NewsKarnataka
Friday, January 28 2022

ಗಾಂಧಿನಗರ

ಸೂರ್ಯ ಅಭಿಮಾನಿಗಳಿಗೆ ಗುಡ್‌ನ್ಯೂಸ್‌– ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾಗಲಿದೆ 4 ಚಿತ್ರ

ಚೆನ್ನೈ: ತಮಿಳು ಸೂಪರ್‌ಸ್ಟಾರ್ ಸೂರ್ಯ ಅವರು ಅಮೆಜಾನ್ ಪ್ರೈಮ್ ವೀಡಿಯೊದ ಜತೆ ವಿಶೇಷ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಈ ಒಪ್ಪಂದದಡಿಯಲ್ಲಿ ಅವರ ನಾಲ್ಕು ಮುಂಬರುವ ಚಿತ್ರಗಳು ನೇರವಾಗಿ ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗಲಿವೆ.

ಮುಂದಿನ ನಾಲ್ಕು ತಿಂಗಳಲ್ಲಿ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಸೂರ್ಯ ಅವರ ನಿರ್ಮಾಣ ಸಂಸ್ಥೆ 2ಡಿ ಎಂಟರ್‌ಟೈನ್‌ಮೆಂಟ್‌ನ ಮುಂದಿನ ನಾಲ್ಕು ತಮಿಳು ಚಿತ್ರಗಳು ಪ್ರದರ್ಶನಗೊಳ್ಳಲಿವೆ.

ಈ ಹಿಂದೆ ಪೊನ್ಮಂಗಲ್ ವಂದಲ್ ಮತ್ತು ಸೂರರೈ ಪೊಟ್ರು ನಂತಹ ಚಿತ್ರಗಳನ್ನು ಒಟಿಟಿಯಲ್ಲಿ ಅಭಿಮಾನಿಗಳು ವೀಕ್ಷಿಸಿದ್ದರು. ಈ ಪಾಲುದಾರಿಕೆಯಲ್ಲಿ ಮತ್ತೊಂದು ಹೆಜ್ಜೆ ಹಾಕಲು ನನಗೆ ಸಂತೋಷವಾಗುತ್ತಿದೆ ಎಂದು 2ಡಿ ಎಂಟರ್‌ಟೈನ್‌ಮೆಂಟ್‌ನ ಸಂಸ್ಥಾಪಕ ಸೂರ್ಯ ಪ್ರಕಟಣೆಯಲ್ಲಿ ಹೇಳಿದ್ದಾರೆ.

ಈಗ ಜೈ ಭೀಮ್, ಕೌಟುಂಬಿಕ ಚಿತ್ರ ಉದನ್‌ಪಿರಪ್ಪೆ, ಮಕ್ಕಳ ಚಿತ್ರ ಓ ಮೈ ಡಾಗ್ ಮತ್ತು ವಿಡಂಬನಾತ್ಮಕ ಚಿತ್ರ ರಾಮನ್ ಆಂಡಲಂ ರಾವಣನ್ ಆಂಡಲಮ್ ಅಮೆಜಾನ್ ಪ್ರೈಮ್ ನಲ್ಲಿ ನಲ್ಲಿ ಬಿಡುಗಡೆಯಾಗುತ್ತಿವೆ. ಈ ಮೂಲಕ ಕೋವಿಡ್‌ ಕಾಲಘಟ್ಟದಲ್ಲಿ ತಮ್ಮ ಅಭಿಮಾನಿಗಳಿಗೆ ಮನೆಯಲ್ಲೇ ಸಿನಿಮಾ ನೋಡುವ ಗುಡ್‌ನ್ಯೂಸ್ ನೀಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

149
Subscribe to our Brand New YouTube Channel

Subscribe Newsletter

Get latest news karnataka updates on your email.