News Kannada
Tuesday, December 06 2022

ಆರೋಗ್ಯ

ಮುಜುಗರ ತರುವ ಬೊಜ್ಜು!

Photo Credit :

ಮುಜುಗರ ತರುವ ಬೊಜ್ಜು!

ನಾವೆಲ್ಲರೂ ಸುಂದರವಾಗಿ ಕಾಣಬೇಕೆಂದು ಬಯಸುತ್ತೇವೆ. ಸುಂದರವಾಗಿ ಕಾಣಬೇಕೆಂದರೆ ಕೇವಕ ಮುಖದ ಅಂದವೊಂದೇ ಮಾನದಂಡವಾಗುವುದಿಲ್ಲ. ನಮ್ಮ ದೇಹಾಕಾರವೂ ಮುಖ್ಯವಾಗುತ್ತದೆ. ಇತ್ತೀಚೆಗೆ ಝಿರೋ ಸೈಜ್ ಬಾಡಿ ಇರಬೇಕೆಂದು ಬಯಸುವವರು ದೊಡ್ಡ ಸಂಖ್ಯೆಯಲ್ಲಿ ಕಾಣ ಸಿಗುತ್ತಾರೆ.

ನಮ್ಮೆಲ್ಲರನ್ನು ಆಗಾಗ್ಗೆ ಮುಜುಗರಕ್ಕೀಡು ಮಾಡುವುದೆಂದರೆ ಅದು ನಮ್ಮ ದೇಹದ ಬೊಜ್ಜು. ಬೊಜ್ಜಿನಿಂದಾಗಿ ಆಕರ್ಷಕವಾಗಿ ಕಾಣಬೇಕೆಂದು ಬಯಸುವವರು ಒಂದಷ್ಟು ಒಳಗೊಳಗೆ ನೋಯುವುದು ಮಾಮೂಲಿಯಾಗಿದೆ. ಅಯ್ಯೋ ಈ ಹಾಳಾದ ಬೊಜ್ಜಿನಿಂದ ಎಲ್ಲರ ರೀತಿ ಇರೋಕಾಗಲ್ಲವಲ್ಲ ಎಂಬ ಕೊರಗು ಇದ್ದೇ ಇರುತ್ತದೆ.
ಇವತ್ತಿನ ಕೆಲಸ ಮತ್ತು ಸೇವಿಸುವ ಆಹಾರ ಎಲ್ಲವೂ ಬೊಜ್ಜನ್ನು ಹೆಚ್ಚಿಸುತ್ತದೆ. ಕೊಬ್ಬಿನ ಅಂಶವು ಶರೀರದಲ್ಲಿ ಅದರಲ್ಲೂ ಮಧ್ಯಭಾಗವಾದ ಹೊಟ್ಟೆಯಲ್ಲಿ ಶೇಖರಣೆಗೊಂಡರೆ ದೇಹದ ಆಕರ್ಷಣೆಯನ್ನು ಕಳೆದುಕೊಳ್ಳುವುದಲ್ಲದೆ ಹಲವು ರೋಗಗಳಿಗೆ ದಾರಿ ಮಾಡಿಕೊಟ್ಟಂತಾಗುತ್ತದೆ.

ನಮ್ಮ ದೇಹದ ಎತ್ತರಕ್ಕೆ ತಕ್ಕಂತೆ ತೂಕವನ್ನು ಕಾಪಾಡಿಕೊಳ್ಳುವುದು ಅಷ್ಟು ಸುಲಭವಲ್ಲ. ಆದರೂ ಕಷ್ಟಪಟ್ಟು ಒಂದಷ್ಟು ವೈದ್ಯರ ಸಲಹೆಯಂತೆ ವ್ಯಾಯಾಮ ಮತ್ತು ಆಹಾರ ಸೇವನೆಯಲ್ಲಿ ಒಂದಷ್ಟು ಹಿತಮಿತ, ಪಥ್ಯಾಕ್ರಮಗಳನ್ನು ಅಳವಡಿಸಿಕೊಂಡರೆ ದೇಹವನ್ನು ನಮ್ಮ ಹಿಡಿತದಲ್ಲಿಟ್ಟುಕೊಳ್ಳಲು ಸಾಧ್ಯವಾಗುತ್ತದೆ. ಇದರಿಂದ ಬೇರೆಯವರಿಗೂ ನಾವು ಸುಂದರ ಮತ್ತು ಆಕರ್ಷಕವಾಗಿ ಕಾಣಲು ಸಾಧ್ಯವಾಗುತ್ತದೆ.

ಶರೀರದಲ್ಲಿ ಕೊಬ್ಬಿನ ಅಂಶ ಹೆಚ್ಚಾದಾಗ ಶರೀರದ ಗಾತ್ರಹಿಗ್ಗುತ್ತದೆ. ಇದೇ ಬೊಜ್ಜು. ಮನುಷ್ಯನಿಗೆ ಬೊಜ್ಜು ಹೆಚ್ಚಾಗುತ್ತಿದ್ದಂತೆಯೇ ರಕ್ತದೊತ್ತಡ, ಹೃದಯದ ಕಾಯಿಲೆ, ಪಿತ್ತಕೋಶದ ಕಾಯಿಲೆ, ಮೂಳೆ ಸವೆತ, ಕೀಲುಗಳ ಕಾಯಿಲೆ, ಉಸಿರಾಟದ ತೊಂದರೆ, ಸುಸ್ತು, ಆಯಾಸದಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಇತ್ತೀಚೆಗಿನ ಆಹಾರಕ್ರಮಗಳು, ಜಂಕ್ ಫುಡ್ ಸೇವನೆ, ಆಹಾರ ಸೇವನೆಯಲ್ಲಿ ಶಿಸ್ತು ಅಳವಡಿಸಿಕೊಳ್ಳದೆ, ಸಿಕ್ಕಿದನ್ನೆಲ್ಲ ಸೇವಿಸೋದು, ಕುಳಿತಲ್ಲೇ ಹೆಚ್ಚು ಹೊತ್ತು ಇರುವುದು, ವಾಕಿಂಗ್, ವ್ಯಾಯಾಮ, ದೈಹಿಕ ಶ್ರಮದ ಕೆಲಸ ಮಾಡದಿರುವುದು ಬೊಜ್ಜು ಬರಲು ಕಾರಣವಾಗುತ್ತದೆ. ನಾವು ನಮ್ಮ ದೇಹವನ್ನು ಎಷ್ಟು ದಂಡಿಸುತ್ತೇವೆಯೋ ಅಷ್ಟೇ ಅನುಕೂಲವಾಗುತ್ತದೆ.

ಶ್ರಮ ವಹಿಸುವ ಕೆಲಸಗಾರರು, ರೈತರು, ಕಾಮರ್ಿಕರಲ್ಲಿ ಬೊಜ್ಜು ಕಾಣಿಸಿಕೊಳ್ಳುವುದು ಅಪರೂಪವಾಗಿರುತ್ತದೆ. ಆದರೆ ದೈಹಿಕ ಶ್ರಮ ಕಡಿಮೆ ಇರುವ ಕೆಲಸಗಳನ್ನು ಮಾಡುವವರಲ್ಲಿ ಬೊಜ್ಜಿನ ಸಮಸ್ಯೆ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುವುದು ಸಾಮಾನ್ಯವಾಗಿದೆ.
ಬೊಜ್ಜು ಅನುವಂಶೀಯವಾಗಿಯೂ ಬರಬಹುದಂತೆ, ಇಲ್ಲವೆ ದೇಹದ ಶ್ರಮ ಕಡಿಮೆಯಾಗಿ ಆಹಾರ ಸೇವನೆ ಜಾಸ್ತಿಯಾದರೂ ಬರಬಹುದು. ನಡವಳಿಕೆಯಲ್ಲಿನ ವಿಭಿನ್ನತೆ, ತಿನ್ನುವುದನ್ನು ಪ್ರೇರೇಪಿಸುವುದು, ಕಂಡಿದೆಲ್ಲವನ್ನೂ ತಿನ್ನಬೇಕೆಂಬ ಬಯಕೆ, ಆಗಾಗ್ಗೆ ಆಹಾರ ಸೇವಿಸುವುದು. ಕೊಬ್ಬಿನ ಅಂಶವಿರುವ ಪದಾರ್ಥಗಳನ್ನು ತಿನ್ನುವುದು. ದೈಹಿಕ ಶ್ರಮಕ್ಕೆ ಒತ್ತು ನೀಡದಿರುವುದು ಕೂಡ ಬೊಜ್ಜು ಬರಲು ಕಾರಣವಾಗಿದೆ.

ದೈಹಿಕ ಶ್ರಮಕ್ಕಿಂತ ಹೆಚ್ಚು ಆಹಾರ ಸೇವನೆಯಿಂದ ಬೊಜ್ಜು ಬರುವ ಸಾಧ್ಯತೆ ಹೆಚ್ಚಾಗಿರುವುದರಿಂದ ನಿಯಮಿತ ಆಹಾರ ಮತ್ತು ದೈಹಿಕ ಚಟುವಟಿಕೆಗಳಿಗೆ ಒತ್ತು ನೀಡಬೇಕು. ದೇಹದ ನಡುವನ್ನು ತೆಳ್ಳಗೆ(ತೆಳುವಾಗಿ) ಇಟ್ಟುಕೊಳ್ಳಬೇಕು ಇಲ್ಲದಿದ್ದರೆ ಹೊಟ್ಟೆಯ ಭಾಗದಲ್ಲಿ ಕೊಬ್ಬು ಶೇಖರವಾಗಿ ಬೊಜ್ಜು ಬರಲಾರಂಭಿಸುತ್ತದೆ.
ನಮ್ಮ ಆಹಾರ ಕ್ರಮದಲ್ಲಿ ವ್ಯತ್ಯಾಸವಾಗಿ ದಿನವೊಂದಕ್ಕೆ 100 ಕ್ಯಾಲೋರಿ ಆಹಾರ ಹೆಚ್ಚಾದರೂ ಒಬ್ಬರ ತೂಕ ವರ್ಷಕ್ಕೆ ನಾಲ್ಕು ಕೆಜಿಯಷ್ಟು ಹೆಚ್ಚಾಗುತ್ತದೆಯಂತೆ. ಆದ್ದರಿಂದ ಆಹಾರ ಪಥ್ಯದ ಜತೆಗೆ ವ್ಯಾಯಾಮ ಮಾಡುವುದು ಅಗತ್ಯವಾಗಿರುತ್ತದೆ. ಅಲ್ಲದೆ ಮುಂಜಾನೆ ಸುಮಾರು ಮುಕ್ಕಾಲು ಅಥವಾ ಒಂದು ಗಂಟೆಕಾಲ ವೇಗದ ನಡಿಗೆಯೂ ಕೊಬ್ಬಿನ ಅಂಶವನ್ನು ಕರಗಿಸಿ ಬೊಜ್ಜು ತಡೆಯಲು ಸಾಧ್ಯವಾಗುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಕಠಿಣ ಶ್ರಮದ ಅರ್ಥಾತ್ ದೈಹಿಕ ಶ್ರಮವಹಿಸಿ ಕೆಲಸ ಮಾಡದ ಬಹಳಷ್ಟು ಮಂದಿ ಈ ಸಮಸ್ಯೆಯಿಂದ ಬಳಲುತ್ತಾರೆ. ಆದ್ದರಿಂದ ಒಂದಷ್ಟು ವ್ಯಾಯಾಮ. ಆಹಾರ ಸೇವನೆಯಲ್ಲಿ ಹಿಡಿತ ಸಾಧಿಸಿದರೆ ಬೊಜ್ಜನ್ನು ದೂರ ಮಾಡುವುದು ಕಷ್ಟವೇನಲ್ಲ.

See also  ಔಷಧೀಯ ಗುಣಗಳ ಅರಶಿನದ ಮಹತ್ವ ಗೊತ್ತಾ?
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು