ದಾಹಕ್ಕೂ ಆರೋಗ್ಯಕ್ಕೂ ಬಹುಪಯೋಗಿ ನಿಂಬೆಹಣ್ಣು 

ದಾಹಕ್ಕೂ ಆರೋಗ್ಯಕ್ಕೂ ಬಹುಪಯೋಗಿ ನಿಂಬೆಹಣ್ಣು 

YK   ¦    Jul 07, 2019 02:30:54 PM (IST)
ದಾಹಕ್ಕೂ ಆರೋಗ್ಯಕ್ಕೂ ಬಹುಪಯೋಗಿ ನಿಂಬೆಹಣ್ಣು 

ಪ್ರಸ್ತುತ ದಿನಗಳಲ್ಲಿ ಯುವಕರಿಂದ ಹಿಡಿದು ವಯಸ್ಸಾದವರಿಗೂ ಸಾಮಾನ್ಯವಾಗಿ ಕಾಡುವ ಸಮಸ್ಯೆಗಳೆಂದರೆ ಗ್ಯಾಸ್ ಟ್ರಬಲ್ ಅಥವಾ ಗ್ಯಾಸ್ಟ್ರಿಕ್ ಹಾಗೂ ಹೆಚ್ಚಾದ ತೂಕದ ಸಮಸ್ಯೆಗಳು. 
ಇದು ನಮ್ಮ ದೇಹದಲ್ಲಿ ಅನೇಕ ರೋಗಗಳಿಗೆ ಅವಕಾಶವನ್ನು ಮಾಡಿಕೊಡುತ್ತದೆ. ಈ ಎರಡು ಸಮಸ್ಯೆಗಳಿಗೆ ಮೂಲ ಕಾರಣ ನಾವು ಸೇವಿಸುವ ಆಹಾರ ಪದ್ಧತಿ. ಬಾಯಿ ರುಚಿಗೆ ಬೇಕಾದನ್ನೆಲ್ಲ ಸೇವಿಸಿ ಆರೋಗ್ಯ ಕೆಡಿಸಿಕೊಳ್ಳುತ್ತೇವೆ. ಕೆಲವೊಂದುಬಾರಿ ಚಿಕ್ಕಪುಟ್ಟ ಸಮಸ್ಯೆಗಳಿಗೆ ನಾವು ವೈದ್ಯರ ಬಳಿ ಹೋಗಲಾಗುದಿಲ್ಲ. ಈ ವೇಳೆ ಇಂತಹ ಸಮಸ್ಯೆಗಳಿಗೆ ನಾವು ಮನೆಯಲ್ಲಿಯೇ ಪರಿಹಾರವನ್ನು ಕಂಡುಕೊಳ್ಳಬಹುದು. ನಿಂಬೆ ಹಣ್ಣಿನಲ್ಲಿ ಹಲವಾರು ಜೌಷಧೀಯ ಗುಣಗಳು ಅಡಗಿಕೊಂಡಿದೆ.   ಹಾಗಾಗಿ ನಾವೆಲ್ಲರೂ ನಿಂಬೆ ಹಣ್ಣಿನ ಮಹತ್ವದ ಬಗ್ಗೆ ತಿಳಿದಿರುವುದು ತುಂಬಾನೇ ಒಳಿತು.
ಲಿಂಬೆ ರಸವನ್ನು ಬಿಸಿ ನೀರಿನಲ್ಲಿ ಬೆರೆಸಿ ಸೇವಿಸುವದರಿಂದ ಬೊಜ್ಜು ಸೇರಿದಂತೆ ಹೊಟ್ಟೆಯ ಹಲವಾರು ವಿಧದ ಖಾಯಿಲೆಗಳನ್ನು ದೂರ ಮಾಡುತ್ತದೆ. 
ಗಂಟಲಿನ ಹಲವಾರು ತೊಂದರೆಗಳಿಗೆ ನಿಂಬೆ ರಸವು ರಾಮಬಾಣ. ಒಡೆದ ಗಂಟಲು ಹಾಗೂ ಬ್ಯಾಕ್ಟೀರಿಯಾ ಅಂಶಗಳನ್ನು ಹೊಂದಿರುವ ಗ್ರಂಥಿಯ ಉರಿಯೂತಕ್ಕೂ ಇದು ಉತ್ತಮ ಔಷಧವಾಗಿದೆ.

ನಿಂಬೆಹಣ್ಣಿನ ರಸದ ಸೇವನೆಯ ಪ್ರಯೋಜನ
* ನಿಂಬೆರಸ ಪರಿಣಾಮಕಾರಿ ಪಿತ್ತವನ್ನು ದೂರ ಮಾಡುತ್ತದೆ
* ಇದು ಜೀರ್ಣಕ್ರಿಯೆಗೆ ಹೆಚ್ಚು ಸಹಕಾರಿ.
* ಹೃದಯ, ಹೊಟ್ಟೆಯ ಒಳ ಭಾಗಗಳನ್ನು ಶುದ್ಧೀಕರಿಸಬಲ್ಲದು
* ಕ್ಯಾನ್ಸರ್ ವಿರುದ್ಧ ಹೋರಾಡುವ ಶಕ್ತಿಯಿದೆ. ಇದು ಕ್ಯಾನ್ಸರನ್ನು ತಡೆಗಟ್ಟಬಲ್ಲದು.
* ನೆಗಡಿ, ಫ್ಲೂ ಜ್ವರಗಳನ್ನು ನಿಯಂತ್ರಿಸಬಲ್ಲದು
* ಬೆಳಗ್ಗೆ ನೀರಿನಲ್ಲಿ ನಿಂಬೆರಸವನ್ನು ಸೇವಿಸಿದರೆ ಲಿವರ್ ಶುದ್ಧೀಕರಿಸುವ ವಿಶೇಷ ಶಕ್ತಿ ಇದಕ್ಕಿದೆ.