News Kannada
Sunday, April 02 2023

ಲೇಖನ

ವಿದ್ಯಾರ್ಥಿ ಜೀವನದಲ್ಲಿ ಕ್ರೀಡೆಯ ಪ್ರಾಮುಖ್ಯತೆ

Importance of sports in student life
Photo Credit : Freepik

ವಿದ್ಯಾರ್ಥಿ ಜೀವನವೆಂದರೆ ಆಟ, ಪಾಠ, ಮನೋರಂಜನೆ ನೆನಪಾಗುತ್ತದೆ. ವಿದ್ಯಾರ್ಥಿಗಳೆಂದರೆ ಕೇವಲ ಓದುತ್ತಾ ಇರುವವರು ಮಾತ್ರವಲ್ಲ, ದೈಹಿಕವಾಗಿ ಕೂಡ ದಂಡನೆ ಇರಬೇಕು. ಕ್ರೀಡೆಗಳಲ್ಲಿ ಭಾಗವಹಿಸಿದರೆ ಓದಲು ಏಕಾಗ್ರತೆ ಬರುವುದಿಲ್ಲ ಎನ್ನುವುದು ತಪ್ಪು ಪಾಠದ ಜೊತೆಗೆ ಆಟ ವಿದ್ದರೆ ಮಾತ್ರ ಮಾನಸಿಕ ಮತ್ತು ದೈಹಿಕ ಬೆಳವಣಿಗೆ ಸಾಧ್ಯ.

ಬುದ್ದಿಶಕ್ತಿಗೆ ಬಹಳ ಪ್ರಾಮುಖ್ಯತೆ ಇದೆ ಹಾಗಾಗಿ ಇದರ ಅಭಿವೃದ್ಧಿಗಾಗಿ ಒಂದು ಸುವ್ಯವಸ್ಥಿತ ಶಿಕ್ಷಣವೆಂಬ ವ್ಯವಸ್ಥೆ ನಮ್ಮಲ್ಲಿದೆ ಇದು ಕೇವಲ ಬೌದ್ಧಿಕ ಶಕ್ತಿ ಗಷ್ಟೇ ಸೀಮಿತವಾಗಿರದೆ ವಿವಿಧ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ಸರ್ವಾಂಗೀಣ ವ್ಯಕ್ತಿತ್ವದ ವಿಕಸನಕ್ಕೆ ದೈಹಿಕ ಶಿಕ್ಷಣ, ಸಂಗೀತ, ನೃತ್ಯ, ಚಿತ್ರಕಲೆ, ನಾಟಕ ಬಹಳ ಮುಖ್ಯವಾಗಿದೆ… ಇವು ಸಹ ಶಿಕ್ಷಣವೆಂಬ ವ್ಯವಸ್ಥೆಯಲ್ಲಿ ಕಲಿಕೆಯ ವಸ್ತುವಾಗಿದ್ದು, ಶಿಕ್ಷಣದ ಅವಿಭಾಜ್ಯ ಅಂಗವಾಗಿದೆ. ಜೀವವಿಜ್ಞಾನದ ಪರಿಕಲ್ಪನೆಯ ಪಂಚ ವಲಯಗಳನ್ನು ಅಭಿವೃದ್ಧಿ ಪಡಿಸುವಲ್ಲಿ ದೈಹಿಕ ಶಿಕ್ಷಣ ಪ್ರಮುಖ ಪಾತ್ರ ವಹಿಸುತ್ತದೆ. ಶಾಲೆ ಇದ್ದರೆ ಅಲ್ಲೊಂದು ಕ್ರೀಡಾಂಗಣ, ಕ್ರೀಡಾ ಶಿಕ್ಷಕರು ಇರುತ್ತಾರೆ. ಶಿಕ್ಷಣ ಮತ್ತು ಕ್ರೀಡೆ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ಶಿಕ್ಷಣ ದೈಹಿಕ ಶಿಕ್ಷಣಕ್ಕೆ ಸ್ಫೂರ್ತಿ ಯಾದರೆ, ದೈಹಿಕ ಶಿಕ್ಷಣ ಬೌದ್ಧಿಕ ವಿಷಯಗಳಿಗೆ ಪೂರಕ ಅಂಶಗಳನ್ನು ನೀಡಿ ಕಲಿಕೆಗೆ, ಕಲಿಕಾ ಪ್ರಗತಿಗೆ ಪೂರಕ ವ್ಯವಸ್ಥೆಯನ್ನು ಮಾಡಿಕೊಡುತ್ತದೆ. ಶಿಕ್ಷಣ ಮತ್ತು ಕ್ರೀಡೆಯ ಪ್ರಮುಖ ಉದ್ದೇಶ ಉತ್ತಮ ನಾಗರಿಕರನ್ನು ಕೊಡುವುದಾಗಿದೆ, ಆದರೆ ಇವುಗಳಲ್ಲಿ ಅಂದರೆ ಬೋಧನಾ ತಂತ್ರ ಮತ್ತು ಚಟುವಟಿಕೆಯಲ್ಲಿ ಒಂದಕ್ಕೊಂದು ಸಾಮ್ಯತೆ ಇದ್ದರೂ ಸಹ ವ್ಯತ್ಯಾಸಗಳು ಕಂಡುಬರುತ್ತವೆ.

ಉದಾಹರಣೆ :- ಬೌದ್ಧಿಕ ತರಗತಿ ಅಂದರೆ ಪಾಠ ಕೊಠಡಿಯ ಒಳಗೆ ನಡೆದರೆ ಕಪ್ಪು ಹಲಗೆ ಮತ್ತು ಪಠ್ಯಪುಸ್ತಕ ಇದರ ಕಲಿಕಾ ಸಾಮಗ್ರಿ ಗಳಾಗುತ್ತದೆ, ಆದರೆ ದೈಹಿಕ ಶಿಕ್ಷಣದಚಟುವಟಿಕೆಗಳು ಆಟದ ಮೈದಾನ ವ್ಯಾಯಾಮ ಮಂದಿರಗಳಲ್ಲಿ ನಡೆದರೆ ಇದಕ್ಕೆ ಕಲಿಕಾ ಸಾಮಗ್ರಿಗಳು ಆಟೋಪಕರಣಗಳು ಮತ್ತು ಆತನ ಅಂದರ ಆಟಗಾರನ ಶರೀರವೇ ಆಗಿದೆ ? ಅವುಗಳಲ್ಲಿ ಹಲವು ವಿಂಗಡಣೆಗಳು; ಅವುಗಳೆಂದರೆ

• ರಚನಾತ್ಮಕ ಚಟುವಟಿಕೆಯನ್ನು ಒಳಗೊಂಡ ಆಟ
• ಬೌದ್ಧಿಕ ಸಾಮರ್ಥ್ಯ ಮತ್ತು ಕಲ್ಪನಾ ಶಕ್ತಿಯನ್ನು ವರ್ಧಿಸುವ ಆಟ, ಸಹಕಾರ ಮತ್ತು ಸಾಂಘಿಕ ಮನೋಭಾವ ಬೆಳೆಸುವ ಆಟ
• ಚಾರಿತ್ರಿಕ ನಿರ್ಮಾಣದಲ್ಲಿ ಸಹಾಯ ಮಾಡುವ ಆಟ
• ಕಲಿಕೆಯಲ್ಲಿ ಸುಲಭ ಮಾಡುವ ಆಟ.

ಶರೀರ ಮಾಧ್ಯಮಂ ಖಲು ಧರ್ಮ ಸಾಧನಂ ಎನ್ನುವಂತೆ ಗಟ್ಟಿಯಾದ ಶರೀರವಿದ್ದರೆ ಆರೋಗ್ಯವಂತರಾಗಿರುತ್ತಾರೆ. ಕ್ರೀಡೆಗಳನ್ನು ಆಡುವುದರಿಂದ ದೃಢ ಶರೀರದ ಜೊತೆಗೆ ಆರೋಗ್ಯವಂತ ಮನಸ್ಸು ನಿರ್ಮಾಣವಾಗುತ್ತದೆ, ಕ್ರೀಡೆಯಲ್ಲಿ ಶ್ರದ್ಧೆ ದೃಢ ನಿಶ್ಚಯ ಸಮರ್ಪಣೆ ಅತ್ಯಗತ್ಯ, ಉತ್ತಮ ಕ್ರೀಡಪಟುವಾಗಲು ದೇಹದ ಸಾಮರ್ಥ್ಯದೊಂದಿಗೆ ಸಕಾರಾತ್ಮಕ ಭಾವನೆ ಅತ್ಯಗತ್ಯ. ಆಹಾರ, ವ್ಯಾಯಾಮ, ವಿಶ್ರಾಂತಿಗಳೆರಡೂ ಹಿಡಿತದಲ್ಲಿಟ್ಟುಕೊಳ್ಳಬೇಕು. ಹಿಂದಿನ ಕ್ರೀಡಾ ಶಿಕ್ಷಕರು ಅತಿ ಹೆಚ್ಚು ದಂಡಿಸಿ ಶಿಕ್ಷಣ ನೀಡುತ್ತಿದ್ದರು. ಶಿಕ್ಷಣದಲ್ಲಿ ಮತ್ತು ಕ್ರೀಡೆಯಲ್ಲಿ ಎರಡರಲ್ಲೂ ಸಾಧಿಸಿದವರು ಅನೇಕರಿದ್ದಾರೆ. ಪ್ರತಿಭೆ ಮತ್ತು ಏಕಾಗ್ರತೆ ಇದ್ದಲ್ಲಿ ಕ್ರೀಡೆಯಲ್ಲಿ ಸಾಧಿಸಿದವರು ಶಿಕ್ಷಣ ಕ್ಷೇತ್ರದಲ್ಲೂ ಉನ್ನತ ಮಟ್ಟಕ್ಕೆ ಏರಲು ಸಾಧ್ಯ.

See also  ಬಡತನದ ದಾಡೆಯಲ್ಲಿ ವಿಶ್ವದ ಮೂರನೇ ಒಂದು ಭಾಗ!

ಸರಕಾರಗಳು ಕೂಡ ಕ್ರೀಡೆಗೆ ಒತ್ತು ನೀಡಬೇಕು. ಕ್ರೀಡಾ ಸಾಧಕರಿಗೆ ಸೂಕ್ತ ಗೌರವ ಸ್ಥಾನಮಾನ ಜೀವನ ನಿರ್ವಹಣೆಯ ಆಶ್ವಾಸನೆಯನ್ನು ನೀಡಿದಾಗ ಮಾತ್ರ ಕ್ರೀಡಾಭಿವೃದ್ಧಿ ಸಾಧ್ಯ ? ವಿದ್ಯಾರ್ಥಿ ಜೀವನದಲ್ಲಿ ನಾವು ಕೂಡ ಹಲವಾರು ಆಟಗಳನ್ನು ಆಡಿದ್ದ, ಕೇವಲ ಪಾಠ ಮಾತ್ರ ನಮ್ಮನ್ನು ಉತ್ಸಾಹದಿಂದಿರಿಸಲು ಸಾಧ್ಯವಿಲ್ಲ. ಆಟದಲ್ಲಿ ಎರಡು ವಿಧಗಳಿವೆ ಒಳಾಂಗಣ ಆಟ ಮತ್ತು ಹೊರಾಂಗಣ ಆಟ ಎಂಬುದಾಗಿ ಒಳಾಂಗಣ ಆಟಗಳೆಂದರೆ ಚದುರಂಗ, ಟೇಬಲ್ ಟೆನ್ನಿಸ್, ಟೆನ್ನಿಸ್ ಇವೆಲ್ಲ ಒಳಗೆಯೇ ಕುಳಿತು ಅಥವಾ ನಿಂತು ಆಟವಾಡಬಹುದು, ಈ ತರಹದ ಆಟಗಳನ್ನು ಮಳೆಗಾಲದ ಸಂದರ್ಭದಲ್ಲಿ ನಾವು ಹೆಚ್ಚಾಗಿ ಆಡುತ್ತಿದ್ದೆವು. ಇನ್ನು ಹೊರಾಂಗಣ ಆಟಗಳೆಂದರೆ ಹಾಕಿ, ಕ್ರಿಕೆಟ್, ಕಬಡ್ಡಿ ಕೊಕ್ಕೊ, ಫುಟ್ಬಾಲ್, ವಾಲಿಬಾಲ್, ಇವುಗಳನ್ನು ಕ್ರೀಡಾಂಗಣದಲ್ಲಿ ಆಡುತ್ತಿದ್ದವು.

ಕೇವಲ ಓದು ಮಾತ್ರ ಮಾನಸಿಕ ಮತ್ತು ದೈಹಿಕ ದೃಢತೆಗೆ ಕಾರಣವಲ್ಲ, ಆಟವಿದ್ದರೆ ಮಾತ್ರ ಪಾಠ ಚೆನ್ನ, ನನ್ನ ವಿದ್ಯಾರ್ಥಿ ಜೀವನದಲ್ಲಿ ಕ್ರೀಡೆ ಪ್ರಮುಖ ಪಾತ್ರ ವಹಿಸಿದೆ, ಹಾಗಾಗಿ ಕ್ರೀಡೆಗೂ ಒತ್ತನ್ನು ನೀಡಬೇಕು. ಆಗ ಶಾಲೆಗೂ, ಕೀರ್ತಿ ದೇಶಕ್ಕೂ ಕೀರ್ತಿ.

ಕ್ರೀಡೆಯಲ್ಲಿ ಶ್ರದ್ಧೆ ದೃಢ ನಿಶ್ಚಯ ಸಮರ್ಪಣೆ ಅತ್ಯಗತ್ಯ, ಉತ್ತಮ ಕ್ರೀಡಾಪಟುವಾಗಲು ದೇಹದ ಸಾಮರ್ಥ್ಯದೊಂದಿಗೆ ಸಕಾರಾತ್ಮಕ ಭಾವನೆ ಅತ್ಯಗತ್ಯ ಆಹಾರ, ವ್ಯಾಯಾಮ, ವಿಶ್ರಾಂತಿಗಳೆರಡೂ ಹಿಡಿತದಲ್ಲಿಟ್ಟುಕೊಳ್ಳಬೇಕು. ಹಿಂದಿನ ಕ್ರೀಡಾ ಶಿಕ್ಷಕರು ಅತಿ ಹೆಚ್ಚು ದಂಡಿಸಿ ಶಿಕ್ಷಣ ನೀಡುತ್ತಿದ್ದರು. ಶಿಕ್ಷಣದಲ್ಲಿ ಮತ್ತು ಕ್ರೀಡೆಯಲ್ಲಿ ಎರಡರಲ್ಲೂ ಸಾಧಿಸಿದವರು ಅನೇಕರಿದ್ದಾರೆ. ಪ್ರತಿಭೆ ಮತ್ತು ಏಕಾಗ್ರತೆ ಇದ್ದಲ್ಲಿ ಕ್ರೀಡೆಯಲ್ಲಿ ಸಾಧಿಸಿದವರು ಶಿಕ್ಷಣ ಕ್ಷೇತ್ರದಲ್ಲೂ ಉನ್ನತ ಮಟ್ಟಕ್ಕೆ ಏರಲು ಸಾಧ್ಯ.

– ಮಣಿಕಂಠ ತ್ರಿಶಂಕರ್, ಮೈಸೂರು

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

34905
ಮಣಿಕಂಠ ತ್ರಿಶಂಕರ್

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು