News Kannada
Thursday, March 23 2023

ಸಾಂಡಲ್ ವುಡ್

`ಕಿರಿಕ್ ಕೀರ್ತಿ’ ಮೇಲೆ ಹಲ್ಲೆ : ಗಂಭೀರ ಗಾಯ, ಆಸ್ಪತ್ರೆಗೆ ದಾಖಲು

Photo Credit :

ಬೆಂಗಳೂರು : ಬೆಂಗಳೂರಿನ ಸದಾಶಿವನಗರದ ಪಬ್ ನಲ್ಲಿ ತಡರಾತ್ರಿ ಬಿಗ್​ಬಾಸ್  ಸ್ಪರ್ಧಿ ಕಿರಿಕ್​ ಕೀರ್ತಿ ಮೇಲೆ ಬಿಯರರ್ ಬಾಟಲ್ ನಿಂದ ಹಲ್ಲೆ ಮಾಡಿರುವ ಘಟನೆ ನಡೆದಿದೆ.ತಡರಾತ್ರಿ ಬೆಂಗಳೂರಿನ ಸದಾಶಿವನಗರದ ಪಬ್​ನಲ್ಲಿ ಪೋಟೋ ವಿಚಾರಕ್ಕೆ ಸಂಬಂಧಿಸಿದಂತೆ ಕಿರಿಕ್ ಕೀರ್ತಿ ಮೇಲೆ ವ್ಯಕ್ತಿಯೊಬ್ಬ ಬಿಯರ್​ ಬಾಟಲ್​ನಿಂದ ಹಲ್ಲೆ ಮಾಡಿರುವ ಘಟನೆ ನಡೆದಿದೆ.

 

ಸದಾಶಿವನಗರ ಪಬ್​ ಗೆ ಕಿರಿಕ್ ಕೀರ್ತಿ ತಮ್ಮ ಸ್ನೇಹಿತರೊಂದಿಗೆ ಹೋಗಿದ್ದರು. ಈ ವೇಳೆ ಅಲ್ಲಿದ್ದ ಒಬ್ಬ ವ್ಯಕ್ತಿಯೊಬ್ಬ ಕಿರಿಕ್​ ಕೀರ್ತಿ ಅವರ ಫೋಟೋ ತೆಗೆದಿದ್ದಾರೆ. ನನ್ನ ಪರ್ಮಿಷನ್​ ಇಲ್ಲದೇ ಯಾಕೆ ಫೋಟೋ ತೆಗೆದುಕೊಂಡಿದ್ದೀರ ಎಂದು ಕಿರಿಕ್​ ಕೀರ್ತಿ ಕೇಳಿದ್ದಾರೆ. ಹೀಗಾಗಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಕುಪಿತಗೊಂಡ ಆ ವ್ಯಕ್ತಿ ಬಿಯರ್​ ಬಾಟಲ್​ ನಿಂದ ಕಿರಿಕ್​ ಕೀರ್ತಿ ತಲೆಗೆ ಹೊಡೆದಿದ್ದಾನೆ.

ಸದ್ಯ ಗಾಯಗೊಂಡಿರುವ ಕಿರಿಕ್​ ಕೀರ್ತಿ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಘಟನೆ ಸಂಬಂಧ ಸದಾಶಿವನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

See also  ಗಂಟುಮೂಟೆ ನಾಯಕನ ಕೈಯಲ್ಲಿ ಈಗ ‘ಕಂಟ್ರಿಮೇಡ್': ಶುಭ ಹಾರೈಸಿದ ವಿಜಯ್, ವಸಿಷ್ಠ ಸಿಂಹ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು