ಟೊಮ್ಯಾಟೊ ಬೆಚ್ಚನೆ ಋತುವಿನ ಬೆಳೆಯಾಗಿದ್ದು, ಹಿಮ ಮತ್ತು ಹೆಚ್ಚಿನ ಆರ್ದ್ರತೆಯನ್ನು ತಡೆದುಕೊಳ್ಳುವುದಿಲ್ಲ. ಈ ಸಸ್ಯವು ಬೀಜ ಮೊಳಕೆಯೊಡೆಯಲು, ಬೆಳವಣಿಗೆಯಾಗಲು, ಹೂ ಬಿಡಲು ಹಾಗೂ ಹಣ್ಣು ಬೆಳೆಯಲು ವಿಭಿನ್ನ ಹವಾಮಾನದ ಅಗತ್ಯವಿರುತ್ತದೆ.
ಟೊಮ್ಯಾಟೊ ಸಸ್ಯಗಳು ವಾಸ್ತವವಾಗಿ ಬಳ್ಳಿಗಳಾಗಿದ್ದು ಸಾಕಷ್ಟು ಬೆಂಬಲ ನೀಡಿದರೆ 6 ಅಡಿ ಎತ್ತರಕ್ಕೆ ಬೆಳೆಯಬಹುದು. ಇದು ಬಹುವಾರ್ಷಿಕ ಬೆಳೆಯಾಗಿದ್ದು ಹಸಿರು ಮನೆಗಳಲ್ಲಿ ೩ ವರ್ಷಗಳವರೆಗೆ ಬದುಕುತ್ತವೆ.
ಮಣ್ಣಿನ ಅವಶ್ಯಕತೆ: ಇದು ಹಗುರ, ಮರಳು ಮಣ್ಣಿನಿಂದ ಹಿಡಿದು ಭಾರಿ ಮಣ್ಣಿನವರೆಗೂ ಎಲ್ಲಾ ರೀತಿಯ ಮಣ್ಣಿನಲ್ಲಿ ಬೆಳೆಯಬಹುದಾಗಿದೆ. ಹೆಚ್ಚಿನ ಖನಿಜವಿರುವ ಮಣ್ಣುಗಳ ಮೇಲೆ ಟೊಮ್ಯಾಟೊ ಗಿಡ ಉತ್ತಮವಾಗಿ ಬೆಳೆಯುತ್ತದೆ. ಮರಳು ಮಣ್ಣು ಮತ್ತು ಜೇಡಿ ಮಣ್ಣಿನಲ್ಲಿ ಉತ್ತಮವಾ ಫಸಲು ನೀಡುತ್ತದೆ. ಸಾಕಷ್ಟು ಪೋಶಕಾಂಶಗಳ ಲಭ್ಯತೆ ಮತ್ತು ಆಮ್ಲೀಯ ಮಣ್ಣಿನಲ್ಲಿ ಟೊಮ್ಯಾಟೊ ಸಸ್ಯ ಉತ್ತಮವಾಗಿ ಬೆಳವಣಿಗೆಯಾಗುತ್ತದೆ.
ಹೆಚ್ಚಿನ ಸಾವಯವ ಅಂಶವನ್ನು ಹೊಂದಿರುವ ಮಣ್ಣನ್ನು ಶಿಫಾರಸ್ಸು ಮಾಡಲಾಗುವುದಿಲ್ಲ, ಏಕೆಂದರೆ ಹೆಚ್ಚಿನ ಸಾವಯವ ಇರುವ ಮಣ್ಣಿನಲ್ಲಿ ಸ್ವಾಭಾವಿಕ ತೇವಾಂಶ ಹೆಚ್ಚಿದ್ದು ಇದನ್ನು ಟೊಮ್ಯಾಟೊ ಬೆಳೆ ಸಹಿಸಲಾರವು. ಟೊಮ್ಯಟೊ ಬೇಸಾಯಕ್ಕೆ ಮೊದಲು ೫ ಬಾರಿ ಉಳುಮೆ ಬೇಕಾಗುತ್ತದೆ.
ಹವಾಮಾನ: ಬೆಚ್ಚನೆಯ ಋತುವಿನ ಬೆಳೆಯಾಗಿರುವುದರಿಂದ ಟೊಮ್ಯಾಟೊ ಬೆಳೆಗೆ 21 ಡಿಗ್ರಿ ಯಿಂದ 23 ಡಿಗ್ರಿ ತಾಪಮಾನದ ಅಗತ್ಯವಿರುತ್ತದೆ.
ಆರೋಗ್ಯ ಪ್ರಯೋಜನಗಳು:
• ಮೆದುಳಿನ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ
• ಮೆಟಾಬಾಲಿಕ್ ಸಿಂಡ್ರೋಮ್‌ಅನ್ನು ಕಡಿಮೆಗೊಳಿಸಲು ಸಹಾಯ ಮಾಡುತ್ತದೆ.
• ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.
• ಮಲಬದ್ದತೆಯನ್ನು ಕಡಿಮೆ ಮಾಡುತ್ತದೆ.
• ಟೈಪ್ ೨ ಮಧುಮೇಹವನ್ನು ತಡೆಯಲು ಸಹಾಯ ಮಾಡುತ್ತದೆ.
• ಕ್ಯಾನ್ಸರ್ ನ ಅಪಾಯವನ್ನು ಕಡಿಮೆಮಾಡುತ್ತದೆ.
• ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ.