News Kannada
Tuesday, July 05 2022

ಹೊರನಾಡ ಕನ್ನಡಿಗರು

ಕೆ ಐ ಸಿ ವತಿಯಿಂದ ಜೀಲಾನಿ ಅನುಸ್ಮರಣೆ, ಸಮಸ್ತ ಪ್ರಚಾರ ಸಭೆ - 1 min read

Photo Credit :

ಕೆ ಐ ಸಿ ವತಿಯಿಂದ ಜೀಲಾನಿ ಅನುಸ್ಮರಣೆ, ಸಮಸ್ತ  ಪ್ರಚಾರ ಸಭೆ

ದುಬೈ: ಕರ್ನಾಟಕ ಇಸ್ಲಾಮಿಕ್ ಸೆಂಟರ್ ಕೆ ಐ ಸಿ ಯು ಎ ಇ ಅಧೀನದಲ್ಲಿ ಜೀಲಾನಿ ಹಾಗೂ ಅಗಲಿದ ಸಮಸ್ತ ನೇತಾರರ ಅನುಸ್ಮರಣಾ ಕಾರ್ಯಕ್ರಮ, ಆದರ್ಶ ಪರಿಶುದ್ದತೆಯ ವರ್ಷ ಘೋಷ ವಾಖ್ಯದೊಂದಿಗೆ ಸಮಸ್ತ   ವಾರ್ಷಿಕ ಮಹಾ ಸಮ್ಮೇಳನದ ಪ್ರಚಾರ ಸಭೆಯು ರಾಫೀ ಹೋಟೆಲ್ ಸಭಾಂಗಣದಲ್ಲಿ ನಡೆಯಿತು.


ಕೆಐಸಿ ಕೇಂದ್ರ ಸಮಿತಿ ಉಪಾಧ್ಯಕ್ಷರಾದ ಅಬ್ದುಲ್ ಖಾದರ್ ಬೈತಡ್ಕ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ.ಸಲೀಂ ಫೈಝಿ ಇರ್ಫಾನಿ ಅಲ್ ಅಝ್-ಹರಿ ಯವರು ಪ್ರಾರ್ಥಿಸಿದರು. ನಂತರ ಕೆಐಸಿ ಕೇಂದ್ರ ಸಮಿತಿ ಗೌರವಾಧ್ಯಕ್ಷರಾದ ಸಯ್ಯದ್ ಅಸ್ಕರಲಿ ತಂಙಲ್ ಕೊಲ್ಪೆ ರವರು ಉದ್ಘಾಟಿಸಿ ಮಾತನಾಡಿ ಭಾರತದಾದ್ಯಂತ ಇಸ್ಲಾಂ ದೀನಿನ ಆಶಯ ಆದರ್ಶಗಳನ್ನು ಈ ಸಮುದಾಯದ ಮುಂದೆ ಬಿತ್ತರಿಸಿದ ಪಂಡಿತ ಸಂಘಟನೆಯಾಗಿದೆ. ಕಳೆದ ತೊಂಬತ್ತು ವರ್ಷಗಳಿಂದ ಹಲವಾರು ದೀನೀ ದಅವಾ ಗಳ ಮೂಲಕ ಇಂದು ದೇಶದ ನಾನಾ ಭಾಗಗಳಲ್ಲಿ ವಿದ್ಯಾ ಸಂಸ್ಥೆಗಳನ್ನು, ಮದ್ರಸ ಮಸೀದಿಗಳನ್ನು ನಡೆಸಿಕೊಂಡು ಬರುತ್ತಿರುವ ಈ ಪಂಡಿತ ಸಂಘಟನೆಯು ಇಂದು ತೊಂಬತ್ತನೇ ವರ್ಷದ ಹೊಸ್ತಿಲಲ್ಲಿದ್ದು  ಫೆಬ್ರವರಿ ತಿಂಗಳಿನಲ್ಲಿ ತನ್ನ ಕಾರ್ಯಚಟುವಟಿಕೆ ಸ್ಮರಣಾರ್ಥ ಮಹಾ ಸಮ್ಮೇಳನವನ್ನು ಆಲಪ್ಪುಝದಲ್ಲಿ ಹಮ್ಮಿಕೊಂಡಿದ್ದು ಜನ ಸಾಗರದೊಂದಿಗೆ ಯಶಸ್ವಿಯನ್ನು ಸಾಧಿಸಲಿ ಎಂದು ಶುಭ ಹಾರೈಸಿ, ನಮ್ಮನ್ನಗಲಿದ ಪಂಡಿತ ಪ್ರತಿಭೆಗಳಾದ ಶೈಖುನ ಶಂಸುಲ್ ಉಲಮಾ , ಶೈಖುನ ಕನ್ನಿಯತ್ ಉಸ್ತಾದ್ ರವರ ಜೀವನ ಶೈಲಿ ತತ್ವಾದರ್ಶಗಳನ್ನು ತಮ್ಮ ಜೀವನದಲ್ಲಿ ಮೈಗೂಡಿಸಿಕೊಂಡು ಪರಲೋಕ ಸುಖಕ್ಕಾಗಿ ಜೀವನ ನಡೆಸುವಂತೆ ಕರೆ ನೀಡಿ , ಕುಂಬ್ರ ಪ್ರದೇಶದಲ್ಲಿ ಭೌದಿಕ ಹಾಗೂ ಧಾರ್ಮಿಕ ಶಿಕ್ಷಣವನ್ನು ನೀಡುತ್ತಾ ಬಂದಿರುವ ಕೆ ಐ ಸಿ ಎಂಬ ಈ ಸಂಸ್ಥೆಯನ್ನು ನಾವೆಲ್ಲರೂ ಯಶಸ್ಸಿನ ಹಾದಿಯಲ್ಲಿ ಕೊಂಡೊಯ್ಯಲು ಕೈ ಜೋಡಿಸುವಂತೆ ಕೇಳಿಕೊಂಡು ಪವಿತ್ರ ಖುರ್ಆನಿನ ಸೂಕ್ತದೊಂದಿಗೆ ಸಭಾ ಕಾರ್ಯಕ್ರಮವನ್ನು ಉದ್ಗಾಟಿಸಿದರು.

ನಂತರ ಕೆಐಸಿ ದುಬೈ ಸಮಿತಿ ಕಾರ್ಯಾಧ್ಯಕ್ಷರಾದ ಸುಲೈಮಾನ್ ಮುಸ್ಲಿಯಾರ್ ಕಲ್ಲೇಗ ರವರು ಸ್ವಾಗತಿ ಮಾತನಾಡಿ, ಯುಎಇ ಹಾಗೂ ಇತರ ಅರಬ್ ರಾಷ್ಟ್ರಗಳಲ್ಲಿ ಕೆಐಸಿಯು ನಡೆಸಿಕೊಂಡು ಬರುತ್ತಿರುವ ಕಾರ್ಯಚಟುವಟಿಕೆಗಳನ್ನು ವಿವರಿಸಿ, ಸಮುದಾಯದಲ್ಲಿ ಆರ್ಥಿಕವಾಗಿ ಹಿಂದುಳಿದ ಪ್ರತಿಭಾನ್ವಿತ ಬಾಳಿನಲ್ಲಿ  ಬೆಳಕನ್ನು ಚೆಲ್ಲಿ , ಸಮುದಾಯದ ಮುಂದೆ ಕಪ್ಪು ಚುಕ್ಕೆಯಾಗಿ ಇತರ ಸಹೋದರರಿಂದ ನಿರ್ಲಕ್ಷಿಸಲ್ಪಡುತ್ತಿರುವವರನ್ನು ಅಕಾಡೆಮಿ ಆಡಳಿತ ಸಮಿತಿಯ ನಿಯಮಾನುಸಾರ ಸುದೀರ್ಘ ಎಂಟು ವರ್ಷಗಳ ಉಚಿತ ಲೌಕಿಕ ಹಾಗೂ ಭೌದಿಕ ವಿದ್ಯಾಭ್ಯಾಸವನ್ನು ನೀಡಿ ಬಿ.ಎ ಪದವಿಯೊಂದಿಗೆ ಕೌಸರಿಗಳೆಂಬ ಬಿರುದು ನೀಡಿ ಸಮುದಾಯಕ್ಕೆ ಸಮರ್ಪಿಸುತ್ತಾ ಬಂದಿರುವ ಈ ಸಂಸ್ಥೆಯು ಇಂದು ದೇಶ ವಿದೇಶಗಳಲ್ಲಿ ತನ್ನ ಶಾಖಾ ಚಟುವಟೀಕೆಗಳನ್ನು ಪ್ರಾರಂಭಿಸಿದೆ. ಅಲ್ಲದೆ ಕಳೆದ ವರ್ಷಗಳಿಂದ ಖುರ್ ಆನ್ ಕಂಠ ಪಾಠ ಸಂಶುಲ್ ಉಲಮಾ ಹಿಫ್ಳುಲ್ ಖುರ್ ಆನ್ ಸೆಂಟರ್ ಅನ್ನು ಪ್ರಾರಂಭಿಸಿದ್ದು,  ಈ ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳು ಇಂದು ಸಮಾಜದಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದು, ಮುಂದೆ ಸಂಸ್ಥೆಯು ಸಮುದಾಯದ ಬಡ ವಿದ್ಯಾರ್ಥಿಗಳಿಗೊಸ್ಕರ ಹಲವಾರು ಕೈಗಾರಿಕಾ ತರಬೇತಿ , ಖುರ್ ಆನ್ ಸ್ಟಡಿ ಸೆಂಟರ್ ಮೊದಲಾದ ಕಾರ್ಯ ಯೋಜನೆಗಳನ್ನು ಹಮ್ಮಿಕೊಂಡಿದ್ದು ತಾವೆಲ್ಲರೂ ನಮ್ಮೊಂದಿಗೆ ಕೈಜೋಡಿಸಿ ಸಂಸ್ಥೆಯ ಪ್ರಗತಿಗೆ ಸಹಕರಿಸುವಂತೆ ಕೇಳಿಕೊಂಡರು .

See also  ಕುಲಾಲ ಮುಖವಾಣಿ ಅಮೂಲ್ಯ ತ್ರೈಮಾಸಿಕದ 20ನೇ ವರ್ಷದ ಸಂಭ್ರಮಾಚರಣೆ

ನಂತರ ಮುಖ್ಯ ಪ್ರಭಾಷಣಕಾರ ರಾಗಿ ಆಗಮಿಸಿದ ಡಾ. ಸಲೀಂ ಫೈಝಿ ಇರ್ಫಾನಿ ಅಲ್ ಅಝ್ ಹರಿ ಯವರು ಮಾತನಾಡುತ್ತಾ , ಇಂದು ದೇಶದ ನಾನಾ ಭಾಗಗಲ್ಲಿ ಅಹ್ಲ್ ಸುನ್ನತ್ ನ ಬಗ್ಗೆ ಸಂಶಯಾತೀತರಾಗಿ ವಿವಿಧ ವ್ಯಕ್ತಿ ಪಂಗಡಗಳು ಮೊಳಕೆಯೋಡೆಯುತ್ತಿದ್ದು , ಈ ಸಮುದಾಯವು ಅವೆಲ್ಲವನ್ನು ಲೆಕ್ಕಿಸದೆ ನಮ್ಮ ಹಿರಿಯ ನಮ್ಮನ್ನಗಲಿದ ನೇತಾರರಾದ ಶೈಖುನ ಶಂಸುಲ್ ಉಲಮಾ ಶೈಖುನಾ ಕನ್ನಿಯತ್ ಉಸ್ತಾದ್ ರಂತಹ ಮಹಾನುಭಾವರು ತೋರಿಸಿಕೊಟ್ಟ ಪಾದದಲ್ಲಿ ವಿಶ್ವಾಸವಿಟ್ಟು ಜೀವಿಸುವಂತೆ ಕರೆ ನೀಡಿದರು. ಇಂದು ನಮ್ಮ ಯುವ ಸಮೂಹಗಳು ನಾನಾ ಆಚಾರ ವಿಚಾರಗಳಿಂದ ಆಕರ್ಷಿತರಾಗುತ್ತಿದ್ದು ಅಂತಗರಗಳೆಡೆಯಲ್ಲಿ ಹುಟ್ಟಿ ಬಂದ ನೂತನ ಪ್ರಸ್ಥಾನಗಳ ಮುಂದೆ ಮಂಡಿಯೂರದೆ ಗತ ವರ್ಷಗಳ ಹಿತಿಹಾಸವನ್ನು ತಿಳಿಯುವಂತೆ ವಿನಂತಿಸಿಕೊಂಡ ಅವರು ಸುನ್ನತ್ ಜಮಾ ಅತ್ತಿನಲ್ಲಿ ವಿಶ್ವಾಸವಿಡುವಂತೆ ಕೇಳಿಕೊಂಡರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು