News Kannada
Monday, December 05 2022

ಆರೋಗ್ಯ

ಚಳಿಗಾಲದಲ್ಲಿ ಉಂಟಾಗುವ ಅಲರ್ಜಿಗಳು ಮತ್ತು ಉಪಾಯ

Allergies and tricks that occur in winter
Photo Credit : Pixabay

ಚಳಿಗಾಲದಲ್ಲಿ ಉಂಟಾಗುವ ವಾತವರಣದ ಬದಲಾವಣೆಯಿಂದಾಗಿ ನಮ್ಮ ದೇಹದಲ್ಲಿ ಹಲವಾರು ರೀತಿಯ ಬದಲಾವಣೆಗಳು ಉಂಟಾಗುತ್ತದೆ. ಇವುಗಳಲ್ಲಿ ಮುಖುವಾಗಿ ಶುಷ್ಕ ತ್ವಚೆ, ತಲೆ ಹೊಟ್ಟಿನ ಸಮಸ್ಯೆ ಹಾಗೂ ಅಲರ್ಜಿಗಳು ಸೇರಿವೆ.

ಚಳಿಗಾಲದಲ್ಲಿ ಸಾಮಾನ್ಯವಾಗಿ ಅಲರ್ಜಿಯ ಜೊತೆಗೆ ಶೀತವು ಸಹ ಉಂಟಾಗಬಹುದು ಇವುಗಳ ನಡುವಿನ ವ್ಯತ್ಯಾಸಗಳನ್ನು ತಿಳಿದುಕೊಳ್ಳಬೇಕಾಗುತ್ತದೆ ಎಂದು ಕಾಕುಂಜೆ ಆಯುರ್ವೇದಿಕ್ ವೆಲ್‌ನೆಸ್ ಕ್ಲಿನಿಕ್‌ನ ವೈದ್ಯೆ ಡಾ.ಅನುರಾಧ ಹೇಳುತ್ತಾರೆ.

ಅಲರ್ಜಿ ರೊಗದ ಲಕ್ಷಣಗಳು

• ಸೀನುವುದು
• ಮೂಗಿನಿಂದ ನೀರು ಸುರಿಯುವುದು
• ಕಣ್ಣುಗಳಲ್ಲಿ ತುರಿಕೆ
• ಗಂಟಲು ತುರಿಕೆ
• ಕಿವಿ ತುರಿಸುವುದು
• ಉಸಿರಾಟಕ್ಕೆ ತೊಂದರೆ
• ಒಣ ಕೆಮ್ಮು
• ಚರ್ಮದ ದದ್ದು
• ಸ್ವಲ್ಪ ಮಟ್ಟಿಗಿನ ಜ್ವರ

ಅಲರ್ಜಿ ಮತ್ತು ಶೀತದ ನಡುವಿನ ವ್ಯತ್ಯಾಸ

ಅಲರ್ಜಿ ಮತ್ತು ಶೀತಗಳು ವಿಭಿನ್ನ ಮೂಲಗಳನ್ನು ಹೊಂದಿದೆ. ಈಗಾಗಲೆ ಸೋಂಕಿತ ವ್ಯಕ್ತಿಯಿಂದ ಹರಡುವ ವೈರಸ್‌ನಿಂದ ಶೀತ ಉಂಟಾಗುತ್ತದೆ.ಅಲರ್ಜಿಗಳು ನಮ್ಮ ದೇಹವು ಹಿಸ್ಟಮೈನ್ ಬಿಡುಗಡೆಯಿಂದ ಉಂಟಾಗುತ್ತದೆ.

ತಡೆಗಟ್ಟುವಿಕೆ

ಅಲರ್ಜಿ ರೋಗ ಲಕ್ಷಣಗಳಿಗೆ ಮನೆಯಲ್ಲಿಯೇ ಚಿಕಿತ್ಸೆ ನೀಡಬಹುದು. ಆದರೆ ದೀರ್ಘಕಾಲಿನ ಸಮಸ್ಯೆಗಳಿಗೆ ವೈದ್ಯಕೀಯ ಚಿಕತ್ಸೆ ಪಡೆದುಕೊಳ್ಳಬಹುದು.

• ನಿಮ್ಮ ಹಾಸಿಗೆಯ ದಿಂಬು ಹಾಗೂ ಹಾಸಿಗೆಯ ಮೇಲೆ ಕವರ್ ಬಳಸುವುದು.

• ಹಾಸಿಗೆ,ದಿಂಬಿನ ಕವರ್‌ಗಳನ್ನು ನಿಯಮಿತವಾಗಿ ಬಿಸಿ ನೀರಿನಲ್ಲಿ ತೊಳೆಯುವುದು,

• ಕಾರ್ಪೇಟ್ ಬಳಸುವ ಬದಲು ಲಿನೋಲಿಯಂ, ಮರದಿಂದ ತಯಾರಿಸಿದ ನೆಲ ಹಾಸುಗಳನ್ನು ಬಳಸಿ.

• ಮನೆಯ ಕೋಣೆಗಳನ್ನು ನಿಯಮಿತವಾಗಿ ಧೂಳು ನಿಲ್ಲದಂತೆ ಸ್ವಚ್ಛಗೊಳಿಸಿ.

• ಸಾಕು ಪ್ರಾಣಿಗಳನ್ನು ಮನೆಯೊಳಗೆ ಕೆಳೆಯುವ ಸಮಯವನ್ನು ಮಿತಿ ಗೊಳಿಸಿ.

• ಮಲಗುವ ಕೋಣೆ ಹಾಗೂ ಅಡುಗೆ ಕೋಣೆಯಿಂದ ಪ್ರಾಣಿಗಳನ್ನು ಸಾಧ್ಯವಾದಷ್ಟು ದೂರವಿರಿಸಿ.

ಆಹಾರ ಕ್ರಮಗಳು

ಚಳಿಗಾಲದಲ್ಲಿ ಅಲರ್ಜಿಗಳನ್ನು ತಡೆಟ್ಟಲು ಕೆಲವು ಉತ್ತಮ ಆಹಾರ ಕ್ರಮಗಳು ಇಲ್ಲಿವೆ.

• ಶುಂಠಿ: ಕಣ್ಣುಗಳಲ್ಲಿ ನೀರು ಸುರಿಯುವುದು, ಗಂಟಲಿನಲ್ಲಿ ಕಿರಿಕಿರಿಯ ಸಮಸ್ಯೆಗಳು ಹಾಗೂ ಅಲರ್ಜಿಯ ಲಕ್ಷಣಗಳನ್ನು ಕಡಿಮೆ ಮಾಡಲು ಶುಂಠಿ ಬಹಳ ಉಪಕಾರಿಯಾಗಿದೆ ಉತ್ಕರ್ಷಣ ನಿರೋಧಕ ಮತ್ತು ಫೈಟೋಕೆಮಿಕಲ್ ಅಂಶ ಒಳಗೊಂಡಿದೆ.

• ಸಿಟ್ರಸ್ ಹಣ್ಣುಗಳು: ಮಿಟಮಿನ್ ಸಿ ನೆಗಡಿಯನ್ನು ತಡೆಯುತ್ತದೆ. ದೇಹದಲ್ಲಿರುವ ಅಲರ್ಜಿಕ್ ರಿನಿಟಿಸ್ ಅನ್ನು ಕಡಿಮೆ ಮಾಡುತ್ತದೆ. ಕಿತ್ತಳೆ, ದ್ರಾಕ್ಷಿ ಹಣ್ಣು, ನಿಂಬೆಹಣ್ಣು, ಇತ್ಯಾದಿ ಬಳಸುವುದು ಉತ್ತಮ.

• ಅರಶಿನ: ಇದರಲ್ಲಿ ಕರ್ಕ್ಯುಮಿನ್ ಅಂಶ ಇರುವುದರಿಂದ ರೋಗ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ.

• ಟೊಮ್ಯಾಟೊ: ಇದರಲ್ಲಿ ಲೈಕೋಪಿನ್ ಅನ್ನು ಹೊಂದಿರುತ್ತದೆ ಅಲರ್ಜಿಯನ್ನು ತಡೆಗಟ್ಟಲು ಸಹಾಯ ಮಾಡುತ್ತೆದೆ.

See also  ಹೆಚ್1ಎನ್1 ಸೋಂಕಿನತ್ತ ನಿಗಾ ವಹಿಸಿ!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

25278

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು