News Kannada
Sunday, February 05 2023

ನುಡಿಚಿತ್ರ

ಕಾಫಿನಾಡಿನ ಚಳಿಗಾಲದ ವಿಶೇಷ ಅತಿಥಿ ‘ಕಾಡುಮಲ್ಲಿಗೆ’

Photo Credit :

ಕಾಫಿನಾಡಿನ ಚಳಿಗಾಲದ ವಿಶೇಷ ಅತಿಥಿ 'ಕಾಡುಮಲ್ಲಿಗೆ'

ಕಾಫಿನಾಡಿನ ಭೂಮಿ, ಭೂಲೋಕದ ತೋಟವೆಂದ್ರೆ ತಪ್ಪಲ್ಲ. ನಯನ ಮನೋಹರವಾದ ಈ ತೋಟದಲ್ಲಿ ಕಣ್ಣಿಗೆ ಕಂಡಿದ್ದೆಲ್ಲವೂ ಸುಂದರ. ಇವುಗಳಲ್ಲಿ ಕಾಡುಮಲ್ಲಿಗೆಯೂ ಒಂದು. ಕಾಫಿನಾಡಿನಲ್ಲಿ ಚಳಿಗಾಲದ ವಿಶೇಷ ಅತಿಥಿ ಅಂದ್ರೆ ಅದುವೇ ಕಾಡುಮಲ್ಲಿಗೆ. ಇತರೆ ಪುಪ್ಪಗಳಿಗಿಂತ ತಾನೇನೂ ಕಮ್ಮಿಯಿಲ್ಲವೆಂಬಂತೆ ಇದು ಕೂಡ ತನ್ನ ಸೊಬಗಿನ ಸುವಾಸನೆಯನ್ನ ಸೂಸುತ್ತದೆ.

ಅದರಲ್ಲೂ ಕೆರೆ-ಹಳ್ಳದ ಅಕ್ಕ ಪಕ್ಕ ಮುಗಿಲೆತ್ತರಕ್ಕೆ ಬೆಳೆದು ನಿಂತ ಈ ಕಾಡುಮಲ್ಲಿಗೆಯ ಹೂವಿನ ರಾಶಿ ನೋಡಲು ಮನಸಿಗೆ ಮುದ ನೀಡುತ್ತೆ. ಕಾಡು ಮಲ್ಲಿಗೆಯ ರಾಶಿ ರಾಶಿ ಹೂಗಳು ತೋಟಗಳಲ್ಲಿ ಅರಳಿದ ಪುಷ್ಪಲತೆಗಳಿಗಿಂತ ಭಿನ್ನ ವಿಭಿನ್ನ. ಹಾಲಿನ ನೊರೆಯಂತೆ ಹೊಳೆಯುವ ಈ ಹೂವು ವರ್ಷದ ಒಂದು ತಿಂಗಳು ಮಾತ್ರ ಕಾಣಲು ಸಾಧ್ಯ.ಈ ಕುರಿತು ಒಂದು ವರದಿ ಇಲ್ಲಿದೆ…

ಹೂವೆಂದರೆ ಸೌಂದರ್ಯದ ಕಲಶವಿದ್ದಂತೆ. ಭೇದ-ಭಾವವಿಲ್ಲದ ಸುಂದರ ಲತೆಯಲ್ಲಿ ಸೌಂದರ್ಯ ಮನೆಮಾಡಿರುತ್ತೆ. ಯಾವುದೇ ಹೂವಾದರೂ ತನ್ನ ವಿಭಿನ್ನವಾದ ಸುಂದರ ತಂಪು-ಕಂಪಿನಿಂದ ವಿಶೇಷತೆ ಗಳಿಸಿರುತ್ತೆ. ದಿನಂಪ್ರತಿ ನೀರಾಯಿಸಿ ಪೋಷಿಸೋ ಹೂವಿಗಿಂತ ಈ ಕಾಡುಮಲ್ಲಿಗೆ ಸುಂದರ ಅಂದ್ರೆ ತಪ್ಪಿಲ್ಲ. ಮಲೆನಾಡಿನ ದಟ್ಟಾರಣ್ಯದಲ್ಲಿ ಸಿಗೋ ಈ ಬಿಳಿಯ ಕಾಡುಮಲ್ಲಿಗೆ ಚಳಿಗಾಲದಲ್ಲಿ ಮಾತ್ರ ಅರಳಿ ಜನರನ್ನು ಆಕರ್ಷಿಸುತ್ತೆ. ಕಾಫಿ ತೋಟಗಳ ನಡುವೆ ಅರಳೋ ಈ ಕಾಡುಮಲ್ಲಿಗೆ ಎಲ್ಲಾ ಋತುವಿನಲ್ಲೂ ಅರಳೋಲ್ಲ. ಡಿಸೆಂಬರ್ ತಿಂಗಳಲ್ಲಿ ಮಾತ್ರ ಇದರ ಜನನ. ಪ್ರವಾಸಿಗರಿಗೆ, ದಾರಿಹೋಕರಿಗೆ, ಸೌಂದರ್ಯ ಪ್ರಿಯರ ಮನಸ್ಸಿಗೆ ಈ ಕಾಡುಮಲ್ಲಿಗೆ ಮುದ ನೀಡುತ್ತೆ.

ಈ ಹೂವನ್ನ ಮದ್ರಾಸಿ ಹೂವು ಅಂತಲೂ ಕೆಲವರು ಕರೆಯುತ್ತಾರೆ. ಚಿಕ್ಕಮಗಳೂರಿನ ಹಿರೇಕೊಳಲೆ, ಕೈಮರ, ಮಲ್ಲೇನಹಳ್ಳಿ ಭಾಗದಲ್ಲಿ ಯತ್ತೆಚ್ಚವಾಗಿ ಕಾಣಲಿರೋ ಈ ಕಾಡುಮಲ್ಲಿಗೆ ಹಾಲ್ನೋರೆಯ ಬೆಳ್ಳನೆ ರಾಶಿಯಂತಿದೆ. ಈ ಹೂ ಮಲ್ಲಿಗೆಯಂತೆ ಕಂಡು ಬಂದ್ರೂ ಕೂಡ ಇದು ಮಲ್ಲಿಗೆಯಲ್ಲ. ಸಾವಿರಾರು ಸಂಖ್ಯೆಯಲ್ಲಿ ದಟ್ಟವಾಗಿ ಬೆಳೆದು ನಿಂತಿದ್ರೂ ಪೂಜೆಗೂ ಬಳಸೋಲ್ಲ. ರಸ್ತೆಬದಿಯಲ್ಲಿ ಅಲ್ಲಲ್ಲೇ ಸಾಲಾಗಿ ಅರಳಿ ನಿಂತು ಕಣ್ಣು ಹಾಯಿಸಿದಲ್ಲೆಲ್ಲಾ ಬಿಳಿಯ ಬಣ್ಣ ಚೆಲ್ಲಿದಂತ್ತಿದೆ.

ಈ ಕಾಡು ಮಲ್ಲಿಗೆ ನಿತ್ಯ ಬಳಕೆಯ ಪುಪ್ಪಗಳಂತಲ್ಲ. ಈ ಹೂವನ್ನು ಯಾವುದೇ ಅಲಂಕಾರಕ್ಕೆ ಬಳಸೋಲ್ಲ. ಹೆಣ್ಣುಮಕ್ಕಳು ಮುಡಿಯೋದು ಇಲ್ಲ. ಬೆಳಗ್ಗೆ ಅರಳಿ ಸಂಜೆ ಬಾಡೋ ಈ ಕಾಡುಮಲ್ಲಿಗೆಯ ಜೀವಿತಾವಧಿ ಒಂದೇ ಒಂದು ದಿನಮಾತ್ರವಾಗಿದ್ದು, ಇರುವಷ್ಟು ದಿನ ಜನಮಾನಸದಲ್ಲಿ ಉಳಿಯುವಂತ್ತಾಗಿದೆ. ಒಟ್ಟಾರೆಯಾಗಿ ಅಲ್ಪಾವಧಿಯಲ್ಲೇ ಮಸಣ ಸೇರೋ ಈ ಮಲ್ಲಿಗೆ ಸ್ವರೂಪದ ಲತೆಯು ತನ್ನ ಕಂಪನ್ನು ಸೂಸಿ ಮಿಂಚಿ ಮರೆಯಾದ್ರೂ ಸದಾ ಕಾಲ ಅದರ ಸೌಂದರ್ಯವನ್ನಂತೂ ಇಲ್ಲಿನೋರು ಮರೆಯೋಲ್ಲ. ಪ್ರಕೃತಿ ತಾನು ನೀಡಿದ ಅನೇಕ ವೈಶಿಷ್ಟ್ಯಗಳಲ್ಲಿ ಇದಕ್ಕೂ ತನ್ನದೇ ಆದ ಸ್ಥಾನವನ್ನು ನೀಡಿದೆ ಅನ್ನೋದಂತೂ ಸತ್ಯ.

See also  ಪ್ರದರ್ಶನಕ್ಕಷ್ಟೇ ಸೀಮಿತವಾದ ಜನಪದ ನೃತ್ಯಗಳು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು