News Kannada
Wednesday, October 05 2022

ಆರೋಗ್ಯ

ರಸ್ತೆ ಬದಿ ತಿನಿಸು ತಿನ್ನೋ ಮುನ್ನ ಯೋಚಿಸಿ! - 1 min read

Photo Credit :

ರಸ್ತೆ ಬದಿ ತಿನಿಸು ತಿನ್ನೋ ಮುನ್ನ ಯೋಚಿಸಿ!

ಈಗ ರಸ್ತೆ ಬದಿಯ ತಿನಿಸು ತಿನ್ನೋದು ಕೆಲವರಿಗೆ ಅಗತ್ಯವಾಗಿದ್ದರೆ, ಮತ್ತೆ ಕೆಲವರಿಗೆ ಫ್ಯಾಷನ್ ಆಗಿದೆ. ರಸ್ತೆ ಬದಿಯಲ್ಲಿ ತಯಾರಿಸೋ ಕರಿದ ತಿಂಡಿಗಳು, ಪಾನಿಪೂರಿಗಳು, ಐಸ್ ಕ್ಯಾಂಡಿಗಳು  ಹೀಗೆ ರಸ್ತೆ ಬದಿಯ ತಿನಿಸುಗಳ ದೊಡ್ಡ ಪಟ್ಟಿಯೇ ಬೆಳೆಯುತ್ತದೆ. ಇವೆಲ್ಲ ಆಹಾರ ಪದಾರ್ಥಗಳನ್ನು ನಾವು ಸೇವಿಸುವುದು ಮುಖ್ಯವಲ್ಲ. ಎಲ್ಲಿ ಸೇವಿಸುತ್ತಿದ್ದೇವೆ? ವಾತಾವರಣ ಹೇಗಿದೆ? ಶುಚಿಯಾಗಿದೆಯಾ? ಎಂಬುದು ಮುಖ್ಯವಾಗುತ್ತದೆ. ಬಾಯಿ ರುಚಿಗೆ ಎಲ್ಲೆಂದರಲ್ಲಿ ಸಿಗುವ ಆಹಾರ ಪದಾರ್ಥವನ್ನು ಸೇವಿಸುವುದು ಇವತ್ತಿನ ದಿನಗಳಲ್ಲಿ ಕಂಡು ಬರುತ್ತಿದ್ದು, ಇದು ಒಳ್ಳೆಯ ಅಭ್ಯಾಸವಲ್ಲ. ಕಾರಣ ಸಾಂಕ್ರಾಮಿಕ ರೋಗಗಳು ಯಾವಾಗ? ಯಾವುದರ ಮೂಲಕ ಬರುತ್ತವೆ ಎನ್ನಲಾಗುವುದಿಲ್ಲ. ಹೀಗಿರುವಾಗ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದಷ್ಟು ನಮಗೆ ಒಳ್ಳೆಯದು ಎಂಬುದುನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು.

ಇದೀಗ ಡೆಂಗ್ಯೂ, ಚಿಕೂನ್ ಗುನ್ಯಾ, ಮಲೇರಿಯಾ ಜೊತೆಜೊತೆಯಲ್ಲಿ ಜಾಂಡೀಸ್ ಕಾಡತೊಡಗಿದೆ. ಜಾಂಡೀಸ್ ಬಹಳಷ್ಟು ಮಂದಿಯನ್ನು ಬಲಿ ತೆಗೆದುಕೊಂಡಿದೆ. ಬಹಳಷ್ಟು ಮಂದಿಗೆ ಇದರ ಅರಿವಿಲ್ಲದ ಕಾರಣದಿಂದ ರೋಗ ಉಲ್ಭಣವಾಗಿ ಸಾವಿಗೀಡಾಗುತ್ತಿದ್ದಾರೆ. ಮಳೆಗಾಲದ ಆರಂಭದ ದಿನವಾಗಿರುವುದರಿಂದ ಭಾರೀ ಮಳೆ ಬಾರದೆ ಅಲ್ಲಲ್ಲಿ ಕೊಳಚೆ ನೀರು ನಿಂತು ವಾತಾವರಣವೇ ಅಸಹ್ಯ ಎನಿಸತೊಡಗಿದೆ. ನಿಂತ ನೀರುಗಳಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುತ್ತಿವೆ. ಚರಂಡಿಗಳಲ್ಲಿ ತ್ಯಾಜ್ಯ ನಿಂತು ದುರ್ವಾಸನೆ ಬೀರುತ್ತಿದೆ. ಕೆಲವು ಪಟ್ಟಣಗಳ ಚರಂಡಿಗಳ ಪಕ್ಕದಲ್ಲೇ ತಳ್ಳುಗಾಡಿಗಳಲ್ಲಿ ತಿಂಡಿ, ತಿನಿಸುಗಳನ್ನು ತಯಾರಿಸಿ ಮಾರಾಟ ಮಾಡುತ್ತಾರೆ. ಮತ್ತೆ ಕೆಲವೆಡೆ ಶುಚಿತ್ವವಿಲ್ಲದೆ ಸೊಳ್ಳೆ, ನೊಣಗಳ ಆವಾಸ ಸ್ಥಾನವಾಗಿ, ರೋಗ ಹರಡುವ ಕೇಂದ್ರವಾಗಿಯೂ ಮಾರ್ಪಾಡಾಗಿದೆ.

ಈಗಾಗಲೇ ಹಲವೆಡೆ ಸ್ಥಳೀಯ ಸಂಸ್ಥೆಗಳು ರಸ್ತೆ ಬದಿಯ ತಿನಿಸುಗಳಿಗೆ ನಿರ್ಬಂಧ ವಿಧಿಸಿವೆ. ಆದರೂ ಆರೋಗ್ಯದ ದೃಷ್ಠಿಯಿಂದ ಶುಚಿತ್ವದಿಂದ ಕೂಡಿರುವ ಹೋಟೆಲ್ಗಳಲ್ಲಿ ಆಹಾರ ಸೇವನೆ ಮಾಡುವುದು ಒಳ್ಳೆಯದು. ಸಾಮಾನ್ಯವಾಗಿ ಸಾಂಕ್ರಾಮಿಕ ರೋಗಗಳು ಹೆಚ್ಚಾಗಿ ನೀರು, ಆಹಾರ ಪದಾರ್ಥಗಳು, ಸೊಳ್ಳೆ, ನೊಣಗಳ ಮೂಲಕ ಹರಡುವುದರಿಂದ ಇವುಗಳ ಬಗ್ಗೆ ನಿಗಾವಹಿಸುವುದು ಬಹುಮುಖ್ಯ. ಎಲ್ಲೆಂದರಲ್ಲಿ ಆಹಾರ ಸೇವಿಸುವುದು, ನೀರು ಕುಡಿಯುವುದನ್ನು ನಿಲ್ಲಿಸಬೇಕು.

ಜಾಂಡೀಸ್ ರೋಗ ನೀರಿನಿಂದ ಬರುವುದರಿಂದ ಎಚ್ಚರಿಕೆ ಅಗತ್ಯ. ಕೆಲವೊಮ್ಮೆ ತ್ಯಾಜ್ಯ ನೀರು ಕುಡಿಯುವ ನೀರಿನೊಂದಿಗೆ ಮಿಶ್ರವಾಗುವ ಸಾಧ್ಯತೆಯೂ ಇರುತ್ತದೆ. ಆದ್ದರಿಂದ ಕುಡಿಯುವ ನೀರಿನ ಬಗ್ಗೆ ಎಚ್ಚರವಾಗಿರಬೇಕು. ಈ ರೋಗವು ಹೆಪಾಟೈಟಿಸ್ `ಎ’ ಎಂಬ `ಪಿ’ ಪಿಕಾನರ್ೂ ವೈರಸ್ನಿಂದ ಹರಡುತ್ತಿದ್ದು, ವೈರಸ್ ಲಿವರ್ ಗೆ ತಲುಪಿ ಅಲ್ಲಿ ವೃದ್ಧಿಯಾಗಿ ರೋಗ ಲಕ್ಷಣಗಳು ಹೊರ ಹೊಮ್ಮಲು ಸರಾಸರಿ 30 ದಿವಸಗಳು ಬೇಕಾಗುತ್ತದೆ. ಹೀಗಾಗಿ ತಕ್ಷಣಕ್ಕೆ ಗೊತ್ತಾಗದಿದ್ದರೂ ಈ ರೋಗ ಉಲ್ಭಣಗೊಳ್ಳುತ್ತಿದ್ದಂತೆಯೇ ಅದರ ಲಕ್ಷಣಗಳು ಹೊರಗೆ ಕಾಣಿಸಿಕೊಳ್ಳುತ್ತದೆ. ರೋಗದ ತೀವ್ರತೆ ಮಕ್ಕಳಲ್ಲಿ ಕಡಿಮೆ ಪ್ರಮಾಣದಲ್ಲಿದ್ದು, ದೊಡ್ಡವರಲ್ಲಿ ಹೆಚ್ಚಾಗಿರುತ್ತದೆ. ಹೆಪಾಟೈಟಿಸ್ `ಎ’ ಯ ರೋಗ ಲಕ್ಷಣಗಳು 3 ವಾರದವರೆಗೂ ಇದ್ದು, ಸಮಾರು 9 ವಾರಗಳಲ್ಲಿ ಸಂಪೂರ್ಣ ಗುಣವಾಗುತ್ತದೆ. ಕೆಲವರಲ್ಲಿ ವಾಸಿಯಾಗಲು 3 ತಿಂಗಳು ಬೇಕಾಗುತ್ತದೆ.

ರೋಗ ಲಕ್ಷಣಗಳು ಕಂಡುಬರುವ 2 ವಾರಗಳವರೆಗೆ ಈ ರೋಗಾಣು ಮಲದಲ್ಲಿ ವಿಸರ್ಜನೆಯಾಗುತ್ತಿರುತ್ತದೆ. 3 ವಾರಗಳಲ್ಲಿ ಈ ವೈರಸ್ ತಾವಾಗಿಯೇ ಸ್ವಯಂ ನಿರ್ನಾಮಗೊಂಡು, ರೋಗಿ ತಾನಾಗಿಯೇ ಗುಣಮುಖವಾಗುತ್ತಾನೆ ಇದನ್ನು ವೈದ್ಯಕೀಯ ವಲಯದಲ್ಲಿ “ಸೆಲ್ಫ್ ಲಿಮಿಟಿಂಗ್” ಎನ್ನುತ್ತಾರೆ. ಮುಖ್ಯವಾಗಿ ಹೊಟ್ಟೆ ಹಸಿವು ಕಡಿಮೆಯಾಗುವುದು, ಬಲಗಡೆ ಹೊಟ್ಟೆಯ ಮೇಲ್ಬಾಗದಲ್ಲಿ ನೋವು ಬರುವುದು, ಆಗಾಗ ವಾಂತಿಯಾಗುವದು  ಮತ್ತು ವಿಪರೀತ ಸುಸ್ತು ಸಂಕಟವಾಗುವದು ರೋಗದ ಲಕ್ಷಣಗಳಾಗಿವೆ.

See also  ಮಕ್ಕಳ ದೈಹಿಕ–ಮಾನಸಿಕ ಆರೋಗ್ಯ ಕಾಪಾಡುವುದು ಅಗತ್ಯ

ನಾಟಿ ಔಷಧಿ, ಅಲೋಪತಿ ಔಷಧಿ, ಯಾವುದೇ ಚಿಕಿತ್ಸೆ ಮಾಡಿದರೂ ದಿನಕ್ಕೆ 3 ಗ್ಲಾಸ್ ನಿಂಬೆ ಹಣ್ಣು, ಕಿತ್ತಳೆ, ಮೂಸಂಬಿ ಅಥವಾ ಕಬ್ಬಿನ ರಸವನ್ನು ಮತ್ತು 3 ಚಮಚ ಗ್ಲೂಕೋಸ್ ಹಾಕಿ ಕರಗಿಸಿ ಕುಡಿದರೆ ಒಳ್ಳೆಯದಾಗುತ್ತದೆ. ಕಾಯಿಲೆ ಬಂದ ಬಳಿಕ ಪರದಾಡುವುದಕ್ಕಿಂತಲೂ ಕಾಯಿಲೆ ಬರದಂತೆ ನೋಡಿಕೊಳ್ಳುವುದು ಅಗತ್ಯವಾಗಿರುವುದರಿಂದ ಎಚ್ಚರಿಕೆಯಿಂದ ಇರುವುದು ಒಳಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು