ವಸಂತ ಕಾಲ ಆರಂಭ ಆಗುತ್ತಿದ್ದಂತೆಯೇ ಮಾವು ಚಿಗುರು ಹೊಡೆದು ಮಾವಿನ ಮರಗಳಲ್ಲಿ ಹೂ ಬಿಡಲು ಪ್ರಾರಂಭ ಆಗಿ ಮಾವಿನ ಹಣ್ಣಿನ ಕಾಲ ಆರಂಭ ಆಗುತ್ತದೆ ಆಗ ಕೊಗಿಲೆಗಳ ಗಾನ ಕೇಳೋದಕ್ಕೆ ಇಂಪಾಗಿರುತ್ತದೆ. ಮಾವಿನ ಸೀಜನ್ ಮುಗಿದು ಇನ್ನು ಪ್ರಾರಂಭ ಆಗೋದಕ್ಕಿಂತ ಮುಂಚೆಯೇ ಕೆಲ ಮರಗಳಲ್ಲಿ ಮಾವು ಬಿಟ್ಟು ಆಶ್ಟರ್ಯ ಮೂಡಿಸುತ್ತಿದೆ ಈ ಕುರಿತು ಒಂದು ವರದಿ ಇಲ್ಲಿದೇ ನೋಡಿ..
ಹೌದು… ವಸಂತ ಕಾಲ ಆರಂಭ ಆಗೋದೆ ಮೇ ಮತ್ತು ಜೂನ್ ತಿಂಗಳಿನಲ್ಲಿ ಈ ತಿಂಗಳಿನಲ್ಲಿ ಈ ತಿಂಗಳುಗಳ ವಿಶೇಷ ಅಂದ್ರೇ ಹಣ್ಣಿನ ರಾಜನಾದ ಮಾವಿನ ಜನನ ವಸಂತ ಕಾಲ ಆರಂಭ ಆಗುತ್ತಿದ್ದಂತೆ ಪ್ರತಿಯೊಂದು ಮಾವಿನ ಮರದಲ್ಲಿ ಹೂ ಬಿಟ್ಟು ಕಾಯಿ ಹೊಡೆಯಲು ಆರಂಭ ಆಗುತ್ತದೆ. ಮೇ ಮತ್ತು ಜೂನ್ ತಿಂಗಳಿನಲ್ಲಿ ಎಲ್ಲಿ ಮಾವಿನ ದರ್ಬಾರ್. ಆದ್ರೆ ಚಿಕ್ಕಮಗಳೂರಿನಲ್ಲಿ ಮೇ ಮತ್ತು ಜೂನ್ ಬರುವುದಕ್ಕಿಂತ ಮುಂಚೆಯೇ ಕೆಲ ಮಾವಿನ ಮರದಲ್ಲಿ ಹೂ ಬಿಟ್ಟು ಮಾವಿನ ಕಾಯಿ ಬಿಟ್ಟಿದ್ದು ಎಲ್ಲರನ್ನೂ ಆಚ್ಚರಿ ಮೂಡಿಸಿದೆ. ಕಳೆದ ವರ್ಷಗಳ ಹಿಂದೇ ಹಾಕಿದ್ದ ಈ ಮಾವಿನ ಗಿಡ ಇದೇ ಮೊದಲ ಬಾರಿಗೆ ವಾರಿಜಾ ಎಂಬುವರ ಮನೆಯಲ್ಲಿ ಡಿಸೆಂಬರ್ ತಿಂಗಳಿನಲ್ಲಿ ಬಿಟ್ಟಿದ್ದು ಅಚ್ಚರಿ ಮೂಡಿಸಿದೆ.
ವಿಶೇಷ ಅಂದ್ರೆ ಇದು ಮಾವಿನ ಕಾಲವಲ್ಲ ಆದ್ರೂ ಕೂಡ ಮಾವು ಈ ಮರದಲ್ಲಿ ಬಿಟ್ಟಿದ್ದೂ ಮನೆಯವರಲ್ಲಿ ಖುಷಿ ತಂದಿದೆ. ಸಾಮಾನ್ಯವಾಗಿ ವರ್ಷದಲ್ಲಿ ಎರಡರಿಂದ ಮೂರು ಬಾರಿ ಮಾವಿನ ಗಿಡಗಳಲ್ಲಿ ಹೂ ಬಿಟ್ಟು ಹಾಗೇ ಉದುರೋದು ಸಾಮಾನ್ಯ ವರ್ಷಕ್ಕೆ ಒಂದು ಫಲವನ್ನು ಮಾವಿನ ಮರ ನೀಡುತ್ತದೆ. ಮಾವು ಬಿಡೋದಕ್ಕೆ ಇದು ಸಮಯವೂ ಅಲ್ಲ. ಮೇ ಮತ್ತು ಜೂನ್ ತಿಂಗಳಿನಲ್ಲಿ ಮಾವಿನ ಕಾಲವಾಗಿರುತ್ತೆ. ಆದ್ರೆ ಹೀಗೆ ಕೆಲ ದಿನಗಳ ಹಿಂದೇ ಈ ಮರದಲ್ಲಿ ಹೂ ಬಿಟ್ಟಿದ್ದು ಹಾಗೇ ಉದುರುತ್ತದೆ ಎಂದೂ ಮನೆಯವರು ಭಾವಿಸಿದ್ದರು. ಯಾಕಂದ್ರೆ ಇದು ಮಾವು ಬಿಡುವ ಕಾಲ ಅಲ್ಲ ಎಂದೂ, ಆದ್ರೆ ಆ ಹೂ ಕಾಯಿ ಆಗಿ ಈಗ ದೊಡ್ಡ ದೊಡ್ಡ ಗಾತ್ರದ ಮಾವಿನ ಹಣ್ಣಾಗಿದ್ದು ಈ ಮನೆಯವರಲ್ಲಿ ಸಂತಸ ಮೂಡಿಸಿದೆ.
ಇದೇ ಮೊದಲ ಬಾರಿಗೆ ಮನೆಯವರು ಹಾಕಿದ್ದಂತಹ ಗಿಡದಲ್ಲಿ ಮಾವು ಬಿಟ್ಟಿರೋದಕ್ಕೆ ಮತ್ತು ಮಾವಿನ ಸೀಜನ್ ಅಲ್ಲದ ಸಮಯದಲ್ಲಿ ಮಾವು ಬಿಟ್ಟಿರೋದು ಒಂದು ಕಡೇ ಅಚ್ಚರಿ ಮೂಡಿಸಿದರೇ ಇನ್ನೊಂದು ಸಂತೋಷ ಇವರಲ್ಲಿ ಮನೆ ಮಾಡಿದೆ. ಒಟ್ಟಾರೆಯಾಗಿ ಪ್ರಕೃತಿಯ ವಿಸ್ಮಯವೇ ಹಾಗೇ ಯಾವ ಕಾಲದಲ್ಲಿ ಏನು ಆಗೋತ್ತೋ ಯಾರಿಗೂ ತಿಳಿಯದು ಪ್ರಕೃತಿಯಲ್ಲಿ ವಿಸ್ಮಯಗಳು ಆಗೋದು ಸಾಮಾನ್ಯ ಕೆಲವು ಕಣ್ಣಿಗೆ ಕಾಣಿಸಿದರೇ ಕೆಲವು ಕಾಣಿಸೋದಿಲ್ಲ ಅದೇ ರೀತಿ ಡಿಸೆಂಬರ್ ತಿಂಗಳಿನಲ್ಲಿ ಮಾವು ಬಂದಿರೋದು ನಿಜಕ್ಕೂ ಅಚ್ಚರಿಯೇ ಸರಿ…