News Kannada
Friday, December 02 2022

ನುಡಿಚಿತ್ರ

ಮಡಿಕೇರಿಯಲ್ಲಿ ವೀರಸೇನಾನಿಯ ನೆನಪು: ಸೇನಾ ಶಸ್ತ್ರಾಸ್ತ್ರಗಳ ಸೇರ್ಪಡೆ

Photo Credit :

ಮಡಿಕೇರಿಯಲ್ಲಿ ವೀರಸೇನಾನಿಯ ನೆನಪು: ಸೇನಾ ಶಸ್ತ್ರಾಸ್ತ್ರಗಳ ಸೇರ್ಪಡೆ

ಮಡಿಕೇರಿ: ವೀರ ಯೋಧ ಜನರಲ್ ತಿಮ್ಮಯ್ಯ ಅವರು ಹುಟ್ಟಿ ಬೆಳೆದ ಸನ್ನಿಸೈಡ್ ನಿವಾಸವನ್ನು ‘ಜನರಲ್ ತಿಮ್ಮಯ್ಯ ವಾರ್ ಮೆಮೋರಿಯಲ್’ ಆಗಿ ಪರಿವರ್ತಿಸಲಾಗಿದ್ದು, ದೇಶದ ವಿವಿಧ ಸೇನಾ ಶಸ್ತ್ರಾಸ್ತ್ರಗಳ ಡಿಪೋಗಳಿಂದ ಸಂಗ್ರಹಿಸಲಾದ 25ಕ್ಕೂ ಹೆಚ್ಚು ಆಯುಧಗಳನ್ನು ಮಡಿಕೇರಿಗೆ ತರಲಾಗಿದೆ.

ಲೈಟ್ ಮಿಷಿನ್ ಗನ್ಗಚಳು, ಮೀಡಿಯಂ ಮಿಷಿನ್ ಗನ್ಗ.ಳು, ಸೆಲ್ಫ್ ಲೋಡಿಂಗ್ ರೈಫಲ್ಗಯಳು, 7.62 ಮತ್ತು 303 ಬೋರ್ ರೈಫಲ್ಗ್ಳು, ಸೆಮಿಮಿಷಿನ್ ಕಾರ್ಬೈನ್ ಗನ್, ಪಾಯಿಂಟ್ 38 ಎಂ.ಎಂ. ರೈಫಲ್, ಬಝೂಕಾ ರಾಕೇಟ್ ಲಾಂಛರ್ ಗಳು ಜಿಲ್ಲಾಡಳಿತ ಭವನಕ್ಕೆ ಬಂದಿಳಿದಿವೆ.

ಈ ಶಸ್ತ್ರಾಸ್ತ್ರಗಳನ್ನೆಲ್ಲ ಭಾರತೀಯ ಸೇನೆಯ ಯೋಧರು ವಿವಿಧ ಯುದ್ದಗಳಲ್ಲಿ ಬಳಸಿದ್ದು, ಇವುಗಳನ್ನು ಮಡಿಕೇರಿಯಲ್ಲಿ ನಿರ್ಮಿಸಲಾಗಿರುವ ವೀರ ಯೋಧ ಜನರಲ್ ತಿಮ್ಮಯ್ಯ ಅವರ ವಾರ್ ಮ್ಯೂಸಿಯಂನಲ್ಲಿ ಪ್ರತಿಷ್ಠಾಪಿಸಲು ಮಧ್ಯಪ್ರದೇಶದ ಜಬಲ್ಪುಸರದಿಂದ ತರಲಾಗಿದೆ. ಬಿಡಿಯಾಗಿರುವ ಈ ಬಂದೂಕುಗಳನ್ನು ಜೋಡಿಸಿ ಅವುಗಳನ್ನು ಜನರಲ್ ತಿಮ್ಮಯ್ಯ ವಾರ್ ಮೆಮೋರಿಯಲ್ನಡಲ್ಲಿ ಅಳವಡಿಸುವ ಕಾರ್ಯ ಮಾಡಲಾಗುತ್ತದೆ. ಆ ಮೂಲಕ ಸೈನಿಕರ ಸೈನಿಕ, ಅಪ್ರತಿಮ ಯೋಧ ಕೊಡಂದೇರ ಜನರಲ್ ತಿಮ್ಮಯ್ಯ ಅವರ ಬದುಕು, ಸೇನಾ ಇತಿಹಾಸವನ್ನು ಸಮಾಜಕ್ಕೆ ಮತ್ತು ಯುವ ಪೀಳಿಗೆಗೆ ಪರಿಚಯಿಸುವ ಕಾರ್ಯ ಮಾಡಲಾಗುತ್ತಿದೆ. ಮಾತ್ರವಲ್ಲದೇ ಮಾತೃ ಭೂಮಿಯ ರಕ್ಷಣೆಗಾಗಿ ತಮ್ಮ ಬದುಕನ್ನೇ ತ್ಯಾಗ ಗೈದ ಸೈನಿಕರಿಗೆ ಈ ಮೂಲಕ ಗೌರವನ್ನೂ ಸಮರ್ಪಿಸಲಾಗುತ್ತಿದೆ. ವಿಶೇಷವೆಂದರೆ 1948 ಮತ್ತು 1965ರ ಯುದ್ದದಲ್ಲಿ ವೀರ ಯೋಧ ಜನರಲ್ ತಿಮ್ಮಯ್ಯ, ಸಮರ ಭೂಮಿಯಲ್ಲಿ ಮುಂಚೂಣಿಯಲ್ಲಿ ನಿಂತು ಶತ್ರುಗಳನ್ನು ಸಿಂಹ ಸ್ವಪ್ನವಾಗಿ ಕಾಡಿದ್ದರಲ್ಲದೇ, ಸೋಲಿನ ರುಚಿ ತೋರಿಸಿದ್ದರು. ಇಂದು ಕೂಡ ಭಾರತ -ಪಾಕ್ ಗಡಿಯಲ್ಲಿ ಯುದ್ದದ ಉದ್ವಿಘ್ನ ಪರಿಸ್ಥಿಯ ನಡುವೆಯೇ, ಕೊಡಗಿನ ಸಮರ ವೀರನ ವಾರ್ ಮೆಮೋರಿಯಲ್ಗೆಪ ಯುದ್ದದ ಆಯುಧಗಳು ಆಗಮಿಸಿರುವುದು ಸೈನಿಕರ ತವರಿಗೆ ಮತ್ತೊಂದು ಗರಿ ಮೂಡಿಸಿದಂತ್ತಾಗಿದೆ.

ಶಸ್ತ್ರಗಳ ಇತಿಹಾಸ: ಮಡಿಕೇರಿಗೆ ತರಲಾಗಿರುವ ಈ ಶಸ್ತ್ರಗಳು ರಷ್ಯಾ ಮತ್ತು ಬ್ರಿಟೀಷ್ ನಿರ್ಮಿತವಾಗಿದ್ದು, ದೇಶದ ಹಲವು ಯುದ್ದ ಮತ್ತು ಸೈನಿಕ ಕಾರ್ಯಾರಣೆಗಳಲ್ಲಿ ಬಳಸಲಾಗಿದೆ. 50 ವರ್ಷಗಳಷ್ಟು ಹಳೆಯದಾದ ಈ ಶಸ್ತ್ರಗಳು ಭಾರತೀಯ ಸೇನೆಯ ವಿವಿಧ ರೆಜಿಮೆಂಟ್ಗಳಳ ಸಾಹಸದ ಯಶೋಗಾಥೆಯನ್ನು ಬರೆದಿದ್ದು, ಬಳಕೆಯ ಅವಧಿ ಮುಗಿದ ಹಿನ್ನಲೆಯಲ್ಲಿ ಇವುಗಳನ್ನು ಸೇನಾ ಶಸ್ತ್ರ ಕೋಠಿಗಳಲ್ಲಿ ದಾಸ್ತಾನು ಮಾಡಲಾಗಿತ್ತು. ಫೋರಂನ ಬೇಡಿಕೆಯಂತೆ ಇನ್ನು 20 ವಿವಿಧ ಮಾದರಿಯ ಆಯುಧಗಳು ಜಿಲ್ಲೆಗೆ ಬರಲಿದ್ದು, ವಾರ್ ಮ್ಯೂಸಿಯಂನಲ್ಲಿ ಪ್ರದರ್ಶನಕ್ಕೆ ಇಡಲಾಗುತ್ತದೆ. ಮಾತ್ರವಲ್ಲದೇ, ಪ್ರತಿ ಸಂದರ್ಶಕರಿಗೂ ಸೇನೆಯ ಬಂದೂಕುಗಳನ್ನು ಕೈಯಲ್ಲಿ ಹಿಡಿದುಕೊಂಡು ಅದರ ಅನುಭವ ಪಡೆಯಲು ಕೂಡ ಅನುವು ಮಾಡಿಕೊಡಲಾಗುತ್ತದೆ.

ಶಸ್ತ್ರಗಳ ವಿಶೇಷತೆ: ಮೀಡಿಯಂ ಮಿಷಿನ್ ಗನ್ಗೆಳು ಬೆಂಗಾವಲು ಆಯುಧವಾಗಿದ್ದು, ಯುದ್ದ ಭೂಮಿಯಲ್ಲಿ 2 ಮೈಲು ದೂರದವರೆಗೆ ನಿಖರ ಗುರಿಯಲ್ಲಿ ಶತ್ರುಗಳ ಎದೆಯನ್ನು ಸೀಳುವ ಸಾಮಥ್ರ್ಯ ಹೊಂದಿದ್ದರೆ, ಲೈಟ್ ಮಿಷಿನ್ ಗನ್ಗನಳು 30 ಯೋಧರ ತಂಡದ ಪ್ಲಟೂನ್ ಶಸ್ತ್ರಗಳಾಗಿ ಶತ್ರು ಪಾಳೆಯದ ಮೇಲೆ ಗುಂಡಿನ ಮಳೆ ಸುರಿಸುತ್ತವೆ.

See also  ಬೆಕ್ಕು ಸಿಂಹದ ಮರಿ ಆಗಿದ್ದು ಹೇಗೆ?

ಬಝೂಕ ರಾಕೇಟ್ ಲಾಂಛರ್ಗುಳು ಶತ್ರುಗಳ ಪೋಸ್ಟ್ಗದಳು, ವಾಹನಗಳು, ಅಡುಗು ತಾಣಗಳನ್ನು ಪುಡಿಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಸೆಲ್ಫ್ ಲೋಡಿಂಗ್ ರೈಫಲ್ಗಸಳು, ಸೆಮಿಮಿಷಿನ್ ಕಾರ್ಬೈನ್ ಗನ್ಗುಳು, ಪಾಯಿಂಟ್ 38 ಮತ್ತು 7.62 ರೈಫಲ್ಗಿಳು ಯೋಧರ ವೈಯಕ್ತಿಕ ಆಯುಧಗಳಾಗಿ ಯುದ್ದ ಭೂಮಿಯಲ್ಲಿ ಸೆಣಸಾಡಲು ಬಳಕೆಯಾಗುತ್ತವೆ.
“ಜನರಲ್” ಕೊಡುಗೆ: ಭೂ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಈ ಹಿಂದೆ ಗೋಣಿಕೊಪ್ಪಕ್ಕೆ ಬಂದ ಸಂದರ್ಭ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಜನರಲ್ ತಿಮ್ಮಯ್ಯ ಫೋರಂನ ಪ್ರಮುಖರು ಬಿಪಿನ್ ರಾವತ್ ಅವರಿಗೆ ಮನವಿ ಸಲ್ಲಿಸಿ, ಇನ್ಫೆಂಟ್ರಿ ಶಸ್ತ್ರಾಸ್ತ್ರಗಳನ್ನು ಜನರಲ್ ತಿಮ್ಮಯ್ಯ ವಾರ್ ಮೆಮೋರಿಯಲ್ಗೆ್ ನೀಡುವಂತೆ ಮನವಿ ಸಲ್ಲಿಸಿದ್ದರು. ಈ ಮನವಿಯನ್ನು ಪರಿಗಣಿಸಿದ ಜನರಲ್ ಬಿಪಿನ್ ರಾವತ್ ಒಟ್ಟು 1400 ಬಗೆಯ ಆಯುಧಗಳ ಪಟ್ಟಿ ನೀಡಿ ತಮಗೆ ಬೇಕಾದನ್ನು ಆಯ್ದು ಕೊಳ್ಳುವಂತೆ ಸೂಚಿಸಿದ್ದರು. ಈ ಪಟಿಯಂತೆ ಒಟ್ಟು 45 ಬಗೆಯ ಶಸ್ತ್ರಗಳನ್ನು ಆಯ್ಕೆ ಮಾಡಿಕೊಂಡು ಅದನ್ನು ವಾರ್ ಮೆಮೋರಿಯಲ್ಗೆು ನೀಡುವಂತೆ ಫೋರಂ ಪ್ರಮುಖರು ತಿಳಿಸಿದ್ದರು.

ಬೊಫೋರ್ಸ್ ಫಿರಂಗಿ:ಜನರಲ್ ತಿಮ್ಮಯ್ಯ ವಾರ್ ಮೆಮೋರಿಯಲ್ ಆವರಣದಲ್ಲಿ ಬೊಫೋರ್ಸ್ ಫಿರಂಗಿಯನ್ನು ಕೂಡ ಪ್ರತಿಷ್ಟಾಪನೆ ಮಾಡಲು ನಿರ್ಧರಿಸಲಾಗಿದ್ದು, ಅದಕ್ಕೂ ಜನರಲ್ ಬಿಪಿನ್ ರಾವತ್ ಒಪ್ಪಿಗೆ ಸೂಚಿಸಿದ್ದಾರೆ.

ಈ ಫಿರಂಗಿ ಗಾತ್ರದಲ್ಲಿ ಭಾರೀ ದೊಡ್ಡದಿರುವುದರಿಂದ ಅದರ ಸಾಗಾಟ ಮತ್ತು ಅಳವಡಿಕೆ ಕಾರ್ಯ ಸ್ಥಳೀಯಾಡಳಿತ ಹಾಗೂ ಫೋರಂಗೆ ಕಷ್ಟಸಾಧ್ಯವಾಗುವ ಹಿನ್ನೆಲೆಯಲ್ಲಿ ಅದರ ಮೇಲುಸ್ತುವಾರಿಯನ್ನು ಮೆದ್ರಾಸ್ ರೆಜಿಮೆಂಟ್ನ್ ಯೋಧರಿಗೆ ವಹಿಸಲಾಗಿದೆ. ಸದ್ಯದಲ್ಲಿಯೇ ಬೊಫೋರ್ಸ್ ಫಿರಂಗಿ ಕೂಡ ಜನರಲ್ ತಿಮ್ಮಯ್ಯ ವಾರ್ ಮೆಮೋರಿಯಲ್ಗೆಲ ಬರಲಿದ್ದು, ಮತ್ತಷ್ಟು ಆಕರ್ಷಕ ತಾಣವಾಗಿ ಸನ್ನಿಸೈಡ್ ರೂಪುಗೊಳ್ಳಲಿದೆ.

ಕೊಡಗು ಜಿಲ್ಲೆಯ ಸಹಸ್ರ ಸಂಖ್ಯೆಯ ಯೋಧರು ಇಂದಿಗೂ ಸೇನೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಹೊರ ಊರುಗಳ ಪ್ರವಾಸಿಗಳಿಗೆ ಮತ್ತು ಮುಂದಿನ ಯುವ ಪೀಳಿಗೆಗೆ ಸೇನೆಯ ಇತಿಹಾಸದ ಬಗ್ಗೆ ಸಮಗ್ರ ಮಾಹಿತಿ ಒದಗಿಸಲಿದೆ. ಆ ಮೂಲಕ ಯುವ ಪೀಳಿಗೆಗೆ ಸೇನೆಯ ಬಗ್ಗೆ ಪ್ರೇರೇಪಣೆ ನೀಡುವಲ್ಲಿಯೂ ವಾರ್ ಮೆಮೋರಿಯಲ್ ಪ್ರಮುಖ ಪಾತ್ರ ವಹಿಸಲಿದೆ ಎಂದರೆ ತಪ್ಪಾಗಲಾರದು.

ಜನರಲ್ ತಿಮ್ಮಯ್ಯ ವಾರ್ ಮೆಮೋರಿಯಲ್ಗೆ್ ಆಯುಧಗಳನ್ನು ತರುವಲ್ಲಿ ದಿ. ಮೇಜರ್ ಜನರಲ್ ಬಿದ್ದಂಡ ನಂದಾ ಕಾರ್ಯಪ್ಪ ಪಾತ್ರ ತುಂಬಾ ಹಿರಿದು ಎಂದು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಜನರಲ್ ತಿಮ್ಮಯ್ಯ ಫೋರಂನ ಪ್ರಮುಖರಾದ ನಿವೃತ್ತ ಮೇಜರ್ ನಂದಾ ನಂಜಪ್ಪ ಸ್ಮರಿಸಿದರು. ವಾರ್ ಮೆಮೋರಿಯಲ್, ಆಯುಧಗಳ ಬಗ್ಗೆ ಮಾಹಿತಿ ನೀಡಿದ ನಂದ ನಂಜಪ್ಪ, ಸೇನೆಯ ಉನ್ನತ ಅಧಿಕಾರಿಗಳು ಮತ್ತು ಕೇಂದ್ರ ಕಚೇರಿಗಳೊಂದಿಗೆ ನಿರಂತರ ಸಂಪರ್ಕ ಸಾಧಿಸುವ ಮೂಲಕ ಅಮರ್ ಜವಾನ್ ಯುದ್ದ ಸ್ಮಾರಕ, ವಾರ್ ಮೆಮೋರಿಯಲ್, ಯುದ್ದ ಟ್ಯಾಂಕ್ ಮತ್ತು ಆಯುಧಗಳನ್ನು ತರುವಲ್ಲಿ ಜನರಲ್ ನಂದಾ ಪ್ರಮುಖ ಪಾತ್ರ ವಹಿಸಿದ್ದರು. ಆದರೆ ಎಲ್ಲವೂ ಕೈಗೂಡುವ ಸಮಯದಲ್ಲಿ ಅವರು ನಮ್ಮಿಂದ ಮರೆಯಾಗಿರುವುದು ದುಃಖ ತಂದಿದೆ ಎಂದು ಮೇಜರ್ ನಂದಾ ನೆನಪಿಸಿಕೊಂಡರು. ಹಿಂದಿನ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಕೂಡ ಫೋರಂಗೆ ಉತ್ತಮ ಸ್ಪಂದನೆ ತೋರಿದ್ದಾರೆ. ಸರಕಾರ ಮತ್ತು ಸೇನಾ ಕೇಂದ್ರ ಕಚೇರಿಗಳಿಗೆ ಪತ್ರ ವ್ಯವಹರಿಸಿ, ವಾರ್ ಮೆಮೋರಿಯಲ್ಗೆ್ ಒಂದು ರೂಪ ನೀಡಿದ್ದಾರೆ. ಅವರನ್ನು ಕೂಡ ಫೋರಂ ಸ್ಮರಿಸುತ್ತದೆ ಎಂದು ಮೇಜರ್ ನಂದಾ ಇದೇ ಸಂದರ್ಭ ತಿಳಿಸಿದರು.

See also  ವಿಶ್ವವನ್ನು ಸೆಳೆಯಲಿರುವ ಉಕ್ಕಿನ ಮನುಷ್ಯನ ಉತ್ಕೃಷ್ಟ ಪ್ರತಿಮೆ!

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು