News Kannada
Thursday, September 29 2022

ಸಾಂಡಲ್ ವುಡ್

12 ಕಿ.ಮೀ ಉದ್ದದ ವರ್ತುಲ ರಸ್ತೆಗೆ ‘ಪುನೀತ್​ ರಾಜ್​ಕುಮಾರ್’ ಹೆಸರಿಡಲು ಅಧಿಕೃತ ಅನುಮೋದನೆ ನೀಡಿದ ಬಿಬಿಎಂಪಿ - 1 min read

Photo Credit :

ಬೆಂಗಳೂರು : ಸ್ಯಾಂಡಲ್​ವುಡ್​ ನಟ ಪವರ್ ಸ್ಟಾರ್ `ಪುನೀತ್ ರಾಜ್ ಕುಮಾರ್’ ಅಕಾಲಿಕ ನಿಧನ ಅಭಿಮಾನಿಗಳಿಗೆ ಆಘಾತವನ್ನುಂಟುಮಾಡಿತ್ತು. ಅವರ ನೆನೆಪು ಎಂದಿಗೂ ಮಾಸುವುದಿಲ್ಲ. ಅವರ ನೆನೆಪು ಸದಾಕಾಲ ಉಳಿಯಲು ಇದೀಗ 12 ಕಿ.ಮೀ ಉದ್ದದ ವರ್ತುಲ ರಸ್ತೆಗೆ ‘ಪುನೀತ್​ ರಾಜ್​ಕುಮಾರ್ ರಸ್ತೆ’ಎಂದು ನಾಮಕರಣ ಮಾಡಲು ಬಿಬಿಎಂಪಿ ಅಧಿಕೃತ ಅನುಮೋದನೆ ನೀಡಿದೆ.

ʻಪುನೀತ್ ರಾಜ್​ಕುಮಾರ್ ರಸ್ತೆʼ ನಾಮಕರಣಕ್ಕೆ ಬಿಬಿಎಂಪಿ ಅಧಿಕೃತ ಅನುಮೋದನೆ ನೀಡಿದ್ದು, ಈ ಸಂಬಂಧ ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್ ನಿರ್ಣಯ ಕೈಗೊಂಡು ಅನುಮೋದನೆ ನೀಡಿದ್ದಾರೆ.

ಮೈಸೂರು ರಸ್ತೆಯ ನಾಯಂಡನ ಹಳ್ಳಿ ಜಂಕ್ಷನ್​ನಿಂದ ಬನ್ನೇರುಘಟ್ಟ ರಸ್ತೆಯ ವೆಗಾಸಿಟಿ ಮಾಲ್ ಜಂಕ್ಷನ್​ವರೆಗಿನ 12 ಕಿ.ಮೀ ಉದ್ದದ ರಸ್ತೆಗೆ ಪುನೀತ್​ ಹೆಸರನ್ನು ಇಡಲಾಗುತ್ತದೆ. ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಎನ್.ಆರ್.ರಮೇಶ್​ರಿಂದ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಮತ್ತು ಆಡಳಿತಾಧಿಕಾರಿಗಳಿಗೆ ಮನವಿ ಮಾಡಲಾಗಿತ್ತು. ಪುನೀತ್ ರಾಜ್​ಕುಮಾರ್ ರಸ್ತೆ ಹೊಸಕೆರೆ ಹಳ್ಳಿ, ದೇವೇಗೌಡ ಪೆಟ್ರೋಲ್ ಬಂಕ್ – ಕದಿರೇನ ಹಳ್ಳಿ ಪಾರ್ಕ್ – ಸಾರಕ್ಕಿ ಸಿಗ್ನಲ್ – ಜೆ.ಪಿ.ನಗರವನ್ನು ಸಂಪರ್ಕಿಸಲಿದೆ.

ಪುನೀತ್ ರಾಜ್​ಕುಮಾರ್ ಹೆಸರನ್ನು ರಸ್ತೆಗೆ ನಾಮಕರಣ ಮಾಡುವ ಸಂಬಂಧ ಬಿಬಿಎಂಪಿ ಡಿಸೆಂಬರ್ ಅಂತ್ಯದಲ್ಲಿ ಪತ್ರಿಕಾ ಪ್ರಕಟಣೆ ಹೊರಡಿಸಿತ್ತು. ಆಕ್ಷೇಪಣೆಗಳಿದ್ದಲ್ಲಿ 30 ದಿನಗಳ ಒಳಗೆ ಸಲ್ಲಿಸುವಂತೆ ತಿಳಿಸಲಾಗಿತ್ತು. ರಸ್ತೆಗೆ ‘ಶ್ರೀ.ಪುನೀತ್ ರಾಜ್​ಕುಮಾರ್ ರಸ್ತೆ’ ಎಂದು ನಾಮಕರಣ ಮಾಡಬಹುದಾಗಿತ್ತೆಂದು ರಸ್ತೆಯ ಸಮೀಪದ ಬಡಾವಣೆಗಳಿಗೆ ಸೇರಿರುವ 8 ಸಂಘಸಂಸ್ಥೆಗಳ 700ಕ್ಕೂ ಹೆಚ್ಚು ಜನ ಸಹಿ ಮಾಡಿದ್ದರು.

ಬೆಂಗಳೂರು ಮಹಾನಗರ ಜಿಲ್ಲಾ ಡಾ.ಅಂಬರೀಶ್ ಅಭಿಮಾನಿಗಳ ಸಂಘ ಹಾಗೂ ದೇವರಮಗ ಅಭಿಷೇಕ್ ಅಂಬರೀಶ್ ಟ್ರಸ್ಟ್​​​ ಮನವಿ ಪತ್ರ ಸಲ್ಲಿಸಿ ರಸ್ತೆಗೆ ‘ಡಾ.ಅಂಬರೀಶ್ ರಸ್ತೆ’ ಎಂದು ನಾಮಕರಣ ಮಾಡಲು ಕೋರಿದ್ದರು. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಸಭೆಯ ಅಧಿಕಾರದಿಂದ ರಸ್ತೆಗೆ ‘ಪುನೀತ್ ರಾಜ್​ಕುಮಾರ್ ರಸ್ತೆ’ ಎಂದು ನಾಮಕರಣ ಮಾಡಲು ಅನುಮೋದನೆ ನೀಡಲಾಗಿದೆ.

ಆದಷ್ಟು ಶೀಘ್ರವಾಗಿ ಮುಖ್ಯಮಂತ್ರಿಗಳಿಂದ ಪುನೀತ್ ರಾಜ್‍ಕುಮಾರ್ ರಸ್ತೆಯ ನಾಮಕರಣ ಸಮಾರಂಭವನ್ನು ರಾಜ್ ಕುಟುಂಬದ ಎಲ್ಲಾ ಸದಸ್ಯರ ಸಮ್ಮುಖದಲ್ಲಿ ಏರ್ಪಡಿಸಲಾಗುವುದು ಎಂದು ಎನ್.ಆರ್ ರಮೇಶ್ ಮಾಹಿತಿ ನೀಡಿದ್ದಾರೆ.‌

See also  ಅರಮನೆ ಮೈದಾನದಲ್ಲಿ ಇಂದು “ಪುನೀತ್‌ ನಮನ’ ಕಾರ್ಯಕ್ರಮ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12790
NewsKannada

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು