News Kannada
Tuesday, October 03 2023
ಮಂಡ್ಯ

ಯೋಗದಿಂದ ಉತ್ತಮ ಆರೋಗ್ಯ ಸಾಧ್ಯ: ಕೆ.ಸಿ.ಎನ್

yoga 2
Photo Credit : By Author

ಮಂಡ್ಯ: ಯೋಗವನ್ನು ಪ್ರತಿದಿನ ನಿರಂತರವಾಗಿ ಅನುಸರಿಸಿಕೊಂಡು ಹೋದರೆ ಯಾವುದೇ ಕಾಯಿಲೆ ಬರುವುದಿಲ್ಲ. ಉತ್ತಮ ಆರೋಗ್ಯದೊಂದಿಗೆ ನಗು ಮುಖದಿಂದ ಇರಲು ಸಾಧ್ಯವಾಗುತ್ತದೆ ಎಂದು ರೇಷ್ಮೆ, ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವರಾದ ಡಾ. ಕೆ.ಸಿ.ನಾರಾಯಣಗೌಡ ಅವರು ತಿಳಿಸಿದರು.

 ಶ್ರೀರಂಗಪಟ್ಟಣದ ಶ್ರೀರಂಗನಾಥಸ್ವಾಮಿ ದೇವಸ್ಥಾನದ  ಆವರಣದಲ್ಲಿ ಭಾರತ ಸರ್ಕಾರ, ಆಯುಷ್ ಸಚಿವಾಲಯ, ಕರ್ನಾಟಕ ಸರ್ಕಾರ,ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ ಹಾಗೂ ಜಿಲ್ಲೆಯ  ಯೋಗ ನಿರತ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ನಡೆದ 8 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಉದ್ದೇಶಿಸಿ ಅವರು ಮಾತನಾಡಿ, ದೇಶದಲ್ಲಿ ಯೋಗಿಗಳು, ಋಷಿ ಮುನಿಗಳು ಯೋಗವನ್ನು ಹೆಚ್ಚಾಗಿ ಅಳವಡಿಸಿಕೊಂಡು 125ಕ್ಕೂ ಹೆಚ್ಚು ವರ್ಷಗಳು ಬದುಕಿದ್ದಾರೆ ಅದಕ್ಕೆ ಯೋಗವೇ ಕಾರಣ  ಆಗಾಗಿ ನಾವೆಲ್ಲರೂ ಯೋಗಕ್ಕೆ ಹೆಚ್ಚಿನ ಮಹತ್ವ ನೀಡಿ ಶಕ್ತಿ ತುಂಬಬೇಕಿದೆ ಎಂದರು.

ಜಿಲ್ಲಾಧಿಕಾರಿ ಎಸ್.ಅಶ್ವತಿ ಮಾತನಾಡಿ, ದೇಹದಲ್ಲಿ ಕಾಯಿಲೆ ನಿವಾರಣೆ ಜೊತೆಗೆ ನಮ್ಮ ಇಂದ್ರಿಯಗಳು ಬಹಳ ಚೆನ್ನಾಗಿ ಕೆಲಸ ಮಾಡಬೇಕಾದರೆ  ನಿರಂತವಾಗಿ ಯೋಗಾಭ್ಯಾಸ ಮಾಡಬೇಕು. ಶಾಲೆ ಮತ್ತು ಕಾಲೇಜಿನಲ್ಲಿ ವಿಧ್ಯಾರ್ಥಿಗಳಿಗೆ ಪ್ರತಿದಿನ ಅರ್ಧಗಂಟೆಗಳ ಯೋಗಾಭ್ಯಾಸ ಮಾಡಿಸಿದರೆ ಅವರಿಗೆ ಏಕಾಗ್ರತೆ, ಶ್ರದ್ಧೆ ನೆನೆಪಿನ ಶಕ್ತಿ ಹೆಚ್ಚಾಗುತ್ತದೆ ಎಂದು ತಿಳಿಸಿದರು.

 ಉಪನಿಷತ್ತುಗಳು, ಋಗ್ವೇದ ದಲ್ಲಿಯೂ ಸಹ ಯೋಗಾಭ್ಯಾಸದ ಬಗ್ಗೆ ಪ್ರಸ್ತಾಪವಿದೆ. ನಮ್ಮ ದೇಶದ ಋಷಿ – ಮುನಿಗಳು ನಿರಂತರವಾಗಿ ಯೋಗಾಭ್ಯಾಸ ಮಾಡಿರುವುದು ನಮಗೆಲ್ಲರಿಗೂ ತಿಳಿದಿರುವ ವಿಷಯವಾಗಿದೆ ಎಂದರು. ಇತ್ತೀಚಿನ ದಿನದಲ್ಲಿ ಯುವಕರು ದೈಹಿಕ ಸದೃಢತೆಗಾಗಿ ಅನೇಕ ಉಪಕರಣಗಳನ್ನು ಬಳಸುತ್ತಾರೆ. ಆದರೆ ಯೋಗಾಭ್ಯಾಸದಿಂದ ದೈಹಿಕ ಸದೃಢತೆ ಜೊತೆಗೆ ಮಾನಸಿಕವಾಗಿಯೂ ಸಹ ಶಾಂತಿಯಿಂದ ಇರಬಹುದಾಗಿದೆ ಎಂದರು.

ಮದ್ದೂರಿನ ಶಿವಪುರ ಸತ್ಯಾಗ್ರಹ ಸೌದ ಆವರಣ, ಕೆ ಆರ್.ಪೇಟೆಯ ಲಕ್ಷ್ಮಿಜನಾರ್ಧನಸ್ವಾಮಿ ದೇವಸ್ಥಾನ ಹಾಗೂ ಆದಿ ಪ್ರಸಿದ್ಧ ಶ್ರೀರಂಗನಾಥಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಈ  ಬಾರಿ ಜಿಲ್ಲೆಯ ಮೂರು ತಾಲ್ಲೂಕುಗಳಲ್ಲಿ ಯೋಗ ದಿನಾಚರಣೆಯನ್ನು ಬಹಳ ಯಶಸ್ವಿಯಾಗಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ವಿ.ಆರ್.ಶೈಲಜ ಪೊಲೀಸ್ ವರಿಷ್ಠಾಧಿಕಾರಿಗಳಾದ ಎನ್.ಯತೀಶ್, ಪಾಂಡವಪುರ  ಉಪ ವಿಭಾಗಾಧಿಕಾರಿ ಬಿ.ಸಿ. ಶಿವಾನಂದ ಮೂರ್ತಿ, ತಹಶೀಲ್ದಾರ್ ಗಳಾದ ಶ್ವೇತ ಎನ್.ರವೀಂದ್ರ, ನಯನ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಪುಷ್ಪಾ, ಯೋಗ ಶಿಕ್ಷಕರಾದ ಶಂಕರ ನಾರಾಯಣ ಶಾಸ್ತ್ರಿ, ಪುರಸಭೆ ಉಪಾಧ್ಯಕ್ಷರಾದ ಎಂ.ಕೃಷ್ಣ, ಉಪಅರಣ್ಯ ಸಂರಕ್ಷಣಾಧಿಕಾರಿ ಋತ್ರನ್, ಹಿರಿಯ ಮುಖಂಡರಾದ  ಡಾ.ಸಿದ್ದರಾಮಯ್ಯ ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.

See also  ನಟ ಡಾಲಿ ಧನಂಜಯ್ ಅವರ ‘ಹೆಡ್ ಬುಷ್’ ಬಿಡುಗಡೆಗೆ ಮುಹೂರ್ತ ಫಿಕ್ಸ್!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು