ಹಬ್ಬಗಳ ಅಬ್ಬರ ಶುರುವಾಯಿತ್ತು. ಬಿಡುವಿಲ್ಲದೆ ತಯಾರಿ, ಮಾಡಿದಷ್ಟು ಮುಗಿಯದ ಕೆಲಸ. ಮನೆ ಅಲಂಕಾರ, ಅಡುಗೆ, ಮನೆಯ ಪೂರಾ ಸಂಭ್ರಮದ ವಾತಾವರಣ. ಪ್ರತಿಯೊಂದು ಹಬ್ಬವು ವಿಶೇಷತೆಯನ್ನು ಹೊಂದಿದೆ. ಆಚರಣೆಯಲ್ಲಿ ಮಾತ್ರ ಅಲ್ಲ ಬಗೆಬಗೆಯ ಆಹಾರ ಊಟ ತಿಂಡಿ ತಿನಿಸುಗಳಿಗೆ ವಿಶೇಷತೆಯನ್ನು ಹೊಂದಿದೆ.
ಅದರಲ್ಲೂ ನಾಗರಪಂಚಮಿಯ ಅರಶಿನ ಎಲೆಯ ಗಟ್ಟಿ ಬಹಳನೇ ರುಚಿಕರ ಮತ್ತು ಪರಿಮಳಯುಕ್ತ. ನಾಗರ ಪಂಚಮಿಯ ಪ್ರಯುಕ್ತ ತುಳುನಾಡಿನ ಜನರ ಮನೆಮನೆಗಳಲ್ಲಿ ಸರ್ವೇ ಸಾಮಾನ್ಯವಾಗಿ ತಯಾರಾಗುವ ವಿಶಿಷ್ಟ ರೀತಿಯ ತಿಂಡಿಯಾಗಿದೆ.
ಅರಶಿನ ಎಲೆಗೆ ರುಬ್ಬಿದ ಅಕ್ಕಿಯನ್ನು ಎಲೆಯ ಉದ್ದಕ್ಕೂ ಹಚ್ಚಿ ಅದರ ಮೇಲೆ ಬೆಲ್ಲ, ತೆಂಗಿನ ಕಾಯಿ ತುರಿ, ಎಲಕ್ಕಿಯನ್ನು ಜೋತೆಗೂಡಿಸಿ ಮಧ್ಯ ಭಾಗಕ್ಕೆ ಹರಡುವಂತೆ ಹಚ್ಚಿ ಅದನ್ನು ಮಡಚಿ ಪಾತ್ರೆಯಲ್ಲಿ ಇಟ್ಟು ನೀರಿನ ಹಬೆಯಲ್ಲಿ ಬೇಯಿಸುತ್ತಾರೆ.
ಅರಶಿನ ಎಲೆಯಲ್ಲಿ ತಯಾರಾಗುವ ವಿಶಿಷ್ಟವಾದ ಸಿಹಿ ಖಾದ್ಯವನ್ನು ಮಲೆನಾಡು ಮತ್ತು ಕರಾವಾಳಿ ಪ್ರದೇಶಗಳಲ್ಲಿ ಪಾತೋಳಿ ಅಥಾವ ಅರಶಿನ ಎಲೆಕಡಬು ಹೆಸರಿನಿಂದ ಗುರುತಿಸಲ್ಪಡುತ್ತದೆ. ಈ ತಿಂಡಿಯನ್ನು ಜನರು ಹೆಚ್ಚಾಗಿ ಹಬ್ಬಹರಿದಿನಗಳಲ್ಲಿ ಮಾಡುತ್ತಾರೆ. ತುಂಬಾನೇ ರುಚಿ ಹಾಗೂ ಪರಿಮಳದಿಂದ ಕೂಡಿದ ಈ ವಿಶಿಷ್ಟ ರೀತಿಯ ತಿಂಡಿಯನ್ನು ಇಷ್ಟ ಪಡದ ಜನರಿಲ್ಲ.
ಈ ಬಗೆಯ ತಿಂಡಿಯಲ್ಲಿ ಒಂದಿಷ್ಟು ಆರೋಗ್ಯ ವರ್ಧಕ ಸತ್ಯಾಂಶಗಳು ಅಡಗಿವೆ. ಅರಶಿನ ಎಲೆಯು ಕೂಡ ಆರೋಗ್ಯವರ್ಧಕ ಗುಣಗಳನ್ನು ಹೊಂದಿರುವುದರಿಂದ ಇದರ ಎಲೆಯಲ್ಲಿ ತಯಾರಿಸಲ್ಪಡುವ ಆಹಾರದಿಂದಲೂ ಸೇವಿಸುವವರಿಗೆ ಆರೋಗ್ಯ ವಿಷಯದಲ್ಲಿ ಲಾಭವಾಗಲಿದೆ.
ಅರಶಿನ ಎಲೆಯಲ್ಲಿ ಜೀರ್ಣಕ್ರಿಯೆನ್ನು ಉತ್ತಮಗೋಳಿಸುವ ಶಕ್ತಿ ಅಡಕವಾಗಿದೆ. ಸಂಧಿವಾತದ ನೊವನ್ನು ಕಡಿಮೆ ಮಾಡುವಲ್ಲಿ ಸಾಕಷ್ಟು ಪರಿಣಾಮಕಾರಿ. ಅರಶಿನ ಎಲೆಯಲ್ಲಿರುವ ಕರ್ಕ್ಯೂಮಿನ್ ಅಂಶ ಇದು ಆಂಟಿಆಕ್ಸಿಡೆಂಟ್ ಕೂಡ ಆಗಿದೆ.
ಜೀರ್ಣಕ್ರಿಯೆಯ ಜತೆಗೆ ಹೊಟ್ಟೆ ಉಬ್ಬರವನ್ನು ಕೂಡ ಉಪಶಮನ ಮಾಡುತ್ತದೆ. ಹೊಟ್ಟೆಗೆ ಬಹಳ ಉತ್ತಮವಾಗಿರುವ ಅರಿಶಿನ ಎಲೆಯ ಗುಣಗಳು , ಗ್ಯಾಸ್ಟಿಕ್, ಹೊಟ್ಟೆಉರಿ, ಎದೆಉರಿಯನ್ನು ಕಡಿಮೆ ಮಾಡುತ್ತದೆ. ಗ್ಯಾಸ್ ಉತ್ಪತ್ತಿಯಾಗುವುದನ್ನು ತಡೆಗಟ್ಟುತ್ತದೆ. ಅರಿಶಿನ ಕ್ಯಾನ್ಸರನ್ನು ಪ್ರಿವೆಂಟ್ ಮಾಡುತ್ತದೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯ.
ಅರಶಿನ ಎಲೆಯಿಂದ ಮಾಡಿರುವ ಖಾದ್ಯವನ್ನು ತಿನ್ನುವುದರಿಂದ ಲಿವರ್ ಚೆನ್ನಾಗಿ ಕಾರ್ಯನಿರ್ವಹಿಸಲು ಉತ್ತೇಜಿಸುತ್ತದೆ. ಇದರಲ್ಲಿ ಇನ್ಸುಲಿನ್ ಶಕ್ತಿ ಇರುವುದರಿಂದ ಡಯಾಬಿಟಿಸ್ ಕಾಯಲೆಗೂ ಪರಿಣಾಮಕಾರಿ.
ಅರಶಿನದ ಎಲೆಯಲ್ಲಿ ಕರ್ಕ್ಯೂಮಿನ್ ಅಂಶವಿರುವುದರಿಂದ ಯಾರಿಗೆ ಹೊಟ್ಟೆ ಹಸಿವು ಇರಲ್ಲ, ತಿಂದ ಅಣ್ಣ ಜೀರ್ಣ ಆಗುತ್ತಿಲ್ಲ, ರುಚಿ ಇಲ್ಲದಿರುವವರಿಗೆ ಈ ಎಲೆಯಿಂದ ಮಾಡಿರುವ ಖಾದ್ಯವನ್ನು ನೀಡಬಹುದು. ದೀರ್ಘ ಕಾಲದ ರೋಗಗಳು ಅಸ್ತಮಾ, ಮಂಡಿನೋವು, ಕೈ ಕಾಲು ಗಂಟುಗಳ ನೋವುಗಳು ಅಥಾವ ಶೀತ ನೆಗಡಿ ಕೆಮ್ಮು ಅಲರ್ಜಿಗಳಿಗೆ ಇದರಿಂದ ಮಾಡಿರುವ ಖಾದ್ಯಗಳು ರಾಮಭಾಣ.
ಪುರಾತನ ಕಾಲದಿಂದಲ್ಲೂ ಆರ್ಯುವೇದಲ್ಲಿ ಅರಶಿನವನ್ನು ಔಷಧಿಯಾಗಿ ಬಳಸಿಕೊಳ್ಳಲಾಗುತ್ತಿತ್ತು. ಎಲ್ಲರಿಗೂ ತಿಳಿದಿರುವ ಹಾಗೆ ಅರಶಿನವನ್ನು ಹೆಚ್ಚಾಗಿ ಗಾಯಗಳಿಗೆ ಹಚ್ಚುತ್ತಾರೆ. ಇಂದಿಗೂ ನಮ್ಮ ನಿತ್ಯದ ಜೀವನದಲ್ಲಿಯೂ ಅತೀ ಉಪಯುಕ್ತವಾಗಿ ಬಳಸುವುದನ್ನು ಕಾಣಬಹುದು. ಅರಶಿನ ಎಲೆಯಿಂದ ತಯಾರಾಗೂವ ಖಾದ್ಯವನ್ನು ಹೆಚ್ಚು ತಿನ್ನುವುದರಿಂದ ನಮ್ಮ ಆರೋಗ್ಯವನ್ನು ಉತ್ತಮಗೊಳಿಸುತ್ತದೆ.