News Kannada
Tuesday, December 06 2022

ಆರೋಗ್ಯ

ಉತ್ತಮ ಆರೋಗ್ಯಕ್ಕಾಗಿ ಕ್ಯಾರೆಟ್ ಸೇವಿಸಿ

Photo Credit :

ಉತ್ತಮ ಆರೋಗ್ಯಕ್ಕಾಗಿ ಕ್ಯಾರೆಟ್ ಸೇವಿಸಿ

ಹಸಿರು ತರಕಾರಿ ಮತ್ತು ಹಣ್ಣುಗಳ ಸೇವನೆ ಸಮತೋಲಿತ ಆರೋಗ್ಯದಲ್ಲಿ ಬಹುಮುಖ್ಯ ಪಾತ್ರವಹಿಸುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಅದರಲ್ಲಿಯೂ ಕ್ಯಾರೆಟ್ ಬಹುಮುಖ್ಯ ಅಂಗವಾದ ಕಣ್ಣಿಗೆ ಹಲವು ರೀತಿಯಲ್ಲಿ ಉಪಯೋಗಕಾರಿಯಾಗಿದೆ.

ಸಾಮಾನ್ಯವಾಗಿ ಮಕ್ಕಳು ಚಿಕ್ಕವರಿರುವಾಗ ಕಣ್ಣಿನ ಆರೋಗ್ಯ ಹಾಗೂ ದೃಷ್ಟಿಗೆ ಕ್ಯಾರೆಟ್ ಸೇವನೆ ಒಳ್ಳೆಯದೆಂದು ತಿಳಿಹೇಳುವುದನ್ನು ಕೇಳಿದ್ದೇವೆ, ಅಲ್ಲದೆ ವೃದ್ದಾಪ್ಯದಲ್ಲಿ ಕಾಡುವ ಕಣ್ಣಿನ ಸಮಸ್ಯೆಗಳಿಗೆ ನಿತ್ಯ ಕ್ಯಾರೆಟ್ ಸೇವನೆಯಿಂದ ಪರಿಹಾರ ಸಾಧ್ಯ ಎಂಬುದನ್ನು ಕಣ್ಣಿನ ವೈದ್ಯರು ದೃಢಪಡಿಸಿರುವುದನ್ನು ಕಾಣಬಹುದಾಗಿದೆ.

ವಯೋಸಹಜ ನೇತ್ರ ದೋಷದಿಂದ ಸಮಸ್ಯೆ ಎದುರಿಸುತ್ತಿರುವವರನ್ನು ಪ್ರಾಯೋಗಿಕ ಪರೀಕ್ಷೆಗೆ ಒಳಪಡಿಸಿದ ಬೋಸ್ಟನ್ ಹಾರ್ವಡ್ ಸ್ಕೂಲ್‍ನ ಪಬ್ಲಿಕ್ ಹೆಲ್ತ್ ವಿಭಾಗದ ನೇತ್ರ ತಜ್ಞರು ಕ್ಯಾರೆಟ್, ಸಿಹಿ ಆಲೂಗೆಡ್ಡೆ, ಕಿತ್ತಳೆ, ಮೆಣಸು ಸೇರಿದಂತೆ ಸೊಪ್ಪು ಬಳಸುವ ಪ್ರಮಾಣವನ್ನು ಹೆಚ್ಚಿಸಿದಂತೆ ಪ್ರಯೋಗಕ್ಕೆ ಒಳಗಾದ ವಯಸ್ಸಾದವರು ಹಾಗೂ ವಯೋಸಹಜವಾಗಿ ನೇತ್ರ ಸಮಸ್ಯೆ ಎದುರಿಸುತ್ತಿರುವವರನ್ನು ಪರೀಕ್ಷಿಸಲಾಗಿ ಇಳಿವಯಸ್ಸಿನಲ್ಲೂ ಕ್ಯಾರೆಟ್ ಸೇರಿದಂತೆ ತರಕಾರಿ ಸೊಪ್ಪು ಬಳಸಿದವರಲ್ಲಿ ದೃಷ್ಟಿ ಸಮಸ್ಯೆಯ ಅನುಪಾತ ಗಣನೀಯವಾಗಿ ಇಳಿಕೆಯಾಗಿರುವುದು ಕಂಡು ಬಂತಂತೆ. ಹೀಗಾಗಿ ಸರ್ವರೂ ಹೆಚ್ಚಿನ ಪ್ರಮಾಣದಲ್ಲಿ ಕ್ಯಾರೆಟ್ ಸೇವಿಸಿದರೆ ದೃಷ್ಠಿದೋಷ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂಬುದನ್ನು ತಳ್ಳಿಹಾಕುವಂತಿಲ್ಲ.

ಕ್ಯಾರೆಟ್‍ನಿಂದ ಏನೆಲ್ಲ ಪ್ರಯೋಜನಗಳಿವೆ ಎಂಬುದರ ಬಗ್ಗೆ ಹಲವು ಸಂಶೋಧನೆಗಳು ನಡೆದಿದ್ದು ಒಂದಷ್ಟು ಮಾಹಿತಿಯನ್ನು ಹೊರಹಾಕಲಾಗಿದೆ. ಅದೇನೆಂದರೆ ಇದು ದೇಹದ ಲವಲವಿಕೆ ಹೆಚ್ಚಿಸುತ್ತದೆ. ಸಮತೋಲನದಲ್ಲಿ ವಿಟಮಿನ್‍ಗಳು ದೊರೆಯುವಂತೆ ಮಾಡುತ್ತದೆ, ಚರ್ಮದ ಕಾಂತಿ ಹೆಚ್ಚಿಸುತ್ತದೆ. ಕ್ಯಾನ್ಸರ್ ತಡೆಗೂ ಸಹಕಾರಿಯಾಗಿದೆ.

ಕ್ಯಾರೆಟ್‍ನಲ್ಲಿರುವ ಫಲ್ಕಾರಿನಾಲ್ ಎಂಬ ನೈಸರ್ಗಿಕ ಔಷಧಿ ಶೀಲಿಂಧ್ರಗಳಿಂದ ಬರುವ ರೋಗಗಳನ್ನು ಬೇರುಮಟ್ಟದಲ್ಲಿ ತಡೆಯುತ್ತದೆ. ಶ್ವಾಸಕೋಶದ ಕ್ಯಾನ್ಸರ್, ಸ್ತನ ಕ್ಯಾನ್ಸರ್ ಮತ್ತು ಕರುಳಿನ ಕ್ಯಾನ್ಸರ್ ದೂರ ಮಾಡುವಲ್ಲಿಯೂ ಸಹಕಾರಿಯಾಗಿದೆ. ಪಚನ ಕ್ರಿಯೆ ವೃದ್ಧಿಸಿ ಆರೋಗ್ಯ ನೀಡುತ್ತದೆ.

ಕ್ಯಾರೆಟ್‍ನಲ್ಲಿ ವಿಟಮಿನ್ ಎ ಹೇರಳವಾಗಿರುವ ಕಾರಣ ಆರೋಗ್ಯ ನೀಡುವುದಲ್ಲದೆ ಚರ್ಮಕಾಂತಿಯನ್ನು ವೃದ್ಧಿಸುವಲ್ಲಿಯೂ ಸಹಕಾರಿಯಾಗಿದೆ. ಬೇಯಿಸಿ ಅಥವಾ ಹಸಿಯಾಗಿ ತಿನ್ನುವುದರಿಂದ ಸೋಂಕನ್ನು ತಡೆಗಟ್ಟುತ್ತದೆ. ಹೃದಯ, ಹಲ್ಲು, ಒಸಡುಗಳಿಗೂ ಇದು ಆರೋಗ್ಯವನ್ನು ನೀಡುತ್ತದೆ.

ಒಟ್ಟಾರೆಯಾಗಿ ಹೇಳಬೇಕೆಂದರೆ ಕ್ಯಾರೆಟ್ ದೇಹಕ್ಕೆ ಹಲವು ರೀತಿಯಲ್ಲಿ ಉಪಯುಕ್ತ ತರಕಾರಿಯಾಗಿದ್ದು, ಇದನ್ನು ನಾವು ನಿತ್ಯ ಉಪಯೋಗಿಸುವ ಆಹಾರ ಪದಾರ್ಥಗಳಲ್ಲಿ ಹೆಚ್ಚಾಗಿ ಬಳಕೆ ಮಾಡಿದರೆ ನಮ್ಮ ಆರೋಗ್ಯವನ್ನು ಸುಧಾರಿಸಿಕೊಳ್ಳಲು ಸಾಧ್ಯವಿದೆ ಎಂಬುದನ್ನು ಮರೆಯಬಾರದು.

See also  ಅಸ್ತಮಾ ನಿಯಂತ್ರಣಕ್ಕೆ ಒಂದಷ್ಟು ಸಲಹೆಗಳು..
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು