News Kannada
Monday, October 03 2022

ನುಡಿಚಿತ್ರ

ಜ್ಯೋತಿಗೆ ಒಲಿದ ಕಸೂತಿ ಕಲೆ - 1 min read

Photo Credit :

ಜ್ಯೋತಿಗೆ ಒಲಿದ ಕಸೂತಿ ಕಲೆ

ಕಲೆಯೇ ಹಾಗೆ ಅದು ಎಲ್ಲರಿಗೂ ಒಲಿದರೂ ಕೆಲವರಿಗೆ ಅದು ಬದುಕು ಕೊಡುವುದಿಲ್ಲ. ಕಲೆ ಕೆಲವರಿಗೆ ಹವ್ಯಾಸವಾದರೆ ಮತ್ತೆ ಕೆಲವರಿಗೆ ಹೊಟ್ಟೆಪಾಡು. ತಮಗೆ ಒಲಿದ ಕಲೆಯನ್ನು ಬಳಸಿಕೊಂಡು ಬದುಕು ಕಟ್ಟಿಕೊಂಡವರು ಬಹಳಷ್ಟು ಜನರಿದ್ದಾರೆ ಅವರ ನಡುವೆ ಮೈಸೂರಿನ ಜ್ಯೋತಿಯೂ ಒಬ್ಬರಾಗಿ ಗಮನಸೆಳೆಯುತ್ತಿದ್ದಾರೆ.


ರಂಗೋಲಿ ಬಿಡಿಸೋದು, ಕಸೂತಿ ಹಾಕೋದು ಕಲಿತರೆ ಅದರಲ್ಲೇನು ಹೊಟ್ಟೆಪಾಡು ಕಳೆಯುತ್ತಾ ಎಂದು ಪ್ರಶ್ನಿಸುವ ಜನಕ್ಕೆ ಜ್ಯೋತಿ ಅದರಲ್ಲಿ ಯಶಸ್ಸು ಕಾಣುವ ಮೂಲಕ ತೋರಿಸಿಕೊಟ್ಟಿದ್ದಾರೆ. ಒಂದು ಕಾಲದಲ್ಲಿ ಮಹಿಳೆಯರು ಮನೆ ಮುಂದೆ ರಂಗೋಲಿ ಹಾಕಿ ತಮ್ಮ ದಿನಚರಿ ಆರಂಭಿಸುತ್ತಿದ್ದರು. ಈಗ ಬಿಜ್ಹಿ ಲೈಫ್ ನಲ್ಲಿ ಒಂದಷ್ಟು ಜನ ಅದನ್ನು ಕೇವಲ ಹಬ್ಬ ಹುಣ್ಣಿಮೆಗೆ ಸಾಕು ಎಂಬಂತೆ ತೀರ್ಮಾನ ಮಾಡಿಕೊಂಡಿದ್ದಾರೆ. ಆದರೆ ರಂಗೋಲಿ ಬಿಡಿಸುವ ಹವ್ಯಾಸ ಮಾತ್ರ ಎಲ್ಲರಲ್ಲೂ ಇದ್ದೇ ಇದೆ. ಹೊಸ ಬಗೆಯ ರಂಗೋಲಿ ಕಂಡಾಗ ಅದನ್ನೊಮ್ಮೆ ಬಿಡಿಸಿ ಬಿಡೋಣ ಎನ್ನುವವರೂ ಇದ್ದಾರೆ. ರಂಗೋಲಿ ಬಿಡಿಸೋದಕ್ಕಿಂತ ಸಿದ್ದವಿರುವ ರಂಗೋಲಿಯನ್ನು ಮನೆಯ ಅಲಂಕಾರಕ್ಕೆ ಬಳಸುವ ಫ್ಯಾಷನ್ ಹೆಚ್ಚಾಗಿರುವುದರಿಂದ ಇದನ್ನು ಮನಗಂಡ ಜ್ಯೋತಿ ಅವರು ರಂಗು ರಂಗಿನ ಹರಳು ಕಲ್ಲಿನಿಂದ ರಂಗೋಲಿ ತಯಾರಿಸಲು ಮುಂದಾದರು. ಅದು ಆಕರ್ಷಕವಾಗಿದ್ದರಿಂದ ಜನರನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು. ಬೇಡಿಕೆ ಬರಲಾರಂಭಿಸಿತು.

ಕರಕುಶಲ ವಸ್ತುಗಳ ತಯಾರಿಕೆಯನ್ನು ಕರಗತ ಮಾಡಿಕೊಂಡಿರುವ ಜ್ಯೋತಿ ಅವರು ಬಟ್ಟೆಯಿಂದಲೇ ಹ್ಯಾಂಡ್ ಮೇಡ್ ಮೊಬೈಲ್ ಪೌಚ್ ತಯಾರಿಕೆ, ಮದುವೆ, ಶುಭ ಸಮಾರಂಭಗಳಲ್ಲಿ ಸೀರೆ ಹಾಗೂ ಬ್ಲೌಸ್ ಗಳಿಗೆ ವಿವಿಧ ಮಾದರಿಯ ವಿನ್ಯಾಸವನ್ನು ಮಾಡುತ್ತಾರೆ.

ಇನ್ನು ಮನೆಯ ಶೋಕೇಸ್ ನಲ್ಲಿ ಇಡಲು ಅನುಕೂಲವಾಗುವ ಮತ್ತು ಆಕರ್ಷಿಸುವ ಅಲಂಕಾರಿಕ ವಸ್ತುಗಳನ್ನು ಕೂಡ ಇವರು ತಯಾರಿಸುತ್ತಾರೆ. ಸದಾ ಒಂದಲ್ಲ ಒಂದು ರೀತಿಯ ಹೊಸತನವನ್ನು ಹುಡುಕುತ್ತಿರುವ ಅವರು ಏನಾದರೊಂದು ಮಾಡಬೇಕೆಂಬ ಹಠತೊಟ್ಟು ಅದರಲ್ಲಿ ಸಂಪೂರ್ಣ ತನ್ನನ್ನು ತೊಡಗಿಸಿಕೊಳ್ಳುತ್ತಿದ್ದಾರೆ.

ಮನೆಯ ಅಲಂಕಾರಕ್ಕೆ ಬೇಕಾದ ಅಲಂಕೃತ ವಸ್ತುಗಳು, ದಸರಾ ವೇಳೆ ಅಲಂಕರಿಸುವ ಗೊಂಬೆಗಳು, ಬಟ್ಟೆಯಿಂದ ತಯಾರಿಸಲಾಗುವ ಹಾರ, ಇತ್ತೀಚಿನ ಟ್ರೆಂಡ್ ಆದ ಸ್ಟೋನ್ ವರ್ಕ್, ಸ್ಯಾಟೀನ್ ಟೇಪ್ ನಿಂದ ತೋರಣ, ಫೋಯಿಲ್ ಶೀಟ್ ನಿಂದ ಆನೆಯ ಚಿತ್ರಗಳು ಹಾಗೂ ಅಪ್ಪಟ ಹ್ಯಾಂಡ್ ಮೇಡ್ ಕಲಾಕೃತಿ, ಕುಂದನ್ ವರ್ಕ್ ನಿಂದ ತಯಾರಿಸಿರುವ ರಂಗೋಲಿ, ಕಸೂತಿ ಹೀಗೆ ಜನ ಇಷ್ಟಪಡುವ ವಸ್ತುಗಳನ್ನೇ ತಯಾರಿಸಿಕೊಂಡು ಹೀಗೂ ಬದುಕು ಕಾಣಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ಮೈಸೂರಿನ ರಾಮಕೃಷ್ಣ ನಗರ ನಿವಾಸಿಯಾಗಿರುವ  ಜ್ಯೋತಿ ಕಳೆದ 10 ವರ್ಷಗಳಿಂದ ಇದೇ ಕಲೆಯನ್ನು ಕರಗತ ಮಾಡಿಕೊಂಡು ಬಂದಿದ್ದಾರೆ. ತಾಯಿ, ತಂದೆ ಇಬ್ಬರು ಸಹೋದರರು ಇರುವ ಕುಟುಂಬಕ್ಕೆ ಜ್ಯೋತಿ ಆಸರೆಯಾಗಿದ್ದಾರೆ.

See also  ರಾಷ್ಟ್ರೀಯ ಉದ್ಯಾನವನದಲ್ಲಿ ನೀರಿಗಾಗಿ ಪ್ರಾಣಿಗಳ ಪರದಾಟ: ಮನಕಲಕುವ ದೃಶ್ಯಗಳು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು