ಸುರತ್ಕಲ್: ಕಳೆದೊಂದು ವಾರದಿಂದ ಮುಂಜಾನೆ ವೇಳೆ ವಿಪರೀತ ಮಂಜು ಬೀಳುತ್ತಿದ್ದು ಇಂದು ಮುಂಜಾನೆ ಮಾತ್ರ ಸುರತ್ಕಲ್, ಮುಕ್ಕ ಭಾಗದಲ್ಲಿ ಭಾರೀ ಮಂಜು ಕವಿದ ವಾತಾವರಣದಿಂದಾಗಿ ದ್ವಿಚಕ್ರ ವಾಹನ ಸವಾರರು ಸಂಚಾರಕ್ಕೆ ಪರದಾಡುವಂತಾಯಿತು.
ಬೆಳಗ್ಗೆ 9 ಗಂಟೆಯ ವೇಳೆಯಲ್ಲೂ ಮಂಜು ಹರಡಿದ್ದು ಹೆದ್ದಾರಿಯಲ್ಲಿ ವಾಹನ ಸವಾರರು ಹೆಡ್ ಲೈಟ್ ಹಾಕಿಕೊಂಡು ಸಂಚಾರ ನಡೆಸಿದರು.
ಸಾಮಾನ್ಯವಾಗಿ ಮಡಿಕೇರಿ, ಚಿಕ್ಕಮಗಳೂರಿಗೆ ಸೀಮಿತವಾಗಿರುತ್ತಿದ್ದ ಮಂಜಿನ ವಾತಾವರಣ ಇಲ್ಲೇ ಕಂಡುಬಂದಿದ್ದು ವಾಹನ ಸವಾರರು ಪುಳಕಿತರಾದರು.