ಅವಕಾಡೊದಿಂದ ತಿಂದರೆ ಗರ್ಭಿಣಿಯರಿಗೆ ಬಹಳಷ್ಟು ಲಾಭಗಳು

ಅವಕಾಡೊದಿಂದ ತಿಂದರೆ ಗರ್ಭಿಣಿಯರಿಗೆ ಬಹಳಷ್ಟು ಲಾಭಗಳು

HSA   ¦    Jun 16, 2020 02:06:53 PM (IST)
ಅವಕಾಡೊದಿಂದ ತಿಂದರೆ ಗರ್ಭಿಣಿಯರಿಗೆ ಬಹಳಷ್ಟು ಲಾಭಗಳು

ಅವಕಾಡೊ ಹಣ್ಣು ಹಲವಾರು ಪೋಷಕಾಂಶಗಳನ್ನು ಹೊಂದಿರುವಂತದ್ದಾಗಿದೆ. ಈ ಹಣ್ಣು ತಿಂದರೆ ಗರ್ಭಿಣಿಯರಿಗೆ ಹಲವಾರು ಲಾಭಗಳು ಸಿಗುವುದು. ಅವಕಾಡೊದಲ್ಲಿ ಕೊಬ್ಬು, ಇತರ ವಿಟಮಿನ್ ಗಳು ಮತ್ತು ಖನಿಜಾಂಶಗಳನ್ನು ಹೊಂದಿರುವ ಕಾರಣ ಇದು ಮಗುವಿನ ಬೆಳವಣಿಗೆಗೆ ನೆರವಾಗುವುದು.

 

ಅವಕಾಡೋದಿಂದ ಸಿಗುವ ಲಾಭಗಳು

ಫಾಲಿಕ್ ಆಮ್ಲ

ಇದರಿಂದ ಭ್ರೂಣದಲ್ಲಿರುವ ಮಗುವಿನ ಅಂಗಾಂಗಗಳ ಬೆಳವಣಿಗೆಗೆ ಹೆಚ್ಚಿನ ಮಟ್ಟದ ಫಾಲಿಕ್ ಆಮ್ಲವು ಬೇಕಾಗಿರುವುದು. ಅರ್ಧ ಕಪ್ ಹಣ್ಣಿನಲ್ಲಿ 5 ಎಂಸಿಜಿ ಫಾಲಿಕ್ ಆಮ್ಲವಿದೆ ಎಂದು ಹೇಳಲಾಗುತ್ತದೆ.

 

ರಕ್ತ ಹೀನತೆಗೆ ಪರಿಹಾರ

ಗರ್ಭಿಣಿಯರಲ್ಲಿ ಹೆಚ್ಚಾಗಿ ರಕ್ತಹೀನತೆ ಸಮಸ್ಯೆಯು ಕಂಡುಬರುವುದು. ಗರ್ಭಿಣಿಯರು ಹೆಚ್ಚಿನ ಪ್ರಮಾಣದಲ್ಲಿ ಕಬ್ಬಿನಾಂಶ ಸೇವಿಸಬೇಕು. ಇದಕ್ಕೆ ಅವಕಾಡೋ ತಿಂದರೆ ಸಾಕು.

ಜೀರ್ಣಕ್ರಿಯೆ

ಮಲಬದ್ಧತೆಯು ಗರ್ಭಿಣಿಯರಲ್ಲಿ ಸಾಮಾನ್ಯ. ಅವಕಾಡೊದಲ್ಲಿ ಉನ್ನತ ಮಟ್ಟದ ನಾರಿನಾಂಶವಿದೆ ಮತ್ತು ಇದು ಜೀರ್ಣಕ್ರಿಯೆಗೆ ಸಹಕಾರಿ.

 

ವಿಟಮಿನ್ ಗಳು

ವಿಟಮಿನ್ ಗಳಾಗಿರುವಂತಹ ಬಿ1, ಬಿ2, ಬಿ5, ಬಿ6, ಸಿ, ಇ ಮತ್ತು ಕೆ ಇದೆ. ಇದೆಲ್ಲವೂ ಗರ್ಭಿಣಿಯರ ಆರೋಗ್ಯಕ್ಕೆ ಅತ್ಯಗತ್ಯ ಮತ್ತು ಭ್ರೂಣದಲ್ಲಿರುವ ಮಗುವಿನ ಬೆಳವಣಿಗೆಗೆ ಕೂಡ.

ಮಗುವಿನ ಮೆದುಳಿನ ಬೆಳವಣಿಗೆ

ಒಂದು ಕಪ್ ಅವಕಾಡೊದಲ್ಲಿ 22 ಮಿ.ಗ್ರಾಂ. ಕೋಲೀನ್ ಅಂಶವಿದ್ದು, ಮಗುವಿನ ಮೆದುಳು ಮತ್ತು ನರಗಳ ಬೆಳವಣಿಗೆಗೆ ಇದು ಅಗತ್ಯ.