ಮಾಂಸಹಾರದ ಜತೆಗಿರಲಿ ಮುಳ್ಳುಸೌತೆ

ಮಾಂಸಹಾರದ ಜತೆಗಿರಲಿ ಮುಳ್ಳುಸೌತೆ

YK   ¦    Aug 31, 2019 04:03:10 PM (IST)
ಮಾಂಸಹಾರದ ಜತೆಗಿರಲಿ ಮುಳ್ಳುಸೌತೆ

ಮನಷ್ಯನ ದೇಹವನ್ನು ತಂಪಾಗಿರಿಸಿ ಆರೋಗ್ಯವನ್ನು ಹದವಾಗಿ ಇಟ್ಟುಕೊಳ್ಳುವಲ್ಲಿ ಮುಳ್ಳು ಸೌತೆ(ಇಂಗ್ಲಿಷ್ ನಲ್ಲಿ ಕುಕುಂಬರ್) ಆರೋಗ್ಯಕ್ಕೆ ತುಂಬಾ ಉತ್ತಮವಾಗಿದೆ. ಮಾಂಸಹಾರ ಸೇವಿಸುವಾಗ ಹೆಚ್ಚಾಗಿ ಭಾರತೀಯರು ಮುಳ್ಳುಸೌತೆಯನ್ನು ಜತೆ ಜತೆಗೆ ಸೇವಿಸುತ್ತಾರೆ.

ಸೌತೆಕಾಯಿ ಸೇವಿಸುವುದರಿಂದ ದೇಹಕ್ಕೆ ಆಗುವ ಪ್ರಯೋಜನ

ಮೂತ್ರಕೋಶದ ನೋವನ್ನು ನಿವಾರಣೆ ಮಾಡುತ್ತದೆ.

ಮನುಷ್ಯನ ದೇಹದ ತೂಕ ಇಳಿಕೆಗೆ ಸಹಾಯವಾಗುತ್ತದೆ

ಸೌತೆಯನ್ನು ಕಟ್ ಮಾಡಿ ಕಣ್ಣಿನ ಭಾಗಕ್ಕೂ ಇಟ್ಟರೆ ಕಣ್ಣನ್ನು ಆರೋಗ್ಯವಾಗಿ ರಕ್ಷಿಸುವ ಜತೆಗೆ ದೃಷ್ಟಿಯನ್ನು ಚುರುಕುಗೊಳಿಸುತ್ತದೆ.

ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ. ಸ್ತನ, ಮೂತ್ರಕೋಶ ಮತ್ತು ಅಂಡಾಶಯದ ಕ್ಯಾನ್ಸರ್ ಗಳ ಅಪಾಯವನ್ನು ತಗ್ಗಿಸುವಲ್ಲಿ ಕೆಲಸ ಮಾಡುತ್ತದೆ.

ಪ್ರತಿನಿತ್ಯ ಸೌತೆಕಾಯಿಯನ್ನು ಸೇವಿಸುವುದರಿಂದ ಚರ್ಮ್ ಕಾಂತಿಯನ್ನು ಹೆಚ್ಚಿಸುತ್ತದೆ.

ಸೌತೆಕಾಯಿಯನ್ನು ಅತಿಯಾಗಿ ಸೇವಿಸುವುದರಿಂದಲೂ ಸಮಸ್ಯೆಗಳು ಉದ್ಭವಿಸುತ್ತದೆ. ಇದು ಬೇಗನೇ ಜೀರ್ಣವಾಗದಿರುವುದರಿಂದ ಹೆಚ್ಚಾಗಿ ಸೇವಿಸದರೆ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ.