ವೃತ್ತಿಯಲ್ಲಿ ವಕೀಲೆ ಪ್ರವೃತ್ತಿಯಾಗಿ ಮಲ್ಲಿಗೆ ಕೃಷಿ ಆರಿಸಿಕೊಂಡಿರುವ ಕಿರಣ ಇವರಿಗೆ ಮಲ್ಲಿಗೆ ಕೃಷಿಯಲ್ಲಿ ಹೆಚ್ಚಿನ ಆನಂದ ಮತ್ತು ಮನಸ್ಸಿಗೆ ಶಾಂತಿ ದೊರಕುತ್ತದೆ ಎಂದು ಹೆಮ್ಮೆಯಿಂದ ಹೇಳುತ್ತಾರೆ.
ಕಳೆದ ವರ್ಷ ಲಾಕ್ ಡೌನ್ ಸಮಯದಲ್ಲಿ ತಮ್ಮ ಮನೆಯ ಮೇಲಿನ ತಾರಸಿಯಲ್ಲಿ ಮಲ್ಲಿಗೆ ಗಿಡಗಳನ್ನು ನೆಟ್ಟು ಅದರಿಂದ ಉತ್ತಮ ಇಳುವರಿಯನ್ನು ಇವರು ಪಡೆಯುತ್ತಿದ್ದಾರೆ.
ಮನಸ್ಸಿಗೆ ಮುದ ನೀಡುವ ಕೆಲಸವನ್ನು ಮಾಡಬೇಕು ಹಾಗೇ ಕಿರಣ ಅವರು ತಮ್ಮ ಬಿಡುವಿಲ್ಲದ ವೇಳೆಯಲ್ಲೂ ಮಲ್ಲಿಗೆ ಕೃಷಿಯಲ್ಲಿ ಉತ್ತಮ ರೀತಿಯಲ್ಲಿ ಮಾಡಿಕೊಂಡು ಬರುವುದರಲ್ಲಿ ಯಶಸ್ವಿಯಾಗಿದ್ದಾರೆ.
ತಾರಸಿ ಮೇಲೆ ನೆಟ್ಟಿರುವ ಈ ಮಲ್ಲಿಗೆ ಗಿಡಗಳಿಗೆ ಪ್ರತಿ ದಿನ ನೀರನ್ನು ಉಣಿಸುತ್ತಾರೆ ಈ ನೀರಿನ ವ್ಯವಸ್ಥೆಗೆ ಮಲ್ಲಿಗೆ ಕ್ರಷಿಯಿಂದ ಬಂದ ಆದಾಯದಲ್ಲಿ ಮನೆಯ ಅಂಗಳದಲ್ಲಿ ಒಂದು ಬಾವಿ ತೊಡಿದ್ದಾರೆ. ತಾರಸಿ ಮೇಲೆ ಟಾಂಕಿಯನ್ನು ಇಟ್ಟು ನೀರನ್ನು ಶೇಕರಿಸಿ ಇಡುವ ವ್ಯವಸ್ಥೆ ಮಾಡಿಕೊಂಡಿದ್ದಾರೆ.
ಪ್ರತಿ ದಿನ ಬೆಳಗಿನ ಜಾವ ಮಲ್ಲಿಗೆಯ ಮೊಗ್ಗುಗಳನ್ನು ತೆಗೆಯುವುದರಿಂದ ಹಿಡಿದು ಅದನ್ನು ಕಟ್ಟಿ ಅಂಗಡಿಗೆ ಕೊಡುವ ಪ್ರತಿ ಕೆಲಸವನ್ನು ಕಿರಣ ಅವರು ಬಹಳ ಆಸಕ್ತಿಯಿಂದ ಮಾಡುತ್ತಾರೆ.
ಮಲ್ಲಿಗೆ ಕೃಷಿ ನಷ್ಟ ಎನ್ನುವ ಸಮಸ್ಯೆ ಎಂದು ಎದುರಾಗಲು ಸಾಧ್ಯವಿಲ್ಲ. ಇವರು ಈ ಗಿಡಗಳಿಗೆ ತಿಂಗಳಿನಲ್ಲಿ ಹೆಚ್ಚೆಂದರೆ 1000 ರೂಪಾಯಿಗಳನ್ನು ಗೊಬ್ಬರಕ್ಕೆ ಮತ್ತು ಮದ್ದು ಸಿಂಪಡನೆಗೆ ಬಳಸಿತ್ತಾರೆ.ಇನ್ನುವುಳಿದ ಎಲ್ಲಾ ಆದಾಯ ಉಳಿತಾಯವಾಗುತ್ತದೆ ಎನ್ನುತ್ತಾರೆ ಅವರು.
ಸಾವಯವ ಗೊಬ್ಬರನ್ನು ಬಳಸುತ್ತಾರೆ ಮತ್ತು ಮೊಗ್ಗುಗಳಿಗೆ ಬರುವ ಹುಳ ಬಾದೆಯನ್ನು ತಪ್ಪಿಸಲು ರಾಸಾಯನಿಕ ಸಿಂಪಡನೆಯನ್ನು ಬಳಸುತ್ತಾರೆ.ಹಬ್ಬ
ಇವರು ಹೆಚ್ಚು ಮಲ್ಲಿಗೆ ಇದ್ದಾಗ ಮೊಗ್ಗು ತೆಗೆಯಲು ತನ್ನ ತಂಗಿ ಮತ್ತು ಮಗ ಸಹಾಯ ಪಡೆಯುತ್ತಾರೆ.ಅದೇ ರೀತಿ ಇವರ ಪತಿ ಪ್ರತಿದಿನ ಬೆಳಗಿನ ಜಾವ ಹೂವಿನ ಗಿಡಗಳಿಗೆ ನೀರು ಹಾಯಿಸುತ್ತಾರೆ.
ಇತ್ತೇಚೆಗೆ ಮನೆಯ ಅಂಗಳದ ಬದಿಯಲ್ಲಿ ಕಾಂಪೌಂಡ್ ಸುತ್ತಲೂ ಮಲ್ಲಿಗೆ ಗಿಡಗಳನ್ನು ನೆಟ್ಟಿದ್ದಾರೆ ಇವರು.
ಇವರಲ್ಲಿ ಪ್ರಸ್ತುತ ಸುಮಾರು 90 ಗಿಡಗಳಿದ್ದು ಎಲ್ಲಾ ಗಿಡಗಳಿಂದ ಉತ್ತಮ ಇಳುವರಿ ದೊರಕುತ್ತವೆ ಎನ್ನುತ್ತಾರೆ. ಸುಮಾರು 80 ಸಾವಿರಕ್ಕಿಂತಲೂ ಅಧಿಕ ಸಂಭಾವನೆಯನ್ನು ಈ ವರೆಗೆ ಇವರು ಗಳಿಸಿದ್ದಾರೆ
ನಾನು ಎಲ್ಲಾ ಮಹಿಳೆಯರಿಗೆ ಈ ಮೂಲಕ ಹೇಳುತ್ತಿದ್ದೇನೆ ಬಿಡುವಿನ ವೇಳೆಯಲ್ಲಿ ಈ ರೀತಿ ಮಲ್ಲಿಗೆ ಕೃಷಿಯನ್ನು ಮಾಡಿ ಇದರಿಂದ ಯಾವುದೇ ನಷ್ಟವಿಲ್ಲ. ಮನಸ್ಸಿಗೆ ಮುದ ನೀಡುವುದರ ಜೊತೆಗೆ ಉತ್ತಮ ಲಾಭವು ಇಲ್ಲಿ ದೊರಕುತ್ತದೆ.
ಕಿರಣ ದೇರೆಬೈಲ್