ಪಾಲಕ್ ಎಂಬ ಆರೋಗ್ಯ ಪಾಲಕ ಸೊಪ್ಪು

ಪಾಲಕ್ ಎಂಬ ಆರೋಗ್ಯ ಪಾಲಕ ಸೊಪ್ಪು

LK   ¦    Oct 05, 2020 01:30:11 PM (IST)
ಪಾಲಕ್ ಎಂಬ ಆರೋಗ್ಯ ಪಾಲಕ ಸೊಪ್ಪು

ನಿತ್ಯ ಮನೆಯಲ್ಲಿ ಮತ್ತು ಕಣ್ಣೇದುರೇ ಇರುವ ಅದೆಷ್ಟೋ ಆರೋಗ್ಯಕ್ಕೆ ಪೂರಕವಾದ ಆಹಾರ ಪದಾರ್ಥಗಳನ್ನು  ನಾವು ನಿರ್ಲಕ್ಷಿಸುತ್ತಲೇ ಬಂದಿದ್ದೇವೆ. ಅವುಗಳಲ್ಲಿ ಪಾಲಕ್ ಸೊಪ್ಪು  ಕೂಡ ಒಂದಾಗಿದೆ.

ರಸ್ತೆ ಬದಿಯಲ್ಲಿ ತರಕಾರಿ ಮಾರುಕಟ್ಟೆಗಳಲ್ಲಿ  ಮತ್ತು  ಮನೆ ಮನೆಗಳಿಗೆ ಮಾರಾಟ ಮಾಡಿಕೊಂಡು ಬರುವ ಪಾಲಕ್  ಸೊಪ್ಪನ್ನು ಹೆಚ್ಚಿನವರು ಬಳಸುವುದನ್ನೇ ಮರೆತು ಬಿಟ್ಟಿದ್ದಾರೆ ಎನ್ನಬಹುದು. ಏಕೆಂದರೆ ಐಷಾರಾಮಿ ಜೀವನ  ಹಾಗೂ ಜೀವನಶೈಲಿ ಮತ್ತು  ಆಧುನಿಕ ಆಹಾರ ಕ್ರಮಗಳ ನಡುವೆ ಪಾಲಕ್ ಸೊಪ್ಪು  ಅಕ್ಷರಶಃ ಮೂಲೆಗುಂಪಾಗಿದೆ. ಎಂದರೆ ಅತಿಶಯೋಕ್ತಿಯಾಗಲಾರದು.

ಪಾಲಕ್ ಮುಖ್ಯವಾಗಿ ಸೊಪ್ಪು ತರಕಾರಿ ಜಾತಿಗೆ ಸೇರಿದ್ದು ಇದನ್ನು ಸ್ವಉದ್ಯೋಗವನ್ನಾಗಿಯೂ ಸಣ್ಣ ಹಿಡುವಳಿದಾರರೂ ಪರಿಣಾಮಕಾರಿಯಾಗಿ  ಬೆಳೆಯಬಹುದು. ಏಕೆಂದರೆ ಸೊಪ್ಪು ತರಕಾರಿಗಳನ್ನು ಬೆಳೆಯಲು ಅಧಿಕ ಸ್ಥಳಾವಕಾಶದ ಅವಶ್ಯಕತೆ ಇರುವುದಿಲ್ಲ ಹಾಗೂ ಬಹಳ ಅಲ್ಪ ಅವಧಿಯಲ್ಲಿಯೇ ಬೆಳೆದ ಫಸಲು ಕೈಸೇರಿ ಆದಾಯವನ್ನು  ಗಳಿಸಬಹುದು. ಚಿನೋಪೋಡಿಯೇಸ್ ಪ್ರಭೇದಕ್ಕೆ  ಸೇರಿದ ಪಾಲಕ್  ಸೊಪ್ಪಿನಲ್ಲಿ ವಿಟಮಿನ್  ಎ ಮತ್ತು ಸಿ ಯಥೇಚ್ಚವಾಗಿದೆ.

ಬೆಳೆಯುವ ಬಗೆ: ನೀರಾವರಿಯ  ಸಮರ್ಪಕ ವ್ಯವಸ್ಥೆಯಿದ್ದಲ್ಲಿ ಪಾಲಕ್  ಅನ್ನು ವರ್ಷ ಪೂರ್ತಿ ಎಲ್ಲ ತಿಂಗಳಲ್ಲೂ ಬೆಳೆಯಬಹುದು.

ಪ್ರಥಮದಲ್ಲಿ ಜಮೀನನ್ನು  ಚೆನ್ನಾಗಿ ಹದ ಮಾಡಬೇಕು. ಬಳಿಕ  ಸಾಲಿನಿಂದ ಸಾಲಿಗೆ  ಒಂದು  ಅಡಿ ಹಾಗೂ  ಬೀಜದಿಂದ ಬೀಜಕ್ಕೆ  4 ರಿಂದ 5 ಇಂಚು ಅಂತರದಲ್ಲಿ ಬೀಜವನ್ನು ಬಿತ್ತನೆ  ಮಾಡಬೇಕು. ಬಿತ್ತಿದ ಬೀಜದ  ಮೇಲೆ  ಗಾಳಿಗೆ ಹಾರಿ ಹೋಗದಂತೆ ಹಾಗೂ ಪಕ್ಷಿಗಳ ಪಾಲಾಗದಂತೆ ತೆಳುವಾಗಿ ಮಣ್ಣನ್ನು ಹರಡಿ ಐದಾರು ದಿನಕ್ಕೊಮ್ಮೆ ನೀರನ್ನು  ಹಾಯಿಸಬೇಕು. ಇದಕ್ಕೆ ಅತಿಯಾದ  ಕಾಳಜಿಯ ನಿರ್ವಹಣೆ ಅಗತ್ಯ ವಿಲ್ಲದೆ ಕಾರಣ ನಾಲ್ಕರಿಂದ ಆರು ವಾರಗಳಲ್ಲಿ  ಕಟಾವಿಗೆ ಸಿದ್ಧವಾಗುತ್ತದೆ.

ಕಟಾವಿನ ಸಂದರ್ಭದಲ್ಲಿ  ಬೇರು ಸಹಿತವಾಗಿ ಗಿಡವನ್ನು ಕೀಳದೆ ಕಾಂಡದ  ಸ್ವಲ್ಪ ಅಂಶವನ್ನು ಭೂಮಿಯಲ್ಲೇ ಬಿಟ್ಟು ಗಿಡವನ್ನು ಕತ್ತರಿಸಬೇಕು. ಏಕೆಂದರೆ ಮತ್ತೆ  ಅದೇ ಕಾಂಡವು ಚಿಗುರು ಬೆಳೆಯುವುದರಿಂದ ಹೀಗೆ ನಾಲ್ಕೇದು ಬಾರಿ ಫಸಲನ್ನು ಪಡೆಯಬಹುದು ಮತ್ತು ಕಡಿಮೆ  ಬಂಡವಾಳದೊಂದಿದೆ ಅಧಿಕ ಫಸಲನ್ನು ಪಡೆಯಬಹುದು, ಕಟಾವಿನ ಸಂದರ್ಭದಲ್ಲಿ ಮಾರುಕಟ್ಟೆಯ ಬೇಡಿಕೆಯನ್ನು ಸ್ವಲ್ಪ ಅರಿತುಕೊಂಡರೆ ಉತ್ತಮ.

ಈ ಬೆಳೆಗೆ  ಕಪ್ಪು  ಮಣ್ಣಾದರೆ ಉತ್ತಮ  ಇಳುವರಿಯೂ ಬರುತ್ತದೆ. ಗಿಡದ ಸುತ್ತ ನೀರು ನಿಲ್ಲದಂತೆ ವಿಶೇಷ ಕಾಳಜಿಯನ್ನು  ವಹಿಸಿ ನೀರು ಸರಾಗವಾಗಿ  ಹರಿದು ಹೋಗುವಂತೆ ನೋಡಿಕೊಳ್ಳುವಂತೆ  ಈ ಬೆಳೆಗೆ  ಮಣ್ಣಿಗೆ ಸಾರದ ಅಂಶ 6.00ಯಿಂದ7.00 ಇದ್ದರೆ ಸಾಕಾಗುತ್ತದೆ. ಇದಕ್ಕೆ ರೋಗದ ಹಾವಳಿ ಅತ್ಯಂತ ಕಡಿಮೆ ಬಂದಲ್ಲಿ ಎಲೆಚುಕ್ಕಿ ರೋಗವಷ್ಟೇ ಬಾಧಿಸಬಹುದು,