News Kannada
Thursday, September 29 2022

ಅಂಕಣ

ಲಿಪ್‌ಸ್ಟಿಕ್ ಹಚ್ಚುವ ಮೊದಲು ಈ ವಿಚಾರವನ್ನು ತಿಳಿದುಕೊಳ್ಳಿ - 1 min read

Photo Credit :

ಹೆಣ್ಣು ತನ್ನ ಅಂದ ಹೆಚ್ಚಿಸಿಕೊಳ್ಳಲು ತುಟಿಗೆ ಬಣ್ಣ ಬಣ್ಣದ ಲಿಪ್ಸ್ಟಿಕ್ ಬಳಸುತ್ತಾಳೆ. ತುಟಿಗಳನ್ನು ಮತ್ತಷ್ಟು ಸುಂದರವಾಗಿಸಲು ಇದು ಸಹಕಾರಿ. ಪ್ರಪಂಚದಾದ್ಯಂತ ಜನರು ಸಾಮಾನ್ಯವಾಗಿ ಬಳಸುವ ಮೇಕಪ್ ಉತ್ಪನ್ನಗಳಲ್ಲಿ ಲಿಪ್‌ಸ್ಟಿಕ್ ಕೂಡ ಒಂದು.

ಹೆಣ್ಣ್ಮಕಳು ಈ ಸೌಂದರ್ಯ ವರ್ಧಕ ಉತ್ಪನ್ನಗಳನ್ನು ಬಳಸಿಕೊಂಡು ನಮ್ಮ ಮುಖದ ಸೌಂದರ್ಯವನ್ನು ಹೆಚ್ಚು ಆಕರ್ಷಕವಾಗಿ ಕಾಣುವಂತೆ ಮಾಡಬಹುದು. ಆದರೆ ಅದನ್ನು ಸರಿಯಾಗಿ ಹಚ್ಚದೆ ಇದ್ದರೆ ಅದು ನಮ್ಮ ಮುಖದ ಸೌಂದರ್ಯವನ್ನು ಇನ್ನಷ್ಟು ಕುಗ್ಗಿಸುವುದು. ಅದರಲ್ಲೂ ನಾವು ಬಳಸುವ ತುಟಿಯ ಬಣ್ಣದ ಆಯ್ಕೆ ಹಾಗೂ ಅದನ್ನು ಹಚ್ಚಿಕೊಳ್ಳುವ ವಿಧಾನ ಸೂಕ್ತ ರೀತಿಯಲ್ಲಿ ಇರಬೇಕು. ಇಲ್ಲವಾದರೆ ಮುಜುಗರ ಹುಟ್ಟಿಸುವಂತೆ ಮಾಡುವುದು.

ಲಿಪ್ಸ್ಟಿಕ್ ಹಚ್ಚುವ ಮೊದಲು ತುಟಿಯನ್ನು ತೇವಗೊಳಿಸಬೇಕು. ತುಟಿ ತೇವಾಂಶದಿಂದ ನಯವಾಗಿ ಇಲ್ಲದೆ ಹೋದರೆ ಲಿಪ್‌ಸ್ಟಿಕ್ ಸುಂದರವಾಗಿ ಕುಳಿತುಕೊಳ್ಳದು. ಹಾಗಾಗಿ ಮೊದಲು ಮಾಯ್ಯ್ರೈಸ್ ಅನ್ನು ಹಚ್ಚಿ ನಂತರ ಲಿಪ್‌ಸ್ಟಿಕ್ ಹಚ್ಚಬೇಕು. ಅದೇ ಲಿಕ್ವಿಡ್ ಲಿಪ್‌ಸ್ಟಿಕ್‌ಗೆ ಹಾಗೆ ಮಾಡುವ ಅಗತ್ಯ ಇರುವುದಿಲ್ಲ. ಲಿಕ್ವಿಡ್ ಲಿಪ್‌ಸ್ಟಿಕ್ ತುಟಿಗೆ ಸುಂದರವಾಗಿ ಹಿಡಿದುಕೊಂಡು ಸುಂದರವಾಗಿ ಕಾಣುವಂತೆ ಮಾಡುವುದು, ತುಟಿಯು ತುಂಬಾ ಒಡೆದಿದೆ ಅಥವಾ ಒರಟಾಗಿದೆ ಎಂದಾಗ ಮಾತ್ರ ಮೊದಲು ತೆಳುವಾಗಿ ಮಾಯ್ದುರೈಸರ್ ಹಚ್ಚಿ ನಂತರ ಲಿಪ್‌ಸ್ಟಿಕ್ ಬಳಸಬೇಕು.

ತುಟಿಯ ಆಕಾರ ಸುಂದರವಾಗಿ ಕಾಣಲು ಮೊದಲು ಲಿಪ್ ಲೈನರ್ ಬಳಸಬೇಕು. ನಾವು ಯಾವ ಬಣ್ಣದ ಲಿಪ್‌ಸ್ಟಿಕ್ ಬಳಸುತ್ತೇವೆ? ಆ ಬಣ್ಣದಲ್ಲಿಯೇ ಸ್ವಲ್ಪ ತೆಳುವಾದ ಲಿಪ್ ಲೈನರ್ ಆಯ್ಕೆ ಮಾಡಬೇಕು. ನಂತರ ಅದರಿಂದ ಸ್ವಲ್ಪ ಶೇಡ್ ನೀಡುವ ಮೂಲಕ ತುಟಿಯ ಆಕಾರವನ್ನು ಸಿದ್ಧಪಡಿಸಿಕೊಂಡು ಲಿಪ್ಸ್ಟಿಕ್ ಹಚ್ಚಬೇಕು. ನಂತರ ಪುನಃ ಲಿಪ್ ಲೈನರ್ ಮೂಲಕ ತಿದ್ದಿಕೊಳ್ಳಬೇಕು. ವಿಶೇಷವಾಗಿ ತುಟಿಯ ಮೂಲೆಗಳನ್ನು ಸರಿಯಾಗಿ ತಿದ್ದಬೇಕು. ಆಗ ಲಿಕ್ವಿಡ್ ಲಿಪ್‌ಸ್ಟಿಕ್ ದೀರ್ಘ ಸಮಯಗಳ ಕಾಲ ಸುಂದರವಾಗಿ ಕಾಣುವುದು.

ಬಣ್ಣ ಹಚ್ಚಿರುವುದು ಹೆಚ್ಚಾಗಿದೆ ಎನಿಸಿದರೆ ಅದರ ಮೇಲೆ ಟಿಶ್ಯುವನ್ನು ಇಟ್ಟು ಸ್ವಲ್ಪ ಒತ್ತಿರಿ. ಆಗ ಹೆಚ್ಚಾದ ಬಣ್ಣಗಳು ಆ ಪೇಪರ್‌ಗೆ ಹೀರಿಕೊಳ್ಳುವುದು. ಉಳಿದ ಲಿಪ್‌ಸ್ಟಿಕ್ ಹಾಗೆಯೇ ತುಟಿಯ ಮೇಲೆ ಉಳಿದಿರುತ್ತದೆ. ಬಟ್ಟೆಯಿಂದ ಉಜ್ಜುವುದು ಅಥವಾ ನೀರಿನಿಂದ ತೊಳೆಯುವುದು ಮಾಡಬಾರದು.

ಲಿಕ್ವಿಡ್ ಲಿಪ್‌ಸ್ಟಿಕ್ ಹೆಚ್ಚು ಕೆನೆ ವರ್ಣ ದ್ರವ್ಯವನ್ನು ಹೊಂದಿರುತ್ತದೆ. ಹಾಗಾಗಿ ಇದನ್ನು ಅತಿಯಾಗಿ ಹಚ್ಚಬೇಕೆಂದು ಇರುವುದಿಲ್ಲ. ಕೇವಲ ಒಂದು ಬಾರಿ ಲೇಪನ ಮಾಡಿದರೆ ಸಾಕು. ಎರಡು ಮೂರು ಬಾರಿ ತಿದ್ದಿ, ಲೇಪಿಸುವ ಅಗತ್ಯ ಇರುವುದಿಲ್ಲ. ಒಂದು ಲೇಪನ ಹಚ್ಚಿ, ಸ ಸಮಯ ಆರಲು ಬಿಡಬೇಕು.

See also  ಮಾಸಿಕ ಋತುಸ್ರಾವ ಹೆಣ್ಣುಮಗಳ ಆರೋಗ್ಯದ ಕುರಿತು ಸಾಕಷ್ಟು ವಿಚಾರಗಳನ್ನು ಬಿಚ್ಚಿಡುತ್ತದೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

11034
Gayathri Gowda

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು