News Kannada
Friday, December 09 2022

ಸಾಂಡಲ್ ವುಡ್

‘ಈಗ’ ಸಿನಿಮಾ ನಟಿ ಹಂಸ ನಂದಿನಿಗೆ ಸ್ತನ ಕ್ಯಾನ್ಸರ್​

Photo Credit :

ತೆಲುಗು ಹಾಗೂ ಕನ್ನಡ ಚಿತ್ರರಂಗದಲ್ಲಿ ಬಣ್ಣ ಹಚ್ಚಿದ ಹಂಸ ನಂದಿನಿ ಅವರಿಗೆ ಕ್ಯಾನ್ಸರ್​ ಪತ್ತೆ ಆಗಿದೆ. ಅವರನ್ನು ನೋಡಿ ಅಭಿಮಾನಿಗಳು ನಿಜಕ್ಕೂ ಶಾಕ್​ ಆಗಿದ್ದಾರೆ. ಕೂದಲು ಇಲ್ಲದ ತಲೆಯ ಫೋಟೋವನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ತಾವು ಕ್ಯಾನ್ಸರ್​ಗೆ ಚಿಕಿತ್ಸೆ ಪಡೆಯುತ್ತಿರುವ ಬಗ್ಗೆ ಘೋಷಣೆ ಮಾಡಿದ್ದಾರೆ. ಈ ವಿಚಾರ ಅವರ ಅಭಿಮಾನಿಗಳಲ್ಲಿ ನಿಜಕ್ಕೂ ಆತಂಕ ಮೂಡಿಸಿದೆ. ಅವರು ಈ ಹೋರಾಟದಲ್ಲಿ ಗೆದ್ದು ಬರಲಿದೆ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ. ಕ್ಯಾನ್ಸರ್​ ಪತ್ತೆ ಆದ ಮಧ್ಯೆಯೂ ಅವರ ಪಾಸಿಟಿವಿಟಿ ನೋಡಿ ಅಭಿಮಾನಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಹಂಸ ನಂದಿನಿ ಇತ್ತೀಚೆಗೆ ಸೋಶಿಯಲ್​ ಮೀಡಿಯಾದಿಂದ ದೂರವೇ ಉಳಿದಿದ್ದರು. ಅವರು ಯಾವುದೇ ಪೋಸ್ಟ್​ಗಳನ್ನು ಹಾಕಿರಲಿಲ್ಲ. ಇದನ್ನು ಕಂಡು ಅಭಿಮಾನಿಗಳು ಅನುಮಾನ ವ್ಯಕ್ತಪಡಿಸಿದ್ದರು. ಅಭಿಮಾನಿಗಳು ಸಾಕಷ್ಟು ಪ್ರಶ್ನೆಗಳನ್ನು ಕೂಡ ಇಟ್ಟಿದ್ದರು. ಇದೆಲ್ಲದಕ್ಕೂ ಅವರು ಒಂದೇ ಪೋಸ್ಟ್​ ಮೂಲಕ ಉತ್ತರ ನೀಡಿದ್ದಾರೆ. ತಲೆಯ ಕೂದಲನ್ನು ಸಂಪೂರ್ಣವಾಗಿ ತೆಗೆದ ಫೋಟೋವನ್ನು ಅವರು ಹಂಚಿಕೊಂಡಿದ್ದಾರೆ. ಅಲ್ಲದೆ, ತಮಗೆ ಕ್ಯಾನ್ಸರ್​ ಇದೆ ಎಂದು ಬರೆದುಕೊಂಡಿದ್ದಾರೆ.

‘ಜೀವನದಲ್ಲಿ ನಡೆಯುವ ಈ ಘಟನೆ ನನಗೆ ಅನ್ಯಾಯವೆಂದು ತೋರುತ್ತದೆಯಾದರೂ, ನಾನು ಬಲಿಪಶು ಆಗೋಕೆ ನಿರಾಕರಿಸುತ್ತೇನೆ. ನನಗೆ ನಾಲ್ಕು ತಿಂಗಳ ಹಿಂದೆ ಸ್ತನ ಕ್ಯಾನ್ಸರ್​ ಪತ್ತೆ ಆಯಿತು. ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ನಾನು ಅನೇಕ ಶಸ್ತ್ರಚಿಕಿತ್ಸೆಗಳಿಗೆ ಒಳಪಡಬೇಕಾಗುತ್ತದೆ. ಎಲ್ಲಾ ಅಪಾಯಗಳನ್ನು ತೊಡೆದುಹಾಕುವುದು ಅಸಾಧ್ಯ. ಈ ಕ್ಯಾನ್ಸರ್ ಎಂಬ ಅಪಾಯವು ನಾನು ಬದುಕಿರುವವರೆಗೂ ಇರುತ್ತದೆ. ನಾನು ಈಗಾಗಲೇ 9 ಬಾರಿ ಕೀಮೋಥೆರಪಿಗೆ ಒಳಗಾಗಿದ್ದೇನೆ. ಇನ್ನೂ 7 ಬಾರಿ ಈ ಥೆರಪಿಗೆ ಒಳಗಾಗಬೇಕು’ ಎಂದು ಅವರು ಬರೆದುಕೊಂಡಿದ್ದಾರೆ. ಈಗ ಅವರ ಒಂದು ಸ್ತನಕ್ಕೆ ಮಾತ್ರ ಕ್ಯಾನ್ಸರ್​ ಇದ್ದು, ಮತ್ತೊಂದು ಸ್ತನಕ್ಕೂ ಈ ಕ್ಯಾನ್ಸರ್​ ಹಬ್ಬುವ ಸಾಧ್ಯತೆ ಶೇ. 70 ಇದೆಯಂತೆ.

2004ರಲ್ಲಿ ಹಂಸ ಅವರು ಚಿತ್ರರಂಗಕ್ಕೆ ಕಾಲಿಟ್ಟರು. 2006ರಲ್ಲಿ ತೆರೆಗೆ ಬಂದ ಕನ್ನಡದ ‘ಮೋಹಿನಿ 9886788888’ ಸಿನಿಮಾ ಮೂಲಕ ಅವರು ಸ್ಯಾಂಡಲ್​ವುಡ್​ಗೂ ಕಾಲಿಟ್ಟರು. ಪ್ರಭಾಸ್​ ನಟನೆಯ ‘ಮಿರ್ಚಿ’ ಚಿತ್ರದಲ್ಲಿ ವಿಶೇಷ ಹಾಡಿಗೆ ಹೆಜ್ಜೆ ಹಾಕಿದರೆ, ಸುದೀಪ್​ ಅಭಿನಯದ ‘ಈಗ’ ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡಿದ್ದರು. 2018ರಲ್ಲಿ ಬಂದ ‘ಪಂತಂ’ ಸಿನಿಮಾ ಕೊನೆ. ಅದಾದ ನಂತರ ಅವರು ಯಾವುದೇ ಚಿತ್ರಗಳಲ್ಲೂ ನಟಿಸಿಲ್ಲ.

See also  ‘ಸರ್ಕಾರು ವಾರಿ ಪಾಟ’ ಚಿತ್ರದ ಸಾರಾಂಶದಂತೆಯೇ ಇದೀಗ ಸುಪ್ರೀಂ ಕೋರ್ಟ್‌ ತೀರ್ಪು!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12790
NewsKannada

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು