ಮನುಷ್ಯನ ಆರೋಗ್ಯ ಕಾಪಾಡುವಲ್ಲಿ ನಿದ್ದೆ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಎಷ್ಟು ಹೊತ್ತು ಮತ್ತು ಯಾವಾಗ ನಿದ್ದೆ ಮಾಡುತ್ತೇವೆ ಎಂಬುದು ಮನಷ್ಯನ ಮಾನಸಿಕ ಹಾಗೂ ದೈಹಿಕ ಬೆಳವಣಿಗೆ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ.
ಒಬ್ಬ ವ್ಯಕ್ತಿಗೆ ದಿನಕ್ಕೆ 8 ಗಂಟೆ ನಿದ್ದೆ ಅವಶ್ಯಕ. ದಿನದ 33% ಸಮಯ ನಿದ್ದೆಗೆ ಮೀಸಲಿಡಬೇಕು. ವಯಸ್ಕರಿಗಿಂತ ಮಕ್ಕಳಿಗೆ ಹೆಚ್ಚು ನಿದ್ದೆ ಅವಶ್ಯಕ. ನವಜಾತ ಶಿಶುಗಳು ದಿನಕ್ಕೆ 18 ತಾಸು ಮಲಗಿದರೆ, ಒಂದು ವರ್ಷದ ಮಗ 14 ತಾಸು ಮಲಗುತ್ತದೆ. ವಯಸ್ಕರಿಗೆ ಕನಿಷ್ಠ 8 ತಾಸು ನಿದ್ರೆ ಅವಶ್ಯಕ ಎನ್ನುತ್ತಾರೆ ತಜ್ಞರು.
ನಿದ್ರೆ ಯಾತಕ್ಕಾಗಿ ಬೇಕು:
ದಿನ ಪೂರ್ತಿ ಒಂದಿಲ್ಲೊಂದು ಕೆಲಸದಲ್ಲಿ ತೊಡಗಿರುವ ದೇಹಕ್ಕೆ ವಿಶ್ರಾಂತಿ ಬಹುಮುಖ್ಯವಾಗಿ ಬೇಕಾಗುತ್ತದೆ ಕಣ್ಣು, ಕಾಲು, ಕೈ, ಕಿವಿ, ನಾಲಿಗೆ, ಮೆದುಳು, ಹೃದಯದ ಬಡಿತ, ತೀವ್ರ ರಕ್ತ ಸಂಚಲನ, ಹೆಚ್ಚು ಉಸಿರಾಡುವ ಶ್ವಾಸಕೋಶ ಹೀಗೇ ಇತರ ಪ್ರಮುಖ ದೇಹದ ಭಾಗಗಳಿಗೆ ವಿಶ್ರಾಂತಯಿ ಬೇಕೆನಿಸುತ್ತದೆ.