News Kannada
Wednesday, October 05 2022

ವಿಶೇಷ

ಮೊಡವೆಯನ್ನು ಚಿವುಟುವ ಅಭ್ಯಾಸ ಒಳ್ಳೆಯದಲ್ಲ! - 1 min read

The habit of pinching acne is not good!
Photo Credit :

ಮೊಡವೆಗಳು ಆಗಾಗ್ಗೆ ಕಾಡುತ್ತಲೇ ಇರುತ್ತವೆ. ಕೆಲವರನ್ನಂತು ಬಿಟ್ಟು ಬಿಡದೆ ಕಾಡಿಬಿಡುತ್ತವೆ. ಅದರಲ್ಲೂ ಹದಿಹರೆಯದವರು ಈ ಸಮಸ್ಯೆಯನ್ನು ಹೆಚ್ಚಾಗಿ ಅನುಭವಿಸುತ್ತಾರೆ. ಬಹಳಷ್ಟು ಜನರ ಸುಂದರ ಮುಖಕ್ಕೆ ಮೊಡವೆಗಳು ಕಪ್ಪು ಚುಕ್ಕೆ ಎಂದರೂ ತಪ್ಪಾಗಲಾರದು.

ಸಾಮಾನ್ಯವಾಗಿ ಹದಿಹರೆಯದಲ್ಲಿ ಮೊಡವೆಗಳ ಹಾವಳಿ ಜಾಸ್ತಿ. ಈ ಮೊಡವೆಗಳು ಕೂಡ ಮನುಷ್ಯನ ದೇಹ ಮತ್ತು ಆತನಲ್ಲಿ ಉತ್ಪತ್ತಿಯಾಗುವ ಹಾರ್ಮೋನ್ ಹೀಗೆ ಎಲ್ಲವನ್ನು ಅವಲಂಭಿಸಿರುತ್ತದೆ. ಕೆಲವರಲ್ಲಿ ಚಿಕ್ಕದಾಗಿ ಹರಡಿಕೊಂಡಿದ್ದರೆ ಮತ್ತೆ ಕೆಲವರಲ್ಲಿ ಕುರುವಿನಂತೆ ದಪ್ಪದಾಗಿಯೂ ಮೂಡುತ್ತದೆ. ಹದಿಹರೆಯದವರ ಶರೀರದಲ್ಲಿ ಟೆಸ್ಪೊಸ್ಟಿರೋನ್ ಎಂಬ ಹಾರ್ಮೋನ್ ಹೆಚ್ಚಾಗಿ ಜಿಡ್ಡಿನಾಂಶವೂ ಉತ್ಪತ್ತಿಯಾಗುತ್ತದೆ. ಇದರಿಂದ ಚರ್ಮದ ಬ್ಯಾಕ್ಟೀರಿಯಾ ಹೆಚ್ಚಾಗಿ ಮುಖದ ಮೇಲೆ ಮೊಡವೆಗಳು ಮೂಡುತ್ತವೆ. ಇನ್ನು ಸತ್ತ ಚರ್ಮದ ಜೀವಕೋಶಗಳು ಕೂದಲಿನ ರಂಧ್ರವನ್ನು ಆವರಿಸಿ ಅಲ್ಲಿ ಬ್ಯಾಕ್ಟೀರಿಯಾಗಳು ಹೆಚ್ಚಾಗುವುದರಿಂದಲೂ ಮೊಡವೆಗಳು ಉದ್ಭವವಾಗಲು ಕಾರಣವಾಗುತ್ತವೆ.

ಮೊಡವೆಗಳು ಕಪ್ಪು, ಬಿಳಿ ಶಿರ ಮತ್ತು ಕೆಂಪು ಕಲೆಗಳನ್ನು ಹೊಂದಿರುತ್ತವೆ. ಈ ಕಪ್ಪು ಮತ್ತು ಬಿಳಿಶಿರಗಳು ಮೂಡಲು ಕೂಡ ಕಾರಣವಿದೆ. ಅದೇನೆಂದರೆ ಕೆಲವೊಮ್ಮೆ ಕೂದಲಿನ ಕೋಶಿಕಗಳು(ಫಾಲಿಕಲ್ಸ್) ಮುಚ್ಚಿಕೊಂಡು ಬಿಡುವುದರಿಂದಾಗಿ ದೇಹದ ಜಿಡ್ಡು ಚರ್ಮದ ಹೊರಮೈಗೆ ಬರಲಾಗದ ಕಾರಣದಿಂದಾಗಿ ಅಲ್ಲಿಯೇ ಬ್ಯಾಕ್ಟೀರಿಯಾಗಳು ಬೆಳೆಯುತ್ತವೆ. ಆಗ ಕಪ್ಪು ಶಿರ ಮತ್ತು ಬಿಳಿಶಿರದ ಮೊಡವೆಗಳು ಹೊರಬರುತ್ತವೆ. ಇದನ್ನು ಮೈಕ್ರೋಕಡೆಮನ್ ಎಂದು ಕರೆಯಲಾಗುತ್ತದೆ.

ಕೆಲವೊಮ್ಮೆ ಅಂದದ ಮುಖಕ್ಕೆ ಮೊಡವೆಗಳು ಕಪ್ಪು ಚುಕ್ಕೆಯಂತೆ ಕಾಣುತ್ತವೆ. ಇದರಿಂದ ಕೆಲವರು ಗಾಬರಿಗೊಳ್ಳುತ್ತಾರೆ. ಅಯ್ಯೋ ಹಾಳಾದ ಪಿಂಪಲ್ಸ್ ಬಂತಲ್ಲ ಎಂದು ಗೊಣಗುತ್ತಾರೆ. ತಮಗೆ ತೋಚಿದ ಕ್ರೀಮ್‌ಗಳನ್ನೆಲ್ಲ ಬಳಸಿ ಅದು ಬರದಂತೆ ಮಾಡುವ ಪ್ರಯತ್ನ ಮಾಡುತ್ತಾರೆ. ಇಷ್ಟಕ್ಕೂ ಹದಿಹರೆಯದಲ್ಲಿ ಮೊಡವೆಗಳು ಬರುವುದು ಸಾಮಾನ್ಯ. ಅದಕ್ಕಾಗಿ ತಲೆಕೆಡಿಸಿಕೊಳ್ಳುವುದು ಬೇಕಾಗಿಲ್ಲ. ಆದರೆ ಮುಖದಲ್ಲಿ ಮೂಡಿದ ಮೊಡವೆಯನ್ನು ಚಿವುಟುವುದು, ಕೆರೆಯುವುದು ಹೀಗೆ ಮಾಡುವುದು ಒಳ್ಳೆಯದಲ್ಲ. ಅದನ್ನು ಅದರ ಪಾಡಿಗೆ ಬಿಟ್ಟು ಅದರ ತೀವ್ರತೆಯನ್ನು ನೋಡಿಕೊಂಡು ಚರ್ಮ ವೈದ್ಯರನ್ನು ಸಂಪರ್ಕಿಸಿ ಅವರ ಶಿಫಾರಸ್ಸಿನಂತೆ ಔಷಧೋಪಚಾರ ಮಾಡಬೇಕು.

ಕೆಲವೊಮ್ಮೆ ಸ್ವಚ್ಛತೆಯಿಲ್ಲದಾಗಲೂ ಮೊಡವೆಗಳು ಬರುವುದುಂಟು ಹೀಗಾಗಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಮುಖವನ್ನು ಚೆನ್ನಾಗಿ ಆಗಾಗ್ಗೆ ತೊಳೆದು ಜಿಡ್ಡಿನಾಂಶ ಮುಖದಲ್ಲಿರದಂತೆ ನೋಡಿಕೊಳ್ಳಬೇಕು. ಕನಿಷ್ಟ ದಿನಕ್ಕೆ ಮೂರು ಬಾರಿಯಾದರೂ ಶುದ್ಧ ನೀರಿನಿಂದ ಮುಖವನ್ನು ತೊಳೆಯಬೇಕು.

ಒಂದು ವೇಳೆ ವೈದ್ಯರಿಂದ ಔಷಧಿ ಪಡೆದಿದ್ದೇ ಆದರೆ ಅವರು ನೀಡಿದ ಸಲಹೆಗಳನ್ನು ತಪ್ಪದೆ ಅನುಸರಿಸಬೇಕು. ಈಗಾಗಲೇ ಆಧುನಿಕತೆ ತಂತ್ರಜ್ಞಾನಗಳು ಬಂದಿರುವುದರಿಂದ ಅವುಗಳನ್ನು ವಾಸಿಮಾಡುತ್ತಾರೆ. ಆಹಾರ ಸೇವನೆಗೂ ಮೊಡವೆಗಳು ಮೂಡುವುದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳುತ್ತಾರೆಯಾದರೂ ಕೊಬ್ಬಿನಾಂಶವಿರುವ ಪದಾರ್ಥ, ಎಣ್ಣೆಯಲ್ಲಿ ಕರಿದ ಪದಾರ್ಥಗಳು, ಚಾಕಲೆಟ್‌ಗಳ ಅತಿಯಾದ ಸೇವನೆ ಒಳ್ಳೆಯದಲ್ಲ. ಇದು ಮೊಡವೆ ಮೂಡಲು ಸಹಾಯ ಮಾಡುತ್ತವೆ ಎನ್ನಲಾಗುತ್ತಿದೆ.

ಸಾಮಾನ್ಯವಾಗಿ ಎಲ್ಲರೂ ಹದಿಹರೆಯದಲ್ಲಿ ಮೊಡವೆಗಳ ಸಮಸ್ಯೆಯನ್ನು ಎದುರಿಸಿರುತ್ತಾರೆ. ಆದರೆ ಅದನ್ನೇ ಗಂಭೀರವಾಗಿ ಪರಿಗಣಿಸಿ ಹೌಹಾರಬೇಕಾಗಿಯೇನು ಇಲ್ಲ. ಅದು ಸೋಂಕು ರೋಗವಲ್ಲ. ಅದನ್ನು ಒಂದಷ್ಟು ಔಷಧಿ ಉಪಚಾರ, ಸ್ವಚ್ಛತೆಯನ್ನು ಅಳವಡಿಸಿಕೊಳ್ಳುವ ಮೂಲಕ ದೇಹ ಮತ್ತು ಮುಖದ ಬಗ್ಗೆ ಕಾಳಜಿ ವಹಿಸಿದ್ದೇ ಆದರೆ ಮೊಡವೆ ಮುಖದ ಮೇಲೆ ಬಾರದಂತೆ ನೋಡಿಕೊಳ್ಳುವುದು ಕಷ್ಟವೇನಲ್ಲ.

See also  ಶಿರ್ವ: ಬೈಕಿನಿಂದ ಬಿದ್ದು ಮಹಿಳೆ ಸಾವು

ಆದರೆ ಇದೆಲ್ಲವನ್ನು ಬಿಟ್ಟು ಮೊಡವೆಗಳನ್ನು ಚಿವುಟುವುದು, ಇಲ್ಲವೆ ಉಗುರಿನಿಂದ ಕೆರೆಯುವುದನ್ನು ಮಾಡಬಾರದು, ಹೆಚ್ಚಿನವರ ಕೈ ಮೊಡವೆಗಳ ಮೇಲೆಯೇ ಇರುತ್ತದೆ. ಇದು ಒಳ್ಳೆಯ ಅಭ್ಯಾಸವಲ್ಲ. ಬಹಳಷ್ಟು ಬಾರಿ ಮೊಡವೆಗಳನ್ನು ಉಗುರಿನಿಂದ ಕೆರೆಯುವುದು, ಚಿವುಟುವುದು, ಹಿಸುಕುವುದು ಹೀಗೆ ಮಾಡುವುದರಿಂದ ಅದು ಉಲ್ಭಣಗೊಂಡು ಕಲೆಯಾಗಿ ಮುಖದ ಮೇಲೆ ಉಳಿಯುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ಮೊಡವೆಗಳ ಮೇಲೆ ಕೈಯ್ಯಾಡಿಸುವ ಅಭ್ಯಾಸವನ್ನು ತ್ಯಜಿಸುವುದು ಒಳ್ಳೆಯದು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು