News Kannada
Sunday, March 26 2023

ವಿಶೇಷ

ಕರ್ನಾಟಕದ ಐತಿಹಾಸಿಕ ತೀರ್ಥಕ್ಷೇತ್ರ – ಮೈಸೂರು

Historical Pilgrimage Centre of Karnataka – Mysore
Photo Credit : Twitter

ಮೈಸೂರು ಅರಮನೆಗಳ ನಗರ ಎಂದೇ ಪ್ರಖ್ಯಾತ ಗೊಂಡಿದೆ. ಈ ನಗರದಲ್ಲಿ ಐತಿಹಾಸಿಕ ಕಟ್ಟಡಗಳು, ಉದ್ಯಾನಗಳು ಮತ್ತು ಸಾಲು ಮರಗಳ ರಸ್ತೆಗಳು ಇವೆ. ದಕ್ಷಿಣ ಭಾರತದ ಅತ್ಯಂತ ಸುಂದರವಾದ ನಗರಗಳಲ್ಲಿ ಒಂದಾದ ಮೈಸೂರು ಭೇಟಿ ನೀಡಲು ಮತ್ತು ಅನ್ವೇಷಿಸಲು ಸೂಕ್ತವಾದ ಸ್ಥಳ.

ಮೈಸೂರು ನಗರ: ಮೈಸೂರಿನ ಚಾಮುಂಡಿಬೆಟ್ಟದಲ್ಲಿ ನೆಲೆಸಿ ರುವ ಚಾಮುಂಡೇಶ್ವರಿಯು ಇಡೀ ನಾಡಿಗೆ ತನ್ನ ಕೃಪಾಕಟಾಕ್ಷ ವನ್ನು ಬೀರುತ್ತಿದ್ದಾಳೆ. ದೇವಿಯ ಪತಿಯಾಗಿ ಶಿವನು ಮಹಾಬಲೇ ಶ್ವರನಾಗಿ ಅಲ್ಲಿ ಸ್ಥಾಪನೆಗೊಂಡಿದ್ದಾನೆ. ನಿತ್ಯವೂ ಅಲ್ಲಿಗೆ ಭಕ್ತರ ಪ್ರವಾಹವೇ ಹರಿದುಬರುತ್ತದೆ. ಬೆಟ್ಟದ ಮೇಲೆಯೇ ದೊಡ್ಡದಾದ ಸ್ವಯಂಪೂರ್ಣವಾದ ಗ್ರಾಮವಿದೆ. ಒಂದು ತೀರ್ಥವೂ ಇದೆ. ರಥೋತ್ಸವ ತೆಪ್ಪೋತ್ಸವಾದಿಗಳು ವಿಜೃಂಭಣೆಯಿಂದ ಜರಗುತ್ತವೆ. ಆ ದೇವಿಯ ನವರಾತ್ರಿಕಾಲದ ಜಂಬೂಸವಾರಿಯೆಂಬ ಭವ್ಯವಾದ ಮೆರವಣಿಗೆಯಂತೂ ವಿಶ್ವವಿಖ್ಯಾತವಾಗಿದೆ.

ನಂಜನಗೂಡು: ಕಪಿಲಮುನಿಗಳ ಆಶೀರ್ವಾದಕ್ಕೆ ಪಾತ್ರವಾಗಿ ಕೇರಳದ ವೈನಾಡಿನಲ್ಲಿ ಹುಟ್ಟಿ ಕನ್ನಡನಾಡಿಗೆ ಇಳಿದುಬರುವ ಕಪಿಲಾ ನದಿಯ ತೀರದಲ್ಲಿರುವ ಯಾತ್ರಾಸ್ಥಳಗಳಲ್ಲಿ ಗರಳಪುರಿ ಎಂಬ ಪೌರಾಣಿಕ ನಾಮದ ನಂಜನಗೂಡು ಪಟ್ಟಣಕ್ಕೆ ಮಹೋನ್ನತವಾದ ಸ್ಥಾನವಿದೆ. ಅದು ತಾಲ್ಲೂಕು ಕೇಂದ್ರವಾಗಿದೆ. ಅಲ್ಲಿರುವ ನಂಜುಂಡೇಶ್ವರ ಅಥವಾ ಶ್ರೀಕಂಠೇಶ್ವರ ದೇವಾಲಯವು ದೇಶವಿಶಾಲ ವಾಗಿದ್ದು, ವಿಸ್ತಾರದ ಲೆಕ್ಕದಲ್ಲಿ ಕರ್ನಾಟಕದಲ್ಲಿಯೇ ಅತಿ ದೊಡ್ಡ ದೇವಾಲಯವೆಂಬ ಕೀರ್ತಿಗೆ ಪಾತ್ರವಾಗಿದೆ. ಅದರ ಮಹಾದ್ವಾರದ ಮೇಲೆ ಏಳು ಅಂತಸ್ತುಗಳಿಂದ ಕೂಡಿದ ಬೃಹದಾಕಾರವಾದ ರಾಜ ಗೋಪುರವಿದೆ. ಗರ್ಭಗೃಹದಲ್ಲಿ ಗೌತಮ ಮುನಿಗಳಿಂದ ಸ್ಥಾಪನೆಗೊಂಡ ನಂಜುಂಡೇಶ್ವರ ಲಿಂಗಕ್ಕೆ ಪೂಜೆ ಸಲ್ಲುತ್ತದೆ. ಪಾರ್ವತಮ್ಮನವರ ಪ್ರತ್ಯೇಕ ಗುಡಿಯಿದೆ.

ದೇವಾಲಯದೊಳಗೆ ೨೦೦ಕ್ಕೂ ಹೆಚ್ಚು ದೇವರುಗಳು ಸ್ಥಾಪನೆ ಗೊಂಡಿರುವುದು ಕೂಡ ಅದ್ಭುತವಾದ ವಿಚಾರವಾಗಿದೆ. ಬೃಹತ್ತಾದ ನಂದಿ, ನಾರಾಯಣದೇವರು, ತಾಂಡವೇಶ್ವರ, ದಕ್ಷಿಣಾಮೂರ್ತಿ, ಚಂಡಿಕೇಶ್ವರ, ಸುಬ್ರಹ್ಮಣ್ಯ, ನೃತ್ಯಗಣಪತಿ, ಉಚ್ಚಿಷ್ಟ ಗಣಪತಿ ಮೊದ ಲಾದ ದೇವರುಗಳು ಕಲಾತ್ಮಕ ಮೂರ್ತಿಗಳಿವೆ. ಪುರಾತನ ಕಾಲದ ಶಿವಭಕ್ತರು ಎಂದು ಹೇಳುವ ಅವರ ಆಳೆತ್ತರದ ೬೬ ಪ್ರತಿಮೆಗಳಿವೆ. ಶಿವನು ಮೆರೆದ ಪಂಚವಿಂಶತಿ ಲೀಲೆಗಳ ೨೫ ಸುಂದರಮೂರ್ತಿ. ಪ್ರತಿ ಪೂರ್ಣಿಮೆಗೆ ಅಲ್ಲಿ ರಥವಳೆಯುತ್ತಾರೆ. ವಾರ್ಷಿಕವಾಗಿ ಚಿಕ್ಕಜಾತ್ರೆ ಮತ್ತು ದೊಡ್ಡಜಾತ್ರೆ ಎಂಬ ಮಹೋತ್ಸವಗಳು ಜರಗುತ್ತವೆ. ಚಿಕ್ಕಜಾತ್ರೆಯಲ್ಲಿ ೩ ತೇರುಗಳನ್ನು ಎಳೆದರೆ ದೊಡ್ಡಜಾತ್ರೆಯಲ್ಲಿ ೫ ತೇರುಗಳನ್ನು ಎಳೆಯುತ್ತಾರೆ.

ಸುತ್ತೂರು: ಪ್ರದಕ್ಷಿಣಪುರವೆಂದು ಕರೆಯಲ್ಪಟ್ಟ ಸುತ್ತೂರು ಕ್ಷೇತ್ರವು ತಾಲ್ಲೂಕು ಕೇಂದ್ರವಾದ ನಂಜನಗೂಡಿಗೆ ಸೇರಿದ್ದು, ಅಲ್ಲಿಂದ ೧೮ ಕಿ.ಮೀ.ಗಳ ದೂರದಲ್ಲಿ ಕಪಿಲಾನದಿಯ ತೀರದಲ್ಲಿದೆ. ಶಿವರಾತ್ರೀಶ್ವರನೆಂಬ ಮಹಾಮಹಿಮರಿಂದ ಸಾವಿರವರ್ಷಗಳ ಹಿಂದೆಯೇ ಸ್ಥಾಪನೆಗೊಂಡ ವೀರಸಿಂಹಾಸನ ಪರಂಪರೆಯ ‘ಸುತ್ತೂರು ಮಠ’ದಿಂದಾಗಿ ಆ ಕ್ಷೇತ್ರವು ಜಗದ್ವಂದ್ಯವಾಗಿದೆ. ಶಿವರಾತ್ರೀಶ್ವರದ ಗದ್ದುಗೆ ಗುಡಿಯು ಅಲ್ಲಿನ ಪ್ರಮುಖ ಶ್ರದ್ಧಾಕೇಂದ್ರವಾಗಿದೆ. ಭವ್ಯವೂ ನಯನ ಮನೋಹರವೂ ಆದ ವಿದ್ಯಾಪೀಠವಿದೆ. ಬಹು ಪರಿಯ ಸಾಂಸ್ಕೃತಿಕ ಕಾರ್ಯಕ್ರಮಗಳ ಸಹಿತವಾಗಿ ನಡೆಯುವ ವಾರ್ಷಿಕ ಸುತ್ತೂರು ಜಾತ್ರೆ ಲಕ್ಷಾಂತರ ಜನರನ್ನು ಆಕರ್ಷಿಸುತ್ತದೆ. ಸೋಮೇಶ್ವರ, ವೀರೇಶ್ವರ ನಾರಾಯಣ ದೇವರು ಮುಂತಾದವರ ಪ್ರಾಚೀನವಾದ ದೇವಮಂದಿರಗಳೂ ಸುತ್ತೂರಿನಲ್ಲಿವೆ. ಶಿವರಾತ್ರೀಶ್ವರ ಶಾಖಾಮಠವು ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನ ಪಾವನ ಪರಿಸರದಲ್ಲಿದೆ.

See also  ಕಾರವಾರ: ನಾರಗೇರಿಯಲ್ಲಿ ಪ್ರತ್ಯಕ್ಷವಾದ ಕಾಳಿಂಗ ಸರ್ಪ

ತಲಕಾಡು: ತಿ. ನರಸಿಪುರ ತಾಲ್ಲೂಕಿಗೆ ಸೇರುವ, ಅಲ್ಲಿಂದನಿಸಿ ಕಿ.ಮೀ.ಗಳ ಅಂತರದಲ್ಲಿರುವ ಗಜಾರಣ್ಯವೆಂದು ಕರೆಯಲ್ಪಟ್ಟಿರುವ ತಲಕಾಡು ಅತ್ಯಂತ ವಿಸ್ಮಯಕಾರಿಯಾದ ತೀರ್ಥಕ್ಷೇತ್ರವಾಗಿದೆ. ಕಾವೇರಿಯು ಅಲ್ಲಿ ತುಂಬಾ ವಿಶಾಲವಾಗಿ, ಮರಳು ಭೂಮಿಯ ಪಾತ್ರದಲ್ಲಿ ಹರಿದುಹೋಗಿದೆ. ವೈದ್ಯನಾಥೇಶ್ವರ ಮತ್ತು ಮನೋ ನ್ನಣಿ ಅಮ್ಮನವರ ದೇವಾಲಯವೇ ತಲಕಾಡಿನ ಕೇಂದ್ರಬಿಂದು ವಾಗಿದೆ. ಅದರ ಜೊತೆಗೆ ಮಹಾವಿಷ್ಣುವಿನ ಕೀರ್ತಿನಾರಾಯಣ ಆಲಯವು ಶಿಲ್ಪಕಲಾ ಕೌಶಲದಿಂದ ಕೂಡಿದ್ದು ಹೆಚ್ಚು ಜನಪ್ರಿಯ ವಾಗಿದೆ. ಭಾಗವತಸಂಪ್ರದಾಯದ ‘ಬಾಲಕೃಷ್ಣಾನಂದ ಮಠ’ವೂ ಅಲ್ಲಿದೆ.

ಪರಶಿವನು ತತ್ಪುರುಷ, ಅಘೋರ, ಸದ್ಯೋಜಾತ, ವಾಮ ದೇವ, ಈಶಾನ ಎಂಬ ಪಂಚಮುಖಗಳಿಂದ ಪರಿಶೋಭಿತನಾಗಿದ್ದಾನೆ. ಈ ಐದು ಮುಖಗಳಿಗೆ ಪ್ರತ್ಯೇಕವಾಗಿ ಅವನು ತಲಕಾಡಿನಲ್ಲಿ ಕ್ರಮವಾಗಿ ಅರ್ಕೇಶ್ವರ, ಪಾತಾಳೇಶ್ವರ, ಮರಳೇಶ್ವರ, ಮಲ್ಲಿಕಾರ್ಜುನ ಮತ್ತು ವೈದ್ಯನಾಥೇಶ್ವರ ಎಂಬ ನಾಮದಿಂದ ನೆಲೆಸಿ ದಾನೆ. ೪ ರಿಂದ ೧೪ ವರ್ಷಗಳ ಕಾಲಾವಧಿಯಲ್ಲಿ ಜರಗುವ ‘ಪಂಚ ಲಿಂಗ ದರ್ಶನ’ ವೆಂಬ ಮಹಾಪರ್ವದಂದು, ಒಂದೇ ದಿನದಲ್ಲಿ ಆ ಐದೂ ಲಿಂಗಗಳನ್ನು ದರ್ಶನ ಮಾಡಿ ಪುಣ್ಯಭಾಜನರಾಗುವ ಪರಂಪರೆಯೊಂದು ನಡೆದು ಬಂದಿದೆ. ಆ ಪಂಚಲಿಂಗಗಳ ಪೈಕಿ ಅರ್ಕೇಶ್ವರದಿಂಗವು ತಲಕಾಡಿನಿಂದ ೫ ಕಿ.ಮೀ.ಗಳ ದೂರದಲ್ಲಿದ್ದರೆ, ಮಲ್ಲಿ ಕಾರ್ಜುನಲಿಂಗವು ೮ ಕಿ.ಮೀ. ದೂರದ ಮುಡುಕುತೊರೆ ಎಂಬ ಊರಿನಲ್ಲಿದೆ. ಮಿಕ್ಕ ಮೂರು ಲಿಂಗಗಳು ತಲಕಾಡಿನಲ್ಲಿಯೇ ಇವೆ.

ತಲಕಾಡಿನಲ್ಲಿ ಹಲವಾರು ಮೈಲಿಗಳ ವಿಸ್ತೀರ್ಣಕ್ಕೆ ಮರಳು ಗಾಡನ್ನು ನೆನಪಿಸುವಂತೆ ಮರಳ ರಾಶಿಯು ಹಬ್ಬಿಕೊಂಡಿರುವುದು ಭಗವಂತನು ಸೃಷ್ಟಿಸಿರುವ ವಿಸ್ಮಯವಲ್ಲದೆ ಬೇರೆಯಲ್ಲ, ಆ ದೇವಾಲಯಗಳೂ ಮರಳಿನ ಮಧ್ಯದಲ್ಲಿಯೇ ಇವೆ. ತಲಕಾಡು ಮರಳಿ ನಿಂದ ತುಂಬಿಹೋಗಲು ಇತಿಹಾಸದಲ್ಲೊಂದು ಕಥೆಯಿದ, ವಿಜಯ ನಗರದ ಆಶ್ರಿತರಾಗಿದ್ದ ಯದುಕುಲದ ಮೈಸೂರರಸರು, ರಾಜ ಒಡೆಯರ ಕಾಲದಲ್ಲಿ (೧೬೧೦) ತಾವೇ ಪ್ರಬಲರಾಗಿ ಶ್ರೀರಂಗಪಟ್ಟಣ ರಲ್ಲಿ ಸಿಂಹಾಸನವನ್ನೇರಿದರು. ಆ ಹೊತ್ತಿನಲ್ಲಿ ಅಲ್ಲಿ ವಿಜಯನಗರ ಸಾಮ್ರಾಜ್ಯದ ಪ್ರತಿನಿಧಿಯಾಗಿ ಶ್ರೀರಂಗರಾಯನೆಂಬಾತನು ಆಳ್ವಿಕೆ ನಡೆಸುತ್ತಿದ್ದನು. ಅವನ ಮಡದಿ ಅಲಮೇಲಮ್ಮಳ ಅಮೂಲ್ಯ ಆಭರಣಗಳಿದ್ದು, ವಿಶೇಷದಿನಗಳಲ್ಲಿ ಅವುಗಳನ್ನು ಅಲ್ಲಿನ ರಂಗನಾಥ ಸ್ವಾಮಿ ದೇವಾಲಯದ ರಂಗನಾಯಕಿದೇವಿಯ ಸ್ವಾಧಿಗೆ ಅಲಂಕರಿ ಸಲು ಕೊಡುತ್ತಿದ್ದಳು. ರಾಜ ಒಡೆಯರು ಅಲ್ಲಿಗೆ ರಾಜರಾದ ಮೇಲೆ, ಶ್ರೀರಂಗರಾಯನು ಮಡದಿ ಸಹಿತನಾಗಿ ತಲಕಾಡಿಗೆ ಸಮೀಪದ ಕಾವೇರಿ ತೀರದ ತಡಿಮಾಲಂಗಿ ಎಂಬ ಗ್ರಾಮದಲ್ಲಿ ನೆಲೆಸಿ, ಅಲ್ಲಿಯೇ ಕಾಲವಾದನು. ಹೀಗೆಯೇ ಇರುವಲ್ಲಿ ರಾಜ ಒಡೆಯರು ಅಲಮೇಲಮ್ಮನನ್ನು ಕುರಿತು ”ನಿನ್ನ ಬಳಿಯಿರುವ ಆಭರಣಗಳ ನ್ನೆಲ್ಲಾ ನನ್ನ ವಶಕ್ಕೆ ಒಪ್ಪಿಸಬೇಕು” ಎಂದು ಆಜ್ಞೆಮಾಡಿ ಸೈನಿಕರನ್ನು ತಡಿಮಾಲಂಗಿಗೆ ಅಟ್ಟಿದರು. ಅದರಿಂದ ಕುಪಿತಳಾದ ಅಲಮೇ ಅಮ್ಮನು ಆ ಅಭರಣಗಳನ್ನೆಲ್ಲಾ ಗಂಟುಕಟ್ಟಿಕೊಂಡು, ಸೈನಿಕರಿಗೆ ದಕ್ಕದೆ, ತಟಮಾಲಂಗಿಯ ತೀರದ ಕಾವೇರಿಗೆ ಬಿದ್ದು ಪ್ರಾಣನೀಗಿ ದಳು, ಹಾಗೆ ಬೀಳುವಾಗ ”ತಲಕಾಡು ಮರಳಾಗಲಿ, ಮಾಲಂಗಿ ಮಡುವಾಗಲಿ, ಮೈಸೂರು ದೊರೆಗಳಿಗೆ ಮಕ್ಕಳಾಗದಿರಲಿ” ಎಂದು ಶಪಿಸಿದಳು. ಅದೇ ಕಾರಣವಾಗಿ ತಲಕಾಡಿನಲ್ಲಿ ಮರಳು ಅವ ಸಿತು. ತಡಿಮಾಲಂಗಿಯ ಕಾವೇರಿಯ ಆ ತಾಣದಲ್ಲಿ ಅತ್ಯಂತ ಆಳ ವಾದ ಮಡುವು ರೂಪು ತಳೆಯಿತು. ಮೈಸೂರು ಅರಸು ಮನೆತನ ದಲ್ಲಿ ದತ್ತು ಮಗನಿಗೆ ಪುತ್ರ ಸಂತಾನವಾಗುತ್ತದೆ, ಮತ್ತೆ ಆ ಪತ್ರಮು ಉತ್ತರಾಧಿಕಾರಿಪಟ್ಟಕ್ಕೆ ದತ್ತು ಸ್ವೀಕಾರ ಮಾಡಬೇಕಾಗುತ್ತದೆ. ಈಗ ಇರುವ ಅರಮನೆಯ ಪ್ರಭುಗಳು ಈ ಹಿಂದಿನ ಪ್ರಭುಗಳಾಗಿದ್ದ ಶ್ರೀಕಂಠದತ್ತ ನರಸಿಂಹರಾಜ – ಪ್ರಮೋದಾದೇವಿಯವರಿಗೆ ದತ್ತು ಪುತ್ರರು. ಈ ದತ್ತುಪುತ್ರರೀಗ ಪುತ್ರವಂತರಾಗಿದ್ದಾರೆ.

See also  ಮಂಗಳೂರು: ಸುರತ್ಕಲ್ ಮತ್ತು ಬಜ್ಪೆ ಪಿಎಸ್ ವ್ಯಾಪ್ತಿಯ ಪ್ರದೇಶಗಳಿಗೆ ಎಡಿಜಿಪಿ ಅಲೋಕ್ ಕುಮಾರ್ ಭೇಟಿ

ಮುಡುಕುತೊರೆ: ಪಂಚಲಿಂಗಗಳಲ್ಲಿ ಒಂದಾದ ಮಲ್ಲಿಕಾ ರ್ಜುನ ಲಿಂಗವು ಮುಡುಕುತೊರೆ ಗ್ರಾಮದ ಕಾವೇರಿ ತೀರದ ಅತ್ಯಂತ ನಯನಾಭಿರಾಮವಾದ ಒಂದು ಗುಡ್ಡದ ಮೇಲಿರುವ ಗುಡಿಯಲ್ಲಿ ಸ್ಥಾಪನೆಗೊಂಡಿದೆ. ಆ ಸ್ವಾಮಿಯು ಭ್ರಮರಾಂಬೆಯೊಡನೆ ಇದ್ದಾನೆ. ಆಂಧ್ರದ ಶ್ರೀಶೈಲದ ಮಲ್ಲಿಕಾರ್ಜುನನಿಗೂ ಈ ದೇವಾಲಯಕ್ಕೂ ಘನಿಷ್ಠವಾದ ಸಂಬಂಧವು ಬೆಳೆದುಬಂದಿದೆ. ದೇವಾಲಯದ ಕಡೆಯಿಂದ ಅಧಿಕಾರಿ ಪುರುಷರು ಅಲ್ಲಿನ ಬಸವನನ್ನು ಮುಂದು ಮಾಡಿಕೊಂಡು ಪಾದಯಾತ್ರೆಯಲ್ಲಿ ಉಡುಗೊರೆಗಳ ಸಹಿತವಾಗಿ ಶ್ರೀಶೈಲವನ್ನು ತಲುಪುವ, ಆ ಉಡುಗೊರೆಗಳನ್ನು ಭ್ರಮರಾಂಬಾ- ಮಲ್ಲಿಕಾರ್ಜುನರ ಸನ್ನಿಧಿಗೆ ಸಮರ್ಪಿಸುವ, ತಾವೂ ಸತ್ಯತರಾಗಿ ಮರಳಿ ಬರುವ ಆಚರಣೆಯೊಂದು ಅನನ್ಯವಾಗಿದೆ. ಮುಡುಕು ತೊರೆಯ ವಾರ್ಷಿಕ ಜಾತ್ರೆಯ ಹೊತ್ತಿನಲ್ಲಿ ನಡೆಯುವ ಪಳಗಿಸಿದ ಗೂಳಿಗಳ ಸ್ಪರ್ಧಾತ್ಮಕ ಓಟವು ಗ್ರಾಮೀಣರಲ್ಲಿ ನವೋಲ್ಲಾಸವನ್ನು ತುಂಬುತ್ತದೆ.

-ಮಣಿಕಂಠ ತ್ರಿಶಂಕರ್, ಮೈಸೂರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

34905
ಮಣಿಕಂಠ ತ್ರಿಶಂಕರ್

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು