ದುಬೈ: ‘ಇಂಡಿಯನ್ ಕಲ್ಚರಲ್ ಸೊಸೈಟಿ’ ಯು.ಎ.ಇ, ಕರ್ನಾಟಕ ಘಟಕದ ವತಿಯಿಂದ “ವಿಂಟರ್ ವಾಲಿಬಾಲ್ ಟ್ರೋಫಿ” ಪಂದ್ಯಾಟವನ್ನು ಮಾರ್ಚ್ 18ರಂದು ದುಬೈಯ ಪ್ರಖ್ಯಾತ ಒಳಾಂಗಣ ಕ್ರೀಡಾಂಗಣವಾದ ರಾಶಿದಿಯಾದ ‘ಸ್ಟ್ರೋಕ್ಸ್ ಸ್ಪೋರ್ಟ್ಸ್ ಹಾಲ್’ ನಲ್ಲಿ ಆಯೋಜಿಸಲಾಗಿದೆ.
ಯು.ಎ.ಇ ಯಲ್ಲಿರುವ ಪ್ರತಿಷ್ಠಿತ ವಾಲಿಬಾಲ್ ತಂಡಗಳು ಪಾಲ್ಗೊಳ್ಳುವ ಈ ಆಕರ್ಷಕ ಪಂದ್ಯಾಟದ ವಿಜಯಿ ತಂಡಕ್ಕೆ ಮತ್ತು ಉತ್ತಮ ಆಟಗಾರರಿಗೆ ನಗದು ಹಾಗೂ ಆಕರ್ಷಕ ಟ್ರೋಫಿಯೊಂದಿಗೆ ಪ್ರಶಸ್ತಿ ಪತ್ರವನ್ನು ನೀಡಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.
ಈ ಪಂದ್ಯಾಟದಲ್ಲಿ ಭಾಗವಹಿಸುವ ಪ್ರತಿ ತಂಡಕ್ಕೆ ಟಿ- ಶರ್ಟ್ ಹಾಗೂ ಉಪಹಾರದ ವ್ಯವಸ್ಥೆಯನ್ನು ಮಾಡಲಾಗುವುದು. ಆಸಕ್ತ ತಂಡವು ತಮ್ಮ ಹೆಸರನ್ನು ಮಾರ್ಚ್ 10ರ ಒಳಗಾಗಿ ಈ ಕೆಳಗಿನ ದೂರವಾಣಿ ಸಂಖ್ಯೆಯ ಮುಖಾಂತರ ಸಂಪರ್ಕಿಸಿ ನೋಂದಾಯಿಸಬೇಕಾಗಿ ಇಂಡಿಯನ್ ಕಲ್ಚರಲ್ ಸೊಸೈಟಿ ಕರ್ನಾಟಕ ಘಟಕ, ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ದೂರವಾಣಿ ಸಂಖ್ಯೆ:
050 5492054
050 8691219