News Kannada
Thursday, September 29 2022

ನುಡಿಚಿತ್ರ

ಗುಂಡ್ಲುಪೇಟೆಯಲ್ಲಿ ಕಣ್ಮನಸೆಳೆಯುತ್ತಿವೆ ವಿದೇಶಿ ಹಕ್ಕಿಗಳು - 1 min read

Photo Credit :

ಗುಂಡ್ಲುಪೇಟೆಯಲ್ಲಿ ಕಣ್ಮನಸೆಳೆಯುತ್ತಿವೆ ವಿದೇಶಿ ಹಕ್ಕಿಗಳು

ಚಾಮರಾಜನಗರ: ಈಗ ಮಳೆಗಾಲ ಕಳೆದು ಚಳಿಗಾಲ ಆರಂಭವಾಗಿವೆ. ಹೀಗಾಗಿ ಹೊರಗಿನಿಂದ ಸ್ವದೇಶಿ ಸೇರಿದಂತೆ ವಿದೇಶಿ ಹಕ್ಕಿಗಳು ಕಾಣಸಿಗುತ್ತಿವೆ. ಒಂದು ಕಡೆಯಿಂದ ಮತ್ತೊಂದು ಕಡೆಗೆ ವಲಸೆ ಬರುವ ಹಕ್ಕಿಗಳು ತಮಗೆ ಸೂಕ್ತವಾದ ಸ್ಥಳದಲ್ಲಿ ನೆಲೆಕಂಡುಕೊಳ್ಳುತ್ತಿವೆ. ಸಾಮಾನ್ಯವಾಗಿ ಕೊಕ್ಕರೆ, ಹೆಜ್ಜಾರ್ಲೆ, ನೀರುಬಾತು ಸೇರಿದಂತೆ ಹಲವು ಹಕ್ಕಿಗಳು ಹೊರಗಿನಿಂದ ಬರುತ್ತವೆ. ಇವುಗಳ ನಡುವೆ ಇದೀಗ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ವ್ಯಾಪ್ತಿಯಲ್ಲಿ ಕೆಲವು ವಿದೇಶಿ ಹಕ್ಕಿಗಳು ಕಾಣಸಿಗುತ್ತಿದ್ದು ಪಕ್ಷಿ ಪ್ರಿಯರು ಅವುಗಳನ್ನು ನೋಡಿ ಖುಷಿಪಡುತ್ತಿದ್ದಾರೆ.

ಇಲ್ಲಿ ಕಾಣಸಿಗುವ ಸಾಮಾನ್ಯ ಹಕ್ಕಿಗಳ ನಡುವೆ ಗುಬ್ಬಿ ಗಾತ್ರದ ವಿದೇಶಿ ಹಕ್ಕಿಯೊಂದು ಕಂಡು ಬಂದಿದ್ದು ಎಲ್ಲರ ಗಮನಸೆಳೆಯುತ್ತಿದೆ. ಪಟ್ಟಣದ ಖ್ಯಾತ ವನ್ಯಜೀವಿ ಛಾಯಾಗ್ರಾಹಕರಾದ ಆರ್.ಕೆ. ಮಧು ಅವರ ನಿವಾಸದ ಆವರಣದಲ್ಲಿ ಗುಬ್ಬಿಗಾತ್ರದ ಪಕ್ಷಿಗಳಿಗೆಂದೇ ನಿರ್ಮಿಸಲಾದ ಸಿಮೆಂಟ್ ತೊಟ್ಟಿಯಲ್ಲಿ ನೀರು ಕುಡಿಯುವ ಈ ಹಕ್ಕಿಗಳು, ಮಧು ಅವರ ಸ್ನೇಹಿತರೊಬ್ಬರು ಉಚಿತವಾಗಿ ನೀಡುವ ಧಾನ್ಯಗಳನ್ನು ಚೆಲ್ಲಿದ ಕ್ಷಣವೇ ಅವುಗಳನ್ನು ಕೊಕ್ಕಿನಿಂದ ಕಚ್ಚಿಕೊಂಡು ಕ್ಷಣಾರ್ಧದಲ್ಲಿ ಗೂಡು ಸೇರುತ್ತವೆ. ಸಾಮಾನ್ಯವಾಗಿ ವಲಸೆ ಬರುವ ಹಕ್ಕಿಗಳು ನೀರಿರುವ ಕಡೆಗಳಿಗೆ ಅಥವಾ  ನದಿ ದಡಕ್ಕೆ ವಲಸೆ ಬರುತ್ತವೆ. ಆದರೆ ಪುಟ್ಟ ಹಕ್ಕಿಗಳಾದ ಹಾಡುಗಾರ ಹಕ್ಕಿಯು ಬರಪೀಡಿತ ಪ್ರದೇಶವೆಂದೇ ಪರಿಗಣಿತವಾದ ಪಟ್ಟಣಕ್ಕೆ ವಲಸೆ ಬಂದಿರುವುದು ಪಕ್ಷಿಪ್ರಿಯರಲ್ಲಿ ಅಚ್ಚರಿ ಉಂಟು ಮಾಡಿದೆ.

ಕಳೆದ ತಿಂಗಳೂ ಸಹ ಬಂಡೆಗಾರ್ಲು ಹಕ್ಕಿ ಎಂಬ ವಿದೇಶಿ ಹಕ್ಕಿ ವಲಸೆ ಬಂದಿತ್ತು.  ಈ ತಿಂಗಳಲ್ಲಿ ಮತ್ತೊಂದು ವಿದೇಶಿ ಅತಿಥಿ  ಹಾಡುಗಾರ ಹಕ್ಕಿ ಬೂಟೆಡ್ ವಾರ್ಬ್ಲರ್ ವಲಸೆ ಬಂದಿದೆ. ಇದನ್ನು ಕಾಲಿಗಟ ಎಂಬ ವೈಜ್ಞಾನಿಕ ಹೆಸರಿನಿಂದಲೂ ಕರೆಯಲಾಗುತ್ತದೆ. ಮೇಲ್ಭಾಗ ತೆಳು ಹಸಿರು ಬಣ್ಣವನ್ನು, ತಳಭಾಗವು ತೆಳು ಹಳದಿ ಬಣ್ಣವನ್ನು ಹೊಂದಿದೆ. ಚೂಪಾದ ಕೊಕ್ಕಿದ್ದು,. ಕಣ್ಣ ಬಳಿ ಬಿಳಿ ಉಬ್ಬು ಇದೆ. ಚಿರ್… ಚಿರ್ರ್…. ಎಂದು ಕೂಗುತ್ತಾ ಹಾರಾಡುವ  ಈ ಹಕ್ಕಿಯು ಸಾಮಾನ್ಯವಾಗಿ ಮನೆಯಂಗಳ,  ಹೊಲಗದ್ದೆಗಳು, ಪುಟ್ಟಗಿಡಗಳ ಬುಡದಲ್ಲಿ ಕೀಟಗಳನ್ನು ಹಿಡಿದು ತಿಂದು ಜೀವಿಸುತ್ತದೆ. ಗುಂಪುಗುಂಪಾಗಿ ವಾಸಿಸುವ ಇವು ಏಷ್ಯಾ, ರಷ್ಯಾ, ಸೈಬೀರಿಯಾ ಖಂಡಗಳಲ್ಲಿ ಕಂಡುಬರುತ್ತದೆ ಎಂದು ಹೇಳಲಾಗಿದೆ. ಇನ್ನು  ಭಾರತದ  ಆಗ್ನೇಯ ದಿಕ್ಕನ್ನು ಹೊರತುಪಡಿಸಿ, ಉಳಿದಂತೆ ಮಧ್ಯಭಾರತ, ಪಶ್ಚಿಮಘಟ್ಟ, ಮತ್ತು ಪೂರ್ವಘಟ್ಟಗಳಲ್ಲಿ ಕಂಡುಬರುತ್ತವೆ. ಉತ್ತರ ಭಾರತದ ಚಳಿಯಿಂದ ರಕ್ಷಿಸಿಕೊಳ್ಳಲು ಇವುಗಳು ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ದಕ್ಷಿಣ ಭಾರತಕ್ಕೆ ವಲಸೆ ಬರುತ್ತವೆ. ಮೇ ತಿಂಗಳಿನಲ್ಲಿ ಮತ್ತೆ ತಮ್ಮ ತವರಿಗೆ ಹಿಂತಿರುಗುತ್ತವೆ ಎನ್ನಲಾಗಿದೆ. ಕಳೆದ ವಾರವಷ್ಟೆ ನಡೆದ ಪಕ್ಷಿ ಗಣತಿ ವೇಳೆಯಲ್ಲಿ ವಿವಿಧ ಬಗೆಯ ಹಕ್ಕಿಗಳು ಕಾಣಸಿಕ್ಕಿದ್ದವು.

See also  ರೋಚಕ ಬದುಕಿನ ಉರಗಪ್ರೇಮಿ: ಗುರುರಾಜ್ ಸನಿಲ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು