`ಓಜೋನ್ ಫಾರ್ ಲೈಫ್’ : ಇಂದು ವಿಶ್ವ ಓಜೋನ್ ದಿನ

`ಓಜೋನ್ ಫಾರ್ ಲೈಫ್’ : ಇಂದು ವಿಶ್ವ ಓಜೋನ್ ದಿನ

Megha R Sanadi   ¦    Sep 16, 2020 10:00:24 AM (IST)
`ಓಜೋನ್ ಫಾರ್ ಲೈಫ್’ : ಇಂದು ವಿಶ್ವ ಓಜೋನ್ ದಿನ

ಸೂರ್ಯನ ಬೆಳಕು ಇಲ್ಲದೆ ಭೂಮಿಯ ಮೇಲಿನ ಜೀವನ ಸಾಧ್ಯವಿಲ್ಲ. ಅದೇ ಸೂರ್ಯನಿಂದ ಹೊರಹೊಮ್ಮುವ ಶಕ್ತಿಯು ಭೂಮಿಯ ಮೇಲಿನ ಜೀವಿಗಳ ಅಭಿವೃದ್ಧಿಗೆ ಅತೀ ಅವಶ್ಯಕ. ಹಾಗಾಗಿ ಅಗತ್ಯವಿರುವ ಕಿರಣಗಳನ್ನು ಮಾತ್ರ ಭೂಮಿಯನ್ನು ತಲುಪಲು ಹಾಗೂ ಅಲ್ಟ್ರವೈಲೆಟ್ ಕಿರಣಗಳಂತಹ  ಹಾನಿಕಾರಕ ಅಲೆಗಳನ್ನು ತಡೆಯಲು ಓಜೋನ್ ಪದರಕ್ಕೆ ಮಾತ್ರ ಸಾಧ್ಯ.

ಈ ವಾಯುಮಂಡಲದ ಪದರವು ಸೂರ್ಯನ ಹಾನಿಕಾರಕ ವಿಕಿರಣದಿಂದ ಭೂಮಿಯನ್ನು ರಕ್ಷಿಸುತ್ತದೆ. ಹಾಗಾಗಿ ಈ ಪದರವನ್ನು ರಕ್ಷಿಸುವ ಹೊಣೆಗಾರಿಕೆ ಪ್ರತಿಯೊಬ್ಬ ಜೀವಿಯದ್ದು ಆಗಿದೆ, ಇದರ ಬಗ್ಗೆ ಜಾಗೃತಿ ಮೂಡಿಸುವುದಕ್ಕಾಗಿಯೇ  ಸೆಪ್ಟೆಂಬರ್ 16ರಂದು ಓಜೋನ್ ದಿನವಾಗಿ ನಿಗದಿಪಡಿಸಲಾಗಿದೆ.

ಡಿಸೆಂಬರ್ 19, 1994 ರಂದು, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಸೆಪ್ಟೆಂಬರ್ 16 ರಂದು ಓಜೋನ್ ಪದರದ ಸಂರಕ್ಷಣೆಗಾಗಿ ಅಂತರರಾಷ್ಟ್ರೀಯ ದಿನವನ್ನು ಘೋಷಿಸಿತ್ತು. ಸೆಪ್ಟೆಂಬರ್ 16, 1987 ರಂದು, ವಿಶ್ವಸಂಸ್ಥೆ ಮತ್ತು ಇತರ 45 ದೇಶಗಳು ಮಾಂಟ್ರಿಯಲ್ ಶಿಷ್ಟಾಚಾರಕ್ಕೆ ಸಹಿ ಹಾಕಿದವು, ಓಜೋನ್ ಪದರದ ಸವಕಳಿಗೆ ಕಾರಣವಾಗಬೇಕಿದ್ದ ವಸ್ತುಗಳ ಉತ್ಪಾದನೆಯನ್ನು ಕಡಿಮೆ ಮಾಡುವ ಮೂಲಕ ಓಜೋನ್ ಪದರವನ್ನು ರಕ್ಷಿಸುವುದು ಮಾಂಟ್ರಿಯಲ್ ಶಿಷ್ಟಾಚಾರದ ಉದ್ದೇಶವಾಗಿದೆ. ಈ ನಿಟ್ಟಿನಲ್ಲೇ ಈ ದಿನವನ್ನು ಪ್ರತೀ ವರ್ಷ ಅಂತರರಾಷ್ಟ್ರೀಯ ಓಜೋನ್ ದಿನವಾಗಿ ಆಚರಿಸಲಾಗುತ್ತಿದೆ.

"ಓಜೋನ್ ಫಾರ್ ಲೈಫ್" ಎಂಬುದು ವಿಶ್ವ ಓಜೋನ್ ದಿನ 2020 ರ ಘೋಷಣೆಯಾಗಿದ್ದು, ಭೂಮಿಯ  ಮೇಲಿನ ನಮ್ಮ ಜೀವಿಗಳ ಸಂರಕ್ಷಣೆಗಾಗೀ ಹಾಗೂ ಭವಿಷ್ಯದ ಉಳಿವಿಗಾಗಿ ಓಜೋನ್ ಪದರವನ್ನು ರಕ್ಷಿಸುವುದು ಇದರ ಮೂಲ ಉದ್ದೇಶವಾಗಿದೆ.