ಈ ಬಗ್ಗೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ‘ಅಕ್ಟೋಬರ್ 14ರಂದು ತೆರೆ ಕಾಣಲಿರುವ ಸಲಗ ಚಿತ್ರದ ತಂಡದವರು ನಾಯಕ ನಟ ದುನಿಯಾ ವಿಜಯ್ ಅವರ ನೇತೃತ್ವದಲ್ಲಿ ಇಂದು ನನ್ನನ್ನು ಭೇಟಿ ಮಾಡಿದರು. ಶಾಸಕರಾದ ಬೈರತಿ ಸುರೇಶ್ ಅವರು ಈ ವೇಳೆ ಹಾಜರಿದ್ದರು. ದುನಿಯಾ ವಿಜಯ್ ಒಬ್ಬ ಪ್ರತಿಭಾನ್ವಿತ ನಟ, ಹೆಚ್ಚಿನ ಶ್ರಮವಹಿಸಿ ಸಿನೆಮಾ ಮಾಡಿದ್ದಾರೆ. ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ’ ಎಂದು ಟ್ವೀಟ್ ಮಾಡಿದ್ದಾರೆ ಸಿದ್ದರಾಮಯ್ಯ.
ಸಲಗ ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸಿದ ಸಿದ್ದು
Photo Credit :
ಬೆಂಗಳೂರು : ದುನಿಯಾ ವಿಜಯ್ ನಟನೆ ಹಾಗೂ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ “ಸಲಗ” ಚಿತ್ರತಂಡ ಮಾಜಿ ಸಿಎಂ ಸಿದ್ದರಾಮಯ್ಯನವರನ್ನು ಭೇಟಿ ಮಾಡಿದೆ.
ಅಕ್ಟೋಬರ್ 14ರಂದು ‘ಸಲಗ’ ಸಿನಿಮಾ ತೆರೆಗೆ ಬರುತ್ತಿದೆ. ಈ ಸಿನಿಮಾಗೆ ದೊಡ್ಡ ಮಟ್ಟದಲ್ಲಿ ಪ್ರಚಾರ ನೀಡಲಾಗುತ್ತಿದೆ. ಇಂದು ‘ಸಲಗ’ ತಂಡ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದೆ. ಸಿದ್ದರಾಮಯ್ಯ ಅವರು ಚಿತ್ರತಂಡಕ್ಕೆ ಶುಭಕೋರಿದ್ದಾರೆ.
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.