ಲಕ್ಷಿಸಿದರೆ ಅಪಾಯ ತಪ್ಪಿದಲ್ಲ. ಡೆಂಗ್ಯೂ ಅಶುಚಿತ್ವದಿಂದ ಬರುವ ಕಾಯಿಲೆ ಎಂಬುದಕ್ಕೆ ಎರಡು ಮಾತಿಲ್ಲ. ಆದ್ದರಿಂದ ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳುವುದು ಒಳ್ಳೆಯದು. ಕೊಳಚೆ ನೀರು ನಿಲ್ಲುವ ಜಾಗವೇ ಡೆಂಗ್ಯೂ ಹರಡುವ ಸೊಳ್ಳೆಗಳ ಆವಾಸ ಸ್ಥಾನ ಆದ್ದರಿಂದ ಶುಚಿತ್ವಕ್ಕೆ ಮೊದಲು ಆದ್ಯತೆ ನೀಡಬೇಕು.
ಏಕೆಂದರೆ ಕಾಯಿಲೆ ಬಂದ ಬಳಿಕ ಪರದಾಡುವುದಕ್ಕಿಂತ ಬಾರದಂತೆ ಮುಂಜಾಗ್ರತೆ ವಹಿಸುವುದು ಜಾಣತನ. ಹೀಗಾಗಿ ಡೆಂಗ್ಯೂ ಮಹಾಮಾರಿ ನಮ್ಮನ್ನು ಬಾಧಿಸುವ ಮುನ್ನ ಅದನ್ನು ನಿಯಂತ್ರಿಸಲು ಶುಚಿತ್ವಕ್ಕೆ ಒತ್ತು ನೀಡುವುದು ಒಳ್ಳೆಯದು. ಸೊಳ್ಳೆ ನಿಯಂತ್ರಣಕ್ಕೆ ಫಾಗಿಂಗ್ ಮಾಡುವುದರೊಂದಿಗೆ ಟ್ಯಾಂಕ್ಗಳು, ಹೂಕುಂಡ, ನೀರು ನಿಲ್ಲುವ ಸ್ಥಳ ಹೀಗೆ ಎಲ್ಲೆಂದರಲ್ಲಿ ನೀರು ನಿಂತ ಸ್ಥಳಗಳನ್ನು ಕಂಡರೆ ಅಲ್ಲಿ ಸೊಳ್ಳೆಗಳ ಲಾವರ್ಾ ಇರುವುದು ಖಚಿತ ಅಂಥ ಕಡೆಗಳಲ್ಲಿ ಅದನ್ನು ನಾಶ ಮಾಡುವ ಪ್ರಯತ್ನ ಮಾಡಬೇಕು.
ಕೆಲವೊಮ್ಮೆ ಮನೆಯ ಸುತ್ತಮುತ್ತ ನಿಂತ ನೀರಿನಲ್ಲಿ ಉತ್ಪತ್ತಿಯಾಗುವ ಸೊಳ್ಳೆಗಳೇ ಡೆಂಗ್ಯೂನಂತಹ ಸಾಂಕ್ರಾಮಿಕ ರೋಗಕ್ಕೆ ಕಾರಣವಾಗಬಹುದು. ಆದ್ದರಿಂದ ಅವುಗಳ ನಿಮರ್ೂಲನೆಗಾಗಿ ಫಾಗಿಂಗ್ನಂತಹ ಕ್ರಮ ಕೈಗೊಂಡು ಸೊಳ್ಳೆಗಳು ನಿಮರ್ೂಲನೆಯಾದರೂ ಅವುಗಳ ಮೊಟ್ಟೆ ಹಾಗೆ ಉಳಿದು ಬಿಡಬಹುದು ಇದರಿಂದ ಅವುಗಳ ಸಂತಾನೋತ್ಪತ್ತಿ ಆಗಬಹುದು.
ಇಂತಹ ಸಂದರ್ಭದಲ್ಲಿ ಸೊಳ್ಳೆ ಹಾಗೂ ಸೊಳ್ಳೆಯ ಮೊಟ್ಟೆಯಲ್ಲದೆ ಪಾಚಿಯನ್ನು ತಿನ್ನುವ ಗುಣವನ್ನು ಹೊಂದಿರುವುದರಿಂದ ಗಪ್ಪಿ ಮೀನನ್ನು ಸಾಕುವುದು ಸಹಕಾರಿಯಾಗಲಿದೆ. ಡೆಂಗ್ಯೂ ನಿಯಂತ್ರಣದಲ್ಲಿ ಗಪ್ಪಿ ಮೀನು ಪ್ರಮುಖ ಪಾತ್ರವಹಿಸುತ್ತಿರುವುದರಿಂದ ಅದನ್ನು ಎಲ್ಲೆಡೆ ಬಿಡುವ ಕಾರ್ಯವು ನಡೆಯುತ್ತಿದೆ. ಡೆಂಗ್ಯೂಗೆ ಕಾರಣವಾಗುವ ಈಡಿಸ್ ಈಜಿಪ್ಟೆ ಸೊಳ್ಳೆಗಳು ಕೊಳಚೆ ನೀರಿನಲ್ಲಿ ಮಾತ್ರವಲ್ಲದೆ, ಶುದ್ದ ನೀರಲ್ಲೂ ತನ್ನ ಸಂತಾನಾಭಿವೃದ್ಧಿ ಮಾಡುವುದರಿಂದ ಅವುಗಳನ್ನು ಬೇರೆ ಯಾವುದೇ ವಿಧಾನಗಳಿಂದ ನಿಯಂತ್ರಣ ಮಾಡುವುದು ಕಷ್ಟ ಸಾಧ್ಯ. ಆದ್ದರಿಂದ ಈ ಸೊಳ್ಳೆಗಳ ನಿಮರ್ೂಲನೆಗೆ ಗಪ್ಪಿ ಮೀನು ಸಹಕಾರಿಯಾಗಿದೆ.
ಮೀನುಗಳನ್ನು ಮನೆಯ ಮೇಲ್ಛಾವಣಿಯಲ್ಲಿ ಸಣ್ಣ ನೀರಿನ ತೊಟ್ಟಿಯನ್ನಿಟ್ಟು ಸಾಕಬಹುದು. ಈ ಮೀನುಗಳ ಸಾಕಣೆಗೆ ಅತಿ ಹೆಚ್ಚಿನ ಆಥರ್ಿಕ ಹೊರೆಯಾಗುವುದಿಲ್ಲ. ಇವು ನೀರಿನ ತೊಟ್ಟಿಯಲ್ಲಿ ಉತ್ಪತ್ತಿಯಾಗುವ ಪಾಚಿಯನ್ನೇ ತಿಂದು. 3 ವರ್ಷಗಳ ಕಾಲ ಜೀವಿಸುತ್ತವೆ. ಡೆಂಗ್ಯೂ ಹರಡುವ ಸೊಳ್ಳೆಗಳ ನಿಯಂತ್ರಣವಾಗಬೇಕಾದರೆ ನಮ್ಮ ಮನೆ ಸುತ್ತಮುತ್ತ ಶುಚಿಗೊಳಿಸುವುದರೊಂದಿಗೆ ಶುಚಿ ವಾತಾವರಣವನ್ನು ನಿಮರ್ಾಣ ಮಾಡಬೇಕಾಗಿದೆ. ಇದು ಒಬ್ಬರಿಂದ ಸಾಧ್ಯವಾಗದ ಕೆಲಸವಾಗಿರುವುದರಿಂದ ಎಲ್ಲರೂ ಒಟ್ಟಾಗಿ ಕಾರ್ಯ ನಿರ್ವಹಿಸಬೇಕಾಗಿದೆ