NewsKarnataka
Sunday, September 26 2021

ವಿಶೇಷ

ಕಸದಿಂದ ಪೊಲೀಸಪ್ಪನ ರಸ ಕೃಷಿ !

ಪೊಲೀಸ್ ಇಲಾಖೆ ನೌಕರರು ಸದಾ ಒತ್ತಡದಲ್ಲಿ ಕಾಲ ಕಳೆಯುತ್ತಾರೆ. ಕುಟುಂಬಕ್ಕಾಗಿ ಸಮಯ ಮೀಸಲಿಡವುದು ಕಷ್ಟದ ಕೆಲಸ. ಆದರೇ ಇಲೊಬ್ಬ ಪೊಲೀಸ್ ಇಲಾಖೆಯ ಹವಾಲ್ದಾರ ವೃತ್ತಿ ಒತ್ತಡದ ನಡುವೆಯೂ ತಮ್ಮ ಮನೆಯನ್ನು ಕೃಷಿ ತೋಟವನ್ನಾಗಿ ಮಾರ್ಪಡಿಸಿದ್ದಾರೆ.!!

ಬಾಗಲಕೋಟೆ ಗ್ರಾಮೀಣ ವೃತ್ತ ಕಚೇರಿ (ಸಿಪಿಐ) ಹವಾಲ್ದಾರ ಸಂಗಮೇಶ ತೆಲಗಾಣಿ ಕೃಷಿ, ಪರಿಸರ, ಆರೋಗ್ಯ ಪ್ರೇಮ ಸ್ಪೋರ್ತಿ ಯಾಗಿದೆ. ಬಾದಾಮಿ ರಸ್ತೆ ಪಕ್ಕದಲ್ಲಿ ಪೊಲೀಸ್ ಕಾಲೋನಿ(ಪದ್ಮನಯನ ನಗರ) ತಮ್ಮ ನಿವಾಸವನ್ನು ಹಸಿರಿನಿಂದ ನಳನಳಿಸುವಂತೆ ಮಾಡಿದ್ದಾರೆ. ಮನೆ ಸುತ್ತಲೀನ, ಟೆರೇಸ್ ಆವರಣ ನಂದನವನ್ನಾಗಿ ಪರಿವರ್ತಿಸಿ ಮಾದರಿಯಾಗಿದ್ದಾರೆ.

ತರಕಾರಿ-ಹಣ್ಣು:

ಮನೆ ಆವರಣ, ಟೆರೇಸ್ ಮೇಲೆ ಟೊಮೆಟೋ 20, ಬದನೆ-20, ಹಿರೇಕಾಯಿ 20 ಬಳ್ಳಿ ಹಾಗೂ ಹಾಗಲ ಕಾಯಿ ಬಳ್ಳಿ, ಪಾಲಕ, ಕೊತಂಬರಿ, ಪಾಲಕ, ಮೆಂಥೆ, ಮೂಲಂಗಿ, ಅಂಜೂರ, ಮೆಣಸಿನ ಕಾಯಿ, ಡ್ರ‍್ಯಾಗನ್, ರಾಮ-ಫಲ ,ಸೀತಾ-ಫಲ, ಲಿಂಬಿ, ಕರಿ ಬೇವು, ಮಾವು, ಎಲೆ ಬಳ್ಳಿ, ನೆಲ್ಲಿ, ಪಪ್ಪಾಯಿ, ಬಳ್ಳೂಳ್ಳಿ, ಈರುಳ್ಳಿ, ಚಳ್ಳೂರಿ, ಅಮೃತ ಬಳ್ಳಿ, ರಾಖಿ ಹೂ,ಅಲೋವೇರಾ, ತುಳಸಿ, ಪೇರು ಸೇರಿದಂತೆ ಆರೋಗ್ಯ ಅವಶ್ಯಕತೆ ಇರುವ ತರಕಾರಿ, ಹಣ್ಣು, ಔಷ  ಸಸ್ಯಗಳನ್ನು ಬೆಳೆಸಿದ್ದಾರೆ. ಅಲ್ಲದೆ ಮನೆಯ ಅಂದ, ಚಂದ ಹೆಚ್ಚಿಸಲು ಕೆಂಪು-ಬಿಳಿ ದಾಸ್ವಾಳ, ದೇವ ಕನಗಲಿ, ಟೆಂಪಲ್ ಟ್ರೀ ಸೇರಿ ನಾನಾ ರೀತಿಯ ಆಕರ್ಷಕ ಸಸ್ಯಗಳನ್ನು ನೆಟ್ಟು ಪೋಷಿಸಿದ್ದಾರೆ.

ಸಾವಯವ-ಹನಿ ನೀರಾವರಿ ಪದ್ಧತಿ:

ನೀರು, ಮಣ್ಣಿನ ಮಹತ್ವ ಸಾರುವ ದೃಷ್ಟಿಯಿಂದ ಸಾವಯವ ಕೃಷಿ, ಮಿಶ್ರ ಬೇಸಾಯ ಪದ್ಧತಿ ಅನುಸರಿಸಿದ್ದಾರೆ. ಯಾವುದೇ ರೀತಿಯ ರಾಸಾಯನಿಕ ಗೊಬ್ಬರ, ಔಷಧಿ ಸಿಂಪಡಣೆ ಮಾಡುವದಿಲ್ಲ. ಸಾಂಪ್ರದಾಯಕ ಸೆಗಣಿ ಬಳಸುತ್ತಾರೆ. ನೀರು ಕಡಿಮೆ ಬಳಕೆ ಮಾಡುವ ನಿಟ್ಟಿನಲ್ಲಿ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡಿದ್ದಾರೆ.

ಹವಾಲ್ದಾರ ಸಂಗಮೇಶ ತೆಲಗಾಣಿ ಮೂಲತಃ ಹುನಗುಂದ ತಾಲೂಕಿನ ಮರೋಳ ಗ್ರಾಮದವರು. ಬಿಎ, ಕಾನೂನು ಪದವಿ ಪಡೆದುಕೊಂಡಿದ್ದಾರೆ. ಅಪ್ಪಟ್ಟ ಕೃಷಿ ಕುಟುಂಬದಿOದ ಬಂದವರು. ಕಳೆದ 27 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ವೃತ್ತಿಯಿಂದ ಪೊಲೀಸ್ ಆಗಿದ್ದರು ಸಹ, ಕಚೇರಿಯ ಒತ್ತಡದ ನಡುವೆ ಕೃಷಿ ಕಾಯಕ ಮೇಲಿನ ಪ್ರೀತಿ ಕಡಿಮೆಯಾಗಿಲ್ಲ. ತಾವು ಸೇವೆ ಸಲ್ಲಿಸಿದ ವಿಜಯಪುರ, ಬಾದಾಮಿ, ಜಮಖಂಡಿ, ಬನಹಟ್ಟಿ, ಕೆರೂರನಲ್ಲಿಯೂ ಇಲಾಖೆ ನೀಡಿದ ವಸತಿ ಗೃಹದ ಸುತ್ತಲು ಇದೇ ರೀತಿ ತರಕಾರಿ, ಹಣ್ಣು  ಬೆಳೆದು ಇಲಾಖೆ ಅಧಿಕಾರಿಗಳ ಮೆಚ್ಚುಗೆ ಪಾತ್ರರಾಗಿದ್ದಾರೆ. ಪತ್ನಿ ವಿಜಯಲಕ್ಷಿ, ಪುತ್ರ ಶ್ರೀಶೈಲ, ಪುತ್ರಿ ಅಕ್ಷತಾ ಸಾಥ್ ನೀಡುತ್ತಾರೆ. ಈಡೀ ಕುಟುಂಬವೇ ಸಸಿಗಳನ್ನು ತಮ್ಮ ಕುಟುಂಬ ಸದಸ್ಯರಂತೆ ಕಾಣುತ್ತಾರೆ. ಇವರ ಕೃಷಿ ಕಾಯಕಕ್ಕೆ ಮನಸೋತ ಅನೇಕ ಹಿರಿಯ ಅಧಿಕಾರಿಗಳು ಮನೆಗೆ ಭೇಟಿ ನೀಡಿ ಅವರಿಂದ ತರಕಾರಿ, ಹಣ್ಣು ಸವಿದಿದ್ದು ಉಂಟು.

ಕಡಿಮೆ ಖರ್ಚು ಉಚಿತ ಸೇವೆ..

ಕೃಷಿ ಮಾಡಲು ಸಾವಿರಾರು ರೂ.ಖರ್ಚು ಮಾಡಿಲ್ಲ. 5 ವರ್ಷದ ಹಿಂದೆ ಮನೆ ನಿರ್ಮಿಸಿದ ಬಳಿಕ ಪೆಂಟ್ ಡಬ್ಬಿ ವೆಸ್ಟ್ ಆಗುತ್ತಿದ್ದವು. ಅವುಗಳನ್ನು ಬಳಸಿಕೊಂಡು ಒಂದು ಟ್ರ‍್ಯಾಕ್ಟರ್ ಮಣ್ಣು ಹಾಗೂ ಸಾವಯವ ಗೊಬ್ಬರು ತರಿಸಿದರು. ಅದನ್ನು ಬಳಸಿಕೊಂಡು ಒಂದಿಷ್ಟು ಸಸಿಗಳನ್ನು ಖರೀದಿಸಿ ನೆಟ್ಟರು. ತಮಗೆ ಬೇಕಾದಷ್ಟು ಹಣ್ಣು, ತರಕಾರಿ ಇಟ್ಟಿಕೊಂಡು ಕಾಲೋನಿಯಲ್ಲಿರುವ ಜನರಿಗೆ ಉಚಿತವಾಗಿ ಹಂಚುತ್ತಾರೆ. ಖಾಲಿ ಪ್ಲಾಸ್ಟಿಕ್ ಡಬ್ಬಿ ತಂದುಕೊಡುವವರಿಗೆ ಮಣ್ಣು, ಗೊಬ್ಬರ ಜತೆಗೆ ಸಸಿನೆಟ್ಟು ಉಚಿತವಾಗಿ ಊಡುಗೊರೆ ನೀಡುತ್ತಾರೆ.
ತಮ್ಮ ಕಾರ್ಯದ ಬಗ್ಗೆ ಮಾತನಾಡಿದ ಸಂಗಮೇಶ ತೆಲಗಾಣಿ ಹವಾಲ್ದಾರ ಸಾಂಪ್ರದಾಯಕ ಕೃಷಿ ಬಿಟ್ಟರೆ ಉಳಿಗಾಲವಿಲ್ಲ. ಪ್ರತಿಯೊಬ್ಬರು ತಮ್ಮ ಮನೆ, ಜಮೀನಿನಲ್ಲಿ ಅಚ್ಚುಕಟ್ಟಾಗಿ ಕೃಷಿ ಮಾಡಬೇಕು. ಮನೆಯಲ್ಲಿರುವ ವೆಸ್ಟ್ ಪ್ಲಾಸ್ಟಿಕ್ ಡಬ್ಬಿ ಬಳಸಿಕೊಂಡು ತರಕಾರಿ, ಹಣ್ಣು, ಹೂ ಬೆಳೆಯಲು ಸಾಧ್ಯವಿದೆ. ಇದರಿಂದ ಕುಟುಂಬ ಆರೋಗ್ಯ ಆರೋಗ್ಯವು ಉತ್ತಮವಾಗಿ ಇರುತ್ತದೆ. ಬದುಕು ನೆಮ್ಮದಿಯಾಗಿರುತ್ತದೆ ಎಂದು ಹೇಳಿದರು.
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

Leave a Reply

Your email address will not be published. Required fields are marked *

News Kannada

The most exciting, trusted and preferred news websites of Karnataka and Kannadigas around the world.

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

error: Content is protected !!