News Kannada
Saturday, August 13 2022

ಆರೋಗ್ಯ

ಮಕ್ಕಳಲ್ಲಿ ಹಲ್ಲಿನ ಆರೋಗ್ಯ ಕಾಪಾಡುವುದು ಹೇಗೆ - 1 min read

How to maintain dental health in children

ಹಲ್ಲು ಹುಳುಕು ಮಕ್ಕಳಲ್ಲಿ ಕಂಡು ಬರುವ ಸಾಮಾನ್ಯ ಹಲ್ಲಿನ ಸಮಸ್ಯೆ. ಈ ಸಮಸ್ಯೆಯನ್ನು ಸರಿಯಾದ ರೀತಿಯಲ್ಲಿ ನಿಭಾಯಿಸದಿದ್ದರೆ ಹಲ್ಲಿನ ನೋವು, ಇನ್‍ಫೆಕ್ಷನ್ ಪ್ರಾರಂಭವಾಗಿ ಇದರಿಂದ ಮಕ್ಕಳಿಗೆ ತಿನ್ನಲು, ಮಾತನಾಡಲು, ಓದಲು ಏಕಾಗ್ರತೆ ಇಲ್ಲದಿರುಂವತಹ ಸಮಸ್ಯೆಗಳು ಉಂಟಾಗಬಹುದು.

ಮಕ್ಕಳ ಹಲ್ಲಿನ ಸಮಸ್ಯೆಗಳಿಂದ ಹಲವಾರು ಬಾರಿ ಓದಿನಲ್ಲಿ ಏಕಾಗ್ರತೆ ಇಲ್ಲದೆ ತರಗತಿಯಲ್ಲಿ ಹಿಂದುಳಿಯುವ ಸಾಧ್ಯತೆಗೆಳಿರುತ್ತವೆ ಅಂತಹ ಸಂದರ್ಭದಲ್ಲಿ ಹೆತ್ತವರು ಮಕ್ಕಳ ಕಡೆ ವಿಶೇಷ ಗಮನ ಹರಿಸಬೇಕಾಗುತ್ತದೆ ಎಂದು ಆಯುರ್ವೇದಿಕ್ ವೆಲ್‍ನೆಸ್ ಕ್ಲಿನಿಕ್‍ನ ವೈದ್ಯೆ ಡಾ. ಅನುರಾಧ ಹೇಳುತ್ತಾರೆ.

ಮಕ್ಕಳು ಹಲ್ಲಿನ ನೋವು, ಊರಿ ಅಥವಾ ಸೆನ್ಸಿಟಿವಿಟಿ ಎಂದಾಗ ತಡಮಾಡದೆ ವೈದ್ಯರ ಬಳಿ ತೋರಿಸುವುದು ಉತ್ತಮ.

ಮಕ್ಕಳಲ್ಲಿ ಈ ಹಲ್ಲಿನ ಸಮಸ್ಯೆಗಳನ್ನು ಸ್ವಲ್ಪ ಮಟ್ಟಿಗೆ ತಡೆಗಟ್ಟಬಹು ಅವು ಹೇಗೆಂದರೆ

ದಿನಕ್ಕೆ ಎರಡು ಹೊತ್ತು ಹಲ್ಲು ಉಜ್ಜುವ ಅಭ್ಯಾಸ ಬೆಳೆಸಿಕೊಳ್ಳವುದು ಉತ್ತಮ. ಮುಖ್ಯವಾಗಿ ಆರು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ತಾಯಿಯು ಜೊತೆಗಿದ್ದು ಮಕ್ಕಳು ಸರಿಯಾದ ರೀತಿಯಲ್ಲಿ ಹಲ್ಲು ಉಜ್ಜುತ್ತಿದ್ದಾರೆ ಎಂಬುದನ್ನು ಖಚಿತ ಪಡಿಸಿಕೊಳ್ಳಬೇಕು.

ಪ್ರತಿಸಲ ಆಹಾರ ತಿಂದ ನಂತರ ಬಾಯಿ ಮುಕ್ಕಳಿಸುವುದು ಹಲ್ಲಿನ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತದೆ.

ಮಕ್ಕಳಿಗೆ ಮೃದುವಾದ ಬ್ರಶ್ ಉಪಯೋಗಿಸುವುದರ ಜೊತೆಗೆ ಒಂದು ಬಟಾಣಿ ಗಾತ್ರದಷ್ಟು ಪೇಸ್ಟ್ ನೀಡುವುದು ಉತ್ತಮ. ಆದಷ್ಟು ಕೋಲ್ಡ್‍ಡ್ರಿಂಕ್ಸ್, ಚಾಕೊಲೇಟ್, ಕೇಕ್, ಪೇಸ್ಟ್ರಿ, ಮತ್ತು ಹೆಚ್ಚು ಸಿಹಿ ಇರುವ ಇಂತಹ ಆಹಾರಗಳಿಂದ ಮಕ್ಕಳನ್ನು ದೂರವಿರಿಸುವುದು ಮಕ್ಕಳ ಹಲ್ಲಿಗೆ ಬಹಳ ಉತ್ತಮ.

See also  ಮಂಗಳೂರು: ಕುಲಶೇಖರದಲ್ಲಿ ವರ್ಕ್ ಶಾಪ್ ಗೆ  ಮಳೆ ನೀರು ನುಗ್ಗಿ ಸಂಪೂರ್ಣ ಅಸ್ತವ್ಯಸ್ತ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

25278
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು