News Kannada
Friday, December 02 2022

ಆರೋಗ್ಯ

ಫೈಬ್ರೈಡ್ ಯುಟೇರಸ್‍ಗೆ ಲ್ಯಾಪ್ರೋಸ್ಕೋಪಿಕ್ ಮಯೋ ಮೆಕ್ಟೊಮಿ ಶಸ್ತ್ರಚಿಕಿತ್ಸೆ

Photo Credit :

ಫೈಬ್ರೈಡ್ ಯುಟೇರಸ್‍ಗೆ ಲ್ಯಾಪ್ರೋಸ್ಕೋಪಿಕ್ ಮಯೋ ಮೆಕ್ಟೊಮಿ ಶಸ್ತ್ರಚಿಕಿತ್ಸೆ

ನಾವೆಲ್ಲರೂ ಎಷ್ಟೇ ಕಾಳಜಿ ವಹಿಸಿದರೂ ಕೆಲವೊಮ್ಮೆ ಕಾಯಿಲೆಗಳು ನಮಗೆ ತಗಲುವುದೇ ಗೊತ್ತಾಗುವುದಿಲ್ಲ. ಅದರಲ್ಲೂ ಹೆಣ್ಣು ಮಕ್ಕಳನ್ನು ಕೆಲವೊಂದು ಸದ್ದಿಲ್ಲದೆ ಅಡರಿಕೊಂಡು ಬಿಡುತ್ತದೆ. ಅದು ಗೊತ್ತಾಗುವ ವೇಳೆಗೆ ಉಲ್ಭಣ ಸ್ಥಿತಿಗೆ ತಲುಪಿರುತ್ತದೆ.

ಬಹಳಷ್ಟು ಸಂದರ್ಭಗಳಲ್ಲಿ ಕಾಯಿಲೆಯ ಸೂಚನೆಗಳು ಗೊತ್ತಾದರೂ ನಾಳೆ ಸರಿಹೋಗಬಹುದು ಅಥವಾ ನಾಡಿದು ಸರಿಹೋಗಬಹುದು ಎಂಬ ನಿರ್ಲಕ್ಷ್ಯವೂ ಕೂಡ ರೋಗವನ್ನು ಉಲ್ಭಣದ ಸ್ಥಿತಿಗೆ ಕೊಂಡೊಯ್ಯಬಹುದು.

ಇತ್ತೀಚೆಗಿನ ದಿನಗಳಲ್ಲಿ ಮಹಿಳೆಯರಲ್ಲಿ ಸಾಮಾನ್ಯ ಕಂಡು ಬರುತ್ತಿರುವ ಆರೋಗ್ಯದ ಸಮಸ್ಯೆ ಎಂದರೆ ಅದು ಗರ್ಭ ಕೋಶದ ಗಂಟು. ಅರ್ಥಾತ್ ಫೈಬ್ರೈಡ್ ಯುಟೇರಸ್. ಇದರ ಸೂಚನೆಗಳೆಂದರೆ, ಅತಿಯಾದ ಋತುಸ್ರಾವ, ಕಿಬ್ಬೊಟ್ಟೆ ನೋವು, ಪದೇ ಪದೇ ಮೂತ್ರ ವಿಸರ್ಜನೆ, ಮಲಬದ್ದತೆ, ಬಂಜೆತನವಾಗಿದೆ.

ಗರ್ಭಕೋಶದಲ್ಲಿ ಒಂದು ಅಥವಾ ಅದಕ್ಕಿಂತ ಜಾಸ್ತಿ ಗಂಟುಗಳು ಬೆಳೆಯುವುದನ್ನು ಫೈಬ್ರೈಡ್ ಯುಟೇರಸ್ ಎಂದು ಕರೆಯಲಾಗುತ್ತದೆ. ಇದರ ಲಕ್ಷಣಗಳನ್ನು ಅರಿತು ವೈದ್ಯರನ್ನು ಕಂಡು ತಪಾಸಣೆ ಮಾಡಿಸಿಕೊಂಡರೆ ವೈದ್ಯರಿಗೆ ಚಿಕಿತ್ಸೆ ನೀಡಲು ಸುಲಭವಾಗುತ್ತದೆ.

ಇನ್ನು ಫೈಬ್ರೈಡ್ ಯುಟೇರಸ್ ಬಗ್ಗೆ ನೋಡಿದ್ದೇ ಆದರೆ ಇದು ವಂಶವಾಹಿನಿಯಾಗಿ ಬರುವ ಸಾಧ್ಯತೆ ಹೆಚ್ಚಂತೆ. ಜತೆಗೆ ಹಿಂದಿನ ಕಾಲದ ಮಹಿಳೆಯರಿಗೆ ಹೋಲಿಸಿದರೆ ಈಗಿನವರಲ್ಲಿ ಇದು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಕಾರಣ ಇಂದಿನ ಜೀವನಶೈಲಿ ಹಾಗೂ ಹಾರ್ಮೋನ್ ಸಂಬಂಧಿ ಸಮಸ್ಯೆಗಳು(ಈಸ್ಟ್ರೋಜಸ್, ಪ್ರೋ ಜೆಸ್ಟೋಸ್ ಹಾಗೂ ಇನ್ಸುಲಿನ್) ಎಂಬುದು ವೈದ್ಯರ ಅಭಿಪ್ರಾಯವಾಗಿದೆ.

ಹೆಚ್ಚಿನ ಮಹಿಳೆಯರು ಮುಜುಗರ, ನಾಳೆ ಹೋದರಾಯಿತು ಎಂಬ ನಿರ್ಲಕ್ಷ್ಯವೂ ಕಾಯಿಲೆ ಉಲ್ಭಣಕ್ಕೆ ಕಾರಣವಾಗಿ ಬಿಡುತ್ತದೆ. ಆದ್ದರಿಂದ ಆರಂಭದಲ್ಲಿ ಅತಿಯಾದ ಋತುಸ್ರಾವ, ಕಿಬ್ಬೊಟ್ಟೆ ನೋವು, ಪದೇ ಪದೇ ಮೂತ್ರ ವಿಸರ್ಜನೆ, ಮಲಬದ್ದತೆ, ಮೊದಲಾದವುಗಳು ಕಂಡು ಬಂದಾಗಲೇ ವೈದ್ಯರ ಬಳಿಗೆ ತೆರಳಬೇಕು.  ವೈದ್ಯರು ಅಲ್ಟ್ರಾಸೌಂಡ್ ಸ್ಕ್ಯಾನಿಂಗ್, ಸಿಟಿ ಸ್ಕ್ಯಾನ್, ಎಂಆರ್‍ಐ, ಎಚ್‍ಎಸ್‍ಜಿ. ಹಿಸ್ಟೆರೋಸ್ಕೋಪಿ ಮೊದಲಾದ ಪರೀಕ್ಷೆಗಳನ್ನು ಮಾಡಿ ಫೈಬ್ರೈಡ್ ಯುಟೇರಸ್‍ನ್ನು ಕಂಡು ಹಿಡಿಯುತ್ತಾರೆ.

ಮೊದಲೆಲ್ಲ ಶಸ್ತ್ರಚಿಕಿತ್ಸೆ ಮೂಲಕ ಫೈಬ್ರೈಡ್ ಗೆಡ್ಡೆಗಳನ್ನು ಹೊರ ತೆಗೆಯಲಾಗುತ್ತಿತ್ತು. ಇದರಿಂದ ಹೆಚ್ಚು ನೋವು, ರಕ್ತಸ್ರಾವ ಆಗುತ್ತಿತ್ತು. ಆದರೆ ಇದೀಗ ಲ್ಯಾಪ್ರೋಸ್ಕೋಪಿ ಮುಖಾಂತರ ಫೈಬ್ರೈಡ್ ಗೆಡ್ಡೆಗಳನ್ನು ಹೊರತೆಗೆಯಲಾಗುತ್ತದೆ. ಇದರಿಂದ ರಕ್ತಸ್ರಾವವೂ ಕಡಿಮೆ. ನೋವು ಕಡಿಮೆ ಎಂದರೆ ತಪ್ಪಾಗಲಾರದು.

ಲ್ಯಾಪ್ರೋಸ್ಕೋಪಿಕ್ ಮಯೋ ಮೆಕ್ಟೊಮಿ ಸುರಕ್ಷಿತ ಹಾಗೂ ಶೀಘ್ರವಾಗಿ ಚೇತರಿಸಿಕೊಳ್ಳುವ ಶಸ್ತ್ರಚಿಕಿತ್ಸೆ ಎಂದರೆ ತಪ್ಪಾಗುವುದಿಲ್ಲ. ಹೊಟ್ಟೆಯ ಮೇಲ್ಭ್ಬಾಗದಲ್ಲಿ ಸಣ್ಣದಾಗಿ ರಂಧ್ರದಂತೆ ಮಾಡಿ ಗರ್ಭಕೋಶದಲ್ಲಿನ ಗೆಡ್ಡೆಗಳನ್ನೂ ಹೊರತೆಗೆದು ನಂತರ ಸೂಕ್ತ  ರೀತಿಯಲ್ಲಿ ಗರ್ಭಕೋಶವನ್ನು ಪುನರ್ ನಿರ್ಮಿಸಲಾಗುತ್ತದೆ. ಮಾರ್ಸಿಲೇಶನ್ ಮೂಲಕ ಗರ್ಭ ಕೋಶದ ಗೆಡ್ಡೆಗಳನ್ನು ಸಣ್ಣ ಸಣ್ಣ ತುಣುಕುಗಳನ್ನು  ಮಾಡಿ ಆ ಸಣ್ಣ ರಂಧ್ರದ ಮೂಲಕ ಹೊರತೆಗೆಯಲಾಗುತ್ತದೆ. ಈ ಚಿಕಿತ್ಸೆಯಿಂದ ಅನೇಕ ಉಪಯೋಗಗಳಿವೆ. ಶಸ್ತ್ರಚಿಕಿತ್ಸೆಯ ನಂತರ ಹೊಟ್ಟೆಯ ಭಾಗದಲ್ಲಿ ಕಲೆಗಳಿರುವುದಿಲ್ಲ. ಕಡಿಮೆ ನೋವಿನಲ್ಲಿ ಶಸ್ತ್ರಚಿಕಿತ್ಸೆ ಮುಗಿಯುತ್ತದೆ. ಸೋಂಕು ಹರಡುವ ಸಾಧ್ಯತೆಗಳು ಕಡಿಮೆ ಅಷ್ಟೇ ಅಲ್ಲದೆ ರಕ್ತ ಸ್ರಾವದ ಪ್ರಮಾಣವೂ ಕಡಿಮೆಯಿರುತ್ತದೆ. ಅಷ್ಟೇ ಅಲ್ಲದೆ ಬಹುಬೇಗ ಗುಣಮುಖರಾಗಬಹುದಾಗಿದೆ.

See also  ಆರೋಗ್ಯವಾಗಿರಲು ಸ್ವಚ್ಛ ಪರಿಸರ ನಿರ್ಮಾಣ ಅಗತ್ಯ

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು