NewsKarnataka
Friday, January 28 2022

ಅಂಕಣ

ಫ್ಯಾಷನ್‌ಗೂ ಸೈ ಸಂಪ್ರದಾಯಿಕ ಉಡುಗೆಯಾಗಿಯೂ ಸೈ ಎನಿಸಿಕೊಂಡ ಸೀರೆ

ನಮ್ಮ ದೇಶದಲ್ಲಿ ಸಾಂಪ್ರದಾಯಿಕ ಉಡುಗೆಯಾದ ಸೀರೆಗೆ ಪ್ರಮುಖ ಸ್ಥಾನವನ್ನು ನೀಡಲಾಗಿದೆ. ವಿದೇಶಿಗರು ಈ ನಮ್ಮ ಉಡುಗೆಗೆ ಮಾರುಹೋಗಿರುತ್ತಾರೆ, ಅಂತಹ ಶಕ್ತಿ ಸೀರೆಗೆ ಇದೆ. ಯಾವುದೇ ಇಂದು ಸಾಂಪ್ರದಾಯಿಕ ಕಾರ್ಯಕ್ರಮಗಳಿದ್ದರು ಅಲ್ಲಿ ಭಾರತೀಯ ನಾರಿ ಸೀರೆಯಲ್ಲೆ ಮಿಂಚುತ್ತಾಳೆ ಹೊರತು, ಬೇರೆ ವೆರೈಟಿ ಉಡುಪುಗಳಲಲ್ಲ. ಅಷ್ಟರ ಮಟ್ಟಿಗೆ ಸೀರೆಗಳು ಇಂದಿಗೂ ಪ್ರಸಿದ್ಧಿ ಪಡೆದಿದೆ.

ಈ ಭಾರತೀಯ ನಾರಿಗೆ ಹಾಗೂ ಸೀರೆಗೆ ಅವಿನಾಭಾವ ಸಂಬಧವಿದೆ. ಭಾರತೀಯ ನಾರಿ ಸೀರೆಯಲ್ಲಿ ಮಿಂಚುವುದೇ ಚಂದ. ಇನ್ನು ಸೀರೆಯನ್ನು ಅನೇಕ ರೀತಿಯಲ್ಲಿ ಉಡುವುದನ್ನು ಕಾಣಬಹುದು. ಸೀರೆ ಉಟ್ಟ ರೀತಿಯಲ್ಲೆ ಅವರು ಯಾವ ಪ್ರದೇಶಕ್ಕೆ ಸೇರಿದವರು , ಯಾವ ಪಂಗಡಕ್ಕೆ ಸೇರಿದವರು ಎಂದು ಸುಲಭವಾಗಿ ಗುರುತಿಸಬಹುದು. ಉದಾಹರಣೆಗೆ ಕೊಡವ ಸೀರೆ ಉಟ್ಟವರನ್ನು ನೋಡಿದರೆ ಇವರು ಕೊಡಗಿನವರು ಎಂದು ಗುರುತಿಸಬಹುದು. ಇನ್ನು ತಮಿಳುನಾಡಿನ ಜನರು ಸೀರೆ ಉಡುವ ಶೈಲಿಯೇ ಬೇರೆ, ಕಚ್ಚೆಯ ರೀತಿ ಸಾರಿಯನ್ನು ಉಡುತ್ತಾರೆ. ಇತ್ತ ಕೇರಳದಲ್ಲಿ ಸೆಟ್ ಮುಂಡ್, ಲಂಬಾಣಿ ಸ್ಟೈಲ್, ಅಸ್ಸಾಂ ಸ್ಟೈಲ್ ಹೀಗೆ ಆಯ ಆಯ ಪ್ರದೇಶದಲ್ಲಿನ ಸಂಪ್ರದಾಯಕ್ಕೆ ತಕ್ಕಂತೆ ಜನರು ಸೀರೆಯನ್ನು ಉಡುತ್ತಾರೆ.

ಸೀರೆಯ ವಿನ್ಯಾಸದಲ್ಲಿ ಹೊಸ-ಹೊಸ ಫ್ಯಾಷನ್‌ಗಳು ಇಂದಿಗೂ ಬರುತ್ತಲೇ ಇದೇ. ಆದ್ದರಿಂದ ಸೀರೆ ಉಡುಗೆ ಎಂದಿಗೂ ಭಾರತ ದೇಶದಲ್ಲಿ ಔಟ್ ಆಫ್ ಫ್ಯಾಷನ್ ಆಗುವುದೇ ಇಲ್ಲ. ಸೀರೆ ಫ್ಯಾಷನ್‌ಗೂ ಸೈ ಸಂಪ್ರದಾಯಿಕ ಉಡುಗೆಯಾಗಿಯೂ ಸೈ ಅನಿಸಿಕೊಳ್ಳುವ ಮಟ್ಟಿಗೆ ಚಾಪನ್ನು ಮೂಡಿಸಿದೆ.
ಸೀಸನ್‌ಗೆ ತಕ್ಕಂತೆ ಸೀರೆಗಳು ಟ್ರೆಂಡಿಂಗ್ ಆಗುತ್ತದೆ, ಫ್ಯಾಬ್ರಿಕ್‌ನ ಲೈಟ್ ವೈಟ್ ಸಮ್ಮರ್ ಸೀರೆಗಳು, ಇಂತಹ ಸೀರೆಗಳು ಗೃಹಿಣಿಯರಿಗೆ ಮಾತ್ರವಲ್ಲದೇ ಕಾರ್ಪೋರೇಟ್ ಕ್ಷೇತ್ರದಲ್ಲಿ ತೊಡಗಿಕೊಂಡವರಿಗೆ ಯುವತಿಯರಿಗೂ ಮಾಚ್ ಆಗುತ್ತದೆ.

ಕಾಟನ್ ಸೀರೆಗಳು ಎಲ್ಲಾ ಸೀಸನ್‌ಗೂ ಸೂಕ್ತವಾಗಿರುತ್ತದೆ. ಹಿಂದೆ ಕಾಟನ್ ಸೀರೆಗಳಿಗೆ ಅಷ್ಟೊಂದು ಬೇಡಿಕೆ ಇಲ್ಲದಿದ್ದರೂ ಇಂದೂ ಯುವತಿಯರು, ಮದ್ಯ ವಯಸ್ಸಿನವರು ಅತೀ ಹೆಚ್ಚು ಇಷ್ಟ ಪಟ್ಟು ಖರೀದಿಸುತ್ತಾರೆ. ಕಾಟನ್ ಸೀರೆಗಳು ಲೈಟ್ ವೈಟ್ ಮತ್ತು ನೋಡಲು ಸುಂದರ, ಉಡಲು ಹಿತವಾಗಿರುತ್ತದೆ.

ಸೀರೆಯ ಮತ್ತೊಂದು ವಿಶೇಷತೆ ಅಂದರೆ ಇದನ್ನು ಗರತಿ ಗೌರಮ್ಮವಂತೆಯೂ ಉಡಬಹುದು, ಮಾಡರ್ನ್ ಆಗೀಯೂ ಉಡಬಹುದು. ಸೀರೆ ಹೇಗೆ ಉಡಬೇಕು ಅನ್ನೋದು ಅವರವರ ಅಭಿರುಚಿಗೆ ಬಿಟ್ಟದ್ದು.

 

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

11034
Gayathri Gowda

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.