News Kannada

ಹೊರನಾಡ ಕನ್ನಡಿಗರು

ಗಣೇಶ್ ರೈ ಮುಡಿಗೆ ವಿಶ್ವ ಮಾನ್ಯ ಪ್ರಶಸ್ತಿ - 1 min read

ಗಣೇಶ್ ರೈ ಮುಡಿಗೆ ವಿಶ್ವ ಮಾನ್ಯ ಪ್ರಶಸ್ತಿ

ಶಾರ್ಜಾ: ಶಾರ್ಜಾ ಕರ್ನಾಟಕ ಸಂಘ ಮತ್ತು ಹೃದಯವಾಹಿನಿ ಕರ್ನಾಟಕ ವಿಶ್ವ ಕನ್ನಡ ಸಂಸ್ಕೃತಿ ಸಮಿತಿಯ ಆಶ್ರಯದಲ್ಲಿ ನವೆಂಬರ್ 20 ರಂದು  12ನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನದಲ್ಲಿ ಗಣೇಶ್ ರೈ ಅವರಿಗೆ ವಿಶ್ವ ಮಾನ್ಯ ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ.

ಗಣೇಶ್ ರೈ ಅವರದ್ದು ಬಹುಮುಖ ಪ್ರತಿಭೆ. ಅವರು ಜನಿಸಿದ್ದು ಕಾವೇರಿ ನದಿಯ ಉಗಮಸ್ಥಾನ ಕೊಡಗಿನಲ್ಲಿ. ಭಾರತಕ್ಕೆ ಶೂರ – ವೀರರನ್ನು ಕರುಣಿಸಿದ ಗಂಡು ಮೆಟ್ಟಿದ ನೆಲದಲ್ಲಿ. ಅಲ್ಲಿಯ ಪ್ರಕೃತಿಸಿರಿಯ ಏಲಕ್ಕಿ ಕಾಫಿ ತೋಟದ ಕಂಪಿನ ಮದ್ಯದಲ್ಲಿಯೇ ಅವರು ಕಾವೇರಿ ನೀರು ಕುಡಿದು ಬೆಳೆದವರು. ಆದರೆ ಅವರು ಉದ್ಯೋಗ ಅರಸಿ ಆಗಮಿಸಿದ್ದು ಅರಬ್ಬ ನಾಡಿಗೆ. ಅದು ಸುಂದರ ಭವಿಷ್ಯದ ಕನಸೋ ಅಥವಾ ಆಕಸ್ಮಿಕವೋ ತಿಳಿದಿಲ್ಲ! ಆದರೆ ಅವರ ಆಗಮನದಿಂದ ಲಾಭವಾಯಿತೇ ವಿನಹ ನಷ್ಟವಾಗಲಿಲ್ಲ. ಇಲ್ಲಿಯ ಮರುಭೂಮಿಯ ಬಿಸಿಲ ಧಾರೆಗೆ ಕನ್ನಡದ ಕೊಡೆ ಹಿಡಿದು ನಿಂತಿರುವ ಅವರ ಬಳಿ ಯಾರೇ ಬಂದರೂ ನೆರಳು ನೀಡಿದ್ದಾರೆ. ತನ್ನ ಸೇವೆ ಅದು ಕನ್ನಡ ಮಾತೆಗೆ ಅರ್ಪಿಸುವ ಕರ್ತವ್ಯ ಎಂದು ಸಹಾಯ ಹಸ್ತ ನೀಡಿದ್ದಾರೆ. ಈ ಕಾರಣಕ್ಕಾಗಿಯೇ ಅವರನ್ನು ಹತ್ತಾರು ಸಂಘ ಸಂಸ್ಥೆಗಳು ಗಣೇಶ್ ಅಣ್ಣ ನಮ್ಮವ ಎಂದು ಅಭಿಮಾನವನ್ನು ತಾಳಿದ್ದಾರೆ. ಯು.ಎ.ಇ. ಯ ಯಾವುದೇ ಸಭೆ ಸಮಾರಂಭಗಳ ವೇದಿಕೆ ಇರಲಿ, ನಾಟಕ ರಂಗಭೂಮಿಯಾಗಲಿ, ಪೂಜಾ ಮಂದಿರದ ಪಾವನ ನೆಲೆಯಾಗಿರಲಿ, ಅಥವಾ ಸಾಹಿತ್ಯ ಸಮ್ಮೇಳನದ ಮಂಟಪವಾಗಲಿ ಅಲ್ಲಿ ರೈಯವರ ಸೃಜನಶೀಲತೆಯ ಕೊಡುಗೆಗಳು ಎದ್ದು ಕಾಣುತ್ತದೆ.

ಕೃಷ್ಣಪ್ಪ ರೈ ಮತ್ತು ತುಳಸಿಯಮ್ಮ ದಂಪತಿಗಳ ಸುಪುತ್ರರಾದ ಗಣೇಶ್ ಅವರು ಸಾಹಿತ್ಯ ಕಲೆಯ ಕುರಿತು ಬಾಲ್ಯದಿಂದಲೇ ಆಸಕ್ತಿ ಬೆಳೆಸಿಕೊಂಡವರು. ಮಡಿಕೇರಿಯಲ್ಲಿಯೇ ವಾಣಿಜ್ಯ ಶಾಸ್ತ್ರದಲ್ಲಿ ಪದವಿಯನ್ನು ಮುಗಿಸಿ ನಂತರ ಚಿತ್ರಕಲೆಯಲ್ಲಿ ಮಾಸ್ಟರ್ ಆಫ್ ಫೈನ್ ಆರ್ಟ್ಸ್ ಪದವಿಯನ್ನು ಮೈಸೂರಿನ ಚಾಮರಾಜೇಂದ್ರ ದೃಶ್ಯಕಲಾ ಅಕಾಡೆಮಿಯಲ್ಲಿ ಪಡೆದರು. ಶಿಲ್ಪಕಲೆಯಲ್ಲಿ ಪರಿಣಿತಿಯನ್ನು ಹೊಂದಿ  ಶಿಲ್ಪಶಾಸ್ತ್ರವನ್ನು ಅಭ್ಯಾಸಮಾಡಿದರು. ತನ್ನ ಜ್ಞಾನವನ್ನು ಇತರರಿಗೂ ಹಂಚಬೇಕೆಂದು ಶಿಕ್ಷಣ ಕ್ಷೇತ್ರವನ್ನೇ ಆಯ್ಕೆ ಮಾಡಿ ಅದರಲ್ಲೇ ದುಡಿದವರು. ಅವರ ವಸ್ತುನಿಷ್ಠ ಶಿಕ್ಷಣ ಸೇವೆಯನ್ನು ಗುರುತಿಸಿಕೊಂಡ ಕರ್ನಾಟಕ ಸರ್ಕಾರವು ಅವರಿಗೆ ಅತ್ಯುತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿಯನ್ನು 1993 ರಲ್ಲಿ ನೀಡಿ ಪುರಸ್ಕರಿಸಿತ್ತು. ಇದು ಅವರ ಸೇವೆ ಇನ್ನಷ್ಟು ಸ್ಪೂರ್ತಿ ತುಂಬಿತ್ತು.

ಗಣೇಶ್ ರೈ ಉತ್ತಮ ಸಂಘಟನಕಾರ ಜೊತೆಗೆ ಭಾಷಣಗಾರ. ಶಾರ್ಜಾ ಕರ್ನಾಟಕ ಸಂಘದಲ್ಲಿ 2004 – 2006 ಅವಧಿಯಲ್ಲಿ ಅಧ್ಯಕ್ಷರಾಗಿ ದುಡಿದ ಅನುಭವಿ. ಯು.ಎ.ಇ.ಯಲ್ಲಿ ನೆಲೆಸಿರುವ ಸಾಧನೆ ಮಾಡಿರುವ ಕನ್ನಡಿಗರನ್ನು, ಸಂಘ ಸಂಸ್ಥೆಗಳನ್ನು ಸಂದರ್ಶನ ಮಾಡಿ  ಸಾಧನೆ  ಸಂಪುಟವನ್ನು ವಿನ್ಯಾಸಗೊಳಿಸಿ ಪ್ರಥಮ ಬಾರಿಗೆ ಯು.ಎ.ಇ.ಯಲ್ಲೇ  ಕನ್ನಡ ಭಾಷೆಯಲ್ಲಿ ಮುದ್ರಿಸಿ ಬಿಡುಗಡೆ ಗೊಳಿಸಿದ ಸಾಧನೆ ಇವರದ್ದಾಗಿದೆ. ತನ್ನ ಜವಾಬ್ಧಾರಿಯ ಅವಧಿಯಲ್ಲೇ ಪ್ರಥಮ ಬಾರಿಗೆ ಗಲ್ಫ್ ಮೆಡಿಕಲ್ ಕಾಲೇಜ್ ಆಸ್ಪತ್ರೆ ಮತ್ತು ಶಾರ್ಜಾ ಮಿನಿಸ್ಟ್ರಿ ಆಫ್ ಹೆಲ್ತ್ ಸಹಯೋಗದೊಂದಿಗೆ ಶಾರ್ಜಾ ಕರ್ನಾಟಕ ಸಂಘದ ಪ್ರಥಮ ರಕ್ತದಾನ ಶಿಬಿರ ಯಶಸ್ವಿಯಾಗಿ ನಡೆಸಿಕೊಟ್ಟರು. ಈ ಹಿನ್ನೆಲೆಯಲ್ಲಿ ಯು.ಎ.ಇ. ಯಲ್ಲಿರುವ ಎಲ್ಲಾ ಕರ್ನಾಟಕ ಪರ ಸಂಘಟನೆಗಳು ರಕ್ತದಾನ ಶಿಬಿರ ಏರ್ಪಡಿಸುವಂತೆ ಪ್ರೇರೆಪಿಸಿದ ಫಲವಾಗಿ ಇಂದು ಯು.ಎ.ಇ. ಯಲ್ಲಿ ಬಹು ದೊಡ್ಡ ಮಟ್ಟದಲ್ಲಿ ರಕ್ತದಾನ ಅಭಿಯಾನ ಜರಗುತ್ತಿದೆ.
ರೈಯವರ ತಮ್ಮ ಉದ್ಯೋಗದಲ್ಲಿ ಸಿಗುವ ವಿರಾಮದ ವೇಳೆಯನ್ನು ಸಮಾಜ ಸೇವೆಗಾಗಿಯೆ ವಿನಿಯೋಗಿಸಿಕೊಂಡು ಸದಾ ಕನ್ನಡ ಪರ ಚಟುವಟಿಕೆಯಲ್ಲಿ ಕೈ ಜೋಡಿಸಿರುವ ಉತ್ಸಾಹಿ ಚಿಲುಮೆ. ದಣಿವು ಎನೆಂದೇ ಅರಿಯದ ಸರದಾರ.

See also  ಮುಂಬೈ: ಮೀರಾ ರೋಡ್ - ವಿರಾರ್ ಸ್ಥಳೀಯ ಕಾರ್ಯಕಾರಿ ಸಮಿತಿ ರಚನೆ

ಯು.ಎ.ಇ.ಯಲ್ಲಿ ಕಳೆದ ಎರಡು ದಶಕಗಳಿಂದ ಕರ್ನಾಟಕ ಪರ ಭಾಷಾ ಸಂಘಟನೆ, ಜಾತಿ ಸಮುದಾಯಗಳ ಸಂಘಟನೆ, ನೆರೆಯ ರಾಜ್ಯಗಳ ತಮಿಳು, ಮಲಯಾಳಂ ಸಂಘಟನೆಗಳಿಗೆ ಲಾಂಛನ ವಿನ್ಯಾಸ, ಅಹ್ವಾನ ಪತ್ರ ವಿನ್ಯಾಸ, ವೇದಿಕೆಯ ಬೃಹತ್ ಚಿತ್ರಪಟ ವಿನ್ಯಾಸ, ಸನ್ಮಾನ ಪತ್ರ ವಿನ್ಯಾಸ, ಸ್ಮರಣ ಸಂಚಿಕೆ ವಿನ್ಯಾಸ, ಪ್ರಶಸ್ತಿ ಪತ್ರ ವಿನ್ಯಾಸ, ಯು.ಎ.ಇ. ಯಲ್ಲಿರುವ ಕರ್ನಾಟಕ ಪರ ಗಣ್ಯವ್ಯಕ್ತಿಗಳ ಸಂದರ್ಶನ ಲೇಖನಗಳನ್ನು ಹಲವು ವೆಬ್ ಮಾಧ್ಯಮಗಳಲ್ಲಿ ಪ್ರಕಟಿಸುವುದರ ಜೊತೆಗೆ ಸಾಹಿತ್ಯದಲ್ಲಿಯೂ ತನ್ನನ್ನು ತೊಡಗಿಸಿಕೊಂಡಿದ್ದಾರೆ. ಇವರ ಭಾಷೆ ಕಲೆ ಸಂಸ್ಕೃತಿಯ ಮೇಲಿರುವ ಅಭಿಮಾನಕ್ಕೆ, ಇವರ ಸೇವೆಗೆ ಶಾರ್ಜಾ ಕರ್ನಾಟಕ ಸಂಘ 2009 ರಲ್ಲಿ ಪ್ರತಿಷ್ಠಿತ ಮಯೂರ ಪ್ರಶಸ್ತಿ ನೀಡಿ ಗೌರವಿಸಿದೆ. ದುಬಾಯಿ ಕರ್ನಾಟಕ ಸಂಘದ ಆಶ್ರಯದಲ್ಲಿ  2009 ರಲ್ಲಿ ನಡೆದ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನದಲ್ಲಿ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಿದೆ. ಅಬುಧಾಬಿ ಕರ್ನಾಟಕ ಸಂಘದ ಆಶ್ರಯದಲ್ಲಿ ನಡೆದ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನದಲ್ಲಿ ಮತ್ತು ಕುವೆಂಪು ಕಲಾ ಉತ್ಸವದಲ್ಲಿ ಕುವೆಂಪು ವಿಶ್ವ ಮಾನವ ಅಂತರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ನಮ ತುಳುವೆರ್ ಸಂಘಟನೆ 2012ರಲ್ಲಿ ತುಳುವೆರೆ ಪರ್ಬದಲ್ಲಿ ಸನ್ಮಾನಿಸಿ ಗೌರವಿಸಿದ್ದಾರೆ. ಯು.ಎ.ಇ. ತುಳು ಕೂಟ ತನ್ನ ರಜತ ಮಹೋತ್ಸವದಲ್ಲಿ ಸನ್ಮಾನಿ ಗೌರವಿಸಲಾಗಿದೆ. ತುಳು ಸಿರಿ ದುಬಾಯಿ ತುಳುಸಿರಿ ಐಸಿರ ದಲ್ಲಿ ಮತ್ತು ಕನ್ನಡಿಗರು ದುಬಾಯಿ ರಾಜ್ಯೋತ್ಸವ ಸಮಾರಂಭ – 2015, ದುಬಾಯಿಯಲ್ಲಿ ಸನ್ಮಾನಿಸಿ ಗೌರವಿಸಿದ್ದಾರೆ. ಡಾ.ಬಿ. ಆರ್. ಶೆಟ್ಟಿಯವರ ಎನ್. ಎಂ. ಸಿ. ಸಮೂಹ ಸಂಸ್ಥೆಯ ಅಧೀನದಲ್ಲಿರುವ ಗಲ್ಫ್ ಪಬ್ಲಿಕ್ ರಿಲೇಶನ್ಸ್ ಜಾಹಿರಾತು ಸಂಸ್ಥೆಯಲ್ಲಿ ಕ್ರಿಯಾತ್ಮಕ ಕಲಾ ನಿರ್ದೇಶಕರು, ವ್ಯವಸ್ಥಾಪಕರಾಗಿ ಸಲ್ಲಿಸುತ್ತಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು