News Kannada
Saturday, March 25 2023

ಲೇಖನ

ಚಾಮರಾಜಕ್ಷೇತ್ರ: ಬದಲಾವಣೆಯ ನಿರೀಕ್ಷೆಯಲ್ಲಿ ಮತದಾರರು…

Mysuru: Children cannot be used for election campaigns
Photo Credit : By Author

ಮೈಸೂರಿನ ಚಾಮರಾಜ ವಿಧಾನಸಭಾ ಕ್ಷೇತ್ರವು ರಾಷ್ಟ್ರ ಹಾಗೂ ರಾಜ್ಯದ ರಾಜಕಾರಣದಲ್ಲಿ ಸಂಚಲನ ಮೂಡಿಸುವ ಕ್ಷೇತ್ರವಾಗಿದೆ ಎಂದರೇ ತಪ್ಪಗಲಾರದು. ಮೈಸೂರು ಲೋಕಸಭಾ ಕ್ಷೇತ್ರದಲ್ಲಿಯೂ ಕೂಡ ಪ್ರಮುಖ ಭಾಗವಾಗಿರುವ ಈ ಕ್ಷೇತ್ರದಲ್ಲಿನ ಮತದಾರರು ಈ ಬಾರಿಯ ಚುನಾವಣೆಯಲ್ಲಿ ಉತ್ತಮ ಅಭ್ಯರ್ಥಿಯ ನಿರೀಕ್ಷೆಯಲ್ಲಿದ್ದಾರೆ.

ಚಾಮರಾಜ (ಜನರಲ್) ಕ್ಷೇತ್ರದಲ್ಲಿ ಬಹುತೇಕ ಇರುವರು ವಿದ್ಯಾವಂತರಾಗಿದ್ದು, ರಾಜ್ಯ ರಾಜಕಾರಣದ ಬಗ್ಗೆ ತಿಳುವಳಿಕೆ ಹೊಂದಿದ್ದಾರೆ. ಇನ್ನಾ ಈ ಕ್ಷೇತ್ರದಲ್ಲಿ ಸಾಮಾನ್ಯ, ಅದಿವಾಸಿ ಭಾರತೀಯರು ಮತ್ತು ಸೇವಾ ಮತದಾರರು ಸೇರಿ ಸುಮಾರು ೨,೨೮,೫೦೮ ಮತದಾರರಿದ್ದಾರೆ ಎಂಬ ಅಂಕಿ ಅಂಶದಲ್ಲಿದೆ. ಸಾಮಾನ್ಯ ಮತದಾರರ ಪೈಕಿ ೧,೧೪,೬೩೯ ಪುರುಷರು, ೧,೧೩,೮೨೦ ಮಹಿಳೆಯರು ಮತ್ತು ೨೪ ಇತರಿದ್ದಾರೆ. ಕ್ಷೇತ್ರದಲ್ಲಿ ಮತದಾರರ ಲಿಂಗಾನುಪಾತ ೯೯.೨೭% ಮತ್ತು ಅಂದಾಜು ಸಾಕ್ಷರತೆಯ ಪ್ರಮಾಣ ೮೮% ಇದೆ.

ಎಂಎಲ್ಎಗೆ ಅಗ್ನಿ ಪರೀಕ್ಷೆ:
ಚಾಮರಾಜ ಕ್ಷೇತ್ರದಲ್ಲಿನ ಹಾಲಿ ಶಾಸಕ ಎಲ್.ನಾಗೇಂದ್ರ ತಮ್ಮ ಆಡಳಿತಾವಧಿಯಲ್ಲಿ ಯಾವುದೇ ಲೋಪದೋಷ ಬರದಂತೆ ನಡೆದುಕೊಂಡಿದ್ದರು. ಅಲ್ಲದೇ ತಮ್ಮ ಕ್ಷೇತ್ರದಲ್ಲಿ ಜನಪರ ಕೆಲಸ ಮಾಡುವ ಮೂಲಕ ಬಿಜೆಪಿ ಸರ್ಕಾರದ ಕೊಡುಗೆಗಳನ್ನು ನೀಡುವಲ್ಲಿ ಯಶಸ್ಸು ಕಂಡಿದ್ದರು. ಆದರೆ ಇದೀಗ ಅವರಿಗೆ ಅಗ್ನಿಪರೀಕ್ಷೆಯೊಂದು ಎದುರಾಗಿದೆ. ೨೦೨೩ಕ್ಕೆ ನೆಡೆಯುವ ವಿಧಾನಸಭಾ ಚುನಾವಣೆಗೆ ಸಂಖ್ಯಾಬಲದ ಸೂತ್ರವನ್ನು ಇಟ್ಟಿಕೊಂಡು ಮೈಸೂರು ನಿವಾಸಿಯಾದ ಪ್ರೊ. ಅಭಿಲಾಷ್ ಚಂದ್ರ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಅಖಾಡಕ್ಕೆ ಇಳಿಯಲು ಸಜ್ಜಾಗಿರುವುದೇ ನಾಗೇಂದ್ರ ಅವರ ನಿದ್ದೆಗೆಡಿಸಿದೆ.

ರಾಜಕೀಯ ಪಕ್ಷಗಳ ಕರ್ಮಭೂಮಿ:
ಈ ಕ್ಷೇತ್ರಕ್ಕೆ ವಿಶೇಷತೆ ಎಂದರೇ ಇದು ರಾಜಕೀಯ ಪಕ್ಷಗಳ ಕರ್ಮಭೂಮಿಯಾಗಿದೆ. ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ರಾಜಕೀಯ ಪಕ್ಷಕ್ಕೆ ಅತಿಹೆಚ್ಚು ಬಾರಿ ಶಕ್ತಿ ನೀಡಿದೆ. ಇಲ್ಲಿಯವರೆಗೆ ನಡೆದ ೧೨ ಚುನಾವಣೆಗಳ ಪೈಕಿ ಐದು ಬಾರಿ ಬಿಜೆಪಿ, ಮೂರು ಬಾರಿ ಕಾಂಗ್ರೆಸ್ ಹಾಗೂ ಮೂರು ಬಾರಿ ಜನತಾ ಪಕ್ಷ ಜಯಭೇರಿಯಾಗಿದೆ.

೨೦೦೮ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ತನ್ನ ಸ್ಥಾನವನ್ನು ೯,೩೯೯ ಮತಗಳ (೮.೯೧%) ಅಂತರದಿಂದ ಗೆದ್ದುಕೊಂಡಿತು. ಕಾಂಗ್ರೆಸ್ ಪಕ್ಷ ೨೦೧೩ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ೧೨,೯೧೫ ಮತಗಳ (೧೧.೭೫%) ಅಂತರದಿಂದ ಈ ಸ್ಥಾನವನ್ನು ಗೆದ್ದುಕೊಂಡಿತು, ಒಟ್ಟು ಪೋಲಾದ ಮತಗಳಲ್ಲಿ ೩೮.೧೪%ಗಳಿಸಿತು. ೨೦೧೩ ರಲ್ಲಿ ಕ್ಷೇತ್ರವು ೫೫.೪೬%ರಷ್ಟು ಮತದಾನವಾಗಿತ್ತು ಮತ್ತು ೪೧.೯೪% ಮತಗಳನ್ನು ದಾಖಲಿಸಿತು. ೨೦೧೮ರ ಚುನಾವಣೆಯಲ್ಲಿ ಈ ಕ್ಷೇತ್ರವು ೫೯.೧೮% ರಷ್ಟು ಮತದಾನವಾಗಿದೆ. ಈ ಬಾರಿ ಸೋಲಿಸಲೇಬೇಕೆಂದು ಕಾಂಗ್ರೆಸ್, ಜೆಡಿಎಸ್, ಸ್ವತಂತ್ರ ಅಭ್ಯರ್ಥಿಗಳು ಪಣತೊಟ್ಟಿವೆ. ಅದರಂತೆ, ಉಭಯ ಪಕ್ಷಗಳೂ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆ ಕ್ಷೇತ್ರದಲ್ಲಿ ಜಿದ್ದಾಜಿದ್ದಿಯ ಪೈಪೋಟಿ ಎದುರಾಗಲಿದೆ.

ಅಭಿಲಾಷ್ ಚಂದ್ರ ಮತ್ತು ಸಂಖ್ಯಾಬಲ ಸೂತ್ರ:
ಅಭಿಲಾಷ್ ಚಂದ್ರ ಎಂಬ ಹೆಸರು ಚಾಮರಾಜ ಕ್ಷೇತ್ರದಲ್ಲಿ ಸದ್ಯ ಎಲ್ಲರ ಬಾಯಲ್ಲಿ ಬರುತ್ತಿರುವ ಹೆಸರು. ಇವರು ಮೂಲತಃ ಮೈಸೂರಿನ ನಿವಾಸಿ ಹಾಗೂ ಪಿ.ಎಚ್.ಡಿ ಆಕಾಂಕ್ಷಿ. ಪ್ರಾಥಮಿಕದಿಂದ ಪದವಿ ಶಿಕ್ಷಣದವರೆಗೂ ಮೈಸೂರಿನಲ್ಲಿ ಮುಗಿಸಿ ಪ್ರಸ್ತುತ ವಿದ್ಯಾಶ್ರಮ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾಣಿಜ್ಯ ಮತ್ತು ನಿರ್ವಹಣೆ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ೨೦೧೪-೨೦೨೦ರಲ್ಲಿ ಸತತ ಆರು “ಅತ್ಯುತ್ತಮ ಉಪನ್ಯಾಸಕ ಪ್ರಶಸ್ತಿ”ಗೆ ಭಾಜನರಾಗಿದ್ದಾರೆ, ೨೦೧೪-೨೦೧೮ರ ಸಾಂಸ್ಕೃತಿಕ ಸಮಿತಿಯ ಸದಸ್ಯರು, ಕಾಲೇಜಿನ ಆಂಟಿ ರ್ಯಾಗಿಂಗ್ ಸಮಿತಿಯ ಸದಸ್ಯರು ಹಾಗೂ ಯಶಸ್ವಿನಿ ಭಾರತ್ ಗ್ಯಾಸ್ ವಿತರಕರಿಗೆ ವಿಶೇಷ ಉಲ್ಲೇಖದೊಂದಿಗೆ ಭಾರತ್ ಗ್ಯಾಸ್ ಕಡೆಗೆ ಗ್ರಾಹಕರ ತೃಪ್ತಿಕುರಿತು ಪ್ರಬಂಧವನ್ನು ಪ್ರಸ್ತುತಪಡಿಸಿದ್ದಾರೆ. ಇವೆಲ್ಲದರ ಜೊತೆಗೆ ಆರು ಅಂತಾರಾಷ್ಟ್ರೀಯ ಪ್ರಕಟಣೆಗಳು ಹಾಗೂ ಆರು ಪುಸ್ತಕಗಳನ್ನು ಪ್ರಕಟಿಸಿದ್ದಾರೆ.

See also  ಮೈಸೂರು: ಸಿದ್ದರಾಮಯ್ಯ ತಮ್ಮ ಹೆಸರನ್ನು ಬದಲಾಯಿಸಬೇಕು- ಸಚಿವ ಅಶ್ವಥ್ ನಾರಾಯಣ್ 

ಇವರು ಎಂದೆಂದೂ ರಚಿಸದ ಸಂಖ್ಯಾಬಲ ಸೂತ್ರವನ್ನು ರಚಿಸಿದ್ದಾರೆ. ಅಲ್ಲದೇ ಮುಂಬರುವ ೨೦೨೩ರಲ್ಲಿ ಬರುವ ಚುನಾವಣೆಯಲ್ಲಿ ಜನ ರ‍್ಶಿವಾದ ಮಾಡಿ ನಾನು ಜಯಭೇರಿಯಾದರೆ. ವಾಯುಗುಣಮಟ್ಟ ಸೂಚ್ಯಂಕದ ಪ್ರಕಾರ ಕರ್ನಾಟಕದಲ್ಲಿ ಸ್ವಚ್ಚನಗರಿ ಮೈಸೂರು ಜಿಲ್ಲೆ ಏಳನೇ ಸ್ಥಾನಪಡೆದಿದೆ. ಅದಕ್ಕೆ ಕಾರಣ ನಮ್ಮ ಪೂರ್ವಜರು ನೆಟ್ಟ ಗಿಡ-ಮರಗಳಿಂದ, ಅದು ಈಗನ ಶಿಸುತ್ತಿರುವ ಕಾರಣ ಸರಿಸುಮಾರು ೨೩,೪೫,೬೭೮ ಗಿಡಗಳನ್ನು ನಗರಾದ್ಯಂತ ನೆಟ್ಟು ಪರಿಸರವನ್ನು ರಕ್ಷಿಸುವುದು. ೨,೩೪,೫೬೭ ಕ್ಷೇತ್ರದ ವಯಸ್ಕರಿಗೆ, ಗರ್ಭಿಣಿಯರಿಗೆ ಹಾಗೂ ಶಿಶುಗಳಿಗೆ ಉಚಿತ ಆರೋಗ್ಯ ತಪಾಸಣೆ ನೀಡುವುದು. ೨೩,೪೫೬ ಆಟೋ ನಿಲ್ದಾಣಗಳು (ಅಲ್ಲಿ ಆಟೋಚಾಲಕರಿಗೆ ವಿಶ್ರಮಿಸಲು ಸಣ್ಣದಾದಕೋಣೆ, ಊಟ ಮಾಡಲು ಜಾಗ, ಪುಟ್ಟದಾದಮಳಿಗೆ) ಜೊತೆಗೆ ಚಾಲಕರಲ್ಲಿ ಅತಿಹೆಚ್ಚಾಗಿ ಕಾಣಿಸಿಕೊಳ್ಳುವ ಪೈಲ್ಸ್ ಕಾಯಿಲೆಯನ್ನು ನಿಯಂತ್ರಿಸಲು ಉಚಿತ ಆರೋಗ್ಯ ತಪಾಸಣೆಯ ಸೌಲಭ್ಯವಿರುತ್ತದೆ, ೨,೩೪೫ ಯುವ ಜನತೆಗೆ ಉದ್ಯೋಗ ಸೌಲಭ್ಯ, ಸಂಚಾರ ನಿಯಮಗಳ ಉಲ್ಲಂಘನೆಯನ್ನು, ಸರಗಳ್ಳತನ ಅಪರಾಧವನ್ನು ನಿಯಂತ್ರಿಸಲು ಚಾಮರಾಜಕ್ಷೇತ್ರದ ೨೩೪ ಟ್ರಾಫಿಕ್ ಸಿಗ್ನಲ್ ವಲಯದಲ್ಲಿ ಸಿಸಿಟಿವಿ ಅಳವಡಿಸಲಾಗುತ್ತದೆ ಮತ್ತು ೨೪*೭ ಸಕ್ರಿಯವಾಗಿ ಕೆಲಸ ಮಾಡುತ್ತಿರುತ್ತದೆ.
ಹಾಗೆಯೇ ಕ್ಷೇತ್ರದ ೨೩ ಮಹಿಳೆಯರಿಗೆ ಅವರು ಇಚ್ಚಿಸುವನುರಿತ ಕೆಲಸಕ್ಕೆ ಸರಿಯಾದ ತರಬೇತಿ ನೀಡಿ ಪ್ರತಿ ತಿಂಗಳು ೧೫ರಿಂದ ೨೦ ಸಾವಿರ ರೂಪಾಯಿಗಳಿಸುವ ಉದ್ಯೋಗವನ್ನು ಒದಗಿಸಲಾಗುತ್ತದೆ. ಇವೆಲ್ಲವುದರ ಜೊತೆಗೆ ವಿದ್ಯಾರ್ಥಿಗಳಿಗೆ ಗ್ರಂಥಾಲಯ, ಎನ್.ಎಸ್.ಎಸ್, ಎನ್.ಸಿ.ಸಿ ಹೀಗೆ ಮುಂತಾದ ವಿಷಯದ ಕುರಿತು ಜಾಗೃತಿ ಹಾಗೂ ಅರಿವನ್ನು ಮೂಡಿಸಲಾಗುತ್ತದೆ. ಈ ಕೆಲಸ ಮೊದಲ ಹೆಜ್ಜೆಯಾಗಿರುತ್ತದೆ. ತಪ್ಪಿದ್ದಲ್ಲಿ ೨ ನಿಮಿಷದಲ್ಲಿ ರಾಜಿನಾಮೆ. ಆದರೆ ಈ ಹೆಜ್ಜೆ ಯಶಸ್ವಿಯಾಗಿ ಮುಂದುವರೆಯಲು ಇರುವ ಅವಕಾಶ ಕ್ಷೇತ್ರದ ಮತಭಾಂದವರ ಮತ ಎಂದು ಭರವಸೆ ಕೊಟ್ಟು ಮತ ಕೇಳಿದ್ದಾರೆ.

ಖಾತೆ ತೆರೆಯದ ಜೆಡಿಎಸ್ :
ಚಾಮರಾಜಕ್ಷೇತ್ರದಲ್ಲಿ ಖಾತೆ ತೆರೆಯಲು ಜೆಡಿಎಸ್ ಗೆ ಈವರೆಗೂ ಸಾಧ್ಯವಾಗಿಲ್ಲ. ದುರ್ಬಲ ಸಂಘಟನೆ, ನಾಯಕತ್ವ ಕೊರತೆಯಿಂದ ಕನಿಷ್ಠ ಪ್ರಬಲ ಸ್ಪರ್ಧೆ ನೀಡಲೂ ಆಗದೆ, ಹಿಂದಿನಿಂದಲೂ ಎರಡು ಅಥವಾ ಮೂರನೆ ಸ್ಥಾನವನ್ನೇ ಕಾಯ್ದುಕೊಂಡಿದೆ. ಅದಾಗ್ಯೂ ಜೆಡಿಎಸ್ ನಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ. ಪಕ್ಷದ ಮಾಜಿ ಮತ್ತು ಪ್ರಭಾವಿ ಕರ‍್ಪೊರೇರ‍್ಗಳಾದ ನಮ್ರತಾರಮೇಶ್, ಎಸ್.ಬಿ.ಎಂ. ಮಂಜು, ಭಾಗ್ಯಮಾದೇಶ್ ಆಕಾಂಕ್ಷಿಗಳಾಗಿದ್ದಾರೆ. ಅಚ್ಚರಿಯ ಸಂಗತಿ ಎಂದರೆ ೨೦೧೮ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಪ್ರೊ.ರಂಗಪ್ಪ ಅವರಿಗಿಂತ ಸ್ವಾತಂತ್ರ ಅಭ್ಯರ್ಥಿ ಕೇವಲ ೬೦೦೦ ಸಾವಿರ ಮತಗಳಿಂದ ಹಿನ್ನಡೆ ಪಡೆದಿದ್ದರು. ಆದರೆ ಈ ವರ್ಷ ಬರುವ ಚುಣಾವಣೆಯಲ್ಲಿ ಎಲ್ಲಾ ಪಕ್ಷಕ್ಕಿಂತ ಸ್ವಾತಂತ್ರ ಅಭ್ಯರ್ಥಿಗಳು ಮೇಲುಗೈ ಸಾಧಿಸುವಸಂಭವ ಹೆಚ್ಚಾಗಿ ಕಾಣಿಸುತ್ತಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

34905
ಮಣಿಕಂಠ ತ್ರಿಶಂಕರ್

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು