ಚಳಿಗಾಲ ಬಂತೆಂದರೆ ಸಾಕು ಕಿವಿ ನೋವು ಜಾಸ್ತಿ ಆಗುತ್ತೆ. ಕಿವಿ ನೋವು ಬಂತೆಂದರೆ ಅಯ್ಯೋ ಯಾವ ನೋವನ್ನಾದರು ಸಹಿಸಿಕೊಳ್ಳಬಹುದು ಆದರೆ ಕಿವಿ ನೋವನ್ನ ಮಾತ್ರ ಸಹಿಸಿಕೊಳ್ಳಲು ಆಗಲ್ವಪ್ಪ ಅಂತ ಎನಿಸದೆ ಇರೋದಿಲ್ಲ. ಹಾಗಾಗಿ ಆದಷ್ಟು ಬೇಗನೆ ಡಾಕ್ಟರ್ ಮನೆಯ ಬಾಗಿಲನ್ನು ತಟ್ಟುತ್ತವೆ. ಇಂಗ್ಲಿಷ್ ಮೆಡಿಸಿನ್ ಗಿಂತಲೂ ನಮ್ಮ ಮನೆಯಲ್ಲೇ ಕಿವಿ ನೋವಿಗೆ ಒಳ್ಳೆಯ ಮದ್ದಿವೆ ಗೊತ್ತಾ. ಹಾಗಿದ್ರೆ ಅವು ಯಾವು ಅಂತೀರಾ ಇಲ್ಲಿವೆ ನೋಡಿ…
- ಕಿವಿಗೆ ಈರುಳ್ಳಿ ರಸವನ್ನು ಬಿಡುವುದರಿಂದ ಕಿವಿ ನೋವು ನಿವಾರಣೆಯಾಗುತ್ತದೆ.
- ಕಿವಿಗೆ ತುಳಸಿ ರಸವನ್ನು ಬಿಡುವುದರಿಂದ ಕಿವಿ ನೋವು ನಿವಾರಣೆಯಾಗುತ್ತದೆ.
- ಬೆಳ್ಳುಳ್ಳಿ ಬೀಜವನ್ನು ಹರಳೆಣ್ಣೆಯಲ್ಲಿ ಹುರಿದು, ಅದು ಆರಿದ ನಂತರ ಕಿವಿಗೆ ಬಿಡುವುದರಿಂದ ಕಿವಿ ನೋವಿನಿಂದ ಮುಕ್ತಿಯನ್ನು ಪಡೆಯಬಹುದು.
- ಕಿವಿಯೊಳಗೆ ಕ್ರಿಮಿಗಳು ಸೇರಿಕೊಂಡಾಗ ಅದಕ್ಕೆ, ಅಡುಗೆ ಉಪ್ಪನ್ನು ಸ್ವಲ್ಪ ನೀರಿಗೆ ಬೆರೆಸಿ ಕಿವಿಯೊಳಗೆ ಹನಿಹನಿಯಾಗಿ ಬಿಡುವುದರಿಂದ ಕ್ರಿಮಿಗಳು ಹೊರಬರುತ್ತವೆ.
- ಹಸಿ ಮೂಲಂಗಿ ಸೇವನೆಯಿಂದಲೂ ಕಿವಿ ನೋವು ಮಾಯವಾಗುತ್ತದೆ.
- ಬೇವಿನಸೊಪ್ಪನ್ನು ನೀರಿನಲ್ಲಿ ಬೇಯಿಸಿ ಅದರಿಂದ ಬರುವ ಹಬೆಯನ್ನು ಕಿವಿಗೆ ನೀಡಿದರೆ ಕಿವಿನೋವು ಕಡಿಮೆಯಾಗುತ್ತದೆ.
- ಸ್ವಲ್ಪ ಓಂ ಕಾಳನ್ನು ಟೀ ಸ್ಪೂನಿನಷ್ಟು ಕೊಬ್ಬರಿ ಎಣ್ಣೆಯಲ್ಲಿ ಕುದಿಸಿ ಬೆಚ್ಚಗೆ ಮಾಡಿಕೊಂಡು ಕಿವಿಗೆ ಬಿಡುವುದರಿಂದ ಕಿವಿನೋವು ಕಡಿಮೆಯಾಗುತ್ತದೆ.
- ಲವಂಗವನ್ನು ನೀರಿನಲ್ಲಿ ತೇದು ಕಿವಿಗೆ ಬಿಡುವುದರಿಂದ ಕಿವಿನೋವು ಬೇಗನೆ ಕಡಿಮೆಯಾಗುತ್ತದೆ.
- ತಂಪಾದ ಕಾರಣ ಕಿವಿಗೆ ಬೆಚ್ಚೆಗಿನ ಶಾಕವನ್ನ ನೀಡುವುದರಿಂದಲೂ ಕಿವಿ ನೋವು ನಿವಾರಣೆಯಾಗುತ್ತದೆ.
- ಕಿವಿ ನೋವು ರಾತ್ರಿ ಹೊತ್ತು ಹೆಚ್ಚಾದರೆ ತಲೇನೆ ಕೆಡುಸ್ಕೊಬೇಡಿ ಯಾಕಂದ್ರೆ ನಾವು ಕೊಟ್ಟಿರೋ ಹೆಲ್ತ್ ಟಿಪ್ಸ್ ಬಳಸಿ ನೋಡಿ. ಕಿವಿ ನೋವಿನಿಂದ ಮುಕ್ತಿ ಪಡೆದು ನೆಮ್ಮದಿಯಾಗಿ ನಿದ್ದೆಯನ್ನು ಮಾಡಬಹುದು.