News Kannada
Sunday, September 25 2022

ನುಡಿಚಿತ್ರ

ಮೈಸೂರಿನ ಮಾವಿನಸಂತೆಗೆ ಕೊಡಗು-ದ.ಕ.ದವರೇ ಗಿರಾಕಿಗಳು - 1 min read

Photo Credit :

ಮೈಸೂರಿನ ಮಾವಿನಸಂತೆಗೆ ಕೊಡಗು-ದ.ಕ.ದವರೇ ಗಿರಾಕಿಗಳು

ಈಗ ಮಾವಿನಹಣ್ಣಿನ ಕಾಲ… ಎಲ್ಲೆಡೆ ಮಾವಿನ ಹಣ್ಣುಗಳ ಮಾರಾಟದ ಭರಾಟೆ ಕಂಡು ಬರುತ್ತದೆ. ನಗರಗಳ ಹಣ್ಣಿನ ಅಂಗಡಿಯಲ್ಲಿ ಜೋಡಿಸಿಟ್ಟ ವಿವಿಧ ಬಗೆಯ ಮಾವಿನ ಹಣ್ಣುಗಳು ಗ್ರಾಹಕರನ್ನು ಸೆಳೆಯುತ್ತವೆ. ಪಟ್ಟಣಗಳ ಮಾರುಕಟ್ಟೆಗಳಲ್ಲಿ ಮಾವಿನ ಹಣ್ಣಿನ ಸಂತೆ ನಡೆಯುವುದು ಸಾಮಾನ್ಯ ಆದರೆ ಹಳ್ಳಿಯೊಂದರ ರಸ್ತೆ ಬದಿಯಲ್ಲಿ ಮಾವಿನಹಣ್ಣಿನ ಸಂತೆ ನಡೆಯುತ್ತದೆ ಎಂಬುವುದು  ಅಚ್ಚರಿಯಾದರೂ ಸತ್ಯ.

ಈ ಮಾವಿನಹಣ್ಣಿನ ಸಂತೆಯನ್ನು ನೋಡಬೇಕಾದರೆ ಮೈಸೂರಿನಿಂದ ಹುಣಸೂರು ಕಡೆಗೆ ತೆರಳುವ ರಾಜ್ಯ ಹೆದ್ದಾರಿ 88 ರಲ್ಲಿ ಸುಮಾರು 20 ಕಿ.ಮೀ ದೂರದಲ್ಲಿರುವ ಚಿಕ್ಕಕಡ್ನಳ್ಳಿಗೆ ಹೋಗಬೇಕು. ಈ ಹಳ್ಳಿಯೇ ಮಾವಿನಹಣ್ಣು ಸಂತೆಯ ಕೇಂದ್ರಬಿಂದು. ಸಾಮಾನ್ಯವಾಗಿ ಮೈಸೂರಿನಿಂದ ಹುಣಸೂರು ಮಾರ್ಗವಾಗಿ ಸಾಗುವಾಗ ಚಿಕ್ಕಕಡ್ನಳ್ಳಿಯಲ್ಲಿ ಕಿಲೋಮೀಟರ್ ಗಟ್ಟಲೆ  ತಳ್ಳುವ ಗಾಡಿಗಳಲ್ಲಿ ಜೋಡಿಸಿಟ್ಟ ವಿವಿಧ ಬಗೆಯ ಮಾವಿನ ಹಣ್ಣುಗಳು ಪ್ರಯಾಣಿಕರ ಗಮನ ಸೆಳೆದಿರುತ್ತವೆ.

ಹಾಗೆ ನೋಡಿದರೆ ಚಿಕ್ಕಕಡ್ನಳ್ಳಿಯಲ್ಲಿ ನಡೆಯುತ್ತಿಯವ ಮಾವಿನಹಣ್ಣಿನ ಸಂತೆ ಇಂದು ನಿನ್ನೆಯದಲ್ಲ. ಇಲ್ಲಿನ ಸಂತೆಗೆ ಹಲವು ದಶಕಗಳ ಇತಿಹಾಸವಿದೆ. ಹಳ್ಳಿಯ ಸುತ್ತಮುತ್ತಲಿನ ನಾಗವಾಲ, ಕಾಮನಕೊಪ್ಪಲು, ಸೀಗಳ್ಳಿ, ಮಾರಗೌಡನಹಳ್ಳಿ ಸೇರಿದಂತೆ ಹಲವು ಹಳ್ಳಿಗಳಲ್ಲಿ ಹೇರಳವಾಗಿ ಮಾವಿನಹಣ್ಣನ್ನು ಬೆಳೆಯುತ್ತಾರೆ. ಮೊದಲೆಲ್ಲಾ ಕೆಲವೇ ಜಾತಿಯ ಹಣ್ಣನ್ನು ಬೆಳೆಯುತ್ತಿದ್ದರಾದರೂ ಇತ್ತೀಚೆಗೆ ಸ್ಥಳೀಯ ಬೆಳೆಗಾರರು ಮಾವಿನ ಕೃಷಿಯನ್ನು ಅಭಿವೃದ್ಧಿಗೊಳಿಸಿದ್ದು ಅಲ್ಫೆನ್ಸೊ, ಬಾದಾಮಿ, ರಾಜಗಿರಿ, ಮಲ್ಲಿಕಾ, ರಸಪುರಿ, ನೀಲಂ ಮತ್ತು ತೋತಾಪುರಿ ಹಣ್ಣುಗಳನ್ನು ಬೆಳೆಯುತ್ತಿದ್ದಾರೆ.

ಹಲವು ವರ್ಷಗಳ ಹಿಂದೆ ತಾವು ಬೆಳೆದ ಹಣ್ಣನ್ನು ದೂರದ ಮೈಸೂರಿಗೆ ಒಯ್ದು ಮಾರಾಟ ಮಾಡಲು ಸಾಧ್ಯವಾಗದ ಕೆಲವು ಬೆಳೆಗಾರರು ರಸ್ತೆಬದಿಯಲ್ಲಿರಿಸಿ ಮಾರಾಟ ಮಾಡಲು ಮುಂದಾದರು. ಮೈಸೂರಿನಿಂದ ಕೊಡಗು, ಹಾಸನ, ಮಂಗಳೂರಿನತ್ತ ತೆರಳುವ ಕೆಲವು ಪ್ರವಾಸಿಗರು ತಮ್ಮ ವಾಹನವನ್ನು ನಿಲ್ಲಿಸಿ ಇಲ್ಲಿಂದ ಹಣ್ಣನ್ನು ಖರೀದಿಸುತ್ತಿದ್ದರು. ತೋಟದಿಂದ ನೇರವಾಗಿ ತಾಜಾ ಹಣ್ಣು ಗ್ರಾಹಕರ ಕೈಗೆ ಸೇರುತ್ತಿದ್ದುದರಿಂದ ದೂರದಿಂದ ಬರುತ್ತಿದ್ದ ಪ್ರವಾಸಿಗರು ಹಣ್ಣನ್ನು ಖರೀದಿಸಿ ಕೊಂಡೊಯ್ಯುತ್ತಿದ್ದರು. ಯಾವಾಗ ಪ್ರವಾಸಿಗರು ಹಣ್ಣನ್ನು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಸಲು ಪ್ರಾರಂಭಿಸಿದರೋ ಸುತ್ತಮುತ್ತಲಿನ ಇತರೆ ಯುವಕರು ಮಾವಿನಹಣ್ಣಿನ ಮಾರಾಟದತ್ತ ಒಲವು ತೋರಿಸತೊಡಗಿದರಲ್ಲದೆ, ಆ ಮೂಲಕ ಉದ್ಯೋಗದ ಹಾದಿಕಂಡು ಕೊಂಡರು. ಇವತ್ತಿಗೂ ಸುತ್ತಮುತ್ತಲ ಹಳ್ಳಿಯ ಯುವಕರು ಮಾವಿನಹಣ್ಣಿನ ಮಾರಾಟವನ್ನು ಫಾರ್ಟೈಂ ಕೆಲಸವನ್ನಾಗಿ ಮಾಡಿಕೊಂಡಿದ್ದಾರೆ.

ದಿನಕಳೆದಂತೆ ಚಿಕ್ಕಕಡ್ನಳ್ಳಿಯಲ್ಲಿ ಮಾವಿನಹಣ್ಣಿನ ವ್ಯಾಪಾರ ಚೆನ್ನಾಗಿ ನಡೆಯುತ್ತದೆ ಎಂಬುವುದನ್ನು ಅರಿತ ಕೆಲವರು ತಮ್ಮ ತೋಟದಲ್ಲಿ ಬೆಳೆದ ಹಣ್ಣನ್ನು ತಂದು ಗಾಡಿಯಲ್ಲಿರಿಸಿ ಮಾರಾಟ ಮಾಡಿದರೆ, ಇನ್ನು ಕೆಲವರು ಮೈಸೂರಿನ ಮಾರುಕಟ್ಟೆಯಿಂದ ಖರೀದಿಸಿ ತಂದು ಮಾರಾಟ ಮಾಡಲು ಮುಂದಾದರು.

ಈ ಹಳ್ಳಿಯ ವ್ಯಾಪ್ತಿಯಲ್ಲಿ ಹಲವು ಏಕರೆ ಪ್ರದೇಶದಲ್ಲಿ ಮಾವಿನಹಣ್ಣನ್ನು ಬೆಳೆಯುವ ಬೆಳೆಗಾರರಿದ್ದಾರೆ. ಆದರೆ ಅವರ್ಯಾರು ಇಲ್ಲಿನ ಮಾವಿನಸಂತೆಗೆ ಹಣ್ಣನ್ನು ಕಳುಹಿಸುತ್ತಿಲ್ಲ ಎಂಬುವುದು ಕಟುಸತ್ಯ. ಹೆಚ್ಚಿನ ಬೆಳೆಗಾರರು ತಮ್ಮ ತೋಟದ ಫಸಲನ್ನು ಮೈಸೂರಿನ ಮಾರುಕಟ್ಟೆಯ ವ್ಯಾಪಾರಿಗಳಿಗೆ ನೀಡಿ ಹಣ ಪಡೆಯುತ್ತಾರೆ. ಹಾಗಾಗಿ ಚಿಕ್ಕಕಡ್ನಳ್ಳಿಯಲ್ಲಿ ದೊರೆಯುವ ಮಾವಿನಹಣ್ಣನ್ನು ಮೈಸೂರಿನ ಮಾರುಕಟ್ಟೆಯಿಂದ ಖರೀದಿಸಿ ತಂದು ಮಾರಾಟ ಮಾಡುತ್ತಿರುವುದಾಗಿ ಕಳೆದ ಒಂಬತ್ತು ವರ್ಷಗಳಿಂದ ವ್ಯಾಪಾರ ಮಾಡುತ್ತಿರುವ ಮಹದೇವ್ ಹೇಳುತ್ತಾರೆ.

See also  ದುಬೈನ ಕೇಶವಿನ್ಯಾಸದಲ್ಲಿ ಕೊಡಗಿನ ಹುಡ್ಗ ಪ್ರಥಮ

ಫೆಬ್ರವರಿಯಿಂದ ಆರಂಭವಾಗುವ ಮಾವಿನಸಂತೆ ಆಗಸ್ಟ್ ವರೆಗೆ ನಡೆಯುತ್ತದೆ. ಮಾವಿನಹಣ್ಣಿನ ಕಾಲ ಮುಗಿದ ಬಳಿಕ ಮಾರಾಟಗಾರರು ಮೈಸೂರಿನತ್ತ ತೆರಳಿ ಗಾರೆ ಕೆಲಸ ಸೇರಿದಂತೆ ಯಾವುದಾದರು ಕೆಲಸ ಮಾಡಿ ಹೊಟ್ಟೆಪಾಡು ಕಳೆಯುತ್ತಾರೆ. ಈ ಮಾವಿನಹಣ್ಣಿನ ಸಂತೆಯನ್ನು ಹತ್ತಿರದಿಂದ ನೋಡಿದ ಸಿನಿಮಾ ನಿರ್ಮಾಪಕರು ಚಿತ್ರೀಕರಣವನ್ನು ಕೂಡ ಮಾಡಿದ್ದಾರೆ.

ಹಳ್ಳಿಯಿಂದ ಮಾವಿನಹಣ್ಣನ್ನು ಖರೀದಿಸಿ ಪಟ್ಟಣದಲ್ಲಿ ಮಾರಾಟ ಮಾಡುವುದು ಸಾಮಾನ್ಯ. ಆದರೆ ಪಟ್ಟಣದಿಂದ ಖರೀದಿಸಿ ಅದನ್ನು ಹಳ್ಳಿಯಲ್ಲಿ ಮಾರಾಟ ಮಾಡಬಹುದು ಎನ್ನುವುದಾದರೆ ಅದು ಚಿಕ್ಕಕಡ್ನಳ್ಳಿಯ ಮಾವಿನಸಂತೆಯಲ್ಲಿ ಮಾತ್ರ ಸಾಧ್ಯ. ಹಾಗಾದರೆ ಮಾವಿನ ಹಣ್ಣಿನ ಮಾರಾಟ ಭರಾಟೆ ಹೇಗಿರಬಹುದು ನೀವೇ ಊಹಿಸಿ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು