ಬೆಂಗಳೂರು: ಕಾಂತಾರ ಚಿತ್ರದ ಮೂಲಕ ಹೊಸ ಅಲೆ ಸೃಷ್ಟಿಸಿದ ಸ್ಯಾಂಡಲ್‌ವುಡ್ ನಟಿ ಸಪ್ತಮಿ ಗೌಡ ಅವರನ್ನು ತಮ್ಮ ಮುಂಬರುವ ಕನ್ನಡ ಚಲನಚಿತ್ರ ‘ಯುವ’ ಗಾಗಿ ತಯಾರಕರು ಆಯ್ಕೆ ಮಾಡಿದ್ದಾರೆ. ಸಂತೋಷ್ ಆನಂದರಾಮ್ ಅವರ ನಿರ್ದೇಶನದ ಮಾಡಿದ್ದು, ವರನಟ ಡಾ. ರಾಜ್‌ಕುಮಾರ್ ಅವರ ಮೊಮ್ಮಗ ಯುವ ರಾಜ್ ಕುಮಾರ್ ಅವರ ಮೊದಲ ಚಿತ್ರವಾಗಿದೆ.
‘ಯುವ’ ಈ ವರ್ಷ ಡಿಸೆಂಬರ್ 22 ರಂದು ಬಿಡುಗಡೆಯಾಗಲಿದೆ ಮತ್ತು ಮೊದಲಿಗೆ ಕನ್ನಡ ಭಾಷೆಯಲ್ಲಿ ಬಿಡುಗಡೆಯಾಗಲಿದೆ. ಇನ್ನುಳಿದ ಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಮಾಡುವ ಯೋಜನೆಯೂ ಇದೆ. ಹೊಂಬಾಳೆ ಫಿಲ್ಮ್ಸ್ ಚಿತ್ರ ನಿರ್ಮಾಣ ಮಾಡಲಿದ್ದು, 2022 ರಲ್ಲಿ ‘ಕೆಜಿಎಫ್ 2’ ಮತ್ತು ‘ಕಾಂತಾರ’ ಚಿತ್ರವೂ ದೇಶದ ಯಶಸ್ವಿ ಚಿತ್ರವಾಗಿ ಹೆಸರು ಪಡೆದಿತ್ತು.
ಹೊಂಬಾಳೆ ಫಿಲ್ಮ್ಸ್ ತನ್ನ ನಿರ್ಮಾಣದ ಹೊಸ ಆಕ್ಷನ್ ಥ್ರಿಲ್ಲರ್ ‘ಸಾಲಾರ್’ ಸೆಪ್ಟೆಂಬರ್‌ನಲ್ಲಿ ಬಿಡುಗಡೆಗೊಳ್ಳಲಿದೆ.