ಸುಂದರವಾಗಿ ಕಾಣಬೇಕು ಎಂದು ಸಾಮಾನ್ಯವಾಗಿ ಎಲ್ಲರು ಇಚ್ಛೆ ಪಡುತ್ತಾರೆ. ಅದಕ್ಕಾಗಿ ಮಾರುಕಟ್ಟೆಯಲ್ಲಿ ಸಿಗುವ ಬಗೆ ಬಗೆಯ ಸ್ಕಿನ್ ಕ್ರೀಂಗಳನ್ನು ಹಚ್ಚಿಕೊಳ್ಳುತ್ತಾರೆ. ಇದು ಕೆಲವೊಮ್ಮೆ ಉತ್ತಮ ರಿಸಲ್ಟ್ ಕೊಡಬಹುದು. ಇನ್ನೂ ಕೆಲವೊಮ್ಮೆ ಅಡ್ಡ ಪರಿಣಾಮಗಳನ್ನು ಬೀರಬಹುದು. ಆದ್ದರಿಂದ ಇಂತಹ ಸಮಸ್ಯೆಗಳಿಂದ ದೂರ ಉಳಿಯಲು ಇಲ್ಲಿದೆ ಕೆಲವೊಂದು ಬ್ಯೂಟಿ ಟಿಪ್ಸ್. ಬಾಳೆಹಣ್ಣು ಆರೋಗ್ಯಕ್ಕೆ ಹೇಗೆ ಉಪಕಾರಿಯೋ ಅದೇ ರೀತಿ ಸೌಂದರ್ಯ ವೃದ್ಧಿಗೂ ಸಹಕಾರಿ. ಬಾಳೆಹಣ್ಣಿನ ಫೇಸ್ ಪ್ಯಾಕ್ ಮುಖಕ್ಕೆ ಹಚ್ಚೂದರಿಂದ ಮುಖದ ಹಲವಾರು ಸಮಸ್ಯೆಗಳು ದೂರವಾಗುತ್ತದೆ ಜೊತೆಗೆ ಮುಖದ ಕಾಂತಿಯೂ ಹೆಚ್ಚುತ್ತದೆ.
ಬಾಳೆಹಣ್ಣಿನ ಫೇಸ್ ಪ್ಯಾಕ್ ತಯಾರಿಸಲು ಹಲವಾರು ವಿಧಾನಗಳಿವೆ ಅವುಗಳಲ್ಲಿ ಮೊದಲನೆಯದು, ಬಾಳೆಹಣ್ಣನ್ನು ಚೆನ್ನಾಗಿ ಕಿವುಚಿ, ದಪ್ಪಗೆ ಪೇಸ್ಟ್ ರೀತಿ ಮಾಡಿಕೊಂಡು ಅದಕ್ಕೆ ಅರ್ಧ ಚಮಚ ಜೇನುತುಪ್ಪ ಮತ್ತು ಒಂದು ಚಮಚ ಗಟ್ಟಿ ಮೊಸರನ್ನು ಮಿಕ್ಸ್ ಮುಖದ ಮೇಲೆ ಮತ್ತು ಕುತ್ತಿಗೆಯ ಭಾಗಕ್ಕೆ ಹಚ್ಚಿ ನಂತರ ಸ್ವಲ್ಪ ಸಮಯ ಒಣಗಲು ಬಿಡಿ ನಂತರ ಚೆನ್ನಾಗಿ ಸ್ವಚ್ಛ ಮಾಡಿ ಕೊಳ್ಳಿ.
ಬಾಳೆಹಣ್ಣು ಮತ್ತು ಪಪ್ಪಾಯಿ ಹಣ್ಣಿನ ಫೇಸ್ ಪ್ಯಾಕ್ ಮಾಡಲು, ಮಾಗಿದ ಬಾಳೆಹಣ್ಣು ಮತ್ತು ಪಪ್ಪಾಯಿ ಎರಡನ್ನೂ ಚೆನ್ನಾಗಿ ಮ್ಯಾಶ್ ಮಾಡಿ. ಇದಕ್ಕೆ ಸ್ವಲ್ಪ ಸೌತೆಕಾಯಿ ರಸ ಸೇರಿಸಿ ಮಿಶ್ರಣ ಮಾಡಿ. ಅದನ್ನು ನಿಮ್ಮ ಮುಖ, ಕುತ್ತಿಗೆಗೆ ಹಚ್ಚಿ ಸ್ವಲ್ಪ ಸಮಯದ ನಂತರ ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ. ಹೀಗೆ ಮಾಡುವುದರಿಂದ ಮುಖದ ಕಪ್ಪು ಕಲೆಗಳನ್ನು ಕಡಿಮೆಯಾಗುತ್ತದೆ.
ಮುಖದ ಕಾಂತಿ ಹೆಚ್ಚಿಸಲು ಕಡಲೆ ಹಿಟ್ಟು ಮತ್ತು ಬಾಳೆಹಣ್ಣಿನ ಫೇಸ್ ಪ್ಯಾಕ್ ಟ್ರೈ ಮಾಡಿ, ಇದಕ್ಕಾಗಿ ಬಾಳೆಹಣ್ಣನ್ನು ಚೆನ್ನಾಗಿರುಬ್ಬಿಕೊಂಡು ಅದರಲ್ಲಿ ಒಂದು ಚಮಚ ಕಡಲೆ ಹಿಟ್ಟು ಮತ್ತು ಅರ್ಧ ಚಮಚ ನಿಂಬೆ ರಸ ಬೆರೆಸಿ. ಮುಖಕ್ಕೆ ಹಚ್ಚಿ.