ಮಂಗಳೂರು: ಫೆಬ್ರವರಿ 23 ರಿಂದ 27, 2023 ರ ವರೆಗೆ ನಡೆಯಲಿರುವ ಶಾಂತಿಪಳಿಕೆ ಮಹಮ್ಮಾಯ ದೇವಸ್ಥಾನದ ಬ್ರಹ್ಮಕಲಶೋತ್ಸವದ ಹಾಡನ್ನು ಮಿತ್ತಮಾಗರಾಯ ದೈವಸ್ಥಾನದ ಮಾಜಿ ಮೊಕ್ತೇಸರರಾದ ಬಲೆತೋಡು ನಾರಾಯಣ ಶೆಟ್ಟಿ ಮತ್ತು ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾದ ರಾಮಣ್ಣ ಶೆಟ್ಟಿ ಆಳ್ವರ ಬೆಟ್ಟು ಫೆಬ್ರವರಿ 21 ಮಂಗಳವಾರ ಶಾಂತಿಪಳಿಕೆ ಮಹಮ್ಮಾಯಿ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಸಜ್ಜುಗೊಂಡ ವೇದಿಕೆಯಲ್ಲಿ ಬಿಡುಗಡೆಗೊಳಿಸಿದರು.
ಹಾಡಿಗೆ ಪತ್ರಕರ್ತ ಶಿವಪ್ರಸಾದ್ ತೌಡುಗೋಳಿ ಸಾಹಿತ್ಯ ಬರೆದಿದ್ದು, ಸಂತೋಷ್ ಕುಮಾರ್ ಪುಚ್ಛೇರ್ ಹಾಡಿದ್ದಾರೆ, ಹಾಡಿನ ನಿರ್ಮಾಣ ಮತ್ತು ಪ್ರಚಾರ ಮೆಗಾ ಮೀಡಿಯಾ ನ್ಯೂಸ್ ನಿರ್ವಹಿಸಿದ್ದು, ಪುಚ್ಛೇರ್ ಟ್ಯಾಬ್ ಸ್ಟುಡಿಯೋದಲ್ಲಿ ರಿಕಾರ್ಡಿಂಗ್ ಮಾಡಲಾಗಿದೆ.
ಈ ಸಂದರ್ಭದಲ್ಲಿ ಶಾಂತಿಪಳಿಕೆ ಮಹಮ್ಮಾಯಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಜಯಪ್ರಕಾಶ್ ಶೆಟ್ಟಿ ಭಂಡಾರಮನೆ, ಕಾರ್ಯಾಧ್ಯಕ್ಷರಾದ ಸತೀಶ್ ಕುಂಪಲ, ಪ್ರಧಾನ ಕಾರ್ಯದರ್ಶಿ ಚಂದ್ರಹಾಸ ಎಲ್. ಜೀರ್ಣೋದ್ದಾರ ಸಮಿತಿಯ ಹರೀಶ್ ಕನ್ನಿಗುಳಿ, ಆಡಳಿತ ಮೊಕ್ತೇಸರರಾದ ಪ್ರಸನ್ನ ಪಕ್ಕಳ ಬಲೆತೋಡು, ಹೊರೆಕಾಣಿಕೆಸಮಿತಿಯ ಜಗದೀಶ್ ಆಳ್ವಾ ನಾರ್ಯಗುತ್ತು, ಪತ್ರಕರ್ತ ಜಗನ್ನಾಥ ಶೆಟ್ಟಿ ಪಾವಳ ಗುತ್ತು, ಆನಂದ ಎಸ್, ಪುರಂದರ ಎಸ್, ಲಕ್ಷ್ಮಣ ಪೂಜಾರಿ ಎಸ್ , ವೆಂಕಪ್ಪ ಮೋರ್ಲಾ, ವಿನೋದ್ ನಿಡುಮಾಡು, ಲಿಂಗಪ್ಪ ಪೂಜಾರಿ ಸರ್ಕುಡೇಲು, ರಾಮಣ್ಣ ಶೆಟ್ಟಿ, , ರಮೇಶ್ ಬೆದ್ರೊಳಿಕೆ ಮೊದಲಾದವರು ಉಪಸ್ಥಿತರಿದ್ದರು.