News Kannada
Monday, October 03 2022

ನುಡಿಚಿತ್ರ

ನೇಕಾರರ ಬವಣೆ ನೀಗಿಸಲು ಉಳಿಸಲು ಯುವತಿಯ ಹೊಸ ಪ್ಲಾನ್ - 1 min read

Photo Credit :

ನೇಕಾರರ ಬವಣೆ ನೀಗಿಸಲು ಉಳಿಸಲು ಯುವತಿಯ ಹೊಸ ಪ್ಲಾನ್

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯ ಸಾಂಪ್ರದಾಯಿಕ ಕೈಮಗ್ಗದ ನೇಕಾರರು ತಮ್ಮ ಅಸ್ತಿತ್ವವನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಿರುವ ಈ ಸಮಯದಲ್ಲಿ ಯುವತಿಯೊಬ್ಬಳು ಸಾಂಪ್ರದಾಯಿಕವಾದ ಇಳಕಲ್ ಸೀರೆಯನ್ನ ಜನಪ್ರಿಯಗೊಳಿಸಲು ವಿಭಿನ್ನ ರೀತಿಯಲ್ಲಿ ಸಹಾಯವನ್ನು ಮಾಡುತ್ತಿದ್ದಾರೆ.

ಇಳಕಲ್ ನಿವಾಸಿ ತೃಪ್ತಿ ಸಲೀಮಠ್ ಅವರು ಮಾಡಲಿಂಗ್‍ನಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುತ್ತಾ ಇಳಕಲ್  ಸೀರೆಯನ್ನು ಉಟ್ಟು ವಿಭಿನ್ನವಾಗಿ ಫೋಟೋಶೂಟ್ ಮಾಡಿಸಿಕೊಳ್ಳುತ್ತಾರೆ. ನಂತರ ಅವುಗಳನ್ನ ಸಾಮಾಜಿಕ ಜಾಲತಾಣದ ಮೂಲಕ ಹರಿಬಿಡುತ್ತಾರೆ.

ನಾಗರಿಕ ಸೇವೆಯಲ್ಲಿ ಕಾರ್ಯ ನಿರ್ವಹಿಸಬೇಕು ಎಂಬ ಆಕಾಂಕ್ಷೆಯನ್ನು ಹೊಂದಿದ್ದ ತೃಪ್ತಿ ಇದೀಗ ತೊಂದರೆಗೀಡಾದ ಕೈಮಗ್ಗದ ನೇಕಾರರ ಬೆಂಬಲಕ್ಕೆ ನಿಂತಿದ್ದಾರೆ. ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್ ನಲ್ಲಿ ಪದವೀಧರರಾದ ತೃಪ್ತಿ ಅವರು ನೇಕಾರರ ದುಸ್ಥಿತಿಯನ್ನು ನೋಡಿದ ಮೇಲೆ ಅವರಿಗೆ ಸಹಾಯವನ್ನು ಮಾಡಲು ನಿರ್ಧರಿಸಿದರು. ಕೊರೋನ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಮಾರುಕಟ್ಟೆಗಳು ಸ್ಥಗಿತಗೊಂಡಿದ್ದವು ಹಾಗಾಗಿ ಹೆಚ್ಚಿನ ಸಂಖ್ಯೆಯ ಕೈಮಗ್ಗದ ನೇಕಾರರು ವಾಸಿಸಿರುವ ಸ್ಥಳಗಳಲ್ಲಿ ತೃಪ್ತಿ ಅವರು ವಾಸವಾಗಿದ್ದಾರೆ.

ಜೂನ್ 1ರಿಂದ ಮಾರುಕಟ್ಟೆಯನ್ನು ತೆರೆಯಲು ಅವಕಾಶಗಳಿದ್ದರೂ ಅಂಗಡಿಯವರು ಮಾರಾಟವನ್ನು ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಇದರ ಪರಿಣಾಮವು ನೇಕಾರರ ಮೇಲೆ ಬೀಳುತ್ತಿದೆ. ಅಲ್ಲದೆ ಕಚ್ಚಾವಸ್ತುಗಳ ಬೆಲೆಯಲ್ಲಿ ಏರಿಕೆಯಾಗಿದ್ದು ಆದಾಯದಲ್ಲಿ ಶೇಕಡ 80 ರಷ್ಟು ಕಡಿಮೆಯಾಗಿದೆ.

ಇಳಕಲ್ ಸೀರೆಯನ್ನ ಪ್ರಸಿದ್ಧಿಗೊಳಿಸುವ ನಿಟ್ಟಿನಲ್ಲಿ ತೃಪ್ತಿ ಅವರು ತಾತ್ಕಾಲಿಕವಾಗಿ ಮಾಡಲಿಂಗ್‍ನಲ್ಲಿ ತೊಡಗಿದ್ದಾರೆ. ತಮ್ಮ ಬಿಡುವಿನ ವೇಳೆಯಲ್ಲಿ ಇಳಕಲ್ ಸೀರೆಯನ್ನು ಉಟ್ಟು ಫೋಟೋಶೂಟ್ ಮಾಡಿಸಿಕೊಳ್ಳಲು ಹೋಗುತ್ತಾರೆ. ನಂತರ ಇವುಗಳ ಮಾಹಿತಿ ಹಾಗೂ ಮಾರಾಟಗಾರರು ಮತ್ತು ನೇಕಾರರ ಬಗ್ಗೆ ಮಾಹಿತಿಯನ್ನು ಸಾಮಾಜಿಕ ಜಾಲತಾಣದ ಮೂಲಕ ಹರಿಬಿಡುತ್ತಾರೆ. ಇದೇ ಕಾರಣದಿಂದ ತೃಪ್ತಿ ಅವರು ಫೇಮಸ್ ಆಗಿದ್ದಾರೆ ಕೂಡಾ.

ಇಳಕಲ್ ಸೀರೆ ಎಂಬುದು ಸ್ಥಳೀಯವಾಗಿ ಕೈಮಗ್ಗದಿಂದ ನೇಕಾರರು ತಯಾರಿಸಿದ ಸೀರೆಯಾಗಿದೆ. ಆದರೆ ನೇಕಾರರು ಮಾತ್ರ ಇದರಿಂದ ಸಾಕಷ್ಟು ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹಾಗಾಗಿ ನೇಕಾರರು ಕೈಮಗ್ಗವನ್ನು ಬಿಟ್ಟು ಇದೀಗ ಬೇರೆ ಕೆಲಸದತ್ತ ಮುಖ ಮಾಡಿದ್ದಾರೆ. ನೇಕಾರರ ಈ ಸಮಸ್ಯೆ ನೋಡಿದ ಮೇಲೆ ತೃಪ್ತಿ ಅವರು ಸಾಮಾಜಿಕ ಜಾಲತಾಣದ ಮೂಲಕ ಇವುಗಳನ್ನ ಪ್ರಚಾರಪಡಿಸಲು ಹೊರಟಿರುವುದು ಬಹಳಷ್ಟು ವೈರಲ್ ಆಗಿದೆ. ಇದರಿಂದಾಗಿ ಇಳಕಲ್ ಸೀರೆಗೆ ವಿದೇಶಗಳಿಂದಲೂ ಕೂಡ ಬೇಡಿಕೆ ಹೆಚ್ಚಿದೆ. ಹಾಗಾಗಿ ನೇಕಾರರು ತಮ್ಮ ಕೈಮಗ್ಗದ ಕಡೆ ಮತ್ತೆ ಮರಳುತ್ತಿದ್ದಾರೆ.

ತೃಪ್ತಿ ಅವರು ನೇಕಾರರ ಸಮುದಾಯದವರಲ್ಲ ಆದರೂ ಕೂಡ ನೇಕಾರರ ಸಮಸ್ಯೆಯನ್ನು ಅರಿತು ಅವರಿಗೆ ಸಹಾಯ ಹಸ್ತವನ್ನು ಚಾಚಲು ಹೊರಟಿದ್ದಾರೆ. ಇದಕ್ಕೆ ತೃಪ್ತಿ ಅವರ ಪೋಷಕರು ಕೂಡ ಬೆಂಬಲವನ್ನು ನೀಡಿದ್ದಾರೆ ಎಂದು ತೃಪ್ತಿ ಅವರು ಹೇಳಿದ್ದಾರೆ. ಅಮೆರಿಕದ ಕ್ಯಾಲಿಫೋರ್ನಿಯಾದ ಅಶ್ವಿನಿ ಸುಬ್ಬಣ್ಣ ಅವರು ವಿದೇಶದಲ್ಲಿ ಸೀರೆಯ ಉತ್ತೇಜನಕ್ಕೆ ಸಹಕಾರಿಯಾದರು. ನಾನು ಐಎಎಸ್ ಆಗುವ ಗುರಿ ಹೊಂದಿದ್ದು, ಬಿಡುವಿನ ವೇಳೆಯಲ್ಲಿ ಸಾಮಾಜಿಕ ಕಾರ್ಯದಲ್ಲಿ ತೊಡಗುತ್ತೇನೆ ಎಂದು 26 ವರ್ಷದ ತೃಪ್ತಿ ಅವರು ಅಭಿಪ್ರಾಯಪಟ್ಟಿದ್ದಾರೆ.

See also  ಕಾರ್ಮಿಕರ ದಿನಾಚರಣೆಗೆ ಅರ್ಥ ಬರುವುದು ಯಾವಾಗ?

ನೇಕಾರ ಮತ್ತು ಎಸ್.ಎಲ್ ಇಳಕಲ್ ಮಾಲೀಕರಾದ ದೀಪಕ್ ಸರೋದ್ ಅವರು ನಾವು ಇಳಕಲ್ ಸೀರೆ ಮಾರಾಟ ಮಾಡಲು ಹೆಣಗಾಡುತ್ತಿದ್ದೆವು, ಆದರೆ ಇದೀಗ ನೆರೆಯ ಮಹಾರಾಷ್ಟ್ರದಿಂದ ನಮಗೆ ಹೆಚ್ಚಿನ ಆರ್ಡರ್ ಬರುತ್ತಿವೆ. ಲಾಕ್ ಡೌನ್ ನಿಂದ ನೇಕಾರರು ತಮ್ಮ ಉತ್ಪನ್ನವನ್ನು ಮಾರುಕಟ್ಟೆಗೆ ತರಲು ಕಷ್ಟಪಡುತ್ತಿದ್ದರು. ಆದರೆ ತೃಪ್ತಿ ಅವರ ಈ ಕಾರ್ಯದಿಂದಾಗಿ ನಮಗೆ ಅನುಕೂಲವಾಗಿದ್ದು ಹೆಚ್ಚಿನ ಆರ್ಡರ್‍ಗಳನ್ನು ಪಡೆಯುತ್ತಿದ್ದೇವೆ. ಇದೀಗ ನಾವು ಇಳಕಲ್ ಸೀರೆಯನ್ನು ವಿದೇಶಗಳಿಗೆ ರಪ್ತು ಮಾಡಲು ಪ್ರಾರಂಭಿಸಿದ್ದೇವೆ. ಇಷ್ಟೆಲ್ಲಾ ಸಾಧ್ಯ ಆಗಿದ್ದು ತೃಪ್ತಿ ಅವರಿಂದ ಹಾಗಾಗಿ ತೃಪ್ತಿ ಅವರಿಗೆ ಧನ್ಯವಾದಗಳನ್ನು ತಿಳಿಸುತ್ತೇವೆ ಎಂದಿದ್ದಾರೆ.

ಅನುವಾದ: ಪವನ್ ಮಲ್ನಾಡ್

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು