News Kannada

ಹೊರನಾಡ ಕನ್ನಡಿಗರು

ನಾಳೆ ದುಬೈ ಯಲ್ಲಿ ಕೆಸಿಎಫ್ ವತಿಯಿಂದ ಗಲ್ಫ್ ಇಶಾರ ಪ್ರಚಾರ ಅಭಿಯಾನದ ಪ್ರತಿನಿಧಿ ಸಂಗಮ - 1 min read

ನಾಳೆ ದುಬೈ ಯಲ್ಲಿ ಕೆಸಿಎಫ್ ವತಿಯಿಂದ ಗಲ್ಫ್ ಇಶಾರ ಪ್ರಚಾರ ಅಭಿಯಾನದ ಪ್ರತಿನಿಧಿ ಸಂಗಮ

ದುಬೈ: ಕರ್ನಾಟಕ ಕಲ್ಚರಲ್ ಫೌಂಡೇಶನ್ ( ಕೆಸಿಎಫ್ ) ದುಬೈ ಆಡಳಿತ ವಿಭಾಗದ ವತಿಯಿಂದ ರಾಜ್ಯ ಎಸ್ಸೆಸ್ಸೆಫ್ ಮುಖವಾಣಿ ಇಶಾರ ಪಾಕ್ಷಿಕದ ಗಲ್ಫ್ ಆವೃತ್ತಿ ಗಲ್ಫ್ ಇಶಾರ ಮಾಸ ಪತ್ರಿಕೆಯ ಯುಎಇ ರಾಷ್ಟ್ರೀಯ ಮಟ್ಟದ ಪ್ರಚಾರ ಅಭಿಯಾನದ ಉದ್ಘಾಟನೆಯು ಕಳೆದ ಒಂದು ವಾರದ ಹಿಂದೆ ಅಜ್ಮಾನ್ ನಲ್ಲಿ ನಡೆದಿತ್ತು, ಇದರ ಝೋನ್ ಮಟ್ಟದ ಪ್ರಚಾರ ಅಭಿಯಾನದ ಅಂಗವಾಗಿ  ನ.20ರಂದು ಮಗ್ರಿಬ್ ನಮಾಝಿನ ಬಳಿಕ ಅಬೂಹೈಲ್ ನಲ್ಲಿನ ದುಬೈ ಐಸಿಎಫ್ ಸೆಂಟರ್ ನಲ್ಲಿ ನಡೆಯಲಿದೆ.


ಕೆಸಿಎಫ್ ದುಬೈ ಸಮಿತಿ ಅಧ್ಯಕ್ಷ ಮಹ್ಬೂಬ್ ಸಖಾಫಿ ಕಿನ್ಯ ರವರ ಅಧ್ಯಕ್ಷತೆ ಯಲ್ಲಿ ನಡೆಯಲಿರುವ ಪ್ರಚಾರ ಅಭಿಯಾನದ ಪ್ರತಿನಿಧಿ ಸಂಗಮದ ಉದ್ಘಾಟನೆಯನ್ನು ಸಿರಾಜ್ ಮಳಯಾಲ ದೈನಿಕದ ಮುಹಮ್ಮದ್ ಶರೀಫ್ ಕಾರಶ್ಶೇರಿ ನಿರ್ವಹಿಸುವರು. ಪ್ರತಿನಿಧಿ ಸಂಗಮದಲ್ಲಿ ವಿಶೇಷ ಅತಿಥಿಯಾಗಿ ಗೇರುಕಟ್ಟೆ ಮನ್ಶರ್ ವಿದ್ಯಾ ಸಮುಚ್ಚಯದ ಸಾರಥಿ ಹಾಗೂ ರಾಜ್ಯ ಎಸ್ಸೆಸ್ಸೆಫ್ ನ ಇಹ್ಸಾನ್ ಉಪಾಧ್ಯಕ್ಷ ರಾದ ಸಯ್ಯದ್ ಸಿ.ಟಿ.ಎಂ ಉಮರ್ ಅಸ್ಸಖಾಫ್ ತಂಙಳ್ ಆಗಮಿಸಲಿರುವರು. ವಿವಿಧ ವಿಷಯದಲ್ಲಿ ತರಬೇತಿ ನೀಡುವ ಸಂಪನ್ಮೂಲ ವ್ಯಕ್ತಿಗಳಾಗಿ ರಾಜ್ಯ ಎಸ್ಸೆಸ್ಸೆಫ್ ಪ್ರಧಾನ ಕಾರ್ಯದರ್ಶಿ ಎಂ.ಬಿ.ಎಂ ಸ್ವಾದಿಖ್ ಮಾಸ್ಟರ್ ಮಲೆಬೆಟ್ಟು, ಕೆಸಿಎಫ್ ಅಂತಾರಾಷ್ಟ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಅಬ್ದುಲ್ ಹಮೀದ್ ( ಪಿ.ಎಂ.ಎಚ್ ) ಈಶ್ವರಮಂಗಲ, ಎಸ್ಸೆಸ್ಸೆಫ್ ರಾಜ್ಯ ಸಮಿತಿಯ ಉಪಾಧ್ಯಕ್ಷ ಹಾಫಿಲ್ ಅಬ್ದುಸ್ಸಲಾಂ ನಿಝಾಮಿ ಚೆನ್ನಾರ್ ಭಾಗವಹಿಸಲಿರುವರು.

ದುಬೈ ಝೋನ್ ಅದೀನದ ಪ್ರತಿಯೊಂದು ಸೆಕ್ಟರ್ ಗಳ ಆಯ್ದ ಪ್ರತಿನಿಧಿ ಗಳು ಸಂಗಮ ದಲ್ಲಿ ಭಾಗವಹಿಸ ಬೇಕೆಂದು ಕೆಸಿಎಫ್ ದುಬೈ ಆಡಳಿತ ವಿಭಾಗದ ಕಾರ್ಯದರ್ಶಿ ಮುಹಮ್ಮದ್ ರಫೀಖ್ ಕಲ್ಲಡ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

See also  ಆಟೋ ಡ್ರೈವಿಂಗ್ ಮೂಲಕ ಸುಖಿ ಜೀವನ ನಡೆಸಲು ಸಾಧ್ಯವಿಲ್ಲ'
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು